Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೇಸಿಗೆಯಲ್ಲಿ ದಿನಾ ಎಳನೀರು ಕುಡಿದರೆ ಏನಾಗುತ್ತೆ? ಯಾವ ಸಮಯದಲ್ಲಿ ಎಳನೀರು ಕುಡಿಯಬೇಕು?
ಈ ಬೇಸಿಗೆ ಕಾಲ ಅಂತಿಂಥ ಬೇಸಿಗೆ ಕಾಲವಲ್ಲ, ತುಂಬಾನೇ ಉರಿ ಬಿಸಿಲು, ಮನೆಯಲ್ಲಿ ವಯಸ್ಸಾದವರು ಇದ್ದರೆ ನನ್ನ ಜೀವನದಲ್ಲಿ ಇಷ್ಟು ಸೆಕೆ ಅನುಭವಿಸಿರಲಿಲ್ಲ ಎಂದು ಹೇಳುತ್ತಾರೆ. ಈ ಬೇಸಿಗೆಯಲ್ಲಿ ನೀವು ಎಳನೀರು ಕುಡಿಯುವುದು ಒಳ್ಳೆಯದು, ಎಳನೀರು ಪ್ರತಿನಿತ್ಯ ಕುಡಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳಿವೆ:

ದೇಹದಲ್ಲಿ ನೀರಿನಂಶ ಕಾಪಾಡುತ್ತದೆ
ಇದರಲ್ಲಿ ಯಾವುದೇ ರಾಸಾಯನಿಕಗಳಿರಲ್ಲ, ಆರೋಗ್ಯಕ್ಕೆ ಅಗ್ಯತವಾದ ಪೋಷಕಾಂಶಗಳು ದೊರೆಯುವುದು. ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗುತ್ತದೆ, ಎಳನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಬಹುದು. ಈ ಬಿಸಿಲಿನಲ್ಲಿ ಹೊರಗಡೆ ಹೋದಾಗ ಒಂದು ಎಳನೀರು ಕುಡಿದರೆ ಸಾಕು ಹೊಸ ಚೈತನ್ಯ ದೊರೆಯುತ್ತದೆ.
ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
ಅಜೀರ್ಣ ಸಮಸ್ಯೆ ಬೇಸಿಗೆಯಲ್ಲಿ ಹೆಚ್ಚಾಗಿ ಕಾಡುತ್ತದೆ. ಇದನ್ನು ತಡೆಗಟ್ಟಲು ಎಳನೀರು ಸಹಕಾರಿಯಾಗಿದೆ. ಮೈ ಉಷ್ಣಾಂಶ ಹೆಚ್ಚಾದಾಗ ಹೊಟ್ಟೆ ನೀವು ಉಂಟಾಗುವುದು, ಅದನ್ನು ತಡೆಗಟ್ಟಲು ಎಳನೀರು ಸಹಕಾರಿಯಾಗಿದೆ.
ದೇಹದಲ್ಲಿ ಎಲೆಕ್ಟ್ರೋಲೈಟ್ಸ್ ಕಾಪಾಡಲು ಸಹಕಾರಿ
ಎಳನೀರಿನಲ್ಲಿ ವಿಟಮಿನ್, ಖನಿಜಾಂಶಗಳು, ಎಲೆಕ್ಟ್ರೋಲೈಟ್ಸ್ ಇರುವುದರಿಂದ ದೇಹಕ್ಕೆ ಎಳನೀರು ದೊರೆಯುತ್ತದೆ, ಇದರಿಂದ ಮೈ ತುಂಬಾ ಬೆವರುವುದನ್ನು ತಡೆಗಟ್ಟಲು ಸಹಕಾರಿ. ಬೇಸಿಗೆಯಲ್ಲಿ ಸ್ವಲ್ಪ ಕೆಲಸ ಮಾಡಿದರೆ ಸುಸ್ತಾಗುತ್ತೇವೆ, ಅದನ್ನು ತಡೆಗಟ್ಟಲು ಸಹಕಾರಿ.
ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ
ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಮಲಬದ್ಧತೆ ಸಮಸ್ಯೆ ಉಂಟಾಗುವುದು, ಎಳನೀರಿನಲ್ಲಿ ನೀರು ಜೊತೆಗೆ ನಾರಿನಂಶ(soluble fiber) ಕೂಡ ಇರಲಿದೆ, ಇದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ರಕ್ತ ಸಂಚಾರ ಉತ್ತಮವಾಗಿರಲಿದೆ
ಇದರಲ್ಲಿ ಆರ್ಗೈನ್ ಎಂಬ ಅಂಶವಿದೆ, ಇದು ದೇಹದ ಎಲ್ಲಾ ಭಾಗಗಳಿಗೆ ರಕ್ತ ಸಂಚಾರ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ರಕ್ತಸಂಚಾರ ಚೆನ್ನಾಗಿದ್ದರೆ ಆರೋಗ್ಯ ವೃದ್ಧಿಗೆ ಸಹಕಾರಿ.
ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು
ಎಳನೀರಿನಲ್ಲಿ ಪೊಟಾಷ್ಯಿಯಂ ಅಧಿಕವಿರುವುದರಿಂದ ಕಿಡ್ನಿಯ ಆರೋಗ್ಯಜ್ಜೆ ಒಳ್ಳೆಯದು, ಅಲ್ಲದೆ ದೇಹದಲ್ಲಿನ ಕಶ್ಮಲ ಹೊರಹಾಕಲು ತುಂಬಾನೇ ಸಹಕಾರಿ. ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸಿದರೆ ಆರೋಗ್ಯ ಚೆನ್ನಾಗಿರಲಿದೆ.
ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ
ಮೈಯಲ್ಲಿ ಬೆವರುಕಜ್ಜಿ ಏಳುವುದು, ಉರಿಯೂತದ ಸಮಸ್ಯೆ ಈ ಬಗೆಯ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿ.
ಗರ್ಭಿಣಿಯರಿಗೆ
ಗರ್ಭಿಣಿಯರು ಪ್ರತಿದಿನ ಒಂದು ಎಲನೀರು ಕುಡಿಯುವುದು ಒಳ್ಳೆಯದು. ಇದರಿಂದ ಮಗುವಿಗೆ ಪೋಷಕಾಂಶ ದೊರೆಯುತ್ತದೆ ಹಾಗೂ ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ. ಕೆಲವರು ಶೀತವಾಗುತ್ತೆ ಎಂದು ಕುಡಿಯುವುದಿಲ್ಲ, ಎಳನೀರನ್ನು ಈ ಬೇಸಿಗೆಯಲ್ಲಿ ಪ್ರತಿದಿನ ಕುಡಿದರೆ ನಿಮಗೆ ತುಂಬಾನೇ ಒಳ್ಳೆಯದು.
ಎಳನೀರನ್ನು ಯಾವಾಗ ಕುಡಿಯಬೇಕು?
ಎಳನೀರನ್ನು ದಿನದ ಯಾವುದೇ ಸಮಯದಲ್ಲಿ ಕುಡಿಯಬಹುದು, ಆದರೆ ಅದರ ಸಂಪೂರ್ಣ ಪ್ರಯೋಜನ ಪಡೆಯಲು ನೀವು ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಮೊದಲು ಕುಡಿಯುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇದರೆಲ್ಲಾ ಪೋಷಕಾಂಶವನ್ನು ದೇಹವು ಚೆನ್ನಾಗಿ ಹೀರಿಕೊಳ್ಳುತ್ತದೆ. ಆದ್ದರಿಂದ ಎಳನೀರು ತಂದಿಟ್ಟು ತಿಂಡಿ ತಿನ್ನುವ ಮೊದಲು ಕುಡಿಯಿರಿ, ನಂತರ 20ನಿಮಿಷ ಬಿಟ್ಟು ತಿಂಡಿ ಮಾಡಿ.
ಇನ್ನು ಮಲಗುವ ಮಂಚೆ ಕುಡಿದು ಮಲಗಿದರೆ ಮಲ-ಮೂತ್ರದ ಮೂಲಕ ಕಶ್ಮಲವನ್ನು ಹೊರಹಾಕಲು ತುಂಬಾನೇ ಸಹಕಾರಿ.
ಮಧ್ಯಾಹ್ನ ಹೊತ್ತು ಕುಡಿಯುವಾಗ ಊಟಕ್ಕೆ ಮುನ್ನ ಸೇವಿಸಿ.
ಮದ್ಯ ಸೇವಿಸಿದ ಮೇಲೆ ಎಳನೀರು ಕುಡಿಯಬಾರದು:
ಮದ್ಯ ಸೇವಿಸಿದ ಬಳಿಕ ಎಳನೀರು ಕುಡಿಯುವುದರಿಂದ ತಲೆನೋವು ಉಂಟಾಗುವುದು, ವಾಂತಿ ಸಮಸ್ಯೆ ಕಂಡು ಬರುವುದು,
ಎಳನೀರನ್ನು ಚಿಕ್ಕ ಮಕ್ಕಳಿಗೂ ನೀಡಬಹುದು
6 ತಿಂಗಳ ಕಳೆದ ಮೇಲೆ ಮಗುವಿಗೂ ಸ್ವಲ್ಪ ಎಳನೀರು ಕುಡಿಸಬಹುದು, ಎಳನೀರು ಕುಡಿದರೆ ಶೀತವಾಗುತ್ತೆ ಎಂಬುವುದು ತಪ್ಪು ಕಲ್ಪನೆ. ಆದ್ದರಿಂದ ಭಯ ಪಡದೆ ಕೊಡಬಹುದು, ಮಗುವಿಗೆ ಶೀತವಾಗಿದ್ದರೆ ನಿಮ್ಮ ವೈದ್ಯರ ಸಲಹೆ ಪಡೆದು ಅವರ ಕೊಡಿ ಎಂದರೆ ಕೊಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











