Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹೌಸ್‌ವೈಫ್ ಆಗಿರುವ ಈ ಮಹಿಳೆ ದಿನದಲ್ಲಿ 2 ಗಂಟೆ ಕೆಲಸ ಮಾಡಿ ಲಕ್ಷ ಗಳಿಸುತ್ತಿದ್ದಾರಂತೆ!
ಇಡೀ ಜಗತ್ತು ಹಣದ ಹಿಂದೆ ಓಡುತ್ತಿದೆ... ಕೆಲವರು ಹಣ ತುಂಬಾನೇ ಗಳಿಸುತ್ತಾರೆ, ಇನ್ನು ಕೆಲವರು ದಿನವಿಡೀ ದುಡಿದರೂ ಹೊಟ್ಟೆ ಬಟ್ಟೆ ಸಾಗಿಸುವುದು ಕಷ್ಟ. ಕೆಲವರು ದಿನದಲ್ಲಿ 14ರಿಂದ-16 ತಾಸು ದುಡಿದರೂ ಹಣ ಹೊಂದಿಸಲು ಸಾಧ್ಯವಾಗುವುದಿಲ್ಲ.
ಆದರೆ ಇನ್ನು ಕೆಲವರು ತಮ್ಮ ಬುದ್ಧಿವಂತಿಕೆಯಿಂದ ಸಾಕಷ್ಟು ಹಣ ಗಳಿಸುತ್ತಿದ್ದಾರೆ, ಇಲ್ಲೊಬ್ಬರು ದಿನದಲ್ಲಿ 1-2 ಗಂಟೆಯಷ್ಟೇ ಕೆಲಸ ಮಾಡುತ್ತಾರೆ, ಆದರೆ ಅವರು ತಿಂಗಳಿಗೆ ಲಕ್ಷ ಸಂಬಳ ಗಳಿಸುತ್ತಿದ್ದಾರೆ.

ಇವರ ಕತೆಯನ್ನು ಕೇಳಿದರೆ ಸ್ಪೂರ್ತಿಯಾಗುತ್ತದೆ
ಇವರೊಬ್ಬರು ಗೃಹಿಣಿ, ಮಗನನ್ನು ಶಾಲೆಗೆ ಕರೆದುಕೊಂಡು ಹೋಗಿ ಬಿಡುವುದು, ಮನೆಯ ಕೆಲಸ ಕಾರ್ಯಗಳನ್ನು ನೋಡಿಕೊಳ್ಳುವುದು ಮಾಡುತ್ತಿದ್ದರು. ಹೀಗಿರುವಾಗ ಅವರಿಗೆ ಪಾರ್ಟ್‌ಟೈಂ ಕೆಲಸ ಮಾಡಿದರೆ ಹೇಗೆ ಎಂಬ ಆಲೋಚನೆ ಬರುತ್ತೆ, ಒಂದಿಷ್ಟು ಹಣ ಗಳಿಸಿದರೆ ಒಳ್ಳೆಯದೇ ಅಲ್ವಾ ಎಂದು ಪಾರ್ಟ್‌ಟೈಂ ಕೆಲಸ ಮಾಡಲು ಯೋಚಿಸುತ್ತಾರೆ ಅವರ ತಲೆಗೆಬಂದಿದ್ದು affiliate marketing ಅಂದರೆ ಬೇರೆಯವರ ವಸ್ತುಗಳನ್ನು ಆನ್‌ಲೈನ್ ಇವರು ಪ್ರಮೋಟ್ ಮಾಡುವುದು.
ಇವರ ಲಿಂಕ್ ನೋಡಿ ಆ ವಸ್ತುಗಳನ್ನು ಯಾರಾದರೂ ಖರೀದಿಸಿದರೆ ಆ ಕಂಪನಿಯರು ಇವರಿಗೆ ಇಷ್ಟು ಕಮಿಷನ್ ಅಂತ ಕೊಡಬೇಕು. ಈ ರೀತಿ ಕೆಲಸ ಮಾಡಲು ಆರಂಭಿಸಿದ ಕೆಲವೇ ತಿಂಗಳುಗಳಲ್ಲಿ ಲಕ್ಷ-ಲಕ್ಷ ದುಡಿಯಲಾರಂಭಿಸುತ್ತಾರೆ. ಗಂಡ ದಿನವಿಡೀ ಆಫೀಸ್‌ನಲ್ಲಿ ದುಡಿದು ಬರುವ ಸಂಬಳಕ್ಕಿಂತ ಇವರ ದಿನದಲ್ಲಿ ಎರಡು ಗಂಟೆ ಪ್ರಮೋಷನ್ ಮಾಡಿದಾಗ ಬರುವ ಹಣ ಹೆಚ್ಚಿದೆ.
ದಿನವಿಡೀ ಈ ಕೆಲಸ ಮಾಡುವುದಿಲ್ಲ ಕೇವಲ 1-2 ಗಂಟೆ ಕೆಲಸ ಮಾಡಿ ಲಕ್ಷಗಟ್ಟಲೆ ದುಡಿಯುತ್ತಿದ್ದಾರೆ, ಕೆಲಸ ಆರಂಭಿಸಿದ 5 ತಿಂಗಳಿನಲ್ಲಿ ಇವರಿಗೆ ಲಕ್ಷ ಹಣ ಬರುತ್ತದೆ. ಇವರ ಹೆಸರು ಇಂ ವಾಲ್ಕೋಟ್. @emtheaffiliate ಎಂಬ ಟಿಕ್‌ಟಾಕ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದೆ.
ಇವರ ಐಡಿಯಾ ಚೆನ್ನಾಗಿದೆ ಅಲ್ವಾ ಇದನ್ನು ಬೇರೆಯವರು ಟ್ರೈ ಮಾಡಬಹುದು ಎಂದು ಹೇಳಿದ್ದಾರೆ. ಬೇರೆಯವರ ವಸ್ತುಗಳನ್ನು ಪ್ರಚಾರ ಮಾಡಿದರೆ ಆ ವಸ್ತುಗಳು ಮಾರಾಟವಾದರೆ ಹಣ ಗಳಿಸಬಹುದು. ತಾನು ತನ್ನ ಗಂಡ ಫುಲ್ ಸ್ಯಾಲರಿಯಷ್ಟೇ ಹಣ ಗಳಿಸುತ್ತಿದ್ದೇನೆ ಎಂದು ಇಂ ಹೇಳುತ್ತಾರೆ.
ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಪಳಗಿದರೆ ಹಣ ಗಳಿಸುವುದು ಸುಲಭ, ಬೆಳೆದ ರೈತರಿಗಿಂತ ಮಧ್ಯವರ್ತಿಗಳು ಲಾಭ ಗಳಿಸುತ್ತಾರೆ. ಎಷ್ಟೋ ಜನರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಮಾರ್ಕೆಟಿಂಗ್ ಅಥವಾ ಪ್ರಚಾರ ಅವಶ್ಯಕವಿರುತ್ತದೆ. ಇವರು ಅವರ ವಸ್ತುಗಳನ್ನು ಲಿಂಕ್ ಮೂಲಕ ಪ್ರಮೋಟ್ ಮಾಡುತ್ತಾರೆ ಆ ಮೂಲಕ ಲಾಭ ಗಳಿಸುತ್ತಾರೆ.
ಆರ್ಥಿಕವಾಗಿ ಸ್ವಾವಲಂಬನೆ ಹೆಣ್ಮಕ್ಕಳಿಗೆ ತುಂಬಾನೇ ಅವಶ್ಯಕ
ಆರ್ಥಿಕವಾಗಿ ಸ್ವಾವಲಂಬನೆಯಾದರೆ ಮಹಿಳೆಯಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಎಷ್ಟೋ ಗೃಹಿಣಿಯರು ಈ ರೀತಿ ಸಾಧನೆ ಮಾಡಿರುವ ಎಷ್ಟೋ ಕತೆಗಳನ್ನು ಕೇಳಿದ್ದೇವೆ. ಮಸಾಲೆ ರೆಡಿ ಮಾಡುವುದು, ಹಿಟ್ಟು ರೆಡಿ ಮಾಡುವುದು, ಮನೆಯಲ್ಲಿಯೇ ಟೈಲರಿಂಗ್ ಮಾಡುವುದು ಹೀಗೆ ಅನೇಕ ಕೆಲಸವನ್ನು ಮಾಡಿ ಸಾಧನೆ ಮಾಡಿದವರು ಇದ್ದಾರೆ. ಈಗ ಇವರ ಕೆಲಸ ಇತರರಿಗೆ ಸ್ಪೂರ್ತಿಯಾಗಬಹುದು. ಲಕ್ಷಗಟ್ಟಲೆ ಅಲ್ಲದಿದ್ದರೂ ಸ್ವಲ್ಪವಾದರೂ ಹಣ ಗಳಿಸಲು ಸಾಧ್ಯವಾಗುವುದು.



Click it and Unblock the Notifications
