Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಯುಗಾದಿ ಹಬ್ಬದಲ್ಲಿ ಮಾಡಿ ಬದನೆಕಾಯಿ ಗೊಜ್ಜು! ಅದ್ಭುತ ರುಚಿ ರೆಸಿಪಿ
ಹಬ್ಬವಿದ್ದಾಗ ಮನೆಯಲ್ಲಿ ವಿಶೇಷ ಊಟ, ತಿಂಡಿ ಮಾಡುವುದು ಕಾಮನ್. ಅದ್ರಲ್ಲೂ ಹಲವರು ವಿಶೇಷ ರೀತಿಯ ಖಾದ್ಯಗಳ ಮಾಡಿ ಸವಿಯೋದು ನೋಡಬಹುದು. ಹಬ್ಬದ ಊಟ ಅಂದ್ರೆ ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಅದ್ರಲ್ಲೂ ಊಟದೊಂದಿಗೆ ಸಿಹಿ ಇರುವಂತೆ, ಪಲ್ಯ, ಗ್ರೇವಿ, ಸಾಂಬಾರ್ ವಿಶೇಷವಾಗಿ ಮಾಡುತ್ತಾರೆ. ತರಕಾರಿಗಳ ಬಳಸಿ ವಿಭಿನ್ನ ಅಡುಗೆ ಅಂದು ಸಿದ್ದವಾಗುತ್ತೆ.
ಈಗ ಯುಗಾದಿಯ ದಿನದಂದು ನಾವು ವಿಭಿನ್ನ ಹಾಗೂ ವಿಶೇಷ ಎನಿಸುವ ಪಲ್ಯ, ಖಾದ್ಯಗಳ ಮಾಡುವ ಕುರಿತು ತಿಳಿಯೋಣ. ಹಬ್ಬದಂದು ಊಟದೊಂದಿಗೆ ಸವಿಯಲು ಬದನೆಕಾಯಿ ಗೊಜ್ಜು ಮಾಡಿ ಸವಿಯೋದು ಬಹಳ ರುಚಿ ನೀಡಲಿದೆ. ಇದು ಹಬ್ಬದ ಊಟಕ್ಕೆ ಮತ್ತಷ್ಟು ರುಚಿ ತರಲಿದೆ. ಹಾಗಾದ್ರೆ ನಾವಿಂದು ಸುಲಭವಾಗಿ ಈ ಬದನೆಕಾಯಿ ಗೊಜ್ಜು ಮಾಡುವ ಕುರಿತು ತಿಳಿದುಕೊಳ್ಳೋಣ.
ಊಟದೊಂದಿಗೆ ಮಾತ್ರವಲ್ಲದೆ ಚಪಾತಿ, ದೋಸೆ, ಇಡ್ಲಿ ಹೀಗೆ ಯಾವುದೇ ತಿಂಡಿಯೊಂದಿಗೂ ಕೂಡ ಈ ಬದನೆಕಾಯಿ ಗೊಜ್ಜು ಬಹಳ ರುಚಿ ನೀಡಲಿದೆ. ನಾವಿಂದು ಹಬ್ಬಕ್ಕಾಗಿ ವಿಶೇಷ ಮಸಾಲೆ ಹಾಕಿ ಮಾಡುವ ಈ ಗೊಜ್ಜು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಬದನೆಕಾಯಿ ಗೊಜ್ಜು ಮಾಡುವುದು ಹೇಗೆ?, ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡು ವಿಧಾನವೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬದನೆಕಾಯಿ ಗೊಜ್ಜು ಮಾಡಲು ಬೇಕಾಗುವ ಪದಾರ್ಥಗಳು
- ಬದನೆಕಾಯಿ
- ಶುಂಠಿ
- ಬೆಳ್ಳುಳ್ಳಿ
- ಈರುಳ್ಳಿ
- ಹಸಿ ಮೆಣಸು
- ಸಾಸಿವೆ
- ಜೀರಿಗೆ
- ಕರಿಬೇವು
- ಟೊಮೆಟೋ
- ಉಪ್ಪು
- ಎಣ್ಣೆ
- ಗರಂ ಮಸಾಲೆ
- ಅರಶಿಣ
- ಖಾರ ಪುಡಿ
- ಧನಿಯಾ ಪುಡಿ
- ಕೊತ್ತಂಬರಿ ಸೊಪ್ಪು
ಬದನೆಕಾಯಿ ಗೊಜ್ಜು ಮಾಡುವ ಸುಲಭದ ವಿಧಾನವೇನು?
ಮೊದಲು ಬದನೆಕಾಯಿಯನ್ನು ಉದ್ದವಾಗಿ ಹೆಚ್ಚಿ ನೀರಿನಲ್ಲಿ ಹಾಕಿಟ್ಟುಕೊಳ್ಳಿ. ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹಸಿ ಮೆಣಸು ಹಾಕಿ ಸ್ವಲ್ಪ ನೀರು ಸಹ ಹಾಕಿ ರುಬ್ಬಬೇಕು. ಈಗ ಒಲೆ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ ಹಾಕಿ ನಂತರ ಈ ರುಬ್ಬಿದ ಮಸಾಲೆಗಳನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡುತ್ತಾ ಇರಿ.
1 ನಿಮಿಷದ ಬಳಿಕ ಇದಕ್ಕೆ ಕರಿಬೇವು ಸಹ ಹಾಕಿಕೊಂಡು ಫ್ರೈ ಮಾಡಿ. ಈಗ ಮಿಕ್ಸಿ ಜಾರ್‌ಗೆ 4 ಟೊಮೆಟೋ ಹೆಚ್ಚಿಕೊಂಡು ಹಾಕಿ ಪೇಸ್ಟ್ ಮಾಡಿಕೊಂಡು, ಅದರ ಮಿಶ್ರಣ ಸಹ ಈ ಬಾಣಲೆಗೆ ಹಾಕಿಕೊಂಡು ಮಿಕ್ಸ್ ಮಾಡುತ್ತಾ ಇರಿ.
5 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಈಗ ಹೆಚ್ಚಿಕೊಂಡಿರುವ ಬದನೆಕಾಯಿಯನ್ನು ಇದಕ್ಕೆ ಹಾಕಿ ಮಿಕ್ಸ್ ಮಾಡಿ. ಬಳಿಕ ಖಾರದ ಪುಡಿ, ಧನಿಯಾ ಪುಡಿ, ಅರಶಿಣ, ಗರಂ ಮಸಾಲೆ, ಉಪ್ಪು ಸಹ ಹಾಕಿಕೊಂಡು ಮಿಶ್ರಣ ಮಾಡಿ. ಇದು ಗಟ್ಟಿಯಾಗಿದ್ದರೆ ನೀರು ಸಹ ಹಾಕಿಕೊಳ್ಳಿ. ಇಲ್ಲವೆ ಗಟ್ಟಿಯಾಗಿಯೂ ಮಾಡಿಕೊಳ್ಳಬಹುದು. ಚೆನ್ನಾಗಿ ಕುದಿಬರಲು ಬಿಡಬೇಕು. ಆಗಾಗ ಮಿಕ್ಸ್ ಮಾಡುತ್ತಾ ತಳ ಹಿಡಿಯದಂತೆ ನೋಡಿಕೊಳ್ಳಿ. ಹಾಗೆ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಂಡು ಇಳಿಸಿಕೊಂಡರೆ ನಿಮ್ಮ ಮುಂದೆ ರುಚಿ ರುಚಿಯಾದ ಈ ಬದನೆಕಾಯಿ ಗೊಜ್ಜು ಸಿದ್ದವಾಗುತ್ತೆ.



Click it and Unblock the Notifications

