Latest Updates
-
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ! -
ಕರಾವಳಿ ರೆಡ್ ಅಲರ್ಟ್: ಮನೆಯಲ್ಲೇ ಸುರಕ್ಷಿತವಾಗಿ ಫಿಟ್ ಆಗಿರಲು ಈ 12 ನಿಮಿಷಗಳ ವರ್ಕೌಟ್ ಟ್ರೈ ಮಾಡಿ!
ತಂದೆಯ ಚಿತೆಗೆ ಮದ್ಯ, ಬೀಡಿ, ಪಾನ್ ಹಾಕಿ ಅಂತ್ಯಸಂಸ್ಕಾರ..!! ವಿಚಿತ್ರ ಕಥೆ ಕೇಳಿ..!
ಮರಣ ಹೊಂದಿದವರು ಅಂತ್ಯಸಂಸ್ಕಾರದ ವೇಳೆ ಗಂಧ, ತುಪ್ಪ ಅಷ್ಟೇ ಏಕೆ, ವಿಭೂತಿ, ಅವರ ಐಷಾರಾಮಿ ವಸ್ತುಗಳನ್ನ ಬಳಸಿ ಅವರ ಸಂಸ್ಕಾರ ನೆರವೇರಿಸುವುದು ಸಾಮಾನ್ಯ. ಹಿಂದೂ ಸಂಪ್ರದಾಯದಲ್ಲಿ ಮೃತರನ್ನು ಚಿತೆ ಮೇಲೆ ಮಲಗಿಸಿ ಹಲಸು, ಮಾವು, ಗಂಧದ ಕಟ್ಟಿಗಗಳ ಬಳಸಿ ಸುಡುವುದು ಸಂಪ್ರದಾಯವಾಗಿ ನಡೆದುಕೊಂಡು ಬಂದಿದೆ.
ಆದರೆ ಇತ್ತೀಚಿಗೆ ವಿದ್ಯುತ್ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿವೆ. ಆದರೆ ಇಲ್ಲೊಬ್ಬ ತನ್ನ ತಂದೆಯ ಚಿತೆಯನ್ನು ವಿಚಿತ್ರ ವಸ್ತುಗಳಿಂದ ತುಂಬಿಸಿ ಸುದ್ದಿಯಾಗಿದ್ದಾನೆ. ಆತ ತನ್ನ ತಂದೆ ಮೃತಪಟ್ಟ ಬಳಿಕ ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ಅಂತ್ಯಸಂಸ್ಕಾರ ಮಾಡಲು ತಂದಿದ್ದ, ಆದರೆ ಆತ ತಂದೆಯ ಚಿತೆಯನ್ನ ಮದ್ಯ, ಬೀಡಿ, ಪಾನ್ ಮಸಾಲಾಗಳ ಹಾಕಿ ಅಂತ್ಯಸಂಸ್ಕಾರ ಮಾಡಿ ಸುದ್ದಿಯಾಗಿದ್ದಾನೆ.
ಹಾಗಾದರೆ ಆತ ತಂದೆಯ ಚಿತೆಗೆ ಇದನ್ನೆಲ್ಲಾ ಹಾಕಿದ್ದು ಏಕೆ? ಆತನ ಕೊನೆ ಆಸೆ ಏನಾಗಿತ್ತು, ಯಾರು ಆ ವ್ಯಕ್ತಿ ಆತ ಚಿತೆಗೆ ಏನೆಲ್ಲಾ ಹಾಕಿದ್ದ ಎಂಬುದನ್ನು ನೋಡಿ.

ವಾರಣಾಸಿಯ ಮಣಿಕರ್ಣಿಕಾ ಘಾಟ್‌ನಲ್ಲಿ ತನ್ನ ತಂದೆಯ ಅಂತ್ಯಕ್ರಿಯೆಯ ಚಿತೆಗೆ ಮದ್ಯ, ಬೀಡಿ ಮತ್ತು ಬನಾರಸಿ ಪಾನ್ ಹಾಕಿದ್ದಾನೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಲಕ್ಷಣ ರೀತಿಯ ಅಂತ್ಯಸಂಸ್ಕಾರಕ್ಕೆ ಆತ ಕಾರಣ ನೀಡಿದ್ದಾನೆ. ತನ್ನ ತಂದೆ ಬದುಕಿದ್ದಾಗ ಅವರ ಯಾವ ಆಸೆಯನ್ನೂ ತೀರಿಸಲಾಗಲಿಲ್ಲ ಹಾಗಾಗಿ ಅವರು ಮೃತಪಟ್ಟ ಬಳಿಕ ಅವರ ಇಷ್ಟದ ವಸ್ತುಗಳನ್ನು ಅವರಿಗೆ ಅರ್ಪಿಸಿದ್ದೇನೆ ಎಂದಿದ್ದಾನೆ.
ವಿಡಿಯೋದಲ್ಲಿ ಆತ ತಂದೆಯ ಚಿತೆಯ ಮುಂದೆ ನಿಂತು ಮದ್ಯ, ಪಾನ್ ಮಸಾಲಾ, ಬೀಡಿಗಳನ್ನು ಅರ್ಪಿಸುತ್ತಿದ್ದಾನೆ. ಅವರು ಬದುಕಿದ್ದಾಗ ಅವರು ಈ ವಸ್ತಗಳನ್ನು ಇಷ್ಟಪಡುತ್ತಿದ್ದರು. ಹೀಗಾಗಿ ಅವರ ಯಾವುದೇ ಆಸೆಗಳು ಈಡೇರದೆ ಹಾಗೆಯೇ ಉಳಿಯದಿರಲಿ ಎಂದು ಈ ರೀತಿ ಮಾಡಿರುವುದಾಗಿ ಹೇಳಿದ್ದಾನೆ.
ಹಿಂದೂ ಸಂಪ್ರದಾಯ ಹೇಳೋದೆ ಬೇರೆ..!
ಹಿಂದೂ ಸಂಪ್ರದಾಯದ ಪ್ರಕಾರ ಮೃತನ ಚಿತೆಗೆ ಆತನ ಇಷ್ಟದ ವಸ್ತುಗಳನ್ನು ಅರ್ಪಿಸುವ ರೂಢಿ ಬೆಳೆದು ಬಂದಿದೆ. ಆದರೆ ಸತ್ತವರ ಚಿತೆಗೆ ಅರ್ಪಿಸಿರುವ ವಸ್ತುವನ್ನು ಅವರ ಪಿಂಡ ಪ್ರಧಾನ ಕಾರ್ಯದಲ್ಲೂ ಅರ್ಪಿಸಬೇಕು ಎನ್ನುವ ಸಂಪ್ರದಾಯವಿದೆ. ಅಲ್ಲದೆ ವರ್ಷಕ್ಕೊಮ್ಮೆ ಅವರ ತಿಥಿಯಂದು ಇದೇ ವಸ್ತುಗಳನ್ನು ಮತ್ತೆ ಅರ್ಪಿಸಬೇಕು ಎಂಬ ಮಾತಿದೆ.
ಚಿತೆಗೆ ಯಾವ ವಸ್ತು ಅರ್ಪಿಸಬಾರದು
ಯಾರನ್ನಾದರು ಚಿತೆಯಲ್ಲಿ ಮಲಗಿಸಿದ್ದ ವೇಳೆ ದೇವರ ಪ್ರಸಾದ ಅಥವಾ ತೀರ್ಥವನ್ನು ಸಿಂಪಡಿಸಬಾರದಂತೆ. ಇದರ ಜೊತೆ ದೇವರ ಫೋಟೋ, ದೇವರಿಗೆ ಅರ್ಪಿಸಿರುವ ಹಾರ, ಬಿಲ್ಪತ್ರೆಗಳನ್ನು ಚಿತೆಗೆ ಅರ್ಪಿಸಬಾರದು.
ಸೂರ್ಯಾಸ್ತದ ಬಳಿಕ ಅಂತ್ಯಸಂಸ್ಕಾರ ಮಾಡಬಾರದು
ಸೂರ್ಯಾಸ್ತದ ನಂತರ ಅಂತ್ಯಕ್ರಿಯೆ ಮಾಡಬಾರದಂತೆ. ಸೂರ್ಯಾಸ್ತದ ನಂತರ ಯಾರಾದರೂ ಮರಣ ಹೊಂದಿದರೆ ಅವರ ಅಂತ್ಯ ಸಂಸ್ಕಾರವನ್ನು ಮರುದಿನ ಸೂರ್ಯಾಸ್ತವಾಗುವ ಮುನ್ನ ಮಾಡಲಾಗುತ್ತದೆ. ಆದರೆ, ಸೂರ್ಯಾಸ್ತದ ನಂತರ ಮಾಡಲಾಗುವುದಿಲ್ಲ. ಸೂರ್ಯಾಸ್ತದ ನಂತರ ಯಾವುದೇ ಮರಣ ಹೊಂದಿದ ವ್ಯಕ್ತಿಗಳ ಅಂತ್ಯ ಸಂಸ್ಕಾರವನ್ನು ಮಾಡಿದರೆ, ಇಹಲೋಕವನ್ನು ತ್ಯಜಿಸಿದ ಆ ವ್ಯಕ್ತಿಯ ಆತ್ಮವು ಪರಲೋಕದಲ್ಲಿ ಶಾಂತಿ ಸಿಗದೇ ಬಳಲಬೇಕಾಗುತ್ತದೆ. ಮರಣ ಹೊಂದಿದ ವ್ಯಕ್ತಿಯು ಮುಂದಿನ ಜನ್ಮದಲ್ಲಿ ಅಂಗವಿಕಲನಾಗಿ ಹುಟ್ಟಬೇಕಾಗುತ್ತದೆ. ಆದ್ದರಿಂದ ಸೂರ್ಯಾಸ್ತದ ನಂತರ ಶವ ಸಂಸ್ಕಾರ ಮಾಡುವುದನ್ನು ಸೂಕ್ತವಲ್ಲವೆಂದು ಪರಿಗಣಿಸಲಾಗಿದೆ.



Click it and Unblock the Notifications