Just In
Don't Miss
- News
ಪಿಎಸ್ಐ ಹಗರಣ: ಬೊಮ್ಮಾಯಿ ರಾಜೀನಾಮೆಗೆ ರಾಹುಲ್ ಗಾಂಧಿ ಒತ್ತಾಯ
- Technology
ಶಿಯೋಮಿಯಿಂದ ಮತ್ತೆ ಹೊಸ ಸ್ಮಾರ್ಟ್ಬ್ಯಾಂಡ್ ಲಾಂಚ್; ಇದರ ಫೀಚರ್ಸ್ ಏನು?
- Automobiles
ಭಾರತದಲ್ಲಿ ಹೊಸ ಡುಕಾಟಿ ಸ್ಟ್ರೀಟ್ಫೈಟರ್ ವಿ4 ಎಸ್ಪಿ ಬೈಕ್ ಬಿಡುಗಡೆ
- Education
Mysore University Recruitment 2022 : ಜ್ಯೂನಿಯರ್ ರಿಸರ್ಚ್ ಫೆಲೋ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
IND vs ENG 5ನೇ ಟೆಸ್ಟ್: 'ಚೀರಿಯೋ ವಿರಾಟ್'; ಇಂಗ್ಲೆಂಡ್ ಪ್ರೇಕ್ಷಕರಿಂದ ಕೊಹ್ಲಿಗೆ ಅವಮಾನ
- Finance
ಷೇರು ಪೇಟೆ ಶುಭಾರಂಭ: ಮತ್ತೆ ಎಲ್ಐಸಿ ಸ್ಟಾಕ್ ಜಿಗಿತ
- Movies
HR ಆಗಿ ಕೆಲಸ ಮಾಡಿದ್ದ ಪವಿತ್ರಾ ಲೋಕೇಶ್: ಹೀರೊಯಿನ್ ಆಗಲಿಲ್ಲ ಯಾಕೆ?
- Travel
ಪಶ್ಚಿಮಘಟ್ಟಗಳಲ್ಲಿ ಮಾನ್ಸೂನ್ ನಲ್ಲಿ ಅನ್ವೇಷಿಸಬಹುದಾದ ಸ್ಥಳಗಳು
ಯೋಗ Vs ಜಿಮ್: ಎರಡರಲ್ಲಿ ಯಾವುದು ಒಳ್ಳೆಯದು?
ಯೋಗ ಮತ್ತು ಜಿಮ್ ಎರಡೂ ಕೂಡ ವ್ಯಾಯಾಮದ ವಿಧಗಳು. ಎರಡೂ ಕೂಡ ಆರೋಗ್ಯಕ್ಕೆ ಒಳ್ಳೆಯದು, ಯೋಗ ಮಾಡಿದರೂ ಮೈ ತೂಕ ಕಡಿಮೆಯಾಗುತ್ತೆ, ಜಿಮ್ ಮಾಡಿದರೆ ಸ್ನಾಯಗಳು ಬಲವಾಗುತ್ತೆ, ಜಿಮ್ ಮಾಡಿದರೂ ಸ್ನಾಯುಗಳು ಬಲವಾಗುತ್ತೆ. ಆದರೆ ಇವೆರಡರಲ್ಲಿ ಯಾವುದು ಒಳ್ಳೆಯದು? ಎಂದು ತುಂಬಾ ಜನ ಕೇಳುತ್ತಾರೆ.
ಯೋಗ ಮತ್ತು ಜಿಮ್ ಎರಡರಲ್ಲಿ ನಿಮಗೆ ಯಾವುದು ಒಳ್ಳೆಯದು ಎಂದು ನೀವು ತೀರ್ಮಾನಿಸುವ ಮುನ್ನ ಇವೆರಡರ ನಡುವೆ ಇರುವ ವ್ಯತ್ಯಾಸಗಳು, ಪ್ರಯೋಜನಗಳು ಇವುಗಳ ಬಗ್ಗೆ ತಿಳಿಯೋಣ:

ಯೋಗ ಅಭ್ಯಾಸಕ್ಕೆ ಬೆಂಬಲ ಸಿಗುವುದು
ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿದೆ. ಯೋಗ ಪ್ರತಿನೊತ್ಯ ಅಭ್ಯಾಸ ಮಾಡುವವರಿಗೂ ಯೋಗ ಅಭ್ಯಾಸ ಮಾಡದೇ ಇರುವವರಿಗೂ ಆರೋಗ್ಯದಲ್ಲಿ, ಲುಕ್‌ನಲ್ಲಿ ತುಂಬಾನೇ ವ್ಯತ್ಯಾಸವಿರುತ್ತದೆ. ಯಾರು ಪ್ರತಿನಿತ್ಯ ಯೋಗ ಮಾಡುತ್ತಾರೋ ಅವರ ದೇಹದಲ್ಲಿ ಪ್ಲಕ್ಸಿಬಿಲಿಟಿ ಹೆಚ್ಚಿರುತ್ತದೆ, ಇನ್ನು ವಯಸ್ಸಾದರೂ ಮುಖ ಫ್ರೆಷ್ ಆಗಿರುತ್ತೆ ಜೊತೆ ಯೋಗ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನೂ ತಡೆಯಬಹುದಾಗಿದೆ.
ಯೋಗ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸುವುದು.

ಜಿಮ್
ಜಿಮ್ ಎಂಬುವುದು ಮೈ ಕಸರತ್ತಿನ ವ್ಯಾಯಾಮವಾಗಿದೆ. ನೀವು ಬಾಡಿ ಬಿಲ್ಡ್ ಮಾಡಬೇಕೆಂದರೆ ಜಿಮ್ ಒಳ್ಳೆಯದು. ಜಿಮ್ ವ್ಯಾಯಾಮವನ್ನು ಮಾಡಲು ಅನೇಕ ಸಾಧನಗಳು ಬೇಕು, ಅಲ್ಲದೆ ಟ್ರೈನರ್ ಬೇಕು ಹಾಗಾಗಿ ಜಿಮ್‌ಗೆ ಹೋಗಿ ವರ್ಕೌಟ್ ಮಾಡಬೇಕು. ಜಿಮ್ ಮಾಡುವುದರಿಂದ ಸ್ನಾಯುಗಳ ಮೇಲೆ ಒತ್ತಡ ಬೀರುತ್ತದೆ. ನಿಮಗೆ ಸಿಕ್ಸ್ ಪ್ಯಾಕ್ ಬೇಕು ಅಂದರೆ ಜಿಮ್ ಬೆಸ್ಟ್.
ಇನ್ನು ಜಿಮ್ ಮಾಡಿದಾಗ ದೇಹ ಬೇಗ ಬಳುತ್ತದೆ, ಜಿಮ್ ಮಾಡುವುದರಿಂದ ದೈಹಿಕ ಆರೋಗ್ಯ ಮಾತ್ರ ಹೆಚ್ಚುವುದು.

ಯೋಗ ಜಿಮ್‌ಗಿಂತ ಹೇಗೆ ಭಿನ್ನ?
* ಯೋಗ ಅಭ್ಯಾಸ ಮಾಡಲು ನಿಮಗೆ ಒಂದು ಯೋಗ ಮ್ಯಾಟ್ ಅಥವಾ ಚಾಪೆ ಸಾಕು, ಸ್ಥಳಾವಕಾಶ ಕೂಡ ಹೆಚ್ಚು ಬೇಕಾಗಿಲ್ಲ, ಯೋಗ ಭಂಗಿಗಳನ್ನು ಕಲಿತರೆ ಮನೆಯಲ್ಲಿಯೇ ಮಾಡಬಹುದು. ಆದರೆ ಜಿಮ್ ಅನ್ನು ಮನೆಯಲ್ಲಿ ಮಾಡುವುದು ಕಷ್ಟ, ಏಕೆಂದರೆ ತುಂಬಾ ಸ್ಥಳಾವಾಕಾಶ ಹಾಗೂ ಸಾಧನಗಳು ಬೇಕಾಗುತ್ತದೆ. ಇನ್ನು ಯಾವುದಾದರೂ ವರ್ಕೌಟ್ ಮಾಡಬೇಕೆಂದರೆ ಟ್ರೈನರ್ ಬೇಕು. ಹೀಗೆ ನೋಡಿದರೆ ಜಿಮ್ ದುಬಾರಿಯಾಗುವುದು.
* ಯೋಗ ನಿಮ್ಮ ದೇಹದ ಒಳ ಭಾಗದ ಅಂಗಾಂಗಗಳಿಗೂ ಒಳ್ಳೆಯದು. ಯೋಗ ಮಾಡುವುದರಿಂದ ದೇಹದ ನರ-ನಾಡಿಗಳು ಪ್ರಯೋಜವನ್ನು ಪಡೆಯುತ್ತದೆ. ಜಿಮ್ ಮಾಡುವುದರಿಂದ ಸ್ನಾಯುಗಳು ಬಲವಾಗುವುದು.
* ಯೋಗದಿಂದ ಮಾನಸಿಕ ಆರೋಗ್ಯ ಹೆಚ್ಚುತ್ತೆ. ಜಿಮ್ ಮಾಡಿದರೆ ದೇಹಕ್ಕಷ್ಟೇ ಪ್ರಯೋಜನ. ನೀವು ತುಂಬಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆ ಜಿಮ್ ಮಾಡುವುದರಿಂದ ಅದನ್ನು ಹೊರ ಹಾಕಲು ಸಾಧ್ಯವಿಲ್ಲ, ಬದಲಿಗೆ ಪ್ರಾನಯಾಮ ಮಾಡಬೇಕು. ಆದ್ದರಿಂದ ಯೋಗದಿಂದ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯ ಹೆಚ್ಚುವುದು.
* ಯೋಗಕ್ಕೆ ಧಾರ್ಮಿಕ ನಂಬಿಕೆಗಳಿಗೆ ಸಂಬಂಧವಿದೆ. ಯೋಗದಲ್ಲಿ ಪ್ರತಿಯೊಂದು ಆಸನ ಮಾಡುವಾಗ ಒಂದೊಂದು ಮಂತ್ರವಿದೆ. ಸುರ್ಯ ನಮಸ್ಕಾರ ಮಾಡುವಾಗ ಪಠಿಸಲು ಮಂತ್ರಗಳಿವೆ. ಯೋಗದಲ್ಲಿ ಒಂಕಾರ ಉಚ್ಛಾರಣೆ ಮಾಡಲಾಗುವುದು. ಯೋಗ ಪ್ರಾರಂಭಿಸುವ ಮುನ್ನ,ಮುಗಿಸುವ ಮುನ್ನ ಪ್ರಾರ್ಥನೆ ಮಾಡಲಾಗುವುದು. ಜಿಮ್‌ನಲ್ಲಿ ಇಂಥ ಯಾವುದೇ ಸಂಪ್ರದಾಯವಿರಲ್ಲ.
* ಯೋಗಕ್ಕೆ ಏನಾದರೂ ಕಾಯಿಲೆಯಿದ್ದರೆ ಅದನ್ನು ಗುಣಪಡಿಸುವ ಶಕ್ತಿ ಇದೆ, ಉದಾಹರಣೆಗೆ ನಿಮಗೆ ತುಂಬಾ ತಲೆನೋವು ಇದ್ದರೆ ಕೆಲವೊಂದು ಯೋಗ ಭಂಗಿಗಳನ್ನು ಮಾಡಿದರೆ ಸಾಕು ಕಡಿಮೆಯಾಗುವುದು. ರಾತ್ರಿ ನಿದ್ದೆ ಬರುತ್ತಿಲ್ಲ ಅದಕ್ಕೂ ಕೆಲವೊಂದು ಉಸಿರಾಟದ ಬಗೆ ಇದೆ ಅದನ್ನು ಅಭ್ಯಾಸ ಮಾಡಿದರೆ ನಿದ್ದೆ ಬರುತ್ತೆ. ತುಂಬಾ ಸ್ಟ್ರೆಸ್ ಪ್ರಾಣಯಾಮ ಮಾಡಿದರೆ ಸಾಕು ಕಡಿಮೆಯಾಗುವುದು.
* ಆದರೆ ಜಿಮ್‌ನಲ್ಲಿ ಮೈಕಟ್ಟಿನ ಕಡೆ ಹೆಚ್ಚಿನ ಗಮನ ನೀಡಲಾಗುವುದು, ಹೊಟ್ಟೆ ಕರಗಬೇಕು, ಮಸಲ್ ಬಿಲ್ಡ್ ಆಗಬೇಕು ಈ ರೀತಿಯಷ್ಟೇ ಗಮನ ನೀಡಲಾಗುವುದು.

ಎರಡರಲ್ಲಿ ಯಾವುದು ಒಳ್ಳೆಯದು?
ಯೋಗ ಮತ್ತು ಜಿಮ್‌ನಲ್ಲಿ ಯಾವುದು ಒಳ್ಳೆಯದು ಎಂಬುವುದು ನಿಮ್ಮ ಅವಶ್ಯಕತೆಗೆ ತಕ್ಕಂತೆ ಆಯ್ಕೆ ಮಾಡಬಹುದು. ಯಾರು ಮಸಲ್ ಬಿಲ್ಡ್ ಮಾಡಲು ಬಯಸುತ್ತಾರೋ ಅವರು ಜಿಮ್‌ಗೆ ಹೋಗಲೇಬೇಕು. ಜಿಮ್ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಯೋಗವನ್ನೂ ಅಭ್ಯಾಸ ಮಾಡಿದರೆ ಒಳ್ಳೆಯದು.