Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಲಿಂಗ ಭೈರವಿ ದೇವಾಲಯ: ಮುಟ್ಟಿನ ಸಮಯದಲ್ಲಿ ಈ ದೇವಾಲಯಕ್ಕೆ ಹೋಗಬಹುದು!
ಮನೆಯಲ್ಲಿ ಪೂಜೆ ಮತ್ತಿತರ ಶುಭ ಕಾರ್ಯಕ್ರಮವಿರುವಾಗ ಮುಟ್ಟಾದರೆ ಹೆಣ್ಮಕ್ಕಳಿಗೆ ತುಂಬಾನೇ ಕಷ್ಟವಾಗುತ್ತದೆ. ಮುಟ್ಟಾದರೆ ಪೂಜಾ -ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಿಲ್ಲ, ಮೈಲಿಗೆ ಎಂದು ದೂರ ಇಡಲಾಗುವುದು.ಋತುಸ್ರಾವದ ಸಮಯದಲ್ಲಿ ದೇವಾಲಯಕ್ಕೆ ಹೋಗುವಂತಿಲ್ಲ ಎಂಬ ಅಲಿಖಿತ ನಿಯಮವಿದೆ.
ಋತುಚಕ್ರ ಎಂಬುವುದು ನೈಸರ್ಗಿಕವಾದ ಪ್ರಕ್ರಿಯೆ, ಆದರೂ ಏಕೆ ಮಹಿಳೆಯರಿಗೆ ಈ ಒಂದು ವಿಷಯದಲ್ಲಿ ಈ ರೀತಿಯ ಕಟ್ಟುಪಾಡುಗಳಿವೆ ಎಂಬುವುದನ್ನು ಸ್ತ್ರೀಯರು ತಮ್ಮೊಳಗೆ ತಾವು ಅನೇಕ ಸಂದರ್ಭದಲ್ಲಿ ಕೇಳಿಕೊಳ್ಳುತ್ತಾರೆ. ಮುಟ್ಟಾದಾಗ ಅವಳು ಅಸ್ಪೃಶ್ಯಳಾಗುವುದಿಲ್ಲ ಎಂದು ಕೆಲವರು ಹೇಳುತ್ತಾರೆ.
ಆದರೆ ಇನ್ನು ಕೆಲವರು ಆ ದಿನಗಳಲ್ಲಿ ಮನೆಯೊಳಗಡೆ ಕೂಡ ಓಡಾಡಬಾರದು ಎಂದು ನಿಯಮಗಳನ್ನು ಹಾಕಿರುತ್ತಾರೆ, ಇನ್ನು ದೇವಿ ದೇವಾಲಯದಲ್ಲಿ ಕೂಡ ಮೈಲಿಗೆ ಎಂದು ಆ ಸಮಯದಲ್ಲಿ ದೇವಾಲಯಕ್ಕೆ ಪ್ರವೇಶವಿರಲ್ಲ. ಆದರೆ ಕೊಯಂಬತ್ತೂರಿನಲ್ಲಿ ಬೈರವಿ ದೇವಿಯ ದೇವಾಲಯವಿದೆ.ಇಲ್ಲಿ ಮುಟ್ಟಿನ ಸಮಯದಲ್ಲಿಯೂ ಮಹಿಳೆಯರು ಈ ದೇವಾಲಯಕ್ಕೆ ಹೋಗಬಹುದು.

ಲಿಂಗ ಭೈರವಿ ದೇವಾಲಯ
ಕೊಯಂಬತ್ತೂರಿನಲ್ಲಿರುವ ಈ ದೇವಾಲಯದಲ್ಲಿ ಭೈರವಿಯನ್ನು ಆರಾಧಿಸಲಾಗುವುದು. ಈ ದೇವಿಯನ್ನು ಮಹಿಳೆಯರು ತಮ್ಮ ಮುಟ್ಟಿನ ಸಮಯದಲ್ಲಿಯೂ ಕೂಡ ಬಂದು ದೇವರ ಆಶೀರ್ವಾದ ಪಡೆಯಬಹುದು. ಇಲ್ಲಿಗೆ ಮಹಿಳೆಯರಷ್ಟೇ ಭೇಟಿ ನೀಡುತ್ತಾರೆ, ಪುರುಷರಿಗೆ ಪ್ರವೇಶವಿಲ್ಲ, ಇಲ್ಲಿ ಮಹಿಳಾ ಅರ್ಚಕರೇ ಕೆಂಪು ಸ್ತ್ರೀಯನ್ನು ಧರಿಸಿ ಪೂಜೆಯನ್ನು ಮಾಡುತ್ತಾರೆ.
ಸದ್ಗುರು ಪರಿಕಲ್ಪನೆ
ಈ ದೇವಾಲಯವನ್ನು ಸದ್ಗುರು ಸ್ಥಾಪಿಸಿದ್ದಾರೆ. ಮಹಿಳೆಯರು ಮುಟ್ಟಿನ ಸಮಯದಲ್ಲಿಯೂ ಪೂಜೆಯನ್ನು ಮಾಡಬಹುದು, ಆ ಸಮಯದಲ್ಲಿಯೂ ಅವರು ದೇವರನ್ನು ಆರಾಧನೆ ಮಾಡಬಹುದು, ಮುಟ್ಟು ಎಂಬುವುದು ಮೈಲಿಗೆಯಲ್ಲಿ, ಅದು ಪ್ರಕೃತಿಯ ಸಹಜ ನಿಯಮ ಎಂಬುವುದಾಗಿ ಅವರು ಅನೇಕ ಸಂದರ್ಭದಲ್ಲಿ ಹೇಳಿದ್ದಾರೆ. ಇದೀಗ ಭೈರವಿ ದೇವಿಯ ದೇವಾಲಯ ಸ್ಥಾಪಿಸುವುದರ ಮೂಲಕ ಮಹಿಳೆಯರಿಗೆ ವಿಶೇಷ ಸ್ಥಾನ ನೀಡಿದ್ದಾರೆ.
ಪುರುಷ ಹಾಗೂ ಮಹಿಳೆಯರು ಇಲ್ಲಿಗೆ ಬಂದು ಪೂಜೆ ಸಲ್ಲಿಸಬಹುದು, ಆದರೆ ಗರ್ಭಗುಡಿಗೆ ಮಹಿಳೆಯರು ಮಾತ್ರ ಪ್ರವೇಶ ಮಾಡಬಹುದು.
ಸಮಾಜಕ್ಕೆ ಉತ್ತಮ ಸಂದೇಶ
ಮುಟ್ಟಿನ ಸಮಯದಲ್ಲಿ ಮಹಿಳೆಯರನ್ನು ಚಿಕ್ಕ ಗುಡಿಸಿಲಿನಲ್ಲಿ ಅಥವಾ ಮನೆಯ ಹೊರಗಡೆ ಇರಿಸಲಾಗುವುದು, ಅವಳಿಗೆ ತಿನ್ನಲು, ಕುಡಿಯಲು ಅಲ್ಲಿಗೆ ಹೋಗಿ ನೀಡಲಾಗುವುದು. ಕೆಲವರು ಬಾಣಂತಿಯನ್ನು ಕೂಡ ಈ ರೀತಿ ಮೈಲಿಗೆ ಹೆಸರಿನಲ್ಲಿ ಹೊರಗಿಡುತ್ತಾರೆ. ದೇವರು ಭೇದ ಮಾಡಿಲ್ಲ, ಆದರೆ ಮನುಷ್ಯರು ಈ ರಿತಿಯ ನಿಯಮಗಳನ್ನು ತಂದಿದ್ದಾರೆ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ದೇವರಿಗೆ ಮಹಿಳೆ-ಪುರುಷ ಎಂಬ ಭೇದವಿಲ್ಲದೆ ಎಲ್ಲರೂ ಸಮಾನರು.
ಮುಟ್ಟಿನಲ್ಲಿ ಮಹಿಳೆಯರು ಏಕೆ ಅಡುಗೆ ಮಾಡುವಂತಿಲ್ಲ, ಮನೆ ಕೆಲಸ ಮಾಡುವಂತಿಲ್ಲ ಎಂಬುವುದನ್ನು ಸದ್ಗುರು ತುಂಬಾನೇ ತರ್ಕಬದ್ಧವಾಗಿ ವಿವರಿಸಿದ್ದಾರೆ
ಹಿಂದೆಯೆಲ್ಲಾ ಕೂಡು ಕುಟುಂಬವಿತ್ತು, ಒಂದೇ ಮನೆಯಲ್ಲಿ 200ಕ್ಕಿಂತ ಅಧಿಕ ಜನರು ಇದ್ದರು, ಅವರಿಗೆ ಅಡುಗೆ ಮಾಡುವ ಕೆಲಸವನ್ನು ಮಹಿಳೆಯರು ಮಾಡುತ್ತಿದ್ದರು, ಪುರುಷರು ಹೊಲದಲ್ಲಿ ದುಡಿಯುತ್ತಿದ್ದರು. ಮುಟ್ಟಿನ ಸಮಯದಲ್ಲಿ ತುಂಬಾ ಹೊಟ್ಟೆ ನೋವು, ಸುಸ್ತು ಕಾಣಿಸಿಕೊಳ್ಳುವುದು, ಕೆಲವರಿಗೆ ಎದ್ದು ಓಡಾಡುವುದೇ ಕಷ್ಟವಾಗುವುದು. ಆದ್ದರಿಂದ ಈ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ ನೀಡುವ ದೃಷ್ಟಿಯಿಂದ ಈ ದಿನಗಳಲ್ಲಿ ಕೆಲಸ ಮಾಡಿಸುತ್ತಿರಲಿಲ್ಲ, ಆದರೆ ವರ್ಗಳು ಕಳೆಯುತ್ತಿದ್ದಂತೆ ಅದೊಂದು ಆಚರಣೆಯಾಗಿ ಈ ಅವಧಿಯಲ್ಲಿ ಮಹಿಳೆಯರು ಮೈಲಿಗೆಯಾಗುತ್ತಾರೆ, ಅವರು ಯಾವುದೇ ಶುಭ ಕಾರ್ಯ ಮಾಡುವಂತಿಲ್ಲ ಎಂದು ಹೇಳಲಾಯ್ತು.



Click it and Unblock the Notifications
