Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫೆ.20 ಜಯ ಏಕಾದಶಿ ಅಥವಾ ಭೀಷ್ಮ ಏಕಾದಶಿಯಂದು ಈ ಪರಿಹಾರ ಮಾಡಿದರೆ ಇಷ್ಟಾರ್ಥ ನೆರವೇರುವುದು
ಫೆಬ್ರವರಿ 20ಕ್ಕೆ ಜಯ ಏಕಾದಶಿ, ಈ ದಿನ ವಿಷ್ಣುವಿನ ಆರಾಧನೆಗೆ ತುಂಬಾ ಮಹತ್ವದ ದಿನ, ಪ್ರತಿಯೊಂದು ಏಕಾದಶಿಗೂ ಅದರದ್ದೇ ಆದ ಮಹತ್ವವಿದೆ. ಈ ಜಯ ಏಕಾದಶಿಯನ್ನು ಭೂಮಿ ಏಕಾದಶಿ, ಭೀಷ್ಮ ಏಕಾದಶಿಯೆಂದು ಕೂಡ ಕರೆಯಲಾಗುವುದು.
ಜಯ ಏಕಾದಶಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ, ಈ ದಿನ ಶ್ರೀ ವಿಷ್ಣು ಸಹಸ್ರನಾಮ ಪಠಣೆಗೆ ತುಂಬಾನೇ ಮಹತ್ವವಿದೆ. ಜಯ ಏಕಾದಶಿಯಂದು ಕೆಲವೊಂದು ಪರಿಹಾರ ಮಾಡಿದರೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಈ ದಿನ ಯಾವ ಪರಿಹಾರಗಳನ್ನು ಮಾಡಿದರೆ ಒಳ್ಳೆಯದು ಎಂದು ನೋಡೋಣ ಬನ್ನಿ:

ಜಯ ಏಕಾದಶಿಯಂದು ಏನು ಮಾಡಬೇಕು?
ಜಯ ಏಕಾದಶಿಯ ದಿನದಂದು, ಬ್ರಹ್ಮ ಮುಹೂರ್ತದಲ್ಲಿ ಎದ್ದು ಬೆಳಗ್ಗೆ ಸ್ನಾನ ಮಾಡಿ, ನಂತರ ವಿಷ್ಣುವಿನ ಮುಂದೆ ತುಪ್ಪದ ದೀಪವನ್ನು ಹಚ್ಚಿ ಮತ್ತು ವಿಷ್ಣು ಚಾಲೀಸವನ್ನು ಪಠಿಸಿ. ಇದರಿಂದ ಬೇಗ ವಿಷ್ಣುವಿನ ಆಶೀರ್ವಾದ ಸಿಗುತ್ತದೆ. ವಿಷ್ಣುವಿನ ಕೃಪೆಯಿಂದ ಮನೆಯಲ್ಲಿ ಯಾವತ್ತೂ ಧನ-ಧಾನ್ಯಗಳ ಕೊರತೆಯಾಗುವುದಿಲ್ಲ ಮತ್ತು ಸಮೃದ್ಧಿ ಇರುತ್ತದೆ.
ಜಯ ಏಕಾದಶಿಯ ದಿನದಂದು ವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ ಮತ್ತು ಕೆಲಸದ ಸ್ಥಳದಲ್ಲಿ ಪ್ರಗತಿ ಇರುತ್ತದೆ. ಜಯ ಏಕಾದಶಿಯಂದು ಭಗವಾನ್ ವಿಷ್ಣುವನ್ನು ಮೆಚ್ಚಿಸಲು, ಹಳದಿ ವಸ್ತ್ರಗಳು, ಹಳದಿ ಹೂವುಗಳು, ಹಳದಿ ಹೂವಿನ ಮಾಲೆ ಮತ್ತು ಹಳದಿ ಹಣ್ಣುಗಳನ್ನು ಅರ್ಪಿಸಿ. ಈ ದಿನ ಹಸುವಿಗೆ ಮೇವು ಉಣಿಸುವುದು ಅತ್ಯಂತ ಫಲಪ್ರದವೆಂದು ಪರಿಗಣಿಸಲಾಗಿದೆ.
ವಿಷ್ಣುವು ಆಲದ ಮರದಲ್ಲಿ ನೆಲೆಸಿದ್ದಾನೆ ಎಂಬ ಧಾರ್ಮಿಕ ನಂಬಿಕೆ ಇದೆ. ಜಯ ಏಕಾದಶಿಯ ದಿನ ಪೀಪಲ್ ವೃಕ್ಷವನ್ನು ಪೂಜಿಸಿ, ನೀರನ್ನು ಅರ್ಪಿಸಿ, ತುಪ್ಪದ ದೀಪ ಹಚ್ಚಿ, ದಿನ ಹೀಗೆ ಮಾಡುವುದರಿಂದ ಎಲ್ಲಾ ಇಷ್ಟಾರ್ಥಗಳು ಈಡೇರುವುದು ಎಂದು ಹೇಳಲಾಗುವುದು.
ಏಕಾದಶಿಯಂದು ಮಂತ್ರ ಪಠಣೆ ಮಾಡಿ
ಈ ದಿನ ವಿಷ್ಣು ಸಹಸ್ರನಾಮ ಪಠಿಸಿ.
ಓಂ ನಮೋ: ನಾರಾಯಣ. 'ಓಂ ನಮೋ: ಭಗವತೇ ವಾಸುದೇವಾಯ' ಎಂದು ಜಪಿಸಬೇಕು. ಜಯ ಏಕಾದಶಿಯ ದಿನದಂದು ಭಗವಾನ್ ವಿಷ್ಣುವಿನ ಮಂತ್ರಗಳನ್ನು ಪಠಿಸಿ.
ಜಯ ಏಕಾದಶಿಯ ದಿನದಂದು, ತುಳಸಿ ಎಲೆಗಳನ್ನು ಕೆಂಪು ಬಟ್ಟೆಯಲ್ಲಿ ಕಟ್ಟಿ ಮನೆಯಲ್ಲಿ ಸುರಕ್ಷಿತವಾಗಿ ಇರಿಸಿ ಮತ್ತು ಏಕಾದಶಿಯ ಪೂಜೆಯ ನಂತರ ಆ ಎಲೆಗಳನ್ನು ಲಕ್ಷ್ಮಿ ದೇವಿ ಹಾಗೂ ಭಗವಾನ್ ವಿಷ್ಣುವಿನ ಪಾದಗಳಿಗೆ ಅರ್ಪಿಸಿ. ಇದರ ನಂತರ, ಈ ತುಳಸಿ ಎಲೆಗಳೊಂದಿಗೆ ಒಂದು ರೂಪಾಯಿ ನಾಣ್ಯವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ನಿಮ್ಮ ಪರ್ಸ್‌ನಲ್ಲಿ ಇರಿಸಿ. ಹೀಗೆ ಮಾಡುವುದರಿಂದ ಆರ್ಥಿಕ ಸಂಕಷ್ಟ ದೂರಾಗುವುದು.
ಶ್ರೀ ಲಕ್ಷ್ಮಿಯನ್ನು ಆರಾಧಿಸಿ
ಜಯ ಏಕಾದಶಿಯ ದಿನದಂದು ಶ್ರೀ ಹರಿವಿಷ್ಣುವಿನ ಜೊತೆಗೆ ಲಕ್ಷ್ಮಿ ದೇವಿಯನ್ನು ಪೂಜಿಸಿ. ಹೀಗೆ ಮಾಡುವುದರಿಂದ ಜೀವನದಲ್ಲಿ ಪ್ರಗತಿಯಾಗುವುದು.
ಫೆಬ್ರವರಿ 20 ರಂದು ಜಯ ಏಕಾದಶಿ ಉಪವಾಸದ ದಿನ, ಬೆಳಿಗ್ಗೆ ಸ್ನಾನದ ನಂತರ ತುಪ್ಪದ ದೀಪವನ್ನು ಹಚ್ಚಿ ಮತ್ತು ವಿಷ್ಣುವನ್ನು ಆವಾಹಿಸಿ. ಇದರಿಂದ ಭಗವಾನ್ ವಿಷ್ಣುವು ಬೇಗನೆ ಪ್ರಸನ್ನನಾಗುತ್ತಾನೆ ಮತ್ತು ಮನೆಯಲ್ಲಿ ಹಣ ಮತ್ತು ಧಾನ್ಯಗಳ ಕೊರತೆಯಾಗುವುದಿಲ್ಲ.
ಉಪವಾಸ ಮಾಡಿ
ಈ ದಿನ ನೀವು ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಬೇಕು, ಸಂಪೂರ್ಣ ಉಪವಾಸ ನಿಯಮ ಪಾಲಿಸಲು ಸಾಧ್ಯವಾಗದವರು ಸಾತ್ವಿಕ ಆಹಾರ ಮಾತ್ರ ಸೇವಿಸಿ. ನಂತರ ಪಾರಣ ಸಮಯದಲ್ಲಿ ಉಪವಾಸ ಮುರಿಯಿರಿ.
ಪಾರಣ ಸಮಯ ಫೆಬ್ರವರಿ 21 ಬೆಳಗ್ಗೆ 06:55ರಿಂದ 09:11
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications