Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು!
ವಾಸ್ತು ನಮ್ಮ ದೈನಂದಿನ ಜೀವನದಲ್ಲಿ ಹಲವು ರೀತಿಯ ಪರಿಣಾಮಗಳ, ಫಲಿತಾಂಶಗಳ ತರುವಂತಹ ವಿಚಾರವಾಗಿರಲಿದೆ. ನಿಮ್ಮ ಹಲವು ಆಗು ಹೋಗುಗಳಿಗೆ ವಾಸ್ತುಶಾಸ್ತ್ರವೂ ಸಹ ಕಾರಣ ಎನ್ನಬಹುದು. ಹಾಗೆ ಮನೆಯ ವಾಸ್ತು ಸ್ಥಿತಿಗಳು ಸಹ ನಿಮ್ಮ ಹಲವು ವಿಚಾರಗಳಿಗೆ ಕಾರಣವಾಗುತ್ತವೆ. ಮನೆಯ ವಾಸ್ತು ಸರಿಯಾಗಿದ್ದರೆ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿದೆ. ಆದ್ರೆ ಇದೇ ವಾಸ್ತು ದೋಷವು ನಿಮ್ಮ ಜೀವನವನ್ನು ಕಷ್ಟಗಳಿಗೆ ತಳ್ಳಬಹುದು.
ಇನ್ನು ಮನೆಯಲ್ಲಿ ಯಾವ ವಸ್ತು ಯಾವ ದಿಕ್ಕಿನ ಕಡೆಗೆ ಇಡಬೇಕು ಎಂಬ ಆದಾರದ ಮೇಲೆ ನಿಮ್ಮ ಶಾಂತಿ, ಜೀವನ, ನೆಮ್ಮದಿ ನಿರ್ಧರಿತವಾಗುತ್ತದೆ ಎಂದರೂ ತಪ್ಪಾಗುವುದಿಲ್ಲ. ಅದ್ರಲ್ಲೂ ಮನೆಯ ಕೆಲವು ವಸ್ತುಗಳನ್ನು ವಾಸ್ತುಶಾಸ್ತ್ರದ ಪ್ರಕಾರ ಯಾವ ದಿಕ್ಕಿನಲ್ಲಿ ಇಡಬೇಕು, ಎಲ್ಲಿ ಇಡಬಾರದು ಎಂಬುದನ್ನು ಹೇಳಲಾಗಿದೆ. ಹೀಗಾಗಿ ನಾವಿಂದು ಮನೆಯಲ್ಲಿ ಗಡಿಯಾರವನ್ನು ಎಲ್ಲಿ ಇಡಬೇಕು? ಯಾವ ದಿಕ್ಕಿನಲ್ಲಿ ಇಡಬಾರದು ಎಂಬುದನ್ನು ತಿಳಿದುಕೊಳ್ಳೋಣ.

ಗಡಿಯಾರವನ್ನು ಉತ್ತರ ಗೋಡೆಯಲ್ಲಿ ಇಡುವುದು
ವಾಸ್ತು ಪ್ರಕಾರ ಗಡಿಯಾರಗಳು ಮನೆಯ ವಾಸ್ತು ಆಧಾರವಾಗಿ ಇಡಬೇಕು. ಗಡಿಯಾರವನ್ನು ಅಲಂಕಾರಿಕ ವಸ್ತುವಾಗಿ ಈಗ ನೋಡಲಾಗುತ್ತದೆ. ಆದ್ರೆ ಯಾವಾಗಲು ಈ ಗಡಿಯಾರವನ್ನು ಉತ್ತರ ಅಥವಾ ಪೂರ್ವ ಗೋಡೆಯ ಮೇಲೆ ಇಡಬೇಕು. ಇದು ಆರ್ಥಿಕ ಪ್ರಗತಿಯ ಸಂಕೇತ ಎಂದು ಸೂಚಿಸಲಾಗಿದೆ. ಈ ದಿಕ್ಕು ಕುಬೇರನ ದಿಕ್ಕು, ಕುಬೇರನು ಸಮಯಕ್ಕೆ ಅನುಸಾರವಾಗಿ ನಿಮಗೆ ಹಿತ ತರಲಿದ್ದಾನೆ. ದಕ್ಷಿಣ ಗೋಡೆಯ ಮೇಲೆ ಗಡಿಯಾರವನ್ನು ಇಡುವುದರಿಂದ ಪ್ರಗತಿಯನ್ನು ನಿಧಾನಗೊಳಿಸುತ್ತದೆ ಮತ್ತು ನೀವು ಆರ್ಥಿಕವಾಗಿ ಹಿನ್ನಡೆಗಳ ಅನುಭವಿಸುವುದು ನೋಡಬಹುದು.
ಮುರಿದ ಅಥವಾ ಹಾಳಾದ ಗಡಿಯಾದ ಇಡುವುದನ್ನು ನಿಲ್ಲಿಸಿ
ವಾಸ್ತು ಶಾಸ್ತ್ರದ ಪ್ರಕಾರ ಹಾಳಾದ ಅಥವಾ ಮುರಿದ ಗಡಿಯಾರವನ್ನು ಇಡುವುದು ದೋಷಕ್ಕೆ ಕಾರಣವಾಗುತ್ತದೆ. ಇದು ಮನೆಯಲ್ಲಿ ಸದಸ್ಯರ ನಡುವಿನ ಮನಃಶಾಂತಿ ಹಾಳು ಮಾಡಲು ಕಾರಣವಾಗಲಿದೆ. ಈ ಗಡಿಯಾರವು ನಿಮ್ಮಲ್ಲಿ ಅಥವಾ ಮನೆಯ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಸಮಸ್ಯೆಗಳ ತರಬಹುದು. ಹಾಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗೆ ಇದು ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಇದು ನಿದ್ರಾಹೀನತೆ, ಕೆಟ್ಟ ಕನಸುಗಳು ಬೀಳುವುದಕ್ಕೂ ಕಾರಣವಾಗಬಹುದು.
ಕನ್ನಡಿಗೆ ನೇರವಾಗಿ ಗಡಿಯಾರ ಇಡುವುದು
ಹಲವರ ಮನೆಯಲ್ಲಿ ದೊಡ್ಡ ಕನ್ನಡಿಗಳ ಎದುರಿಗೆ ಗಡಿಯಾರ ಹಾಕುವುದು ನೋಡಬಹುದು. ಆದ್ರೆ ವಾಸ್ತು ಶಾಸ್ತ್ರದಲ್ಲಿ ಇದನ್ನು ತಪ್ಪು ಎಂದು ಪರಿಣಿಸಲಾಗಿದೆ. ಗಡಿಯಾರವು ಕನ್ನಡಿಯಲ್ಲಿ ಪ್ರತಿಫಲಿಸಬಾರದಂತೆ. ಇದು ನಿಮ್ಮ ಹಾಗೆ ಮನೆಯ ವಿಚಾರದಲ್ಲಿ ಅಶುಭ ತರಲಿದೆ ಎಂದು ಹೇಳಲಾಗಿದೆ. ಇದು ನಿಮ್ಮ ಪ್ರಗತಿಯನ್ನು ನಿಧಾನವಾಗಿಸುತ್ತದೆ.
ಬಾಗಿಲಿನ ಮೇಲೆ ಗಡಿಯಾರ ಇಡುವುದು
ಮನೆಯ ಧ್ವಾರ ಬಾಗಿಲಿಗೆ ನೇರವಾಗಿ ಮೇಲೆ ಗಡಿಯಾರ ಇಡುವುದು ಸಹ ಉತ್ತಮ ಅಭ್ಯಾಸವಲ್ಲ. ಇದು ಮನೆಯಲ್ಲಿ ಆಗಾಗ ಅನಾರೋಗ್ಯ ಸಂಭವಿಸುವುದಕ್ಕೆ ಕಾರಣವಾಗುತ್ತೆ ಎಂದು ನಂಬಲಾಗಿದೆ. ನೀವು ಮನೆಯ ಒಳಗೆ ಬರುವಾಗ ಹಾಗೆ ಹೊರಹೋಗುವಾಗ ಈ ಗಡಿಯಾರದ ಕೆಳಗೆ ತಲೆ ಬಗ್ಗಿಸಿ ನಡೆಯುವುದು ಹಲವು ಪ್ರಕಾರದಲ್ಲಿ ಅಶುಭ ಎಂದು ಕರೆಯಾಗಿದೆ. ಇದು ನಿಮ್ಮ ಮನೆಯ ಒಟ್ಟರೆ ಪ್ರಗತಿಗೆ ಹಾನಿ ಮಾಡಬಹುದು ಎಂದು ಹೇಳಲಾಗಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
