For Quick Alerts
ALLOW NOTIFICATIONS  
For Daily Alerts

ಯಾವುದೇ ವರ್ಕೌಟ್‌ ಆಗಿರಲಿ ಅದರ ಜೊತೆ ಶವಾಸನ ಮಾಡಲೇಬೇಕು ಎನ್ನುವುದು ಈ ಕಾರಣಕ್ಕೆ

|

ಶವಾಸನ ಈ ಆಸನ ಪ್ರತಿಯೊಬ್ಬರು ಮಾಡುತ್ತಾರೆ, ಆದರೆ ಅದರ ತಾವು ಮಾಡುತ್ತಿರುವುದು ಶವಾಸನ ಎಂದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ, ಹೌದು ಸುಸ್ತಾಗಿ ಬಂದಾಗ ನಾವು ಡಬ್‌ ಅಂತ ಹಾಸಿಗೆ ಮೇಲೆ ಬಿದ್ದು ರಿಲ್ಯಾಕ್ಸ್‌ ಆಗುತ್ತೇವೆ, ಅಂಗಾತ ಮಲಗಿ ಕೈ-ಕಾಲುಗಳನ್ನು ಮಡಚದೆ ಹಾಗೇ (ಚಿತ್ರದಲ್ಲಿ ತೋರಿಸಿದಂತೆ) ರಿಲ್ಯಾಕ್ಸ್‌ ಆದಾಗ ತುಂಬಾನೇ ಹಿತ ಅನಿಸುವುದು ಅಲ್ವಾ? ಒಂದು ಐದು ನಿಮಿಷ ಹಾಗೇ ಮಲಗಿದರೆ ಸಾಕು ಮತ್ತೆ ಜೋಶ್ ಮೂಡುವುದು ಅಲ್ವಾ? ಈ ಶವಾಸನ ಯೋಗದಲ್ಲಿ ಬಹುಮುಖ್ಯವಾದ ವಿಶ್ರಾಂತಿಯ ಭಂಗಿಯಾಗಿದೆ.

Shavasana

ಪ್ರತಿಯೊಂದು ಆಸನದ ಬಳಿಕ ಶವಾಸನ ಮಾಡುವುದು ಯೋಗದ ನಿಯಮವಾಗಿದೆ.

ಯೋಗ ಮಾತ್ರವಲ್ಲ ನೀವು ಯಾವುದೇ ವರ್ಕೌಟ್‌ ಮಾಡಿದ ಬಳಿಕ ಶವಾಸನ ಮಾಡಿದರೆ ಅದರ ಸಂಪೂರ್ಣ ಪ್ರಯೋಜನ ಪಡೆಯಬಹುದು. ನೀವು ವಿಶ್ರಾಂತಿ ಪಡೆಯದೆ ವರ್ಕೌಟ್ ಅಥವಾ ಯೋಗಾಸನ ಮಾಡಿದರೆ ಅದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಿಲ್ಲ.

ನೀವು ವಾಕ್, ಜಾಗಿಂಗ್, ಜಿಮ್‌ ವರ್ಕೌಟ್‌, ಯೋಗ ಹೀಗೆ ಯಾವುದೇ ವರ್ಕೌಟ್‌ ಮಾಡಿ ಆದರೆ ಅದರ ಸಂಪೂರ್ಣ ಪ್ರಯೋಜನ ಸಿಗಬೇಕೆಂದರೆ ಶವಾಸನ ಮಾಡಲೇಬೇಕು. ಶವಾಸನದಿಂದ ಅಷ್ಟೊಂದು ಪ್ರಯೋಜನವಿದೆಯೇ ನೋಡೋಣ ಬನ್ನಿ:

ದೈಹಿಕ ಮತ್ತು ಮಾನಸಿಕ ಒತ್ತಡ ಹೊರ ಹಾಕಲು ಸಹಾಯ ಮಾಡುತ್ತೆ

ದೈಹಿಕ ಮತ್ತು ಮಾನಸಿಕ ಒತ್ತಡ ಹೊರ ಹಾಕಲು ಸಹಾಯ ಮಾಡುತ್ತೆ

ನೀವು ಸೂರ್ಯ ನಮಸ್ಕಾರ ಮಾಡಿದ ಬಳಿಕ ಅಥವಾ ಸೈಕ್ಲಿಂಗ್‌, ಇತರ ವ್ಯಾಯಾಮ ಮಾಡಿದಾಗ ಹೃದಯ ವೇಗವಾಗಿ ಬಡೆದುಕೊಳ್ಳುತ್ತದೆ, ದೇಹ ಬೆವರುತ್ತೆ. ಇವೆಲ್ಲಾ ದೇಹದ ಮೇಲೆ ಒತ್ತಡ ಬೀರುತ್ತೆ, ಆದರೆ ಅದಾದ ಬಳಿಕ ನೀವು ಶವಾಸನ ಮಾಡಿದಾಗ ಮನಸ್ಸು ಮತ್ತು ದೇಹಕ್ಕೆ ತುಂಬಾ ರಿಲ್ಯಾಕ್ಸ್ ಆಗುತ್ತೆ.

ಬರೀ ವಿಶ್ರಾಂತಿಯಷ್ಟೇ ಅಲ್ಲ, ಶವಾಸನದಲ್ಲಿ ಧ್ಯಾನ ಅಭ್ಯಾಸ ಮಾಡುವುದರಿಂದ ವ್ಯಾಯಾಮದ ಬಳಿಕ ದೇಹದ ಅಂಗಾಂಗಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ. ಹೀಗೆ ಮಾಡುವುದರಿಂದ ರಕ್ತದೊತ್ತಡ ಕಡಿಮೆಯಾಗುವುದು, ರೋಗ ನಿರೋಧಕ ಶಕ್ತಿ ಹೆಚ್ಚುವುದು, ಶ್ವಾಸಕೋಶದ ಆರೋಗ್ಯಕ್ಕೂ ಒಳ್ಳೆಯದು.

ದಿನಾ ವ್ಯಾಯಾಮ ಮಾಡಲು ಪ್ರೇರೇಪಿಸುವುದು

ದಿನಾ ವ್ಯಾಯಾಮ ಮಾಡಲು ಪ್ರೇರೇಪಿಸುವುದು

ನಾವು ದಿನಾ ವ್ಯಾಯಾಮ ಮಾಡಬೇಕೆಂದು ಬಯಸುತ್ತೇವೆ, ಆದರೆ ಮನಸ್ಸು ಹಿಂದೇಟು ಹಾಕುತ್ತದೆ, ಅದೇ ಶವಾಸನ ಅಭ್ಯಾಸ ಮಾಡಿದರೆ ನಿಮಗೆ ವ್ಯಾಯಾಮ ತುಂಬಾ ಕಠಿಣ ಅನಿಸುವುದಿಲ್ಲ. ವ್ಯಾಯಾಮದ ಬಳಿಕ ಮನಸ್ಸು ಹಾಗೂ ದೇಹ ರಿಲ್ಯಾಕ್ಸ್‌ ಆಗುವುದು. ಆಗ ಪ್ರತಿನಿತ್ಯ ವ್ಯಾಯಾಮ ಮಾಡಬೇಕೆಂಬ ಜೋಶ್‌ ಉಂಟಾಗುವುದು,

ಹೆಚ್ಚು ವ್ಯಾಯಾಮ ಮಾಡಲು ಸಹಕಾರಿ

ಹೆಚ್ಚು ವ್ಯಾಯಾಮ ಮಾಡಲು ಸಹಕಾರಿ

ನೀವು ವರ್ಕೌಟ್ ಮಧ್ಯ-ಮಧ್ಯ ಆಗಾಗ ಶವಾಸನದಲ್ಲಿ ಮಲಗಿ ವಿಶ್ರಾಂತಿ ಪಡೆದು ವ್ಯಾಯಾಮ ಮಾಡುವುದಕ್ಕೂ , ವಿಶ್ರಾಂತಿಯಿಲ್ಲದೆ ವ್ಯಾಯಾಮ ಮಾಡುವುದಕ್ಕೂ ವ್ಯತ್ಯಾಸವಿದೆ. ವಿಶ್ರಾಂತಿ ಪಡೆಯದೆ ವ್ಯಾಯಾಮ ಮಾಡಿದರೆ ನಿಮಗೆ ಬೇಗನೆ ಸುಸ್ತಾಗುತ್ತದೆ ಆಗ ತುಂಬಾ ಹೊತ್ತು ವರ್ಕೌಟ್‌ ಮಾಡಲು ಸಾಧ್ಯಾಗುವುದಿಲ್ಲ, ಅಷ್ಟು ಮಾತ್ರವಲ್ಲ ವರ್ಕೌಟ್‌ ಮಾಡಿದ ಬಳಿಕ ತುಂಬಾ ಸುಸ್ತು ಅನಿಸಿ ಆ ದಿನ ಬೇರೆ ಕೆಲಸದ ಕಡೆ ಗಮನ ಕೊಡಲು ಸಾಧ್ಯವಾಗದೇ ಇರಬಹುದು.

ವರ್ಕೌಟ್ ನಮ್ಮ ದೇಹ ಹಾಗೂ ಮನಸ್ಸನ್ನು ರಿಫ್ರೆಷ್ ಮಾಡುವಂತೆ ಇರಬೇಕು, ಅದಕ್ಕೆ ಈ ಶವಾಸನ ಬೆಸ್ಟ್.

English summary

Shavasana: Health Benefits, Variation and How to do in Kannada

Shavasana: Health Benefits, Variation and How to do in Kannada, Read on....
X
Desktop Bottom Promotion