Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ. ಹೀಗಾಗಿ ಹಳ್ಳಿಗಳಲ್ಲಿ ಮಾತ್ರವಲ್ಲ ಪಟ್ಟಣಗಳಲ್ಲು ಈಗ ಕಡಿಮೆ ಜಾಗದಲ್ಲಿ ತರಕಾರಿ ಬೆಳೆಯಲಾಗುತ್ತಿದೆ. ಹಳ್ಳಿಗಳಲ್ಲಿ ತಮ್ಮ ತಮ್ಮ ಮನೆಗೆ ಯಾವ ತರಕಾರಿಗಳ ಅಗತ್ಯವಿದ್ಯೋ ಅದನ್ನು ಅವರೇ ಹೊತ್ತಲಲ್ಲಿ, ಹೊಲದಲ್ಲಿ ಬೆಳೆಯುತ್ತಾರೆ. ಇನ್ನು ಪಟ್ಟಣದಲ್ಲಿ ಸಣ್ಣ ಪುಟ್ಟ ತರಕಾರಿಯನ್ನು ಪಾಟ್‌ಗಳಲ್ಲಿ ಇಲ್ಲವೆ, ಚಿಕ್ಕ ಜಾಗದಲ್ಲಿ ಬೆಳೆಯುತ್ತಾರೆ.
ಈ ತರಕಾರಿಗಳಲ್ಲಿ ಬೀನ್ಸ್ ಬೆಳೆಯುವುದು ಬಹಳ ಸುಲಭ. ಹಲವು ರೀತಿಯ ಖಾದ್ಯಗಳ ಮಾಡಬಹುದು. ಬೀನ್ಸ್‌ನಲ್ಲಿ ಫೈಬರ್, ಜೀವಸತ್ವಗಳು ಮತ್ತು ಖನಿಜಗಳು ತುಂಬಿವೆ. ಹೀಗಾಗಿ ಬೀನ್ಸ್ ದರ ಎಂದಿಗೂ ಕೆಳಗಿಳಿಯುವುದೇ ಇಲ್ಲ.

ಹಸಿರು ಅಥವಾ ಸ್ನ್ಯಾಪ್ ಬೀನ್ಸ್ ಎಂದೂ ಕರೆಯಲ್ಪಡುವ ಫ್ರೆಂಚ್ ಬೀನ್ಸ್ ರುಚಿಕರವಾದ ಮತ್ತು ಪೌಷ್ಟಿಕ ಪರಿಹಾರವನ್ನು ನೀಡುತ್ತದೆ. ಫ್ರೆಂಚ್ ಬೀನ್ಸ್‌ನ ಕೆಲವು ಪ್ರಯೋಜನಗಳೆಂದರೆ- ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು, ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು, ಹೃದಯದ ಆರೋಗ್ಯಕ್ಕೆ ಸಹಾಯ ಮಾಡಲಿದೆ.
ಹಾಗಾದ್ರೆ ನೀವು ಮನೆಯಲ್ಲೇ ಬೀನ್ಸ್ ಬೆಳೆಯುವುದು ಹೇಗೆ? ಅದರ ಆರೈಕೆ ಹೇಗೆ ಎಂಬುದನ್ನು ನಾವಿಂದು ತಿಳಿಯೋಣ.
ಫ್ರೆಂಚ್ ಬೀನ್ಸ್ ಬೆಳೆಯುವುದು ಹೇಗೆ?
ಬೀನ್ಸ್ ಗಿಡಗಳಂತೆ ಕಂಡುಬಂದರೂ ಅವು ಅಸಲಿಗೆ ಬಳ್ಳಿಗಿಡದಲ್ಲಿ ಬೆಳೆಯುತ್ತದೆ. ಪೊದೆ ಆಕಾರವಾಗಿ ಅದರ ಗಿಡ ಹಬ್ಬುತ್ತದೆ. ಹೀಗಾಗಿ ಉತ್ತಮ ಆರೈಕೆ ಮಾಡಬೇಕಾಗುತ್ತದೆ. ಆದರೆ ನಾವು ಗಿಡಗಳ ಆಯ್ಕೆ ಮಾಡುವಾಗಲೆ ಜಾಣ್ಮೆ ತೋರಬೇಕಿದೆ. 8ರಿಂದ 10 ಇಂಚುಗಳಷ್ಟು ದೊಡ್ಡ ಪಾಟ್ ಅಥವಾ ಹೊಂಡ ಮಾಡಬೇಕಾಗುತ್ತದೆ. ಗಿಡ ಅಥವಾ ಬೀಜಗಳನ್ನು 1-2 ಇಂಚು ಆಳ ಮತ್ತು 2-3 ಇಂಚು ಅಂತರದಲ್ಲಿ 18-24 ಇಂಚು ಅಂತರದ ಸಾಲುಗಳಲ್ಲಿ ಬಿತ್ತಬೇಕು ಅಥವಾ ನೆಡಬೇಕು.
ಮಣ್ಣು ತೇವವಾಗಿರುವಂತೆ ನೋಡಿಕೊಳ್ಳಬೇಕು. ಬೀನ್ಸ್ ಗಿಡಗಳಿಗೆ ಕೀಟಗಳ ಬಾದೆ ಹೆಚ್ಚಾಗಿರುತ್ತೆ ಹೀಗಾಗಿ ಸ್ವಲ್ಪ ಹೆಚ್ಚಿನ ಆರೈಕೆ ಅಗತ್ಯವಿರಲಿದೆ. ಒಂದು ವೇಳೆ ಗಿಡದಲ್ಲಿ ಕೀಟಗಳು ಕಂಡರೆ ಅಥವಾ ಎಲೆಗಳಲ್ಲಿ ರಂಧ್ರಗಳು ಕಂಡುಬಂದರೆ ಸೋಪಿನ ನೀರು ಇಲ್ಲವೆ ಸೂಕ್ತ ಕ್ರಿಮಿನಾಶಕ ಬಳಸಬೇಕು.
ಬೀನ್ಸ್ ಗಿಡಕ್ಕೆ ದಿನದಲ್ಲಿ ಸುಮಾರು 6 ಗಂಟೆಗಳ ಕಾಲ ಸೂರ್ಯನ ಬೆಳಕು ಬೀಳಬೇಕು. ಸೂರ್ಯನ ಬೆಳಕು ಬೀಳದಿದ್ದರೆ ಗಿಡ ಬಾಡುವುದು ಹಾಗೂ ಕಾಯಿ ಬಿಡದೆ ಬರಿ ಗಿಡ ಮಾತ್ರ ಬೆಳೆಯುತ್ತಾ ಹೋಗುತ್ತದೆ. ಆದರೆ ಬೀನ್ಸ್ ಗಿಡವು 1 ಅಡಿಯಿಂದ ಮೇಲೆ ಬೆಳೆದ ಬಳಿಕ ಗಿಡಕ್ಕೆ ಬಲವಾಗಿ ಕೋಲು ನೀಡಬೇಕಾಗುತ್ತದೆ. ಇಲ್ಲವೆ ಅದು ಬೆಳೆಯಲು ಏನಾದರು ಸಪೋರ್ಟ್ ನೀಡಬೇಕಾಗುತ್ತದೆ. ಹೀಗೆ ಮಾಡುವುದರಿಂದ ಗಿಡ ವೇಗವಾಗಿ ಬೆಳೆಯುತ್ತದೆ.
ಬೀನ್ಸ್ ಯಾವಾಗ ಕತ್ತರಿಸಬೇಕು?
ಬೀನ್ಸ್ ಗಿಡಗಳು 6ರಿಂದ 8 ಅಡಿಯಷ್ಟು ದೊಡ್ಡದಾಗಿ ಬೆಳೆದಾಗ ಹೂವುಗಳು ಮೂಡುತ್ತವೆ. ಇದಾಗಿ 20 ರಿಂದ 25 ದಿನದಲ್ಲಿ ಬೀನ್ಸ್ ಕತ್ತರಿಸಬಹುದು. ಬೀನ್ಸ್ ಹೆಚ್ಚು ಬೆಳೆಯಲು ಬಿಟ್ಟರೆ ಗಡಸಾಗುತ್ತದೆ, ಅದು ಎಳೆಯದ್ದಾಗಿದ್ದರೆ ಉತ್ತಮವಾಗಿರುತ್ತೆ.
ಬೀನ್ಸ್ ಉಪಯೋಗಗಳು
ಕಡಿಮೆ ಕ್ಯಾಲೋರಿಗಳು: ತಾಜಾ ಹಸಿರು ಬೀನ್ಸ್ ಗಳು ಅತಿ ಅಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು ತೂಕ ಇಳಿಸಿಕೊಳ್ಳಲು ಯತ್ನಿಸುತ್ತಿರುವ ವ್ಯಕ್ತಿಗಳಿಗೆ ಅತ್ಯಂತ ಸೂಕ್ತವಾದ ಆಹಾರವಾಗಿದೆ.
ಹೆಚ್ಚಿನ ಪ್ರಮಾಣದ ನಾರು: ಈ ಕಾಳುಗಳಲ್ಲಿ ಅತಿಹೆಚ್ಚಿನ ಪ್ರಮಾಣದ ಕರಗುವ ನಾರು ಇದ್ದು ಜೀರ್ಣಕ್ರಿಯೆಯಲ್ಲಿ ತೊಂದರೆ ಇರುವ ವ್ಯಕ್ತಿಗಳಿಗೂ ಸೂಕ್ತವಾಗಿದೆ. ಇದರ ನಾರು ಮಲಬದ್ಧತೆಯಾಗದಂತೆ ತಡೆಯುತ್ತದೆ ಹಾಗೂ ಮೂಲವ್ಯಾಧಿ ಹಾಗೂ ಕರುಳುಗಳ ಒಳಗಣ ಗಂಟುಗಳ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗಳಿಗೂ ಸುರಕ್ಷಿತವಾಗಿ ಸೇವಿಸಬಹುದಾದ ಆಹಾರವಾಗಿದೆ.



Click it and Unblock the Notifications