Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ?
ಕಳೆದ 13 ವರ್ಷಗಳಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ (ಕೋಮಾ) 32 ವರ್ಷದ ಹರೀಶ್ ರಾಣಾ ಅವರಿಗೆ ಗೌರವಯುತವಾಗಿ ಮರಣವನ್ನಪ್ಪಲು ಸುಪ್ರೀಂ ಕೋರ್ಟ್ ಐತಿಹಾಸಿಕ ಅನುಮತಿ ನೀಡಿದೆ. ಇದು ಭಾರತದಲ್ಲಿ ನ್ಯಾಯಾಲಯದ ಆದೇಶದ ಮೂಲಕ ನೀಡಲಾದ ಮೊದಲ ನಿಷ್ಕ್ರಿಯ ಇಚ್ಛಾಮರಣ ಪ್ರಕರಣವಾಗಿದೆ. ಹಾಗಾದ್ರೆ ಈ ನಿಷ್ಕ್ರಿಯ ಇಚ್ಛಾಮರಣ ಎಂದರೇನು? 13 ವರ್ಷದಿಂದ ಕೋಮಾದಲ್ಲಿದ್ದ ಈ ಹರೀಶ್ ರಾಣಾ ಯಾರು ಎಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಯಾರು ಈ ಹರೀಶ್ ರಾಜ್?
2013ರಲ್ಲಿ ಚಂಡೀಗಢದಲ್ಲಿ ಬಿಟೆಕ್ ಪದವಿ ಪಡೆಯುತ್ತಿದ್ದ ಹರೀಶ್ ರಾಣಾ ಹಾಸ್ಟೆಲ್‌ನಲ್ಲಿದ್ದಾ ಎಡುವಿ ಬಿದ್ದಿದ್ದರು. ನಾಲ್ಕನೇ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ ರಕ್ತಸ್ರಾವವಾಗಿತ್ತು. ಅಂದಿನಿಂದ ಇಂದಿನರೆಗೂ ಅವರಿಗೆ ಅಂಗವಕಲ್ಯ ಕಾಡಿತ್ತು. ಅಂದಿನಿಂದ ಕೋಮಾದಲ್ಲಿ ಹಾಗೆ ಕೃತಕ ಉಸಿರಾಟದ ನೆರವಿನಿಂದ ಅವರನ್ನು ಜೀವಂತವಾಗಿಡಲಾಗಿತ್ತು.

ವೈದ್ಯಕೀಯ ವರದಿಗಳ ಪ್ರಕಾರ ಅವರು ಚೇತರಿಸಿಕೊಳ್ಳುವ ಯಾವುದೇ ಸಾಧ್ಯತೆ ಇರಲಿಲ್ಲ. ಆಹಾರವನ್ನು ಫೀಡಿಂಗ್ ಟ್ಯೂಬ್ ಮೂಲಕ ನೀಡಲಾಗುತ್ತಿತ್ತು. ಮಗನನ್ನು ಸುದೀರ್ಘ 13 ವರ್ಷಗಳ ಕಾಲ ಪೋಷಕರು ನೋಡಿಕೊಂಡಿದ್ದರು. ಆದ್ರೆ ಮಗನ ಪರಿಸ್ಥಿತಿ ನೋಡಲಾಗದೆ ಪುತ್ರನಿಗೆ ಗೌರವಯುತ ಮರಣ ನೀಡಬೇಕು ಎಂದು ಸುಪ್ರೀಂಕೋರ್ಟ್‌ಗೆ ತಂದೆ ಅರ್ಜಿ ಸಲ್ಲಿಸಿದ್ದರು.
ರಾಣಾ ಅವರ ಪೋಷಕರು ಮೊದಲಿಗೆ ಪುತ್ರನಿಗೆ ದಯಾಮರಣ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಸ್ಥಿತಿಯನ್ನು ಪರಿಶೀಲಿಸಲು ವೈದ್ಯಕೀಯ ಮಂಡಳಿಯನ್ನು ರಚಿಸಿ 'ಕಾಮನ್ ಕಾಸ್ ಮತ್ತು ಯೂನಿಯನ್ ಆಫ್ ಇಂಡಿಯಾ' ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಜೀವರಕ್ಷಕ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳಬಹುದೇ ಎಂದು ಪರಿಗಣಿಸುವಂತೆ ಕೋರಲಾಗಿತ್ತು. ಆದ್ರೆ ದೇಹಲಿ ಹೈಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು. ಹರೀಶ್ ರಾಣಾ ಅವರನ್ನು ನಾವು ಕೃತಕ ಉಸಿರಾಟ ವ್ಯವಸ್ಥೆಯ ಹೊರತಾಗಿಯೂ ಉಳಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿತ್ತು.
ಈ ತೀರ್ಪನ್ನು ಪ್ರಶ್ನಿಸಿದ ಹರೀಶ್ ರಾಣಾ ಪೋಷಕರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಸುಧೀರ್ಘ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಈಗ ಹರೀಶ್ ರಾಣಾ ಅವರಿಗೆ ಹಾಕಲಾಗಿರುವ ಕೃತಕ ಉಸಿರಾಟ ಪ್ರಕ್ರಿಯೆಯನ್ನು ಹಿಂಪಡೆಯಲು ಅನುಮತಿ ನೀಡಿದೆ.
2018ರಲ್ಲಿ ಐವರು ನ್ಯಾಯಾಧೀಶರಿದ್ದ ಸಂವಿಧಾನ ಪೀಠವು ಜೀವ ಉಳಿಸುವ ಚಿಕಿತ್ಸೆಯನ್ನು ಹಿಂತೆಗೆದುಕೊಳ್ಳುವ ದಯಾಮರಣ ಹಾಗೂ ಜೀವಂತ ವಿಲ್/ಮುಂಗಡ ನಿರ್ದೇಶನಗಳನ್ನು ಗುರುತಿಸಿ ಅನುಮೋದನೆ ನೀಡಿತ್ತು. ಆರ್ಟಿಕಲ್ 21 ಅಡಿಯಲ್ಲಿ ಬದುಕುವ ಹಕ್ಕಿನಲ್ಲಿ ಘನತೆಯಿಂದ ಬದುಕುವ ಹಕ್ಕು ಸೇರಿದೆ ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
42 ವರ್ಷದಿಂದ ಸಂಕಷ್ಟ ಎದುರಿಸಿದ್ದ ಅರುಣಾ ಶಾನಭಾಗ್
ಮುಂಬೈನಲ್ಲಿ ನರ್ಸ್ ಆಗಿದ್ದ ಅರುಣಾ ಶಾನಭಾಗ್ ಅವರನ್ನು ಅದೇ ಆಸ್ಪತ್ರೆಯ ವಾರ್ಡ್ ಬಾಯ್ ಆಗಿದ್ದ ಸೋಹನ್ ಲಾಲ್ ಭಟ್ರಾ ವಾಲ್ಮಿಕಿ ಎಂಬಾತ ಆಕೆಯ ಮೇಲೆ 1973ರಲ್ಲಿ ಅತ್ಯಾಚಾರ ಎಸಗಿದ್ದ. ಇದರಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ ಆಕೆಯನ್ನು ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆಕೆ ಬರೋಬ್ಬರಿ 42 ವರ್ಷಗಳ ಕಾಲ ಒಂದೇ ಹಾಸಿಗೆಯಲ್ಲಿ ಮಲಗಿದ್ದಳು, ಆಕೆಗೆ ದಯಾಮರಣ ಕೋರಿ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. 2011ರಲ್ಲಿ ಸುಪ್ರೀಂಕೋರ್ಟ್ ದಯಾಮರಣ ಅರ್ಜಿಯನ್ನು ತಿರಸ್ಕರಿಸಿತ್ತು. ಅರುಣಾರಿಗೆ ದಯಾಮರಣ ಸಾಧ್ಯವಿಲ್ಲ ಎಂದು ತೀರ್ಪು ನೀಡಿತ್ತು. ಆದ್ರೆ ಅರುಣಾ ಶಾನಭಾಗ್ 2015ರಲ್ಲಿ ಮರಣ ಹೊಂದಿದ್ದರು. ಆಕೆಯ ಮರಣದ ನಂತರದಲ್ಲಿ ದಯಾಮರಣ ಕುರಿತಾದ ಚರ್ಚೆಗಳು ಹೆಚ್ಚಾದವು. ಇದಾಗಿ 2018ರಲ್ಲಿ ದಯಾಮರಣ ಕುರಿತಾಗಿ ಸುಪ್ರೀಂಕೋರ್ಟ್ ಬಹುದೊಡ್ಡ ತೀರ್ಪು ಪ್ರಕಟಿಸಿತ್ತು.



Click it and Unblock the Notifications











