Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ!
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 18 (March 18 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿಯ ಜನರಿಗೆ ಈ ದಿನವು ಮಿಶ್ರಫಲ ತರಲಿದೆ. ನಿಮ್ಮ ಹಣಕಾಸಿನ ವಿಚಾರವಾಗಿ ಆದಾಯದಷ್ಟೇ ಖರ್ಚುಗಳು ಇರಲಿದೆ. ಅನೇಕರಿಗೆ ಈ ದಿನ ಆಯಾಸ ಕಾಡಬಹುದು. ತಲೆನೋವು, ಮೈಕೈ ನೋವಿನಂತಹ ಸಮಸ್ಯೆಗಳು ಕೂಡ ಎದುರಾಗಬಹುದು.
ವೃಷಭ ರಾಶಿ
ವೃಷಭ ರಾಶಿಯವರಿಗೆ ಸಮಸ್ಯೆಗಳಿವೆ. ಈ ದಿನ ನೀವು ಮಾಡುವ ಪ್ರಯಾಣಗಳಲ್ಲಿ ನಿಮಗೆ ಬಯಸಿದ ಫಲಿತಾಂಶ ಪಡೆಯಲಾಗದೆ ಇರಬಹುದು. ನಿಮ್ಮ ಹಣಕಾಸು ವಿಚಾರದಲ್ಲಿ ಶುಭವಿದೆ. ಅನೇಕರಲ್ಲಿ ತೃಪ್ತಿದಾಯಕ ದಿನವೂ ಇದಾಗಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನ ಬಹಳ ಪ್ರಯಾಣಗಳ ಮಾಡುವ ದಿನ. ನಿಮ್ಮ ಮನೆಯಲ್ಲಿ ಆರ್ಥಿಕ ವಿಚಾರವಾಗಿ ನಿಮಗೆ ಚಿಂತೆ ಕಾಡಬಹುದು. ಆಪ್ತರೊಬ್ಬರಿಂದ ನಿಮಗೆ ಶುಭ ಸುದ್ದಿ ಇದೆ. ದಿನದ ಅಂತ್ಯದಲ್ಲಿ ಖರ್ಚುಗಳು ಹೆಚ್ಚಾಗಬಹುದು.
ಕರ್ಕ ರಾಶಿ
ಕರ್ಕ ರಾಶಿಯ ಜನರಿಗೆ ಈ ದಿನವು ಅನುಕೂಲಕರ ದಿನ. ನೀವು ಬಹಳ ಸಮಯದಿಂದ ಬಾಕಿ ಉಳಿಸಿಕೊಂಡ ಕೆಲಸವನ್ನು ಆಪ್ತರೊಬ್ಬರ ನೆರವಿನಿಂದ ಪೂರ್ಣ ಮಾಡಲಿದ್ದೀರಿ. ದಾಂಪತ್ಯ ವಿಚಾರದಲ್ಲಿನ ಮುನಿಸುಗಳು ಶಮನವಾಗಲಿದೆ.
ಸಿಂಹ ರಾಶಿ
ಸಿಂಹ ರಾಶಿಯ ಜನರಲ್ಲಿ ಈ ದಿನವು ಉತ್ತಮವಾಗಿರಲಿದೆ. ಕೆಲವು ಪ್ರಮುಖ ನಿರ್ಧಾರಗಳನ್ನು ನೀವು ತೆಗೆದುಕೊಳ್ಳುವ ಸಮಯವಿದು. ಹಣಕಾಸು ವಿಚಾರವಾಗಿ ನಿಮಗೆ ಅನುಕೂಲಗಳಿವೆ. ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಮಿಶ್ರಫಲವಿದೆ. ಮನೆಯ ವಿಚಾರವೊಂದು ನಿಮಗೆ ಚಿಂತೆ ತರಬಹುದು. ಹಣ ಹೊಂದಿಸುವ ಕೆಲಸದಲ್ಲಿ ನಿಮಗೆ ಮಿಶ್ರಫಲವಿದೆ. ವಾಹನ ವಿಚಾರವಾಗಿ ಖರ್ಚುಗಳನ್ನು ನಿಭಾಯಿಸಿ. ಕೆಲಸದ ಸ್ಥಳದಲ್ಲಿನ ಸಮಸ್ಯೆಯೊಂದು ಬಗೆಹರಿಯಲಿದೆ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ನಿಮ್ಮ ಹಣಕಾಸು ವಿಚಾರವಾಗಿ ಇದ್ದಂತಹ ಅಡ್ಡಿಯೊಂದು ನಿವಾರಣೆಯಾಗಲಿದೆ. ಆಹಾರ ಸಂಬಂಧಿತ ವಿಚಾರದಲ್ಲಿ ಖರ್ಚುಗಳಿವೆ. ಮನೆಯ ಹಣಕಾಸು ವಿಚಾರದಲ್ಲಿ ನಿಮ್ಮ ನೆರವು ಅಗತ್ಯ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರು ಈ ದಿನದಲ್ಲಿ ಪ್ರಯಾಣ ಮಾಡುವಿರಿ. ಶುಭ ಕಾರ್ಯಗಳಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ವಾಹನ ವಿಚಾರದಲ್ಲಿ ಎಚ್ಚರವಹಿಸಿ. ಯಾರಿಂದಾದರು ಹಣ ಪಡೆದಿದ್ದರೆ ಮರಳಿ ನೀಡುವುದು ಉತ್ತಮ.
ಧನು ರಾಶಿ
ಧನು ರಾಶಿಯ ಗೃಹಿಣಿಯರು ಈ ದಿನ ಎಚ್ಚರಿಕೆಯಿಂದಿರಿ, ಅದ್ರಲ್ಲೂ ಹಣದ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಕೌಟುಂಬಿಕ ವಿಚಾರವಾಗಿ ಬಹು ಸಮಯದ ಕಷ್ಟವೊಂದು ನಿವಾರಣೆಯಾಗಲಿದೆ. ಮಕ್ಕಳ ಅನಾರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ.
ಮಕರ ರಾಶಿ
ಮಕರ ರಾಶಿಯ ಜನರು ಈ ದಿನವನ್ನು ಉತ್ತಮವಾಗಿಸುವ ಅವಕಾಶ ಪಡೆಯಲಿದ್ದಾರೆ, ವ್ಯಾಪಾರಿಗಳು, ಸ್ವಂತ ಉದ್ಯೋಗ ಮಾಡುವ ಜನರಿಗೆ ಉತ್ತಮ ದಿನ. ದಿಢೀರ್ ಪ್ರಯಾಣಗಳಿಂದ ಆಯಾಸಗಳ ಎದುರಿಸುವಿರಿ. ಸರ್ಕಾರಿ ದಾಖಲಾತಿಗಳಿಗೆ ಮತ್ತೆ ಓಡಾಟಗಳಿವೆ.
ಕುಂಭ ರಾಶಿ
ಕುಂಭ ರಾಶಿಯವರು ಇಂದು ಹೊಸ ಆದಾಯ ಪಡೆಯಬಹುದು. ನೀವು ಯಾರಿಂದಾದರು ಹಣ ಪಡೆಯುವ ಪ್ರಯತ್ನದಲ್ಲಿದ್ದರೆ ಫಲ ಸಿಗಲಿದೆ. ಮನೆಗೆ ಅತಿಥಿಗಳ ಆಗಮನದ ನಿರೀಕ್ಷೆ ಇದೆ. ಕೆಲಸದ ಸ್ಥಳದಲ್ಲಿನ ಒತ್ತಡವನ್ನು ನಿಭಾಯಿಸುವುದು, ಹಾಗೆ ತಾಳ್ಮೆಯಿಂದ ವರ್ತಿಸುವುದು ಮುಖ್ಯ.
ಮೀನ ರಾಶಿ
ಮೀನ ರಾಶಿಯ ಜನರು ಈ ದಿನ ಮಿಶ್ರಫಲ ನೋಡುವಿರಿ. ದಾಂಪತ್ಯ ವಿಚಾರವಾಗಿ ಇಷ್ಟು ದಿನ ಇದ್ದ ಮುನಿಸು ಶಮನವಾಗಲಿದೆ. ಕುಟುಂಬದಲ್ಲಿ ಅನಾರೋಗ್ಯ ಇರಬಹುದು. ದೇವಾಲಯ ಭೇಟಿಯ ಸಾಧ್ಯತೆ ಇದೆ. ಖರ್ಚುಗಳ ಕುರಿತು ಎಚ್ಚರ ವಹಿಸಿ.



Click it and Unblock the Notifications