Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ!
ಯುಗಾದಿ ಹಬ್ಬವು ಹಿಂದೂಗಳಿಗೆ ಬಹಳ ಪ್ರಮುಖ ಹಬ್ಬ ಎನ್ನಬಹುದು. ಕರ್ನಾಟಕ ಹಾಗೂ ತೆಲುಗು ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಹಾಗೆ ಉತ್ತರ ಭಾರತದಲ್ಲಿಯೂ ವಿಭಿನ್ನ ರೀತಿಯಲ್ಲಿ ಈ ಯುಗಾದಿಯನ್ನು ಆಚರಿಸಲಾಗುತ್ತದೆ. ಹಾಗೆ ಯುಗಾದಿಯಲ್ಲಿ ಸಿಹಿ ತಿಂಡಿ ಮಾಡಿ ಸವಿಯೋದೇ ಬಹಳ ಸಂಭ್ರಮ. ಅದ್ರಲ್ಲೂ ಹೋಳಿಗೆ, ಕಜ್ಜಾಯ, ಪಾಯಸ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಮಾಡುತ್ತಾರೆ.
ಹಾಗೆ ಯುಗಾದಿಯ ಸಾಂಪ್ರದಾಯಿಕ ಆಚರಣೆಯ ಭಾಗವಾಗಿರುವ ಬೇವು ಬೆಲ್ಲವನ್ನು ಸವಿಯದೆ ಯುಗಾದಿ ಹಬ್ಬ ಪೂರ್ಣ ಆಗೋದೇ ಇಲ್ಲ. ಅದ್ರಲ್ಲೂ ಬಹುತೇಕರ ಮನೆಯಲ್ಲಿ ತಾವೇ ಖುದ್ದು ತಯಾರಿಸಿದ ಬೇವು ಬೆಲ್ಲವನ್ನು ಹಲವು ದಿನಗಳ ಕಾಲ ಇಟ್ಟು ಸವಿಯೋದು ನೋಡಬಹುದು. ಬೇವು ಬೆಲ್ಲವು ಯಗಾದಿ ಆಚರಣೆಯ ಮಹತ್ವವನ್ನು ಸಾರಲಿದೆ.
ಹಾಗೆ ಮನೆಯಲ್ಲಿಯೇ ನಾವಿಂದು ಬೇವು ಬೆಲ್ಲ ಮಾಡಿ ಸವಿಯುವ ಕುರಿತಾಗಿ ತಿಳಿದುಕೊಳ್ಳೋಣ. ಆದ್ರೆ ಇದು ಸಾಮಾನ್ಯ ಬೇವು ಬೆಲ್ಲವಲ್ಲ ಬದಲಿಗೆ ಆಂಧ್ರ ಶೈಲಿಯಲ್ಲಿ ಬೇವು ಬೆಲ್ಲ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಯಾವಾಗಲು ಮಾಡುವ ಶೈಲಿಗಿಂತ ವಿಭಿನ್ನ ರೀತಿಯ ಈ ಬೇವು ಬೆಲ್ಲ ಮಾಡುವ ಕುರಿತು ಇಲ್ಲಿ ತಿಳಿದುಕೊಳ್ಳಿ. ಈ ಬೇವು ಬೆಲ್ಲ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಆಂಧ್ರ ಶೈಲಿಯ ಬೇವು ಬೆಲ್ಲ ಮಾಡಲು ಬೇಕಾಗುವ ಪದಾರ್ಥಗಳು
ಹುರಿಗಡಲೆ
ಬೆಲ್ಲ
ಕಹಿಬೇವಿನ ಎಲೆ
ಗೋಡಂಬಿ
ಒಣ ಕೊಬ್ಬರಿ
ಆಂಧ್ರ ಶೈಲಿಯ ಬೇವು ಬೆಲ್ಲ ಮಾಡುವ ವಿಧಾನವೇನು?
ಮೊದಲು ಒಂದು ಕಪ್ ಹುರಿಗಡಲೆ ತೆಗೆದುಕೊಂಡು ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಕೊಂಡು ಇಟ್ಟುಕೊಳ್ಳಿ. ಹಲವರು ತರಿ ತರಿಯಾಗಿ ರುಬ್ಬಿಕೊಂಡು ಬಳಸುತ್ತಾರೆ ಮತ್ತೆ ಕೆಲವರು ಈ ಪುಡಿಯನ್ನು ಜರಡಿ ಹಿಡಿದು ಕೇವಲ ನುಣ್ಣಗಿರುವ ಪುಡಿಯನ್ನು ಬಳಸುತ್ತಾರೆ. ಈಗ ಅದೇ ಕಪ್‌ನಲ್ಲಿ 1 ಕಪ್ ಬೆಲ್ಲದ ಪುಡಿ ಹಾಕಿಕೊಳ್ಳಿ. ಈಗ ಮತ್ತೆ ಬೆಲ್ಲ ಹಾಗೂ ಹುರಿಡಲೆ ಪುಡಿಯ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ರುಬ್ಬಿಕೊಳ್ಳಿ.
ಬೆಲ್ಲ ಈ ಹಿಟ್ಟಿನೊಂದಿಗೆ ಚೆನ್ನಾಗಿ ಬೆರೆಯಬೇಕು. ನಂತರ ಇದನ್ನು ತೆಗೆದು ಬೌಲ್‌ಗೆ ಹಾಕಿಡಿ. ಇದು ರವೆಯಂತೆ ಬರಬೇಕು. ಈಗ ಮಿಕ್ಸಿ ಜಾರ್‌ಗೆ ಗೋಡಂಬಿ, ಒಣ ಕೊಬ್ಬರಿ ತುರಿ ಹಾಗೆ ಬಾದಾಮಿ ಕಾಳು ಇದ್ದರೆ ಅದನ್ನು ಸಹ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಈ ಮಿಶ್ರಣವನ್ನು ಸಹ ಬೆಲ್ಲದ ಹಿಟ್ಟಿನ ಮಿಶ್ರಣಕ್ಕೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಈಗ ಬೇವಿನ ಎಲೆಯನ್ನು ಚಾಕುವಿನಿಂದ ಸಣ್ಣ ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಕೊತ್ತಂಬರಿ ಸೊಪ್ಪು ಹೆಚ್ಚಿಕೊಂಡಂತೆ ಬೇವಿನ ಎಲೆಗಳನ್ನು ಸಹ ಸಣ್ಣದಾಗಿ ಹೆಚ್ಚಬೇಕು. ಆದರೆ ಹೆಚ್ಚು ಎಲೆಗಳ ಬಳಸಿದರೆ ಕಹಿ ಹೆಚ್ಚಾಗುತ್ತದೆ. ನಿಮಗೆ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟನ್ನು ಮಾತ್ರ ಹೆಚ್ಚಿಕೊಳ್ಳಿ. ಅನಂತರ ಈ ಬೇವನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ಆಂಧ್ರ ಶೈಲಿಯ ಬೇವು ಬೆಲ್ಲ ಸಿದ್ದವಾಗುತ್ತೆ. ನೀವು ಕೂಡ ಈ ಬಾರಿಯ ಯುಗಾದಿ ಹಬ್ಬದಲ್ಲಿ ಈ ವಿಧಾನದಿಂದ ಮಾಡಿದ ಬೇವು ಬೆಲ್ಲವನ್ನು ಮಾಡಿ ಸವಿದು ನೋಡಿ.



Click it and Unblock the Notifications
