Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾರ್ಚ್ 21ಕ್ಕೆ ಶನಿ ನಕ್ಷತ್ರ ಬದಲಾವಣೆ: ಈ 4 ರಾಶಿಯವರ ಜೀವನದಲ್ಲಿ ಬರಲಿದೆ ಬಯಸಿದ ಭಾಗ್ಯ!
ಎಲ್ಲಾ ಗ್ರಹಗಳು ನಿರ್ದಿಷ್ಟ ಸಮಯದಲ್ಲಿ ತನ್ನ ಸ್ಥಾನ ಬದಲಾಯಿಸುವುದು ನೋಡಬಹುದು. ಹಾಗೆ ಪೂರ್ಣ ನಿಗದಿತ ಸಮಯದಲ್ಲಿ ಗ್ರಹವು ತನ್ನ ರಾಶಿಯನ್ನು ಬದಲಾಯಿಸಿ ಮತ್ತೊಂದು ರಾಶಿಗೆ ಚಲಿಸಲಿದೆ ಹಾಗೆ ನಕ್ಷತ್ರವನ್ನು ಸಹ ಬದಲಾಯಿಸುವುದು ನೋಡಬಹುದು. ಹೀಗೆ ಗ್ರಹಗಳ ಸ್ಥಾನಪಲ್ಲಟವಾದಾಗ ವ್ಯಕ್ತಿಗಳ ಜೀವನದಲ್ಲೂ ಸಹ ಬದಲಾವಣೆಗಳ ನಿರೀಕ್ಷಿಸಬಹುದು.
ಶನಿಯು ಶೀಘ್ರದಲ್ಲೇ ತನ್ನ ನಕ್ಷತ್ರವನ್ನು ಬದಲಾಯಿಸಲಿದ್ದಾನೆ. ಮಾರ್ಚ್ 21ರಂದು ಉತ್ತರಭಾದ್ರಪದ ನಕ್ಷತ್ರಕ್ಕೆ ಶನಿ ಚಲಿಸುತ್ತಾನೆ. ಮೂರನೆ ಹಂತಕ್ಕೆ ಶನಿ ಚಲಿಸುವುದು ಹಲವರಿಗೆ ಶುಭ ತರಲಿದೆ. ಶನಿ ಕರ್ಮಫಲ ನೀಡುವ ಗ್ರಹವಾಗಿದೆ. ಹೀಗಾಗಿ ಶನಿಯ ಚಲನೆಯೂ ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರುವುದು ನೋಡಬಹುದು. ಶನಿಯ ಆಶೀರ್ವಾದಗಳನ್ನು ಪಡೆಯುವ ರಾಶಿಗಳು ಆರ್ಥಿಕ ಲಾಭ, ಪ್ರಯತ್ನಗಳ ಫಲಗಳು ಮತ್ತು ವೃತ್ತಿ ಮತ್ತು ಉದ್ಯೋಗದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಅನಿಭವಿಸಲಿದ್ದಾರೆ.

ಹಾಗಾದ್ರೆ ಶನಿಯ ನಕ್ಷತ್ರ ಬದಲಾವಣೆಯು ಯಾವೆಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರಲಿದೆ? ಯಾರಿಗೆಲ್ಲಾ ಲಾಭದಾಯಕ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮಿಥುನ ರಾಶಿ
ಶನಿಯ ಈ ನಕ್ಷತ್ರ ಬದಲಾಯಿಸುವುದು ಮಿಥುನ ರಾಶಿ ಜನರಿಗೆ ಲಾಭದಾಯಕವಾಗಲಿದೆ. ನೀವು ಹೊಸ ಉದ್ಯೋಗ ಹುಡುಕುತ್ತಿದ್ದರೆ ಅಥವಾ ನಿರುದ್ಯೋಗಿಗಳಾಗಿದ್ದರೆ ಈ ಸಮಯದಲ್ಲಿ ಶುಭವಾಗಲಿದೆ. ಶನಿಯ ಪ್ರಭಾವದ ಕಾರಣದಿಂದಾಗಿ ನಿಮ್ಮ ಹಣಕಾಸಿನ ಸ್ಥಿತಿ ಸುಧಾರಿಸಲಿದೆ ಹಾಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವುದು ನಿಮ್ಮ ಹೆಸರು ಘನತೆ ಹೆಚ್ಚಾಗಲು ಕಾರಣವಾಗಲಿದೆ. ದೀರ್ಘಕಾಲದಿಂದ ಬಾಕಿ ಉಳಿಸಿಕೊಂಡಿದ್ದ ಕೆಲಸಗಳು ಪೂರ್ಣ ಮಾಡಲಿದ್ದೀರಿ. ಹೊಸ ಸ್ನೇಹಿತರನ್ನು ಸಂಪಾದಿಸುವ ಸಮಯವಿದು. ವ್ಯಾಪಾರಿಗಳು ನಷ್ಟದಿಂದ ಹೊರಬರಲಿದ್ದಾರೆ.
ಸಿಂಹ ರಾಶಿ
ಸಿಂಹ ರಾಶಿಯವರು ಈ ಅವಧಿಯಲ್ಲಿ ತಮ್ಮ ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳನ್ನು ಅನುಭವಿಸಬಹುದು. ಮದುವೆ ಸಂಬಂಧಿತ ಅಡ್ಡಿಗಳು ನಿವಾರಣೆಯಾಗಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಕಠಿಣ ಪರಿಶ್ರಮ ಫಲ ನೀಡುತ್ತದೆ. ಉದ್ಯೋಗದಲ್ಲಿ ಬಡ್ತಿಯ ಸಾಧ್ಯತೆಗಳೂ ಇವೆ. ಹೊಸ ವ್ಯವಹಾರ ಒಪ್ಪಂದವನ್ನು ಪಡೆಯುವ ಬಲವಾದ ಸಾಧ್ಯತೆಯಿದೆ. ಈ ಸಮಯದಲ್ಲಿ ಸಿಂಹ ರಾಶಿಯವರು ಸಾಲದಿಂದ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಹೊಸ ವ್ಯವಹಾರಗಳಲ್ಲಿ ನಿಮಗೆ ಶುಭವಿದೆ. ಆಪ್ತರೊಬ್ಬರಿಂದ ನಿಮಗೆ ಹಣ ಸಿಗುವುದರಲ್ಲಿ ಅಡ್ಡಿಗಳ ಎದುರಿಸಿದ್ದರೆ ಈ ಸಮಯದಲ್ಲಿ ದೊಡ್ಡ ಲಾಭವಿದೆ.
ಮಕರ ರಾಶಿ
ಶನಿಯ ಈ ನಕ್ಷತ್ರ ಬದಲಾವಣೆಯು ಮಕರ ರಾಶಿಯವರಿಗೆ ಶುಭ ಸಮಯ ತರಲಿದೆ. ನಿಮಗೆ ಹೊಸ ಜನರನ್ನು ಭೇಟಿ ಮಾಡಲು ಅವಕಾಶಗಳು ಸಿಗುತ್ತವೆ. ನೀವು ಬಯಸಿದ ಆರ್ಥಿಕ ಲಾಭಗಳನ್ನು ಪಡೆಯುತ್ತೀರಿ. ವ್ಯವಹಾರ ವಿಷಯಗಳಲ್ಲಿ ಪ್ರಗತಿಯ ಲಕ್ಷಣಗಳೂ ಇವೆ. ಆಪ್ತರ ಬಳಿ ನಿಮ್ಮ ಆರ್ಥಿಕ ಸಮಸ್ಯೆ ಹಂಚಿಕೊಳ್ಳುವುದು ಲಾಭ ತರಲಿದೆ. ಹೊಸ ಆದಾಯ ಪಡೆಯುವ ನಿಮ್ಮ ಬಯಕೆಗಳು ಬಹುಪಾಲು ಈಡೇರಬಹುದು. ಹಣಕಾಸು ವಿಚಾರದಲ್ಲಿ ನೀವು ಬಯಸಿದಂತಹ ಫಲಿತಾಂಶಗಳ ಪಡೆಯಬಹುದು.
ಮೀನ ರಾಶಿ
ಮೀನ ರಾಶಿಯ ಜನರಿಗೆ ಈ ಶನಿ ನಕ್ಷತ್ರ ಬದಲಾವಣೆಯು ಅದೃಷ್ಟದಾಯಕ. ನಿಮ್ಮ ಆದಾಯ ಹೆಚ್ಚಳದ ಸಮಯವಿದು. ಅನೇಕರಿಗೆ ಈ ಸಮಯದಲ್ಲಿ ಪ್ರಯಾಣಗಳಲ್ಲಿ ಶುಭವಿದೆ. ಮನೆ ಕಟ್ಟಿಸುವವರು, ಹೊಸ ವ್ಯವಹಾರ ಮಾಡುವ ಮಂದಿಗೆ ಶುಭಕಾಲ. ವಾಹನ ಖರೀದಿಯ ಬಹಳ ಸಮಯದ ಬಯಕೆಯನ್ನು ಈ ಸಮಯದಲ್ಲಿ ನೀವು ಈಡೇರಿಸಿಕೊಳ್ಳಬಹುದು.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications