Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ತಾವರೆಯ ಬೀಜ ಅಥವಾ ಮಖಾನಾ ನೀವು ಟೇಸ್ಟ್ ಮಾಡಿದ್ದೀರಾ? ಸಾಮಾನ್ಯವಾಗಿ ಸೂಪರ್ ಮರ್ಕೆಟ್‌ನಲ್ಲಿ ದೊರೆಯುತ್ತದೆ. ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದನ್ನು 7 ಸಾವಿರಕ್ಕಿಂತ ಅಧಿಕ ವರ್ಷದಿಂದಲೂ ಭಾರತದಲ್ಲಿ ಬಳಸುತ್ತಿದ್ದಾರೆ. ಭಾರತ ಮಾತ್ರವಲ್ಲ, ಜಪಾನ್, ಚೀನಾದಲ್ಲಿಯೂ ಇದನ್ನು ಬಳಸಲಾಗುವುದು.

ತಾವರೆ ಬೀಜದ ಪ್ರಯೋಜನಗಳು
ತಾವರೆ ಬೀಜದಲ್ಲಿ ಅನೇಕ ಪೋಷಕಾಂಶಗಳಿವೆ, ಇದರಲ್ಲಿ ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಅತ್ಯಧಿಕವಾಗಿದೆ. ಇದರ ಸೇವನೆಯಿಂದ ನಿದ್ದೆ ಚೆನ್ನಾಗಿ ಬರುತ್ತದೆ, ವಿಶ್ರಾಂತಿಯ ಅನುಭವ ನೀಡುತ್ತದೆ. ಅದರಲ್ಲೂ ಇದನ್ನು ಮಲಗುವ ಮುನ್ನ ಸೇವಿಸಿದರೆ ಒಳ್ಳೆಯದು. ಹಾಲಿನ ಜೊತೆ ತಾವರೆ ಬೀಜ ಸೇವಿಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ತಾವರೆ ಬೀಜವನ್ನು ಹಾಲಿನ ಜೊತೆ ಹಾಕಿ ಕುಡಿಯುವುದರಿಂದ ಈ ಪ್ರಯೋಜನಗಳಿವೆ:
ಮೈ ತೂಕ ನಿಯಂತ್ರಣ ಮಾಡುತ್ತದೆ
ತಾವರೆ ಬೀಜ ಮೈಯಲ್ಲಿರುವ ಅನಗ್ಯತ ಕೊಬ್ಬು ಕರಗಿಸುತ್ತದೆ. ದೇಹದ ಲಿಪಿಡ್ ಪ್ರೊಫೈಲ್ ಉತ್ತಮಗೊಳಿಸುತ್ತದೆ. ಆದ್ದರಿಂದ ರಾತ್ರಿ ಮಲಗುವಾಗ ಹಾಲಿನ ಜೊತೆ ತಾವರೆ ಬೀಜ ಹಾಕಿ ಕುಡಿಯುವುದು ಒಳ್ಳೆಯದು. ಇದನ್ನು ಹಾಲಿನ ಜೊತೆಗೆ ಕುಡಿದರೆ ಚೆನ್ನಾಗಿ ನಿದ್ದೆ ಬರುವುದು ಜೊತೆಗೆ ಈ ಎಲ್ಲಾ ಪ್ರಯೋಜನಗಳಿವೆ.
ಖಿನ್ನತೆ ದೂರ ಮಾಡುತ್ತದೆ
ಇದು ಸಂಶೋಧನೆಯಿಂದಲೂ ದೃಢಪಟ್ಟಿದೆ. ತಾವರೆ ಬೀಜದಲ್ಲಿ ಸಪೋನಿನ್ಸ್ ಮತ್ತು ಫ್ಲೇವೋನಾಯ್ಡ್ ಇರುವುದರಿಂದ ಖಿನ್ನತೆ ಸಮಸ್ಯೆ ದೂರ ಮಾಡಲು ಸಹಾಯ ಮಾಡುತ್ತದೆ. ಯಾರು ಖಿನ್ನತೆಯಲ್ಲಿ ಇರುತ್ತಾರೋ ಅವರು ಔಷಧಿ ಜೊತೆಗೆ ಇದನ್ನು ಸೇವಿಸುವುದು ಒಳ್ಳೆಯದು.
ರೋಗ ನಿರೋಧಕ ಶಕ್ತಿ ಹೆಚ್ಚುವುದು
ಇದರಲ್ಲಿ ಫ್ಲೇವೋನಾಯ್ಡ್ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಮಧುಮೇಹ, ಹೃದಯ ಸಂಬಂಧಿ ಸಮಸ್ಯೆ ತಡೆಗಟ್ಟಲು ಸಹಕಾರಿ.
ನೈಸರ್ಗಿಕ ನೋವು ನಿವಾರಕ
ಇದನ್ನು ಸೇವಿಸುವುದು ಮೈ ಕೈ ನೋವು ಕಡಿಮೆಯಾಗುವುದು, ಇದರಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.
ರಕ್ತದಲ್ಲಿ ಮಧುಮೇಹ ನಿಯಂತ್ರಿಸಲು ಸಹಕಾರಿ
ಕೆಲವೊಂದು ಸಂಶೋಧನೆಗಳು ಕೂಡ ಇದರ ಬಗ್ಗೆ ಹೇಳಿದೆ. ಇದರ ಬಗ್ಗೆ ಇನ್ನು ಹಲವು ಸಂಶೋಧನೆಗಳು ನಡೆಯುತ್ತಲೇ ಇದೆ. ಪ್ರಾಣಿಗಳ ಮೇಲೆ ಮಾಡಿದ ಅಧ್ಯಯನದಲ್ಲಿ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣಕ್ಕೆ ಬರುವುದು ಕಂಡು ಬಂದಿದೆ.
ಮುಖದಲ್ಲಿ ಬೇಗನೆ ನೆರಿಗೆ ಬೀಳುವುದಿಲ್ಲ
ವಯಸ್ಸಾದಂತೆ ನೆರಿಗೆ ಬೀಳುವುದು ಸಹಜ ಪ್ರಕ್ರಿಯೆ ಆದರೆ ತಾವರೆ ಬೀಜ ಬಳಸುವುದರಿಂದ ಮುಖದಲ್ಲಿ ನೆರಿಗೆ ಬೀಳುವುದು ತಡೆಗಟ್ಟಲು ಸಹಕಾರಿ, ಮುಖ ಕಾಂತಿಯುತವಾಗಿರುತ್ತದೆ, ಇದರಿಂದ ನಿಮ್ಮ ಸೌಂದರ್ಯ ಹೆಚ್ಚಾಗುವುದು.
ಈ ರೀತಿ ಕೂಡ ಪ್ರಯೋಜನಕಾರಿ:
- ಇದರಲ್ಲಿ ನಾರಿನಂಶ ಅಧಿಕವಿರುತ್ತದೆ, ಇದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು, ಇದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿ.
- ಇದರಲ್ಲಿ ಗ್ಲೈಸೆಮಿಕ್ ಇಂಡೆಕ್ಸ್ ಕಡಿಮೆ ಇರುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಅಧಿಕವಿರಲಿದೆ.
- ಮೆಗ್ನಿಷ್ಯಿಯಂ, ಪೊಟಾಷ್ಯಿಯಂ , ಸೋಡಿಯಂ , ಕ್ಯಾಲ್ಸಿಯಂ ಅಧಿಕವಿರಲಿದೆ.
- ಇದು ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು. ಆದ್ದರಿಂದ ಕಿಡ್ನಿ ಸಮಸ್ಯೆ ಇರುವವರು ಇದನ್ನು ಸ್ನ್ಯಾಕ್ಸ್ ರೀತಿ ಬಳಸಬಹುದು.
- ಪುರುಷರಿಗೆ ಮಹಿಳೆಯರಿಗೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸಲು ಸಹಕಾರಿ.
- ಒತ್ತಡ ಜೀವನಶೈಲಿ ನಡೆಸುತ್ತಿರುವವರು ಇದನ್ನು ತಿಂದರೆ ಒಳ್ಳೆಯದು. ಅತ್ಯಧಿಕ ಒತ್ತಡ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಇದನ್ನು ಸೇವಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುವುದು
- ಮೆದುಳಿನ ನರಗಳಿಗೆ ಒಳ್ಳೆಯದು, ಆದ್ದರಿಂದ ಮೆದುಳು ಚುರುಕಾಗಿ ಯೋಚಿಸುತ್ತದೆ.
- ಸಂಧಿವಾತದ ಸಮಸ್ಯೆ ಇರುವವರು ಇದನ್ನು ಸೇವಿಸುವುದು ಒಳ್ಳೆಯದು. ಮೂಳೆಗಳಲ್ಲಿನ ಸಮಸ್ಯೆಯಿಂದಾಗಿ ಸಂಧಿವಾತದ ಸಮಸ್ಯೆ ಉಂಟಾಗುವುದು. ಇದರಲ್ಲಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications