Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 17 (March 17 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಅನುಕೂಲವಿದೆ. ನಿಮ್ಮ ಹಲವು ವಿಚಾರಗಳಲ್ಲಿ ತಾಳ್ಮೆಯಿಂದ ಎಲ್ಲವನ್ನು ಎದುರಿಸಿ. ನೀವು ಮಾಡಬೇಕಿದ್ದ ಕೆಲಸವು ನಿಮ್ಮಿಂದ ಹೆಚ್ಚು ಶ್ರಮ ಬಯಸಲಿದೆ. ಮನೆಯ ವಾತಾವರಣದಲ್ಲಿ ಸ್ವಲ್ಪ ಗೊಂದಲದ ಸ್ಥಿತಿ ಇರಲಿದೆ.
ವೃಷಭ ರಾಶಿ
ವೃಷಭ ರಾಶಿಯ ಜನರಲ್ಲಿ ಈ ದಿನ ಸಮಸ್ಯೆಗಳಿವೆ. ನಿಮ್ಮ ಆರೋಗ್ಯದಲ್ಲಿನ ಏರುಪೇರು ನಿಮ್ಮನ್ನು ದೈನಂದಿನ ಕೆಲಸಗಳಿಂದ ದೂರ ಇಡಲಿದೆ. ಇದರಿಂದ ನಿಮ್ಮ ದಿನ ವಿಶ್ರಾಂತಿಯಲ್ಲಿದ್ದರೂ ಒತ್ತಡದಲ್ಲಿ ಕಳೆಯುವಿರಿ. ನಿಮ್ಮ ಆಪ್ತರ ಸಹಾಯ ಪಡೆಯುವುದು ಉತ್ತಮ.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನ ಅನುಕೂಲಕರ. ನಿಮ್ಮ ಕೆಲಸಗಳು ಯಶಸ್ವಿಯಾಗಿ ಪೂರೈಸುತ್ತೀರಿ. ಪ್ರಯಾಣಗಳಲ್ಲಿ ಎಚ್ಚರಿಕೆಯಿಂದಿರಿ. ನಿಮ್ಮ ಬಹುಬೇಡಿಕೆಯ ವಸ್ತು ನಿಮ್ಮ ಕೈಸೇರಬಹುದು. ಯಾರಿಂದಾದರು ಹಣ ಪಡೆಯುವುದು ಬಾಕಿ ಇದ್ದರೆ ಪ್ರಯತ್ನ ಬಿಡಬೇಡಿ.
ಕರ್ಕ ರಾಶಿ
ಕರ್ಕ ರಾಶಿಯ ಜನರಲ್ಲಿ ಈ ದಿನ ಮಿಶ್ರಫಲ ನೋಡಬಹುದು. ನಿಮ್ಮ ಹಲವು ದಿನದ ಶ್ರಮದ ಫಲ ಸಿಗಲಿದೆ. ಆದಾಯಕ್ಕಿಂತ ಹೆಚ್ಚು ಖರ್ಚು ಮಾಡುವ ಮೊದಲು ಆಲೋಚಿಸುವುದು ಉತ್ತಮ. ದಾಂಪತ್ಯ ವಿಚಾರವಾಗಿ ಎಚ್ಚರವಹಿಸಿ.
ಸಿಂಹ ರಾಶಿ
ಸಿಂಹ ರಾಶಿಯ ಜನರಿಗೆ ಈ ದಿನ ಉತ್ತಮವಾಗಿರಲಿದೆ. ಯಾರಿಂದಾದರು ಹಣ ಪಡೆಯುವುದು ಬಾಕಿ ಇದ್ದರೆ ಪ್ರಯತ್ನಗಳ ಮಾಡುವುದು ಫಲ ತರಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ನಿಮ್ಮ ಮನೆ ವಿಚಾರದಲ್ಲಿ ಸುಲಭದ ಮಾತುಕತೆಗಳು ನಡೆಯಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ದಿನವು ಅನುಕೂಲಕರ ನಿಮ್ಮ ಹಲವು ಕೆಲಸಗಳನ್ನು ಮತ್ತೊಬ್ಬರ ಸಹಾಯ ಮೂಲಕ ಮಾಡಬಹುದು. ಗೃಹಿಣಿಯರಲ್ಲಿ ಈ ದಿನವು ಶ್ರಮದಾಯಕವಾಗಿರಲಿದೆ. ಹೊಸ ಆದಾಯಕ್ಕೆ ನೀವು ಮತ್ತಷ್ಟು ಪ್ರಯತ್ನ ಮಾಡುವಿರಿ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಇಂದು ಉತ್ತಮ ದಿನ. ಬಹಳ ಸಮಯದಿಂದ ನಿಮಗೆ ಸೇರಬೇಕಿದ್ದ ವಸ್ತು ಕೈ ಸೇರಲಿದೆ. ಯಾರ ಬಳಿಯಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ. ನಿಮ್ಮ ವ್ಯಾಪಾರದಲ್ಲಿ ಪ್ರಗತಿ ನೋಡಬಹುದು.
ವೃಶ್ಚಿಕ ರಾಶಿ
ನಿಮ್ಮ ಹಣಕಾಸು ಸ್ಥಿತಿ ಇಂದು ಸುಧಾರಿಸಲಿದೆ. ಇದರಿಂದ ನಿಮ್ಮಲ್ಲಿ ಸಂತಸ ಮೂಡಬಹುದು. ಅವಿವಾಹಿತರಲ್ಲಿ ಸಂತಸದ ದಿನ. ನಿರುದ್ಯೋಗಿಗಳು ಮತ್ತಷ್ಟು ಪ್ರಾಮಾಣಿಕ ಯತ್ನದ ಮೂಲಕ ಕೆಲಸ ಪಡೆಯಬಹುದು.
ಧನು ರಾಶಿ
ಧನು ರಾಶಿಯ ಜನರಿಗೆ ಈ ದಿನ ಪ್ರಯಾಣಗಳ ಮಾಡಬೇಕಾದ ದಿನ. ಹೀಗಾಗಿ ನಿಮ್ಮ ಆದಾಯ ಹೆಚ್ಚಳವಾಗುವ ಹಲವು ಅವಕಾಶ ಬರಲಿದೆ. ದಾಂಪತ್ಯ ವಿಚಾರವಾಗಿ ತಾಳ್ಮೆಯಿಂದ ಮಾತುಕತೆಯಲ್ಲಿ ಭಾಗಿಯಾಗಿ. ದುಂದು ವೆಚ್ಚವನ್ನು ಕಡಿಮೆ ಮಾಡುವುದು ಉತ್ತಮ.
ಮಕರ ರಾಶಿ
ಮಕರ ರಾಶಿಯವರು ಈ ದಿನ ಮಿಶ್ರಫಲ ನೋಡಲಿದ್ದಾರೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಮುಂದೂಡುವ ಮನಸ್ಸು ಮಾಡಬೇಡಿ. ಹೊಸ ಉದ್ಯೋಗ ಅವಕಾಶಗಳು ಹುಡುಕಿ ಬರಬಹುದು. ಆಪ್ತರಲ್ಲಿ ಹಣಕಾಸಿನ ಬೇಡಿಕೆ ಇಟ್ಟಿದ್ದರೆ ಫಲ ಸಿಗಬಹುದು. ವಾಹನ ಸಂಬಂಧವಾಗಿ ಎಚ್ಚರದಿಂದ ಇರಿ.
ಕುಂಭ ರಾಶಿ
ಕುಂಭ ರಾಶಿಯ ಜನರಲ್ಲಿ ಈ ದಿನವು ಅನುಕೂಲಕರವಾಗಿದೆ. ಹೊಸ ವಿಚಾರಗಳು ಅರಂಭಗಳಿಗೆ ಮುನ್ನುಡಿ ಬರೆಯಲಿದ್ದೀರಿ. ನಿಮ್ಮ ಮನಸ್ಸಿನಲ್ಲಿ ತಳಮಳಕ್ಕೆ ಕಾರಣವಾಗುವ ಘಟನೆಗಳು, ವಿಚಾರಗಳು ಬರಲಿವೆ.
ಮೀನ ರಾಶಿ
ಇಂದು ಮೀನ ರಾಶಿಯ ಜನರು ಸಮಸ್ಯೆಗಳ ಎದುರಿಸಬಹುದು. ಯಾರಿಗಾದರು ಅಗತ್ಯ ಕೆಲಸಕ್ಕೆ ಹಣಕಾಸಿನ ಅಗತ್ಯತೆ ಬರಬಹುದು. ಪ್ರೇಮಿಗಳಿಗೆ ಇಂದು ಸಮಸ್ಯಾತ್ಮಕ ದಿನ. ಹಣ, ವ್ಯವಹಾರಗಳಲ್ಲಿ ಎಚ್ಚರ ಇಡಿ. ಮನೆಗೆ ಅತಿಥಿಗಳ ಆಗಮನದ ನಿರೀಕ್ಷೆ ಇಡಬಹುದು.



Click it and Unblock the Notifications