Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ
ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ಯುಗಾದಿ ಹಬ್ಬದ ಸ್ಪೆಷಲ್ ಶುಭಾಶಯಗಳು ಇಲ್ಲಿವೆ. ಹೌದು, ಹೊಸತನದ ಸಂಭ್ರಮದೊಂದಿಗೆ ಯುಗಾದಿ ಹಬ್ಬವು ಮತ್ತೆ ಮರಳಿದೆ. 2026ರ ಯುಗಾದಿಯನ್ನು (Happy Ugadi 2026) ಮಾರ್ಚ್ 19 ರಂದು ಭಾರತೀಯಾದ್ಯಂತ ಸಡಗರ ಸಂಭ್ರಮಗಳಿಂದ ಆಚರಿಸಲು ಸಿದ್ಧತೆಗಳು ನಡೆದಿವೆ. ಭಾರತೀಯರ ಪಾಲಿಗೆ ಇದೊಂದು ವಿಶೇಷ ಹಬ್ಬವಾಗಿದ್ದು, ಭಾರತೀಯ ಪಂಚಾಂಗದ ಪ್ರಕಾರ ಚೈತ್ರ ಮಾಸದ ಮೊದಲ ದಿನ ಆಚರಿಸಲಾಗುವ ಯುಗಾದಿಯು ಹೊಸ ವರ್ಷದ ಆರಂಭವನ್ನು ಸೂಚಿಸುತ್ತಾ ಹೊಸ ಭರವಸೆಗಳನ್ನು ಸ್ವಾಗತಿಸುತ್ತದೆ.
ಈ ಹಬ್ಬದ ಸಂದರ್ಭದಲ್ಲಿ ಬಂಧುಮಿತ್ರರಿಗೆ, ಸ್ನೇಹಿತರಿಗೆ ಮತ್ತು ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ಕೋರುವುದು ಒಂದು ಸಂಪ್ರದಾಯವಾಗಿದೆ. ಹಬ್ಬದ ಮೂಲಾಶಯವೆಂದರೆ ಬದುಕಿನಲ್ಲಿ ಸಿಹಿಯೂ ಇದೆ, ಕಹಿಯೂ ಇದೆ - ಅವೆರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂಬುದು. ಇದನ್ನು ಪ್ರತಿನಿಧಿಸುವ ಬೇವು-ಬೆಲ್ಲದ ಸವಿಯೊಂದಿಗೆ, ಮನೆಯಲ್ಲಿ ಸಿದ್ಧವಾಗುವ ಸಿಹಿ ತಿಂಡಿಗಳು ಮತ್ತು ಇನ್ನಿತರ ಹಬ್ಬದ ತಯಾರಿಗಳು ಈಗಾಗಲೇ ಪ್ರಾರಂಭವಾಗಿವೆ.

ನಿಮ್ಮ ಆತ್ಮೀಯರೊಂದಿಗೆ ಈ ಯುಗಾದಿಯ ಸಂತೋಷವನ್ನು ಹಂಚಿಕೊಳ್ಳಲು, ಇಲ್ಲಿ ಕೆಲವು ಅರ್ಥಪೂರ್ಣ ಶುಭಾಶಯ ಸಂದೇಶಗಳನ್ನು ನೀಡಲಾಗಿದೆ. ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್‌ಆ್ಯಪ್ ಮುಂತಾದ ಮಾಧ್ಯಮಗಳ ಮೂಲಕ ಈ ಸಂದೇಶಗಳನ್ನು ಕಳುಹಿಸುವ ಮೂಲಕ ನಿಮ್ಮ ಪ್ರೀತಿಪಾತ್ರರಿಗೆ ಈ ಹೊಸ ವರ್ಷವು ಮಂಗಳಕರವಾಗಿರಲಿ (Ugadi wishes 2026) ಎಂದು ಹಾರೈಸಬಹುದು.
• ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.. ಮತ್ತೆ ಯುಗಾದಿ ಬಂದಿದೆ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
• ಬದುಕೆಂದ ಮೇಲೆ ಸಿಹಿ, ಕಹಿಗಳು ಸಾಮಾನ್ಯ. ಬೇವು, ಬೆಲ್ಲದ ಸಮ್ಮಿಲನವೇ ನಮ್ಮ ಜೀವನ. ಹೀಗಾಗಿ ನೀವು ನಿಮ್ಮ ಜೀವನದಲ್ಲಿ ಸಿಹಿಗೆ ಹಿಗ್ಗದೆ, ಕಹಿಗೆ ಜಗ್ಗದೆ ಬದುಕನ್ನು ಖುಷಿಯಿಂದ ಮುನ್ನಡೆಸಿ. ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.
• ದೇವರು ನಿಮಗೆ ಆಯುರಾರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಕರುಣಿಸಲಿ. ಈ ಹೊಸ ವರ್ಷ ಸಂತೋಷದ ಹೊನಲಾಗಲಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
• ನಿಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ. ಸುಖ, ಸಮೃದ್ಧಿ, ಶಾಂತಿ, ಸೌಹಾರ್ದತೆ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ. ಯುಗಾದಿ ಹಬ್ಬದ ಶುಭಾಶಯಗಳು.
• ಯುಗಾದಿಯು ನಿಮಗೂ ನಿಮ್ಮ ಕುಟುಂಬಕ್ಕೂ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು ಹಾಗೂ ಯಶಸ್ಸನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು.
• ಈ ಹೊಸ ವರ್ಷವು ನಿಮ್ಮ ಜೀವನದ ಎಷ್ಟೇ ಕಷ್ಟಗಳನ್ನು ದೂರ ಮಾಡಲಿ. ಸವಾಲುಗಳು ಹಾಗೂ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ನಿಮಗೆ ಸಿಗಲಿ. ಬೇವು ಬೆಲ್ಲವನ್ನು ಸವಿದು ಸಿಹಿ ಮಾತಾಡಿ, ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
• ಯುಗಾದಿಯು ನಿಮಗೆ ಸಕಾರಾತ್ಮಕ ಮತ್ತು ಯಶಸ್ಸಿನಿಂದ ತುಂಬಿದ ಹೊಸ ಅಧ್ಯಾಯದ ಆರಂಭವಾಗಲಿ. ಯುಗಾದಿ ಹಬ್ಬದ ಶುಭಾಶಯಗಳು.
• ಬೇವು - ಬೆಲ್ಲದಂತೆ ಸಿಹಿ - ಕಹಿಗಳು ಬೆರೆತಾಗಲೇ ಬದುಕು ಸುಂದರವಾಗಲು ಸಾಧ್ಯ. ನೋವು ನಲಿವು ಎರಡನ್ನು ಸಮಾನವಾಗಿ ಸ್ವೀಕರಿಸಿ ಯಶಸ್ಸನ್ನು ಕಾಣುವಂತಾಗಲಿ. ಯುಗಾದಿ ಹಬ್ಬದ ಶುಭಾಶಯಗಳು.
• ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಯುಗಾದಿಯ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ನಿಮಗೆ ವಿಫುಲ ಅವಕಾಶಗಳನ್ನು ಮತ್ತು ಸಂತೋಷವನ್ನು ತರಲಿ.
• ಯುಗಾದಿಯ ವಿಶಿಷ್ಟ ಬಣ್ಣಗಳು ನಿಮ್ಮ ಜೀವನವನ್ನು ಹೊಳಪು ಮತ್ತು ಸಕಾರಾತ್ಮಕತೆಯಿಂದ ತುಂಬಲಿ. ಯುಗಾದಿ ಹಬ್ಬದ ಶುಭಾಶಯಗಳು.
• ಹೊಸತನ್ನು ಹೊತ್ತು ಮತ್ತೆ ಯುಗಾದಿ ಬಂದಿದೆ.. ಈ ಯುಗಾದಿ ನಿಮ್ಮೆಲ್ಲರ ಬಾಳಲ್ಲಿ ಹೊಸ ಹರುಷ ತರಲಿ. ಬದುಕಿನಲ್ಲಿ ನೆಮ್ಮದಿ ತುಂಬಿರಲಿ. ವಿಕ್ರಮ ಸಂವತ್ಸರದ ಹಾರ್ದಿಕ ಶುಭಾಶಯಗಳು.



Click it and Unblock the Notifications
