For Quick Alerts
ALLOW NOTIFICATIONS  
For Daily Alerts

ಸೋಯಾಬೀನ್ ಸೇವನೆಯಿಂದ ಪುರುಷರ ಲೈಂಗಿಕ ಶಕ್ತಿ ಕಡಿಮೆಯಾಗುತ್ತಾ? ಹೊಸ ಅಧ್ಯಯನ ಏನ್ ಹೇಳುತ್ತೆ?

|

ಸೋಯಾಬೀನ್ ಬಗ್ಗೆ ನೀವು ಕೇಳಿರಬೇಕು.. ಆರೋಗ್ಯಕರ ಆಹಾರದ ಪಟ್ಟಿಯಲ್ಲಿ ಇದು ಅಗ್ರಸ್ಥಾನದಲ್ಲಿದೆ. ಇದೊಂದು ಅತ್ಯಂತ ಪೌಷ್ಟಿಕ ಆಹಾರವಾಗಿದ್ದು, ಸಸ್ಯ ಆಧಾರಿತ ಪ್ರೋಟೀನ್ ಮೂಲವಾಗಿದೆ. ಜೊತೆಗೆ ಅಮೈನೊ ಆಸಿಡ್‌ಗಳಿಂದ ಸಮೃದ್ಧವಾಗಿರುವ ಸೋಯಾಬೀನ್ ಕಾಳುಗಳು, ಹೃದಯದ ಸಮಸ್ಯೆಗಳು ಮತ್ತು ಹೈ ಕೊಲೆಸ್ಟ್ರಾಲ್ ಇರುವವರಿಗೆ ಉಪಯುಕ್ತವಾಗಿದೆ. ಅಧ್ಯಯನಗಳ ಪ್ರಕಾರ, ಸಾಮಾನ್ಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸೋಯಾ ಕೂಡ ಉಪಯುಕ್ತವಾಗಿದೆ.

ಆದರೆ ಸೋಯಾಬೀನ್ ಸೇವನೆ ಪುರುಷರಿಗೆ ತರವಲ್ಲ ಎಂಬ ಮಾತುಗಳು ಮೊದಲಿನಿಂದಲೂ ಕೇಳಿಬರುತ್ತಿತ್ತು. ಹಾಗಾದರೆ ಇದು ನಿಜವೇ? ಪುರುಷರ ಸಂತಾನೋತ್ಪತ್ತಿ ಶಕ್ತಿಯ ಮೇಎ ಸೋಯಾಬೀನ್ ಪರಿಣಾಮ ಬೀರುವುದೇ? ಎಲ್ಲವನ್ನೂ ಈ ಲೇಖನದಲ್ಲಿ ನೋಡೋಣ.

ಸೋಯಾಬೀನ್ ಪುರುಷರ ಫಲವತ್ತತೆ ಅಥವಾ ಸಂತಾನೋತ್ಪತ್ತಿ ಶಕ್ತಿಯ ಮೇಲೆ ಪ್ರಭಾವ ಬೀರುವುದೇ?:

ಸೋಯಾಬೀನ್ ಪುರುಷರ ಫಲವತ್ತತೆ ಅಥವಾ ಸಂತಾನೋತ್ಪತ್ತಿ ಶಕ್ತಿಯ ಮೇಲೆ ಪ್ರಭಾವ ಬೀರುವುದೇ?:

ಇಲ್ಲ, ಸೋಯಾಬೀನ್ ಪುರುಷರ ಫಲವತ್ತತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಸೋಯಾಬೀನ್‌ ವಿಶೇಷ ವರ್ಗದ ಪಾಲಿಫಿನಾಲ್ನೊಂದಿಗೆ ರಚನೆಯಾಗಿದ್ದು, ಇದನ್ನು ಐಸೊಫ್ಲಾವೋನ್ಸ್ ಅಥವಾ ಫೈಟೊಈಸ್ಟ್ರೋಜೆನ್ ಹಾರ್ಮೋನ್ ಎಂದು ಕರೆಯಲಾಗುತ್ತದೆ. ಇದು ಮನುಷ್ಯನ ದೇಹದಲ್ಲಿ ಕಂಡುಬರುವ ಈಸ್ಟ್ರೋಜನ್ ಹಾರ್ಮೋನಿನ ಕೆಲಸವನ್ನು ಅದಲು-ಬದಲು ಮಾಡುತ್ತದೆ ಎಂದು ಹೇಳಲಾಗಿತ್ತು. ಇದೇ ಕಾರಣಕ್ಕೆ ಪುರುಷರು ಹೆಚ್ಚಿನ ಪ್ರಮಾಣದಲ್ಲಿ ಸೋಯಾವನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗಿತ್ತು. ಆದರೆ, ಈ ಹೇಳಿಕೆಯನ್ನು ಪುಷ್ಟೀಕರಿಸಲು ಸಾಕ್ಷಾಧಾರಗಳು ಸಾಕಷ್ಟಿಲ್ಲ ಎಂದು ಇತ್ತೀಚಿನ ಅಧ್ಯಯನಗಳು ತೀರ್ಮಾನಿಸಿವೆ.

ಐಸೊಫ್ಲಾವೋನ್ ಮತ್ತು ಈಸ್ಟ್ರೊಜೆನ್ ಎರಡು ವಿಭಿನ್ನ ಕ್ರಿಯೆಯ ಕಾರ್ಯವಿಧಾನಗಳು:

ಐಸೊಫ್ಲಾವೋನ್ ಮತ್ತು ಈಸ್ಟ್ರೊಜೆನ್ ಎರಡು ವಿಭಿನ್ನ ಕ್ರಿಯೆಯ ಕಾರ್ಯವಿಧಾನಗಳು:

2008 ರಲ್ಲಿ ನಡೆದ ಪೈಲಟ್ ಅಧ್ಯಯನವು, ಸೋಯಾ ಸೇವಿಸುವ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಆಗುವುದು ಎಂದು ಹೇಳಿತ್ತು. ಆದರೆ, ಅದೇ ಗುಂಪು ಮತ್ತೊಂದು ಅಧ್ಯಯನವನ್ನು ಮಾಡಿತ್ತು. ಆದರೆ ಅವರ ಹೇಳಿಕೆಯನ್ನು ಸಾಕ್ಷೀಕರಿಸಲು, ಸಾಕಷ್ಟು ಪುರಾವೆಗಳನ್ನು ಒದಗಿಸಲು ವಿಫಲವಾಗಿದೆ.

2010 ರಲ್ಲಿ ನಡೆದ ಇನ್ನೊಂದು ಅಧ್ಯಯನವು, ಐಸೊಫ್ಲಾವೋನ್ ಸೇವನೆ ಮತ್ತು ವೀರ್ಯದ ಗುಣಮಟ್ಟದ ಯಾವುದೇ ಸಂಬಂಧವಿಲ್ಲ ಎಂದು ಬಹಿರಂಗಪಡಿಸಿತು. ಈ ಅಧ್ಯಯನವು 40 ಮಿಗ್ರಾಂ ಐಸೊಫ್ಲಾವೋನ್ಗಳನ್ನು ಹೊಂದಿರುವ ಪೂರಕವನ್ನು ಎರಡು ತಿಂಗಳ ಕಾಲ ಸೇವಿಸಿದ ಆರೋಗ್ಯವಂತ ಪುರುಷರ ವೀರ್ಯದ ಗುಣಮಟ್ಟದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ ಎಂದು ಹೇಳುತ್ತದೆ.

ಸೋಯಾ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದೇ?:

ಸೋಯಾ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದೇ?:

ಪ್ರಾಸ್ಟೇಟ್ ಕ್ಯಾನ್ಸರ್ ಪುರುಷರಲ್ಲಿ ಅತೀ ಹೆಚ್ಚು ಕಂಡುಬರುವ ಕ್ಯಾನ್ಸರ್‌ಗಳಲ್ಲಿ ಎರಡನೇಯ ಸ್ಥಾನದಲ್ಲಿದ್ದು, ವಯಸ್ಸಾದ ಪುರುಷರು ಇದಕ್ಕೆ ಬಲಿಯಾಗುವುದು ಹೆಚ್ಚು. ಬಹಳಷ್ಟು ಅಧ್ಯಯನಗಳು ಮತ್ತು ಯಾದೃಚ್ಛಿಕ ನಿಯಂತ್ರಣ ಪ್ರಯೋಗಗಳ (ಆರ್‌ಸಿಟಿ) ಪ್ರಕಾರ, ಸೋಯಾ ಆಧಾರಿತ ಉತ್ಪನ್ನಗಳು ಪ್ರಾಸ್ಟೇಟ್ ಕ್ಯಾನ್ಸರ್‌ನ ಕಡಿಮೆ ಅಪಾಯವನ್ನು ಹೊಂದಿದ್ದು, ಇದನ್ನು ಗೋಲ್ಡನ್ ಸ್ಟ್ಯಾಂಡರ್ಡ್ ಎಂದೂ ಕರೆಯುತ್ತಾರೆ,

ಸೋಯಾಬೀನ್ ಸೇವಿಸಲು ಸರಿಯಾದ ಪ್ರಮಾಣ ಎಷ್ಟು?:

ಸೋಯಾಬೀನ್ ಸೇವಿಸಲು ಸರಿಯಾದ ಪ್ರಮಾಣ ಎಷ್ಟು?:

ಅಧ್ಯಯನಗಳ ಪ್ರಕಾರ, ದಿನಕ್ಕೆ 5-6 ಗ್ರಾಂ ಸೋಯವನ್ನು ಪ್ರತಿದಿನ ಸೇವಿಸಬಹುದು. ಸೋಯಾಬೀನ್ ಹೃದಯರಕ್ತನಾಳದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುವ, ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ತಡೆಯುವಂತಹ ಹಲವಾರು ಪ್ರಯೋಜನಗಳನ್ನು ಹೊಂದಿದೆ.

FAQ's
  • ಸೋಯಾದ ಇತರ ಅಡ್ಡಪರಿಣಾಮಗಳೇನು?

    ಕೆಲವು ಪ್ರಾಣಿಗಳ ಅಧ್ಯಯನಗಳಲ್ಲಿ ಕಂಡುಬಂದಿರುವ ಪ್ರಕಾರ, ಸೋಯಾದಲ್ಲಿ ಐಸೊಫ್ಲಾವೋನ್ಸ್ ಹಾರ್ಮೋನ್ ಸೋಯಾದಲ್ಲಿ ಕಂಡುಬರುವುದರಿಂದ, ಇವು ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಿವೆ. ಸೋಯಾದಲ್ಲಿನ ಐಸೊಫ್ಲಾವೋನ್ಗಳು ದೇಹದಲ್ಲಿ ಈಸ್ಟ್ರೊಜೆನ್ ನಂತೆ ವರ್ತಿಸಬಹುದು. ಈ ಈಸ್ಟ್ರೊಜೆನ್ ಹೆಚ್ಚಳವು ಕೆಲವು ರೀತಿಯ ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದೆ.

     

  • ಸೋಯಾ ನಿಮ್ಮಲ್ಲಿ ಬಂಜೆತನಕ್ಕೆ ಕಾರಣವಾಗಬಹುದೇ?

    ಇದರಲ್ಲಿ ಐಸೊಫ್ಲಾವೋನ್ಸ್ ಇರುವುದರಿಂದ ಅತಿಯಾಗಿ ಸೇವಿಸಿದರೆ, ಮಹಿಳೆಯ ದೇಹದ ಮೇಲೆ ವಿಭಿನ್ನ ಪರಿಣಾಮ ಬೀರಬಹುದು. ಉನ್ನತ ಮಟ್ಟದ ಸೋಯಾ ಪ್ರೋಟೀನ್ ಮುಟ್ಟಿನ ರಕ್ತಸ್ರಾವದ ಏರಿಕೆ, FSH ಮತ್ತು ಲ್ಯುಟಿನೈಸಿಂಗ್ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತೋರಿಸಿವೆ. ಆದರೆ ಭಯಪಡುವ ಅಗತ್ಯವಿಲ್ಲ! ಸೋಯಾ ಸೇವನೆಯಿಂದ ಬಂಜೆತನ ಉಂಟಾಗುವುದಿಲ್ಲ.

English summary

Does Eating Soy affect a Men's Sexual Health?

Here we talking about Does eating soy affect a men's sexual health?, read on
X
Desktop Bottom Promotion