Latest Updates
-
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ!
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ?
ಯುಗಾದಿ ಹಿಂದೂಗಳಿಗೆ ಹೊಸ ವರ್ಷದ ಆರಂಭದ ದಿನ ಎಂದು ಪರಿಗಣಿಸಲಾಗುತ್ತದೆ. ಈ ದಿನದಿಂದ ಚೈತ್ರ ಮಾಸ ಆರಂಭವಾಗಲಿದೆ. ಇದು ವೈದಿಕ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷವಾಗಿ ಆಚರಿಸಲಾಗುತ್ತದೆ. ಚೈತ್ರ ಮಾಸದಲ್ಲಿ ಹೊಸ ಚಿಗುರು ಪಡೆಯುತ್ತೇವೆ. ಹೀಗಾಗಿ ಈ ದಿನದಂದು ವಿಶೇಷ ಆಚರಣೆಗಳ ನೋಡಬಹುದು. ಹಾಗೆ ಯುಗಾದಿಯಲ್ಲಿ ಸಿಹಿ ತಿಂಡಿಗಳು, ಹಬ್ಬದ ಅಡುಗೆ, ಸಂಭ್ರಮ ದುಪ್ಪಟ್ಟಾಗಿಸುವ ಅಂಶ.
ಈ ಶುಭ ದಿನದಂದೇ ಬ್ರಹ್ಮನು ಸೃಷ್ಟಿಯನ್ನು ಆರಂಭಿಸಿದನು ಎಂದು ಸಹ ನಂಬಲಾಗಿದೆ. ಪ್ರಕೃತಿಯಲ್ಲಿಯೂ ವಿಭಿನ್ನ ಬದಲಾವಣೆಯ ಮೂಲಕ ಹೊಸ ವರ್ಷದ ಆರಂಭವಾಗುವುದು. ಹಾಗೆ ಯುಗಾದಿಯಲ್ಲಿ ಬೇವು ಬೆಲ್ಲ ಸವಿಯೋದು ಸಂಪ್ರಾಯದಂತೆ ನಡೆದು ಬಂದಿದೆ. ಬೇವು ಬೆಲ್ಲ ಸವಿಯದೆ ಯುಗಾದಿ ಪೂರ್ಣವಾಗೋದಿಲ್ಲ. ಹಾಗೆ ಬೇವು ಬೆಲ್ಲವನ್ನು ಹಂಚಿ ಸವಿಯುವುದು ಈ ಹಬ್ಬದ ಸಂಪ್ರದಾಯದಲ್ಲಿ ಒಂದು.

ಪ್ರತಿಯೊಬ್ಬರ ಜೀವನವು ನೋವು-ನಲಿವಿನಿಂದ ಕೂಡಿರುತ್ತದೆ. ಅವುಗಳನ್ನು ಸಮಾನ ದೃಷ್ಟಿಯಲ್ಲಿ ಸ್ವೀಕರಿಸಬೇಕು. ನೋವು ಎದುರಾದಾಗ ದೃತಿಗೆಡದೆ, ನಲಿವಿನಿಂದಾಗಿ ಅಹಂಕಾರಕ್ಕೆ ಒಳಗಾಗದೆ, ಎರಡು ಸಂದರ್ಭದಲ್ಲೂ ಸಮತೋಲನವನ್ನು ಕಾಯ್ದುಕೊಂಡು ಜೀವನವನ್ನು ನಡೆಸಬೇಕು ಎಂಬುದು ಈ ಬೇವು ಬೆಲ್ಲ ನೀಡುವುದರ ಕಾರಣವೂ ಹೌದು. ಸುಖ ದುಃಖವನ್ನು ಸಮವಾಗಿ ಸ್ವೀಕರಿಸಬೇಕು. ಸುಖವಿದ್ದಾಗ ಹಿಗ್ಗುವುದು ದುಃಖದಲ್ಲಿ ಕುಗ್ಗವುದಲ್ಲ ಎಂಬ ಸಂದೇಶ ನೀಡಲಿದೆ. ಹಾಗೆ ಬೇವು ಬೆಲ್ಲವು ವೈಜ್ಞಾನಿಕ ಕಾರಣದಿಂದಾಗಿಯೂ ಬಹಳ ಮುಖ್ಯವಾಗಿದೆ.
ಯುಗಾದಿಯಲ್ಲಿ ಬೇವು ಬೆಲ್ಲದ ಪ್ರಾಮುಖ್ಯತೆ ಏನು?
ಯುಗಾದಿಯಲ್ಲಿ ಬೆಲ್ಲ ಮತ್ತು ಬೇವಿನ ಎಲೆಗಳು ಜೀವನದಲ್ಲಿ ಕಹಿಯನ್ನು ಸೂಚಿಸುತ್ತವೆ ಎಂದು ನೀವು ತಿಳಿದಿರಬೇಕು. ಮಾನವ ಜೀವನವು ಸಂತೋಷದ ಸವಾರಿಯಾಗಲು ಸಾಧ್ಯವಿಲ್ಲ. ನಿಮ್ಮ ಸುತ್ತಲಿನ ಜೀವನದ ಕಹಿಗಳನ್ನು ನೀವು ಒಪ್ಪಿಕೊಳ್ಳಬೇಕು. ಹಾಗೆ ವೈಜ್ಞಾನಿಕವಾಗಿಯೂ ಇದು ಪ್ರಾಮುಖ್ಯತೆ ಹೊಂದಿದೆ. ಬೇವಿನ ಎಲೆಗಳು, ಹೂಗಳು, ಕಾಂಡಗಳು ಔಷಧೀಯ ಗುಣ ಹೊಂದಿದೆ. ಬೇವಿನ ಎಲೆಗಳನ್ನು ನೀರಿಗೆ ಹಾಕಿ ಸ್ನಾನ ಮಾಡುವುದು ದೇಹವು ಹಲವು ಸಮಸ್ಯೆಗಳಿಂದ ಮುಕ್ತವಾಗುತ್ತೆ. ಬೇವು ರಕ್ತವನ್ನು ಶುದ್ಧೀಕರಿಸುತ್ತದೆ. ಒಂದು ಹಸುವಿಗೆ ಅದರ ಎಲೆಗಳನ್ನು ನೀಡಿದರೆ ಸಾಕಷ್ಟು ಹಾಲು ಸಿಗುತ್ತದೆ. ಇದು ಚರ್ಮದ ಅಲರ್ಜಿಗಳು, ಉದರ ಸಂಬಂಧಿ ಸಮಸ್ಯೆಗಳು ಸೇರಿ ಹಲವು ಸಮಸ್ಯೆಗಳಿಗೆ ಮುಕ್ತಿ ನೀಡಲಿದೆ. ನಕಾರಾತ್ಮಕತೆಯನ್ನು ಶುದ್ಧೀಕರಿಸುತ್ತದೆ ಮತ್ತು ಸಕಾರಾತ್ಮಕತೆಯನ್ನು ಆಕರ್ಷಿಸುತ್ತದೆ. ತಪಸ್ಸು ಮಾಡುವ ಋಷಿಮುನಿಗಳು ತಪಸ್ಸಿನ ಸಮಯದಲ್ಲಿ ನಿಯಮಿತವಾಗಿ ಬೇವಿನ ಎಲೆಗಳನ್ನು ಅಥವಾ ಅದರ ರಸವನ್ನು ಸೇವಿಸುತ್ತಿದ್ದರು ಎಂದು ತಿಳಿದುಬಂದಿದೆ.
ಹಾಗೆ ಬೆಲ್ಲವು ದೇಹಕ್ಕೆ ಉತ್ತಮ ಅಂಶವಾಗಿದೆ. ಕೊಬ್ಬಿನ ಕೋಶಗಳನ್ನು ಸುಡುವ ನಿಮ್ಮ ದೇಹದ ಸಾಮರ್ಥ್ಯವನ್ನು ಸುಧಾರಿಸುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬೆಲ್ಲವು ದೇಹವು ಸಮತೋಲನದಿಂದ ಇರಲು ಸಹಕಾರಿ. ಇದರಲ್ಲಿನ ಗ್ಯಾಸ್ಟ್ರೊ-ಪ್ರೊಟೆಕ್ಟಿವ್ ಅಂಶವು ಉದರ ಸಂಬಂಧಿ ಸಮಸ್ಯೆಗಳನ್ನು ಕಡಿಮೆ ಮಾಡಲಿದೆ. ಹೀಗಾಗಿ ಬೆಲ್ಲದಿಂದ ಮಾಡಿದ ಯಾವುದೇ ಖಾದ್ಯವನ್ನು ನೀವು ಯಾವುದೇ ಭಯವಿಲ್ಲದೆ ಸೇವಿಸಬಹುದು. ಬಾಯಿ ಹುಣ್ಣು, ವಾಂತಿ, ಎದೆಯುರಿ, ಅತಿಯಾದ ಬೆವರುವಿಕೆ, ತುರಿಕೆ ಸೇರಿ ಹಲವು ಸಮಸ್ಯೆಗಳಿಗೆ ಇದು ಪರಿಹಾರ ನೀಡಲಿದೆ.
ಹಾಗೆ ಬೇವು-ಬೆಲ್ಲ ಸೇವಿಸುವಾಗ ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ ಸರ್ವಾರಿಷ್ಟವಿನಾಶಾಯ ನಿಂಬಕಂದಳ ಭಕ್ಷಣಮ್ ಎಂಬ ಶ್ಲೋಕವನ್ನು ಉಚ್ಚರಿಸುತ್ತಾರೆ. ಇದರ ಅರ್ಥ ನೂರು ವರ್ಷಗಳ ಆಯುಷ್ಯ, ವಜ್ರದಂತೆ ದೃಢ ದೇಹ, ಸಂಪತ್ತು ಮತ್ತು ಎಲ್ಲ ಅನಿಷ್ಟಗಳ ನಿವಾರಣೆಗಾಗಿ ಈ ಬೇವನ್ನು ಸೇವಿಸುತ್ತೇನೆ. ಆಯುರ್ವೇದ ಪ್ರಕಾರ ಬೇವಿನ ಎಲೆಗಳು ಅನಿಷ್ಟಗಳನ್ನು ನಾಶಮಾಡುತ್ತವೆ ಎಂಬ ನಂಬಿಕೆ ಇದೆ.



Click it and Unblock the Notifications