Latest Updates
-
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್!
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ!
ಜ್ಯೋತಿಷ್ಯದಲ್ಲಿ ಗ್ರಹ ಬದಲಾವಣೆಗಳು ಬಹಳ ಮುಖ್ಯ ವಿದ್ಯಮಾನವೆಂದು ಕರೆಯಲಾಗುತ್ತದೆ. ಎಲ್ಲಾ ಗ್ರಹಗಳ ಚಲನೆಯೂ ಒಂದಲ್ಲಾ ಒಂದು ರೀತಿಯಲ್ಲಿ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಇದು ವ್ಯಕ್ತಿಯ ಜೀವನದಲ್ಲಿ ದೊಡ್ಡ ಬದಲಾವಣೆಗಳ ತರಲು ಇದು ಕಾರಣವಾಗಲಿದೆ. ಹಾಗೆ ಕೆಲವು ರಾಶಿಗಳಿಗೆ ಗ್ರಹಗಳ ಸಂಚಾರವು ಧನಾತ್ಮಕವಾಗಿದ್ದರೆ ಮತ್ತೆ ಕೆಲ ರಾಶಿಗಳಿಗೆ ಇದು ನಕಾರಾತ್ಮಕವೂ ಆಗಿರಬಹುದು.
ಒಂಬತ್ತು ಗ್ರಹಗಳಲ್ಲಿ ಗುರು ಮತ್ತು ಶುಕ್ರವನ್ನು ಅತ್ಯಂತ ಶಕ್ತಿಶಾಲಿ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ಗುರು ಮತ್ತು ಶುಕ್ರವು ವ್ಯಕ್ತಿಯ ಜಾತಕದಲ್ಲಿ ಬಲವಾದ ಸ್ಥಾನದಲ್ಲಿದ್ದರೆ, ಅದು ಅವರ ಜೀವನದಲ್ಲಿ ಸಮೃದ್ಧಿ, ಅದೃಷ್ಟ ಮತ್ತು ಸಕಾರಾತ್ಮಕ ಬದಲಾವಣೆಗಳ ತರುವುದು ನೋಡಬಹುದು. ಈ ಎರಡು ಗ್ರಹಗಳು ಒಂದೇ ರಾಶಿಯಲ್ಲಿ ಒಟ್ಟಿಗೆ ಸಂಯೋಗವಾದಾಗ ಯೋಗಗಳಿಗೆ ಕಾರಣವಾಗುವುದು ನೋಡಬಹುದು.

ಸದ್ಯ ಈಗ ಈ ಎರಡು ಗ್ರಹಗಳು ಮಿಥುನ ರಾಶಿಯಲ್ಲಿ ಸಂಯೋಗವಾಗುವುದು ಗಜಲಕ್ಷ್ಮಿ ರಾಜಯೋಗವನ್ನು ಸೃಷ್ಟಿಸುತ್ತವೆ. ಈ ರಾಜಯೋಗವು ಕೆಲವು ರಾಶಿ ಜನರಿಗೆ ಸಕಾರಾತ್ಮಕ ಬದಲಾವಣೆಗಳು ಮತ್ತು ಅದೃಷ್ಟವನ್ನು ತರಲಿದೆ. ಹಾಗಾದ್ರೆ ಯಾವೆಲ್ಲಾ ರಾಶಿಗಳಿಗೆ ಈ ಹೊಸ ಯೋಗವು ಲಾಭದಾಯಕ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ವೃಷಭ ರಾಶಿ
ಈ ಯೋಗವು ವೃಷಭ ರಾಶಿಯವರ ಎರಡನೇ ಮನೆಯಲ್ಲಿ ರೂಪುಗೊಳ್ಳುತ್ತದೆ. ಇದು ಅವರ ಜೀವನದಲ್ಲಿ ಸಮೃದ್ಧಿ, ಸಂತೋಷ ಮತ್ತು ಶಾಂತಿಯನ್ನು ತರಲಿದೆ. ಈ ಯೋಗವು ಅವರ ವೃತ್ತಿಪರ ಜೀವನದಲ್ಲಿ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ನಿಮ್ಮ ಹಲವು ಹಣಕಾಸು ಸಂಬಂಧಿತ ವಿಚಾರವಾಗಿ ದೊಡ್ಡ ಲಾಭದ ದಿನಗಳು ನಿಮಗೆ ಕಾದಿವೆ. ಅನೇಕರಲ್ಲಿ ಈ ಸಮಯ ಪ್ರಯಾಣಗಳಲ್ಲಿ ಸುಖ ತರಲಿದೆ. ವಾಹನ ಖರೀದಿಯಲ್ಲಿ ಸಂತಸ ಹಾಗೂ ಲಾಭದಾಯಕ ಕ್ಷಣಗಳಿವೆ. ಹೊಸ ಒಪ್ಪಂದಗಳು, ವೇತನ ಹೆಚ್ಚಳದಂತಹ ವಿಶೇಷ ಶುಭ ದಿನಗಳ ನೋಡುವಿರಿ.
ಸಿಂಹ ರಾಶಿ
ಸಿಂಹ ರಾಶಿಯವರ ಹನ್ನೊಂದನೇ ಮನೆಯಲ್ಲಿ ಈ ಯೋಗವು ರೂಪುಗೊಳ್ಳುತ್ತದೆ. ಈ ಅವಧಿಯು ಅವರಿಗೆ ಉತ್ತಮ ಯಶಸ್ಸನ್ನು ನೀಡಲಿದೆ, ಅದೃಷ್ಟವು ಅವರ ಎಲ್ಲಾ ಪ್ರಯತ್ನಗಳಲ್ಲಿ ಅವರನ್ನು ಬೆಂಬಲಿಸುತ್ತದೆ. ಅವರು ತಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ ಮತ್ತು ಕುಟುಂಬದಲ್ಲಿ ಸಂತೋಷದ ವಾತಾವರಣವಿರುತ್ತದೆ. ಉದ್ಯೋಗ ಬದಲಾಯಿಸುವ ನಿಮ್ಮ ಬಯಕೆಯಲ್ಲಿ ಧನಾತ್ಮಕ ವಿಚಾರವಿದೆ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗವಕಾಶ ಸಿಗುವ ಅವಕಾಶಗಳು ಹೆಚ್ಚಾಗಲಿದೆ. ಶುಭ ಕಾರ್ಯಗಳಲ್ಲಿ ನೀವು ಭಾಗಿಯಾಗಬಹುದು.
ಧನು ರಾಶಿ
ಶುಕ್ರನು ತಮ್ಮ ಏಳನೇ ಮನೆಯಲ್ಲಿ ಸಂಚರಿಸುವುದರಿಂದ ಧನು ರಾಶಿಯವರಿಗೆ ಹೆಚ್ಚಿನ ಲಾಭಗಳು ದೊರೆಯಲಿವೆ. ನಿಮ್ಮ ಆರ್ಥಿಕ ಲಾಭ ಹೆಚ್ಚಾಗಲಿದೆ. ಹಲವು ಆರ್ಥಿಕ ಬೆಳವಣಿಗೆಯಲ್ಲಿ ನಿಮ್ಮ ಪಾಲುದಾರಿಕೆ ಹೆಚ್ಚಾಗಲಿದೆ. ಬಹಳ ಸಮಯದ ನಿಮ್ಮ ಅನಾನುಕೂಲ ಪರಿಸ್ಥಿತಿಗಳು ಸುಧಾರಿಸಲಿದೆ. ಹೊಸ ಉದ್ಯಮಗಳು ನಿಮ್ಮ ಕೈ ಹಿಡಿಯಲಿದೆ. ಅನೇಕರಲ್ಲಿ ಈ ಸಮಯವು ಅದೃಷ್ಟದಿಂದ ಕೂಡಿರಲಿದೆ, ಹೀಗಾಗಿ ನೀವು ಬಯಸಿರದ ಅನೇಕ ಘಟನೆಗಳು ಧನಾತ್ಮಕ ರೀತಿಯಲ್ಲಿ ಪೂರ್ಣವಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರು ತಮ್ಮ 9ನೇ ಮನೆಯಲ್ಲಿ ಈ ರಾಜಯೋಗ ರೂಪುಗೊಳ್ಳುತ್ತದೆ. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳಿಗೆ ಕಾರಣವಾಗುತ್ತದೆ. ಈ ಯೋಗದಿಂದ ಹಿಂದಿನ ಸಮಸ್ಯೆಗಳಿಂದ ಚೇತರಿಸಿಕೊಳ್ಳಬಹುದು. ಉದ್ಯೋಗ ಸಂಬಂಧಿತ ವಿಚಾರದಲ್ಲಿ ನಿಮ್ಮ ಹಣಕಾಸಿನ ಸಮಸ್ಯೆ ಬಗೆಹರಿಯಲಿದೆ. ಯಾರಿಂದಾದರು ಹಣ ಬರುವುದು ಬಾಕಿ ಉಳಿದಿದ್ದರೆ ಈ ಸಮಯದಲ್ಲಿ ಪೂರ್ಣವಾಗಲಿದೆ. ಉದ್ಯಮಿಗಳಿಗೆ ಅಥವಾ ಸ್ವಂತ ಉದ್ಯೋಗ ಮಾಡುವ ಮಂದಿಗೆ ಈ ಸಮಯ ಬಹಳ ಅನುಕೂಲವಿದೆ. ಆರೋಗ್ಯದಲ್ಲಿ ಚೇತರಿಕೆ ನೋಡಬಹುದು.



Click it and Unblock the Notifications