For Quick Alerts
ALLOW NOTIFICATIONS  
For Daily Alerts

ಸ್ವಭಾವವನ್ನು ತಿಳಿಯಲು ನೀವು ಮಲಗುವ ಭಂಗಿ ಸಾಕು!

By manu
|

ಮಾನವನನ್ನು ಇತರ ಪ್ರಾಣಿಗಳಿಗೆ ಹೋಲಿಸಿದರೆ ಹಲವು ವಿಶೇಷಗಳನ್ನು ಕಾಣಬಹುದು. ಅತ್ಯಂತ ಬುದ್ಧವಂತನಾಗಿರುವುದು, ಆತ್ಮರಕ್ಷಣೆಗೆ ಯಾವುದೇ ನೈಸರ್ಗಿಕ ಆಯುಧವಿಲ್ಲದಿರುವುದು, ವೇಗವಾಗಿ ಓಡಲು ಅಸಮರ್ಥನಿರುವುದು, ಹುಲ್ಲನ್ನು ಜೀರ್ಣಿಸಿಕೊಳ್ಳಲು ಅಸಮರ್ಥನಿರುವುದು ಮೊದಲಾದವು ಇವುಗಳಲ್ಲಿ ಪ್ರಮುಖವಾಗಿವೆ. ಆದರೆ ಯಾವ ಪ್ರಾಣಿಗೂ ಇಲ್ಲದ ಇನ್ನೊಂದು ವಿಶೇಷ ಮಾನವನಿಗಿದೆ, ಅದೆಂದರೆ ತನ್ನ ಬೆನ್ನ ಮೇಲೆ ಮಲಗುವುದು. ಬೇರಾವ ಪ್ರಾಣಿಯೂ ಬೆನ್ನಿನ ಮೇಲೆ ಮಲಗುವುದಿಲ್ಲ! ಎಡ ಮಗ್ಗಲಿಗೆ ಹೊರಳಿ ಮಲಗಿದರೆ ಹತ್ತಾರು ಅನುಕೂಲಗಳು..!

ಆದರೆ ಎಲ್ಲರೂ ನೆಟ್ಟನೇರಕ್ಕೆ ಬೆನ್ನ ಮೇಲೆ ಮಲಗುವುದಿಲ್ಲ, ಕೊಂಚ ಬದಲಾವಣೆ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ತಮಗೆ ಅತ್ಯಂತ ಅನುಕೂಲಕವಾದ ಅಥವಾ ಆರಾಮವೆನಿಸುವ ಭಂಗಿಯನ್ನೇ ಅನುಸರಿಸುತ್ತಾರೆ. ಆದರೆ ಈ ಭಂಗಿ ಪ್ರತಿಯೊಬ್ಬರ ಸ್ವಭಾವಕ್ಕನುಗುಣವಾಗಿದೆ ಎಂದರೆ ಆಶ್ಚರ್ಯವಾಗುತ್ತದೆ ಅಲ್ಲವೇ? ಆದರೆ ವೈದ್ಯರ ಪ್ರಕಾರ ಮಲಗಲು ಎಲ್ಲಾ ಭಂಗಿಗಳು ಸೂಕ್ತವಲ್ಲ, ಆರೋಗ್ಯಕ್ಕೆ ಸೂಕ್ತವಾದುದೆಂದರೆ ಎಡಮಗ್ಗುಲಲ್ಲಿ ಮಲಗುವುದು.

ಇದು ಐಚ್ಛಿಕವೇ ಹೊರತು ನೆನಪಿಲ್ಲದಿದ್ದರೆ ಪ್ರತಿಯೊಬ್ಬರೂ ಮಲಗುವ ಭಂಗಿ ಅವರ ಸ್ವಭಾವಕ್ಕನುಗುಣವಾಗಿರುತ್ತದೆ ಎಂದು ಒಂದು ಸಂಶೋಧನೆ ತಿಳಿಸುತ್ತದೆ. ಕೇವಲ ಸ್ವಭಾವ ಮಾತ್ರವಲ್ಲ, ನಿಮ್ಮ ಗುಣ, ಸ್ನೇಹಿತರ ಪ್ರೀತಿ, ನಿಮ್ಮ ಪ್ರತಿಕ್ರಿಯೆ ಇತ್ಯಾದಿಗಳನ್ನೂ ತಿಳಿಸುತ್ತದೆ. ಉದಾಹರಣೆಗೆ ಮಾನಸಿಕ ಒತ್ತಡದಲ್ಲಿರುವವರು ಕಮಾನಿನಂತೆ ಬಗ್ಗಿ ಮಲಗಿದ್ದರೆ ನಿಶ್ಚಿಂತರು ಹೊಟ್ಟೆಯ ಮೇಲೆ ಮಲಗುತ್ತಾರೆ. ಬನ್ನಿ ಈ ಕುರಿತ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಬೋರಲಾಗಿ ಅಥವಾ ಹೊಟ್ಟೆಯ ಮೇಲೆ ಮಲಗುವುದು

ಬೋರಲಾಗಿ ಅಥವಾ ಹೊಟ್ಟೆಯ ಮೇಲೆ ಮಲಗುವುದು

ಇವರು ಆಕರ್ಷಕ ವ್ಯಕ್ತಿತ್ವವುಳ್ಳವರು ಹಾಗೂ ವಿನೋದವನ್ನು ಬಯಸುವ ಜನರಾಗಿದ್ದಾರೆ. ಇತರರಿಗೆ ಸದಾ ಸಹಾಯ ಮಾಡುತ್ತಾ ಸಮಾಜದಲ್ಲಿ ಉತ್ತಮ ವ್ಯಕ್ತಿ ಎಂದು ಗುರುತಿಸಲ್ಪಡುತ್ತಾರೆ. ಆದರೆ ಕೆಲವೊಮ್ಮೆ ಇವರ ಚಟುವಟಿಕೆಯಿಂದ ಅರಿವಿಲ್ಲದೇ ಇತರರಿಗೆ ನೋವುಂಟುಮಾಡುತ್ತಾರೆ. ಇವರು ತಮ್ಮ ಭಾವನೆಗಳನ್ನು ಹತ್ತಿಕ್ಕುವಲ್ಲಿ ಅಸಮರ್ಥರಾಗಿದ್ದಾರೆ.

ದಿಂಬು ಅಥವಾ ಏನಾದರೊಂದನ್ನು ಅಪ್ಪಿ ಮಲಗುವುದು

ದಿಂಬು ಅಥವಾ ಏನಾದರೊಂದನ್ನು ಅಪ್ಪಿ ಮಲಗುವುದು

ಕೆಲವರು ವಯಸ್ಸಾದ ಬಳಿಕವೂ ತಮ್ಮ ನೆಚ್ಚಿನ ಟೆಡ್ಡಿ ಕರಡಿ ಬೊಂಬೆ ಅಥವಾ ತಲೆದಿಂಬು ಅಥವಾ ಇನ್ನಾವುದಾದರೊಂದು ವಸ್ತುವನ್ನು ಅಪ್ಪಿ ಮಲಗುತ್ತಾರೆ. ಇವರು ಸಾಮಾನ್ಯವಾಗಿ ಇತರರಿಂದ ಸ್ನೇಹ, ಪ್ರೀತಿಯನ್ನು ಬಯಸುವವರಾಗಿದ್ದಾರೆ. ಇವರು ತಮ್ಮ ಪ್ರೀತಿಪಾತ್ರರಿಗೆ ಮತ್ತು ಸ್ನೇಹಿತರಿಗೆ ಅತಿ ನಿಷ್ಠಾವಂತರಾಗಿದ್ದು ಪ್ರೀತಿ, ಸ್ನೇಹ, ವಿಶ್ವಾಸಕ್ಕಾಗಿ ತಮ್ಮನ್ನೇ ಅರ್ಪಿಸಿಕೊಳ್ಳಲು ತಯಾರಿರುತ್ತಾರೆ. ಇವರು ಹೃದಯದಲ್ಲಿ ನಿಷ್ಕಪಟಿಗಳೂ ಆಗಿರುತ್ತಾರೆ.

ಬಲಬದಿ ಅಥವಾ ಎಡಮಗ್ಗುಲಲ್ಲಿ ಮಲಗುವುದು

ಬಲಬದಿ ಅಥವಾ ಎಡಮಗ್ಗುಲಲ್ಲಿ ಮಲಗುವುದು

ಈ ಭಂಗಿಯಲ್ಲಿ ಮಲಗುವವರು ಶಾಂತಸ್ವಭಾವ, ಹೆಚ್ಚಿನದನ್ನು ಬಯಸದ ಮತ್ತು ಗೌರವಯುತ ಜೀವನ ನಡೆಸಲು ಬಯಸುವವರಾಗಿದ್ದಾರೆ. ಇವರು ಭಾವಪರವಶರೂ ಮತ್ತು ಸೂಕ್ಷ್ಮ ಸ್ವಭಾವದವರೂ ಆಗಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಲಬದಿ ಅಥವಾ ಎಡಮಗ್ಗುಲಲ್ಲಿ ಮಲಗುವುದು

ಬಲಬದಿ ಅಥವಾ ಎಡಮಗ್ಗುಲಲ್ಲಿ ಮಲಗುವುದು

ಇವರು ಹೊಸಬರನ್ನು ತಕ್ಷಣಕ್ಕೆ ನಂಬುವುದಿಲ್ಲ. ಎಲ್ಲಾ ರೀತಿಯಿಂದ ತಾಳೆ ನೋಡಿ ನಂಬಿಕೆಗೆ ಅರ್ಹ ಎಂದ ಬಳಿಕವೇ ತಮ್ಮ ಸಹಾಯಹಸ್ತವನ್ನು ಚಾಚುತ್ತಾರೆ ಹಾಗೂ ಜೀವನಪರ್ಯಂತ ಇದನ್ನು ನಿಭಾಯಿಸುವವರಾಗಿದ್ದಾರೆ.

ಮೊಣಕಾಲು ಎದೆಗೆ ತಾಕುವವರೆಗೆ ಮಡಚಿ ಮಲಗುವುದು

ಮೊಣಕಾಲು ಎದೆಗೆ ತಾಕುವವರೆಗೆ ಮಡಚಿ ಮಲಗುವುದು

ಈ ಭಂಗಿಯಲ್ಲಿ ಮಲಗುವವರಿಗೆ ಯಾವುದೇ ಚಿಂತೆ, ಭಯ ಅಥವಾ ಉದ್ವೇಗ ಕಾಡುತ್ತಿರುವ ಸ್ಪಷ್ಟ ಸಂಕೇತವಾಗಿದೆ. ಭವಿಷ್ಯದ ಬಗ್ಗೆ ಹೆದರಿಕೆ ಹೊಂದಿರುವ, ಸದಾ ಚಿಂತಿಸುತ್ತಲೇ ಇರುವ ಮತ್ತು ನಿರಾಶಾವಾದಿಗಳು ಈ ಭಂಗಿಯಲ್ಲಿ ಮಲಗುತ್ತಾರೆ. ಒಂದು ವೇಳೆ ಮಕ್ಕಳು ಈ ಭಂಗಿಯಲ್ಲಿ ಮಲಗಿದ್ದು ನಡುಕ ಸಹಾ ಕಂಡುಬಂದರೆ ಅವರ ಮನದಲ್ಲಿ ಭಯ ಬೀಡುಬಿಟ್ಟಿದೆ ಎಂದು ತಿಳಿದುಕೊಳ್ಳಬೇಕು. ಸಾವಕಾಶವಾಗಿ ಅವರ ಮನ ಗೆದ್ದು ಭಯಕ್ಕೆ ಕಾರಣವನ್ನು ಹುಡುಕಬೇಕು. ಪಾಲಕರಲ್ಲಿ ಹೇಳಲು ಹೆದರುವ ಈ ಭೀತಿ ಅವರನ್ನು ಇಡಿಯ ಜೀವಮಾನವೂ ಕಾಡಬಹುದು.

ಏನಾದರೊಂದನ್ನು ಓದುತ್ತಾ ಮಲಗುವುದು

ಏನಾದರೊಂದನ್ನು ಓದುತ್ತಾ ಮಲಗುವುದು

ಮಲಗುವ ಮುನ್ನ ಏನಾದರೂ ಓದಿ ಮಲಗುವವರು ತಮ್ಮ ಜೀವನದಲ್ಲಿ ಶಾಂತಿ ಬಯಸುವ ಜನರಾಗಿದ್ದಾರೆ. ಜೀವನದಲ್ಲಿ ಚಿಂತೆ, ದುಗುಡ, ಕಷ್ಟಗಳನ್ನು ಬಯಸದ ಇವರು ಹೊಸ ವಿಷಯವನ್ನು ಕಲಿಯಲು ನಿಧಾನಿಸುತ್ತಾರೆ. ಇತರರೊಂದಿಗೆ ಹೊಂದಿಕೊಳ್ಳಲು ಇವರಿಗೆ ಹೆಚ್ಚಿನ ಸಮಯಾವಕಾಶ ಬೇಕು. ಕೆಲವೊಮ್ಮೆ ಜೊತೆಯವರೊಂದಿಗೆ ಹೊಂದಿಕೊಳ್ಳಲು ಸಾಧ್ಯವಾದಗೇ ಅವರಿಂದ ದೂರವಿರಲು ಬಯಸುತ್ತಾರೆ. ಆದರೆ ಒಗ್ಗಿಕೊಂಡವರಿಗೆ ಮಾತ್ರ ಪ್ರಾಣ ತೆರಲೂ ಸಿದ್ದರಿರುತ್ತಾರೆ.

ಮೊಣಕಾಲು ಎದೆಗೆ ತಾಕುವವರೆಗೆ ಮಡಚಿ ಮಲಗುವುದು

ಮೊಣಕಾಲು ಎದೆಗೆ ತಾಕುವವರೆಗೆ ಮಡಚಿ ಮಲಗುವುದು

ಈ ಭಂಗಿಯಲ್ಲಿ ಮಲಗುವವರಿಗೆ ಯಾವುದೇ ಚಿಂತೆ, ಭಯ ಅಥವಾ ಉದ್ವೇಗ ಕಾಡುತ್ತಿರುವ ಸ್ಪಷ್ಟ ಸಂಕೇತವಾಗಿದೆ. ಭವಿಷ್ಯದ ಬಗ್ಗೆ ಹೆದರಿಕೆ ಹೊಂದಿರುವ, ಸದಾ ಚಿಂತಿಸುತ್ತಲೇ ಇರುವ ಮತ್ತು ನಿರಾಶಾವಾದಿಗಳು ಈ ಭಂಗಿಯಲ್ಲಿ ಮಲಗುತ್ತಾರೆ. ಒಂದು ವೇಳೆ ಮಕ್ಕಳು ಈ ಭಂಗಿಯಲ್ಲಿ ಮಲಗಿದ್ದು ನಡುಕ ಸಹಾ ಕಂಡುಬಂದರೆ ಅವರ ಮನದಲ್ಲಿ ಭಯ ಬೀಡುಬಿಟ್ಟಿದೆ ಎಂದು ತಿಳಿದುಕೊಳ್ಳಬೇಕು. ಸಾವಕಾಶವಾಗಿ ಅವರ ಮನ ಗೆದ್ದು ಭಯಕ್ಕೆ ಕಾರಣವನ್ನು ಹುಡುಕಬೇಕು. ಪಾಲಕರಲ್ಲಿ ಹೇಳಲು ಹೆದರುವ ಈ ಭೀತಿ ಅವರನ್ನು ಇಡಿಯ ಜೀವಮಾನವೂ ಕಾಡಬಹುದು.

ನಿದ್ದೆಯಲ್ಲಿ ಭಾರೀ ಸದ್ದಿನ ಗೊರಕೆ ಹೊಡೆಯುವವರು

ನಿದ್ದೆಯಲ್ಲಿ ಭಾರೀ ಸದ್ದಿನ ಗೊರಕೆ ಹೊಡೆಯುವವರು

ಇವರು ತಮ್ಮ ಮೆದುಳಿಗೆ ಭಾರಿ ತ್ರಾಸು ನೀಡುವ ಜನರಾಗಿದ್ದಾರೆ. ಇವರು ಅತೀವ ಬುದ್ದಿವಂತರೂ ಸತತವಾಗಿ ಗುರಿಯತ್ತ ತೆರಳುವವರೂ ಆಗಿದ್ದಾರೆ. ಆದರೆ ಹೆಚ್ಚಿನ ಪಕ್ಷ ಜನಪ್ರಿಯತೆ ಗಳಿಸುವಲ್ಲಿ ವಿಫಲರಾಗುತ್ತಾರೆ. ಶ್ರಮಜೀವಿಗಳಾಗಿರುವ ಇವರು ತಕ್ಷಣ ನಿದ್ದೆ ಪಡೆಯುವ ಸ್ವಭಾವದವರಾಗಿದ್ದು ಮರುದಿನ ಎಚ್ಚರವಾಗುವವರೆಗೂ ನಿದ್ದೆ ಕೆಡದೇ ಗಡದ್ದು ನಿದ್ದೆ ಮಾಡುವವರಾಗಿದ್ದಾರೆ.


English summary

What Your Sleeping Position Tells About You

We all sleep in different positions each night and find it very difficult to sleep when we sleep in a position other than our usual one. Night is a time when we get comfort through sleep and our body tends to sleep in the position in which it feels more comfort. So, read the article to find out what your sleeping position tells about you.
X
Desktop Bottom Promotion