Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಇಲ್ಲಿ ಮಹಿಳೆಯರು ಅನೇಕ ಪುರುಷರನ್ನು ಮದುವೆಯಾಗಬಹುದು..! ಭಾರತದಲ್ಲೂ ಈ ಸಂಪ್ರದಾಯವಿದೆ..!
ಪ್ರಪಂಚದ ಹಲವು ದೇಶಗಳಲ್ಲಿ ಇಂದಿಗೂ ಬಹುಪತ್ನಿತ್ವ ಪದ್ಧತಿ ಒಂದು ಸಂಪ್ರದಾಯ ಎನ್ನುವಂತೆ ಆಚರಿಸಲಾಗುತ್ತಿದೆ. ಭಾರತವೂ ಇದರಿಂದ ಹೊರತಾಗಿಲ್ಲ. ಒಬ್ಬರಿಗಿಂತ ಹೆಚ್ಚು ಮಡದಿಯರನ್ನು ಹೊಂದಿರುವ ಪುರುಷರನ್ನು ನಾವು ನೋಡಬಹುದು. ಈ ಪದ್ಧತಿಯ ವಿರುದ್ಧ ಹೋರಾಟಗಳು ನಡೆದಿವೆ. ಕಾನೂನಿನಲ್ಲಿ ನಿಯಮವನ್ನು ತರಲಾಗಿದೆ.
ಆದ್ರೆ ಇಂದಿಗೂ ಈ ರೀತಿಯ ಪದ್ಧತಿಗಳು ನಮ್ಮ ನಡುವೆ ಇದೆ. ಇದರ ಜೊತೆಗೆ ಒಬ್ಬ ಪುರುಷನಿಗಿಂತಲೂ ಹೆಚ್ಚು ಪತಿಯರನ್ನು ಹೊಂದಬಹುದಾದ ದೇಶಗಳು ಇವೆ. ಭಾರತದಲ್ಲೂ ಒಂದು ಗ್ರಾಮದಲ್ಲಿ ಈ ರೀತಿಯ ಸಂಪ್ರದಾಯ ಇಂದಿಗೂ ಜಾರಿಯಲ್ಲಿದೆ. ಇಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಪುರುಷರನ್ನು ಯುವತಿ ಮದುವೆಯಾಗಬಹುದು.

ಹಾಗಾದರೆ ಯಾವೆಲ್ಲಾ ದೇಶದಲ್ಲಿ ಈ ರೀತಿ ಆಚರಣೆಗಳಿವೆ. ಭಾರತದಲ್ಲಿ ಯಾವ ಪ್ರದೇಶದಲ್ಲಿ ಈ ಬಹುಪತೀತ್ವ ಜಾರಿಯಲ್ಲಿದೆ ಎಂಬುದನ್ನು ನಾವಿಂದು ತಿಳಿಯೋಣ.
ಪ್ರಪಂಚದ ಹೆಚ್ಚಿನ ಧರ್ಮಗಳು, ಸಂಸ್ಕೃತಿಗಳು ಮತ್ತು ದೇಶಗಳು ಒಬ್ಬ ಮಹಿಳೆ ಒಂದಕ್ಕಿಂತ ಹೆಚ್ಚು ಪುರುಷರನ್ನು ಮದುವೆಯಾಗುವುದನ್ನು ಒಪ್ಪಿಕೊಳ್ಳುವುದಿಲ್ಲ. ಆದರೆ ಇಲ್ಲೊಂದು ಕಡೆ ಹೆಚ್ಚು ಗಂಡಂದಿರ ಹೊಂದಬಹುದು, ಪ್ರಾಚೀನ ಕಾಲದಿಂದಲೂ ಈ ಪದ್ಧತಿ ಮುಂದುವರೆದಿದೆ. ಕೆಲವು ಬುಡಕಟ್ಟು ಸಂಸ್ಕೃತಿಗಳಲ್ಲಿ ಮಹಿಳೆಯರಿಗೆ ಬಹುಪತ್ನಿತ್ವವನ್ನು ಅನುಮತಿಸಲಾಗಿದೆ ಮತ್ತು ಅವರಿಗೆ ಲೈಂಗಿಕ ಸ್ವಾತಂತ್ರ್ಯವನ್ನು ನೀಡಲಾಗುತ್ತದೆ.
ನೈಜೀರಿಯಾ
ನೈಜೀರಿಯಾದಾದ್ಯಂತ ಈ ಆಚರಣೆ ಅನುಸರಿಸದಿದ್ದರೂ ನೈಜೀರಿಯಾದಲ್ಲಿರುವ ಕೆಲವು ಬುಡಕಟ್ಟು ಜನಾಂಗವು ಈ ಬಹುಪತಿಯನ್ನು ಹೊಂದುವ ಸಂಪ್ರದಾಯವನ್ನು ಆಚರಿಸುತ್ತವೆ. ಇಲ್ಲಿ ಸಹ ಪತಿಗಳು ಎಂದು ಕರೆಯಲ್ಪಡುವ ಬಹು ಸಂಖ್ಯೆ ಪುರುಷರನ್ನು ಅವರು ಮದುವೆಯಾಗಬಹುದು.
ನೈಜೀರಿಯಾದ ಇರಿಗ್ವೆ ಬುಡಕಟ್ಟಿನ ಜನರು 1968ರ ವರೆಗೆ ಬಹುಪತೀತ್ವವನ್ನು ಅನುಸರಿಸುತ್ತಿದ್ದರು, ಆದರೆ ಇದಾದ ಬಳಿಕ ಅವರಲ್ಲಿ ಕಾನೂನು ಜಾರಿ ಮಾಡಲಾಗಿ ನಿಷೇಧ ಮಾಡಲಾಗಿತು.
ತಮಿಳುನಾಡಿನಲ್ಲೂ ಇದೆ ಸಂಪ್ರದಾಯ
ಸಾಂಸ್ಕೃತಿಕವಾಗಿ ಹೆಚ್ಚು ವೈವಿಧ್ಯತೆ ಹೊಂದಿರುವ ಭಾರತದಲ್ಲಿ ಕೆಲ ಬುಡಕಟ್ಟು ಜನಾಂಗದಲ್ಲಿ ಇಂದಿಗೂ ಈ ಪದ್ಧತಿ ಅನುಸರಿಸುತ್ತಾರಂತೆ. ಜನ್ಸರ್ಪವಾರ್ ಪ್ರದೇಶದ ಬಹಾರಿಗಳಲ್ಲಿ, ಹಿಮಾಚಲದ ಕಿನ್ನೂರಿನಲ್ಲಿ ಈ ಸಂಪ್ರದಾಯವಿದ್ದು ಅವರು ನಾವು ಪಾಂಡವರ ಪೂರ್ವಜರೆಂದು ಒಂದು ಯುವತಿ ಪಾಂಡವರಂತೆ ಹಲವು ಪತಿಗಳ ಹೊಂದಬಹುದೆಂದು ನಂಬಿದ್ದಾರೆ.
ಅವರಲ್ಲದೆ, ನೀಲಗಿರಿಯ ದೋಡಾ ಬುಡಕಟ್ಟಿನವರು ಮತ್ತು ತಿರುವಾಂಕೂರಿನ ನಜನಾಥ ವೆಲ್ಲಲರು ಬಹುಸಂಖ್ಯೆಯ ಪತಿಯರನ್ನು ಹೊಂದುವ ಸಂಪ್ರದಾಯ ಮುಂದುವರೆಸಿದ್ದಾರೆ. 1988ರ ಟಿಬೆಟ್ ವಿಶ್ವವಿದ್ಯಾನಿಲಯದ 753 ಟಿಬೆಟಿಯನ್ ಕುಟುಂಬಗಳ ಸಮೀಕ್ಷೆಯು ಶೇ. 13ರಷ್ಟು ಕುಟುಂಬಗಳು ಈ ಸಂಪ್ರದಾಯ ಇಟ್ಟುಕೊಂಡಿರುವುದು ತಿಳಿದುಬಂದಿತ್ತು.
ಕೀನ್ಯಾ
ಕೀನ್ಯಾದಲ್ಲಿ ಒಬ್ಬರಿಗಿಂತ ಹೆಚ್ಚು ಪುರುಷನನ್ನು ಮದುವೆಯಾಗಬಹುದು, ಅಲ್ಲಿ ಇದಕ್ಕೆ ಕಾನೂನು ಮೂಲಕ ಯಾವ ಶಿಕ್ಷೆಯಾಗಲಿ ನಿಯಮವಾಗಲಿ ಇಲ್ಲ. ಇತ್ತೀಚಿಗೆ 2013ರಲ್ಲಿ ಇಬ್ಬರು ಪುರುಷರು ಒಬ್ಬಳೇ ಮಹಿಳೆಯನ್ನು ವಿವಾಹವಾಗಿ ಭಾರೀ ಸುದ್ದಿಯಾಗಿದ್ದರು. ಇದಾದ ಬಳಿಕ ಅಲ್ಲಿ ಬಹು ಪತೀತ್ವ ಪದ್ಧತಿ ಜಾರಿಯಲ್ಲಿರುವುದು ತಿಳಿದುಬಂದಿತ್ತು.
ಚೀನಾ
ಚೀನಾ ಮತ್ತು ನೇಪಾಳದ ಪ್ರದೇಶಗಳಲ್ಲಿ ಟಿಬೆಟಿಯನ್ನರಲ್ಲಿ ಸೋದರ ಬಹುಸಂಖ್ಯೆಯ ಅಭ್ಯಾಸವು ಸಾಮಾನ್ಯವಾಗಿದೆ. ಒಂದು ಮಗು ಒಂದಕ್ಕಿಂತ ಹೆಚ್ಚು ತಂದೆಯನ್ನು ಹೊಂದಬಹುದು ಎಂಬ ನಂಬಿಕೆಯ ಆಧಾರದ ಮೇಲೆ, ಸಾಮಾನ್ಯವಾಗಿ ಇಬ್ಬರು ಅಥವಾ ಹೆಚ್ಚಿನ ಸಹೋದರರು ಒಬ್ಬಳೇ ಮಹಿಳೆಯನ್ನು ಮದುವೆಯಾಗುತ್ತಾರೆ.
ಕುಟುಂಬವು ಬಡವರಾಗಿದ್ದರೆ ಮತ್ತು ಅವರ ಆಸ್ತಿಯನ್ನು ತಂದೆಯಿಂದ ಹಂಚಲಾಗದಿದ್ದರೆ ಈ ಅಭ್ಯಾಸವನ್ನು ಪ್ರೋತ್ಸಾಹಿಸಲಾಗುತ್ತದೆ. ಆದ್ದರಿಂದ ಅವರು ಒಬ್ಬಳೇ ಮಹಿಳೆಯನ್ನು ಮದುವೆಯಾಗುತ್ತಾರೆ ಮತ್ತು ಅವರ ಸಣ್ಣ ಜಮೀನು ಮತ್ತು ಆಸ್ತಿಯನ್ನು ರಕ್ಷಿಸಿಕೊಳ್ಳಲು ಮುಂದಾಗುತ್ತಾರೆ. ಏಕೆಂದರೆ ಅವರು ಒಂದೇ ಮಹಿಳೆಯ ಮದುವೆಯಾಗುವುದರಿಂದ ಒಂದೇ ಮನೆಯಲ್ಲಿ ಉಳಿಯುತ್ತಾರೆ. ಇದು ಒಂದೇ ಸಂಸಾರ ಮತ್ತು ಕುಟುಂಬಕ್ಕೆ ಸಾಕ್ಷಿಯಾಗುತ್ತದೆ. ಹೀಗಾಗಿ ಆಸ್ತಿ ಭಾಗವಾಗದೇ ಹಾಗೆ ಉಳಿಯುತ್ತದೆ.



Click it and Unblock the Notifications











