Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಗ್ಯಾಸ್ ಹೆಚ್ಚು ದಿನ ಬಾಳಿಕೆ ಬರಬೇಕಾ? ಈ ಟಿಪ್ಸ್ ಫಾಲೋ ಮಾಡಿ, ಗ್ಯಾಸ್ ಲೀಕ್ ಪತ್ತೆ ಮಾಡೋದು ಸಹ ಸುಲಭ!
ಯುದ್ಧದ ಪರಿಣಾಮವಾಗಿ ಭಾರತದಲ್ಲಿ ಅಡುಗೆ ಅನಿಲ ಸಮಸ್ಯೆ ಕಾಡುತ್ತಿದೆ. ಹೋಟೆಲ್‌ಗಳಲ್ಲಿ ಹಾಗೆ ಮನೆಗಳಿಗೂ ಸಹ ಹೊಸ ರೀತಿಯ ನಿಮಯಾನುಸಾರವಾಗಿ ಗ್ಯಾಸ್ ವಿತರಿಸಲಾಗುತ್ತಿದೆ. ಹೀಗಾಗಿ ಮನೆಯಲ್ಲಿ ಗ್ಯಾಸ್ ಬಳಕೆಯನ್ನು ಮಿತಗೊಳಿಸುವುದು ಉತ್ತಮ, ಇಲ್ಲವೆ ಹೆಚ್ಚು ಗ್ಯಾಸ್ ವ್ಯಯವಾಗದಂತೆ ಅಡುಗೆ ಅನಿಲ ಬಳಸುವುದು ಉತ್ತಮ. ಇಲ್ಲವೆ ಗ್ಯಾಸ್ ಅನ್ನು ಯಾವ ರೀತಿ ಬಳಸಿದರೆ ಹಲವು ದಿನಗಳ ಕಾಲ ಉಳಿಸಬುಹುದು ಎಂಬುದನ್ನು ತಿಳಿದುಕೊಂಡಿರುವುದು ಉತ್ತಮ.
ಅಲ್ಲದೆ ಗ್ಯಾಸ್ ಬಳಕೆಯನ್ನು ಮಿತಗೊಳಿಸುವ ಮೂಲಕ ಸುಲಭವಾಗಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಕೆಲವರ ಮನೆಯಲ್ಲಿ ಎಲ್‌ಪಿಜಿ ಒಂದು ತಿಂಗಳು ಬರುತ್ತದೆ, ಮತ್ತೆ ಕೆಲವರ ಮನೆಯಲ್ಲಿ 2 ತಿಂಗಳು ಸಹ ಬರಬಹುದು. ಅವರು ಎಷ್ಟು? ಹೇಗೆ ಬಳಸುತ್ತಾರೆ ಎಂಬುದರ ಮೇಲೆ ದಿನಗಳು ಸಹ ಬದಲಾಗುತ್ತದೆ. ಕೆಲವೊಮ್ಮೆ ನಾವು ಯಾವ ರೀತಿಯಲ್ಲಿ ಗ್ಯಾಸ್ ಬಳಸುತ್ತೇವೆ ಅಥವಾ ಯಾವ ವಿಧಾನದಲ್ಲಿ ಅಡುಗೆ ಮಾಡುತ್ತೇವೆ ಎಂಬ ಆಧಾರ ಮೇಲೆ ಗ್ಯಾಸ್ ಬಳಕೆ ಹಚ್ಚಾಗುವುದು ಅಥವಾ ಕಡಿಮೆಯಾಗುವುದು ನೋಡಬಹುದು.

ಕೆಲ ಸಮಯದಲ್ಲಿ ನಿಮಗೆ ಒಂದು ತಿಂಗಳಿಗೂ ಮುನ್ನವೇ ಗ್ಯಾಸ್ ಖಾಲಿಯಾಗಬಹುದು. ಇನ್ನು ಕೆಲ ಸಮಯದಲ್ಲಿ 2 ತಿಂಗಳಾದರು ಗ್ಯಾಸ್ ಖಾಲಿಯಾಗದೆ ಉಳಿಯಬಹುದು. ಇದು ನಾವು ಅಡುಗೆ ಮಾಡುವ ವಿಧಾನದ ಮೇಲೆ ಅವಂಬಿತವಾಗಿರಲಿದೆ. ತರಕಾರಿಯಿಂದ ಹಿಡಿದು ಪ್ರತಿಯೊಂದು ವಸ್ತು ಈಗ ದುಬಾರಿಯಾಗಿವೆ. ಈ ನಡುವೆ ಗ್ಯಾಸ್ ದರ ಸಹ ಏರಿಕೆಯಾಗಿದೆ. ತಿಂಗಳಿಗೆ ಒಂದೇ ಸಿಲಿಂಡರ್ ಸಿಗುತ್ತಿರುವ ಈ ಸಮಯದಲ್ಲಿ ಹೇಗೆ ಗ್ಯಾಸ ಬಾಳಿಕೆ ಹೆಚ್ಚು ಮಾಡುವುದು ಎಂಬುದನ್ನು ತಿಳಿಯೋಣ. ಜೊತೆಗೆ ಗ್ಯಾಸ್ ಲೀಕ್ ಆಗುತ್ತಿದ್ದರೆ ಅದ್ನು ಕೂಡ ಸುಲಭ ವಿಧಾನದ ಮೂಲಕ ಪತ್ತೆ ಮಾಡುವ ಕುರಿತಾಗಿಯೂ ಇಲ್ಲಿ ತಿಳಿಯೋಣ.
ಪ್ರೆಷರ್ ಕುಕ್ಕರ್ ಬಳಸಿ
ಅಡುಗೆ ಮಾಡುವಾಗ ಪ್ರೆಷರ್ ಕುಕ್ಕರ್ ಬಳಕೆ ಮಾಡುವುದು ಉತ್ತಮ. ಖಾದ್ಯ ರೆಡಿ ಮಾಡುವ ಹೆಚ್ಚಿನ ಸಮಯದಲ್ಲಿ ಯಾವಾಗೆಲ್ಲಾ ಸಾಧ್ಯವೋ ಆಗ ಪ್ರೆಷರ್ ಕುಕ್ಕರ್ ಬಳಸಿ. ಮತ್ತೆ ಅಡುಗೆ ಮಾಡುವ ವೇಳೆ ಪಾತ್ರೆಯನ್ನು ಮುಚ್ಚಿ ಅಡುಗೆ ಮಾಡಬೇಕು. ಇದರಿಂದ ಬಹುಬೇಗ ಅಡುಗೆ ಮಾಡಬಹುದು ಗ್ಯಾಸ್ ಸಹ ಉಳಿತಾಯವಾಗಲಿದೆ. ಹಾಗೆ ಕುಕ್ಕರ್ ಬಳಸಿಕೊಂಡು ಮಾಡುವಂತಹ ಅಡುಗೆಯನ್ನೇ ಮಾಡುವುದು ಉತ್ತಮ ಇದರಿಂದ ಸುಲಭವಾಗಿ ನೀವು ಒಂದಿಷ್ಟು ದಿನ ಸಿಲಿಂಡ್ ಬಾಳಿಕೆ ಬರುವಂತೆ ಮಾಡಬಹುದು.
ಅಕ್ಕಿ ಬೇಳೆ ನೆನೆಸಿಟ್ಟು ಅಡುಗೆ ಮಾಡಿ
ನೀವು ನಿತ್ಯ ಅಡುಗೆ ಮಾಡುವಾಗ ಸಾಂಬಾರ್ ಮಾಡಲು ಬೇಳೆ ಬಳಸುತ್ತೀರಿ. ಜೊತೆಗೆ ದಿನಾಲು ಅನ್ನ ಮಾಡುತ್ತೀರಿ, ಆದ್ರೆ ಅನ್ನ ಮಾಡುವ ಮುನ್ನ 15 ನಿಮಿಷ ಆದರೂ ಅಕ್ಕಿಯನ್ನು ನೆನೆಡಿಸಬೇಕು. ಹಾಗೆ ಬೇಳೆ ಕಾಳುಗಳನ್ನು ನೆನೆಸಿಟ್ಟು ಅನಂತರ ಅಡುಗೆಗೆ ಬಳಸುವುದು ಅಥವಾ ಕುಕ್ಕರ್‌ನಲ್ಲಿ ಬೇಯಿಸುವುದು ಸಮಯದ ಜೊತೆಗೆ ಗ್ಯಾಸ್ ಉಳಿತಾಯಕ್ಕೂ ಕಾರಣವಾಗಲಿದೆ.
ಗ್ಯಾಸ್ ಲೀಕ್ ಆದರೆ ಏನು ಮಾಡಬೇಕು?
ಇನ್ನು ಗ್ಯಾಸ್ ಲೀಕ್ ಆಗುವುದು ಕೂಡ ಬಹುಬೇಗ ಗ್ಯಾಸ್ ಸಿಲಿಂಡರ್ ಖಾಲಿ ಆಗಲು ಕಾರಣ ಇರಬಹುದು. ಆದ್ರೆ ಇದನ್ನು ಪತ್ತೆ ಮಾಡುವುದು ಹೇಗೆ ಅನ್ನೋದು ನಿಮಗೆ ಗೊತ್ತಾ? ಅನಿಲ ಸೋರಿಕೆಯನ್ನು ಆರಂಭದಲ್ಲೇ ಪತ್ತೆ ಮಾಡಿದ್ರೆ ಒಂದಿಷ್ಟು ಅನಿಲ ಉಳಿಸಬಹುದು. ಇದಕ್ಕಾಗಿ ನೀವು ಸುಲಭ ವಿಧಾನ ಬಳಸಿ ನೋಡಿ. ಎಲ್‌ಪಿಜಿ ಸಿಲಿಂಡರ್‌ನಿಂದ ನೀವು ಅಡುಗೆ ಮಾಡುವಾಗ ಗ್ಯಾಸ್ ವಾಸನೆ ಬರುತ್ತಿದ್ದರೆ ಬಹಳ ಎಚ್ಚರಿಕೆಯಿಂದ ಇರಬೇಕು.
ಮೊದಲು ಎಲ್‌ಪಿಜಿ ಸಿಲಿಂಡರ್‌ನಿಂದ ಗ್ಯಾಸ್ ಲೀಕ್ ಆಗುತ್ತಿದ್ದರೆ ಒಂದು ಲೋಟದಲ್ಲಿ ನೀರು ತೆಗೆದುಕೊಂಡು ಸಿಲಿಂಡನ ವಾಷರ್ ಇರುವ ಜಾಗಕ್ಕೆ ಹಾಕಬೇಕು. ಆ ಜಾಗದಿಂದ ಸಣ್ಣ ಸಣ್ಣ ಗುಳ್ಳೆಗಳು ಬಂದರೆ ಖಂಡಿತ ಇಲ್ಲಿಂದಲೇ ಗ್ಯಾಸ್ ಲೀಕ್ ಆಗುತ್ತಿದೆ ಎಂದರ್ಥ. ಈಗ ಸಿಲಿಂಡರ್ ಪೈಪ್‌ನಿಂದಲೇ ಗ್ಯಾಸ್ ಲೀಕ್ ಆಗುತ್ತಿದ್ದರೆ ಪೈಪ್ ಅನ್ನು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬದಲಾಯಿಸಬೇಕು. ಹಾಗೆ ಅನಿಲ ವಿತರಣೆಯ ಏಜೆಂಟರು ಸಿಲಿಂಡರ್ ನೀಡಲು ಬಂದಾಗ ಅವರ ಬಳಿಯೂ ಈ ರೀತಿಯ ಲೀಕೇಜ್ ಕುರಿತು ಮಾಹಿತಿ ನೀಡಬಹುದು ಸಣ್ಣ ಪುಟ್ಟ ಸಮಸ್ಯೆಗಳನ್ನು ಅವರು ಉಚಿತವಾಗಿ ಸರಿಪಡಿಸುತ್ತಾರೆ.



Click it and Unblock the Notifications