For Quick Alerts
ALLOW NOTIFICATIONS  
For Daily Alerts

ಮಲಗುವ ಭಂಗಿ ಬದಲಿಸಿಕೊಂಡರೆ ಎಲ್ಲಾ ಬಗೆಯ ನೋವು ಶಮನವಾಗುವುದು!

By Manu
|

ಆಯಾಸವಾದಾಗ ಒಮ್ಮೆ ಮಲಗಿಕೊಂಡರೆ ಸಾಕು ಎನ್ನುವ ಭಾವನೆ ಎಲ್ಲರನ್ನೂ ಕಾಡುತ್ತದೆ. ಆ ಸಂದರ್ಭದಲ್ಲಿ ಹತ್ತು ನಿಮಿಷ ಮಲಗಿಕೊಂಡರೂ ಒಂದು ಬಗೆಯ ಆರಾಮ ಹಾಗೂ ಉಲ್ಲಾಸ ಉಂಟಾಗುವುದು. ದಿನದ ಆಯಾಸವನ್ನು ಸಂಪೂರ್ಣವಾಗಿ ಕಳೆದು, ಹೊಸ ಚೈತನ್ಯವನ್ನು ನೀಡುವ ಶಕ್ತಿ ಇರುವುದು ರಾತ್ರಿ ನಿದ್ರೆಯಲ್ಲಿ.


ಸ್ವಭಾವವನ್ನು ತಿಳಿಯಲು ನೀವು ಮಲಗುವ ಭಂಗಿ ಸಾಕು!

ಈ ವೇಳೆ ನಾವು ಮಲಗುವ ಭಂಗಿಯು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಕೆಲವೊಮ್ಮೆ ಅನೇಕ ಆರೋಗ್ಯ ಸಮಸ್ಯೆಯನ್ನು ಹುಟ್ಟು ಹಾಕುವ ಸಾಧ್ಯತೆ ಇರುತ್ತದೆ. ನಿಜ, ರಾತ್ರಿ ದೀರ್ಘಾವಧಿಯ ವರೆಗೆ ಒಂದೇ ಭಂಗಿಯಲ್ಲಿ ಮಲಗುವುದರಿಂದ ರಕ್ತ ಸಂಚಾರದಲ್ಲಿ ವ್ಯತ್ಯಾಸ ಹಾಗೂ ಕೆಲವು ದೇಹದ ಅಂಗಾಂಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ. ಆಯಾಸ ನಿವಾರಣೆ ಹಾಗೂ ಹೊಸ ಚೈತನ್ಯಕ್ಕೆ ಮಲಗುವ ಅಭ್ಯಾಸದಲ್ಲಿ ಸೂಕ್ತ ಪ್ರಕಾರವಿಲ್ಲದಿದ್ದರೆ ಯಾವೆಲ್ಲಾ ತೊಂದರೆ ಉಂಟಾಗುವುದು ಎನ್ನುವ ಸಂಕ್ಷಿಪ್ತ ವಿವರಣೆ ಇಲ್ಲಿದೆ ನೋಡಿ....

ಎದೆಯುರಿ

ಎದೆಯುರಿ

ಎದೆಯುರಿಯು ಮಲಗುವಾಗ ಹೆಚ್ಚು ಕಿರಿಕಿರಿಯನ್ನುಂಟುಮಾಡುತ್ತದೆ. ಇಂತಹ ಸಮಸ್ಯೆ ಇರುವವರು ಆದಷ್ಟು ಎಡ ಮಗ್ಗುಲಲ್ಲಿ ಮಲಗಬೇಕು. ರಕ್ತ ಸಂಚಾರವು ಸುಗಮವಾಗಿ ಆಗುವುದು. ಎದೆಯುರಿಯ ಪ್ರಮಾಣ ತಗ್ಗುವುದು.

ಜೀರ್ಣಕ್ರಿಯೆಗೆ ತೊಂದರೆ

ಜೀರ್ಣಕ್ರಿಯೆಗೆ ತೊಂದರೆ

ನಿಮಗೆ ಇಷ್ಟ ಬಂದ ಹಾಗೆ ಮಲಗಿಕೊಂಡರೆ ಜೀರ್ಣ ಕ್ರಿಯೆಯಲ್ಲಿ ತೊಂದರೆ ಉಂಟಾಗುವುದು. ಉತ್ತಮ ಜೀರ್ಣಕ್ರಿಯೆಗೆ ಆದಷ್ಟು ಎಡ ಭಾಗದಲ್ಲಿ ಮಲಗಬೇಕು.

ಜೀರ್ಣಕ್ರಿಯೆಗೆ ತೊಂದರೆ

ಜೀರ್ಣಕ್ರಿಯೆಗೆ ತೊಂದರೆ

ದೊಡ್ಡ ಗಾತ್ರದ ತಲೆದಿಂಬು, ಅಡ್ಡ ದಿಡ್ಡಿಯಾದ ಹಾಸಿಗೆ ಹಾಗೂ ಅನುಚಿತವಲ್ಲದ ರೀತಿಯ ಭಂಗಿಯಲ್ಲಿ ಮಲಗುವುದರಿಂದ ಕುತ್ತಿಗೆ ನೋವು ಉಂಟಾಗುವುದು. ಮಲಗುವಾಗ ಕುತ್ತಿಗೆಯ ಕೆಳ ಭಾಗದಲ್ಲಿ ಒಂದು ಟವೆಲ್‍ನ ಸುರಳಿಯನ್ನು ಇಟ್ಟುಕೊಂಡು ಮಲಗಿ. ಇದು ಕುತ್ತಿಗೆಗೆ ಆಧಾರವಾಗಿ ಸಹಾಯ ಮಾಡುತ್ತದೆ.

ಪಿಎಮ್‍ಎಸ್ ನೋವು

ಪಿಎಮ್‍ಎಸ್ ನೋವು

ನಿಮ್ಮ ಅಭ್ಯಾಸದ ರೀತಿಯಲ್ಲಿ ಮಲಗಿದರೆ ಪಿಎಮ್‍ಎಸ್ ನೋವು ಕಾಣಿಸಿಕೊಳ್ಳುತ್ತದೆ ಎಂದಾದರೆ ಮೊಣಕಾಲಿನ ಕೆಳಗೆ ಒಂದು ಮೆತ್ತನೆಯ ದಿಂಬನ್ನು ಇರಿಸಿ ಮಲಗಿ. ಇದು ಮೊಣಕಾಲು ನೋವನ್ನು ನಿವಾರಣೆ ಮಾಡಲು ಸಹಾಯ ಮಾಡುತ್ತದೆ. ಪಿಎಮ್‍ಎಸ್ ನೋವಿಗೆ ಸೂಕ್ತ ಪರಿಹಾರ ನೀಡಿ ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ.

ಅಧಿಕ ರಕ್ತದೊತ್ತಡ

ಅಧಿಕ ರಕ್ತದೊತ್ತಡ

ಮುಖದ ಮೇಲೆ ಮಲಗುವ ಭಂಗಿಯಲ್ಲಿ ಮಲಗಿದರೆ ಅಧಿಕ ರಕ್ತದೊತ್ತಡದ ಸಮಸ್ಯೆ ಬಗೆ ಹರಿಯುವುದು. ಜೊತೆಗೆ ಒಳ್ಳೆಯ ನಿದ್ರೆ ನಿಮ್ಮದಾಗುವುದು

ಸೈನಸ್ ಸೋಂಕು

ಸೈನಸ್ ಸೋಂಕು

ಸೈನಸ್ ತೊಂದರೆ ಇರುವವರು ನಿದ್ರಿಸುವಾಗ ಹೆಚ್ಚು ಸಮಸ್ಯೆ ಉಂಟಾಗುವುದು. ಇವರು ಎತ್ತರದ ತಲೆದಿಂಬನ್ನು ಬಳಸುವುದರಿಂದ ಸಮಸ್ಯೆಯಿಂದ ಕೊಂಚ ನಿರಾಳತೆ ಪಡೆಯಬಹುದು. ಉತ್ತಮ ನಿದ್ರೆಯನ್ನು ಮಾಡಬಹುದು.

ತಲೆ ನೋವು

ತಲೆ ನೋವು

ಮಲಗುವ ರೀತಿಯಿಂದ ತಲೆ ನೋವನ್ನು ನಿವಾರಿಸಿಕೊಳ್ಳಬಹುದು. ಕುತ್ತಿಗೆಯನ್ನು ಹೆಚ್ಚು ತಿರುಚಿದಂತೆ ಮಾಡಿಕೊಂಡು ಮಲಗಿದರೆ ತಲೆ ನೋವು ಉಂಟಾಗುವುದು. ತಲೆಯನ್ನು ದಿಂಬುಗಳಿಂದ ಸುತ್ತುವರಿಯುವಂತೆ ಮಾಡಿಕೊಂಡು ಮಲಗಿದರೆ. ತಲೆಯನ್ನು ಹೆಚ್ಚು ತಿರುಗಿಸಲು ಸಾಧ್ಯವಿಲ್ಲ. ತಲೆ ನೋವು ಕಡಿಮೆಯಾಗುವುದು.

ಬೆನ್ನು ನೋವು

ಬೆನ್ನು ನೋವು

ಬೆನ್ನಿನ ಕೆಳಗೊಂದು ಮೆತ್ತನೆಯ ದಿಂಬು, ಮೊಣಕಾಲಿನ ಕೆಳಗೊಂದು ದಿಂಬು ಹಾಗೂ ಸೊಂಟಕ್ಕೆ ಒಂದು ಟವೆಲ್ ಸುತ್ತಿಕೊಂಡು ಮಲಗುವುದರಿಂದ ಬೆನ್ನು ನೋವು ನಿವಾರಣೆಯಾಗುವುದು. ಸುಂದರ ನಿದ್ರೆಯು ಬರುವುದು.

ಭುಜದ ನೋವು

ಭುಜದ ನೋವು

ಭುಜದ ನೋವು ಇರುವವರು ಕಾಲನ್ನು ಸ್ವಲ್ಪ ಭಾಗಿಸಿಕೊಂಡು, ಕಾಲಿನ ಸಂಧಿಯಲ್ಲೊಂದು ದಿಂಬು ಹಾಗೂ ಎದೆ ಭಾಗದಲ್ಲೊಂದು ದಿಂಬನ್ನು ಇಟ್ಟುಕೊಂಡು ಮಲಗಬೇಕು. ನೋವಿರುವ ಭುಜದ ಬದಿಯಲ್ಲಿ ಮಲಗಬಾರದು.

English summary

The Right Position To Sleep To Address Each Of These Health Problems

There is a right position that you need to follow for some health issues. Following these will help with countering the problem and also reduce the associated health risk involved. If you want some conditions healed, then you need to take a note on the way in which you must sleep. The right sleeping position can help alleviate certain health problems.
X
Desktop Bottom Promotion