For Quick Alerts
ALLOW NOTIFICATIONS  
For Daily Alerts

Yoga Day 2022: ಏಕಾಗ್ರತೆ ಹೆಚ್ಚಲು ಈ ಸಿಂಪಲ್‌ ಸಲಹೆಗಳನ್ನು ಟ್ರೈ ಮಾಡಿ ನೋಡಿ

|

ಇದು ಮೊಬೈಲ್ ಯುಗ. ಎಲ್ಲವೂ ಸೆಕೆಂಡ್‌ಗಳಲ್ಲಿ ನಡೆಯಬೇಕು ಎನ್ನುವ ಮನಸ್ಥಿತಿ. ಅಷ್ಟೇ ಅಲ್ಲ, ಇಂತಹ ಮನಸ್ಥಿತಿಯಿಂದ ನಮ್ಮ ಏಕಾಗ್ರತೆಯ ಮಟ್ಟವೂ ಸಹ ಸೆಕೆಂಡ್‌ಗಳಿಗೆ ಬಂದು ನಿಂತಿದೆ. ಇದರಿಂದ ಯಾವುದೇ ಕೆಲಸಕ್ಕೆ ಕುಳಿತರೂ, ಅರೆಕ್ಷಣದಲ್ಲಿ ನಮ್ಮ ಗಮನ ಬೇರೆ ಕಡೆ ಸಾಗಿ, ಮತ್ತೆ ಅ ಕೆಲಸಕ್ಕೆ ಮರಳುವಷ್ಟರಲ್ಲಿ ಸಾಕಷ್ಟು ಸಮಯ ವ್ಯರ್ಥವಾಗಿರುತ್ತದೆ. ಇದಕ್ಕೆ ಕಾರಣ ನಿಮಗಿರುವ ಏಕಾಗ್ರತೆಯ ಕೊರತೆ. ಇದರಿಂದಲೇ ನೀವು ಎಲ್ಲಾ ಕಾರ್ಯವನ್ನು ಮುಂದೂತ್ತಲೇ ಬರುವುದು ಕೂಡ. ಆದ್ದರಿಂದ ಈ ಸಮಸ್ಯೆಯನ್ನು ಮೊದಲ ಸರಿಪಡಿಸಿಕೊಂಡು, ಏಕಾಗ್ರತೆಯಿಂದ ಕೆಲಸ ಮಾಡುವುದನ್ನು ಕಲಿಯಬೇಕು. ಅದಕ್ಕಾಗಿ ನಾವಿಂದು ಏಕಾಗ್ರತೆ ಹೆಚ್ಚಿಸುವ ಕೆಲವೊಂದು ತಂತ್ರಗಳನ್ನು ತಿಳಿಸಿದ್ದೇವೆ.

13

1. ನಿಮ್ಮ ಕೆಲಸವನ್ನು ವಿಭಜಿಸಿ

1. ನಿಮ್ಮ ಕೆಲಸವನ್ನು ವಿಭಜಿಸಿ

ಮೊದಲಿಗೆ ನೀವು ಒಂದು ದಿನದಲ್ಲಿ ಮಾಡಬೇಕಾದ ಕೆಲಸಗಳ ಬಗ್ಗೆ ಪಟ್ಟಿ ಮಾಡಿ, ಅದನ್ನು ವಿಭಜಿಸಿ. ಮೊದಲಿಗೆ ಯಾವ ಕೆಲಸ ಮಾಡಬೇಕು? ಯಾವ ಕೆಲಸ ಮುಖ್ಯವಾಗಿ ಮಾಡಬೇಕು ಎಂಬುದನ್ನು ಆಯ್ಕೆ ಮಾಡಿ. ಇದು ನಿಮ್ಮ ಆ ಕೆಲಸಗಳ ಮೇಲೆ ಗಮನ ನೀಡಲು ಸಹಾಯ ಮಾಡುವುದಲ್ಲದೇ, ಎಲ್ಲವನ್ನೂ ಪೂರ್ಣಗೊಳಿಸಬೇಕು ಎಂಬ ಮನಸ್ಥಿತಿಯೂ ಬರುವುದು. ಇದರಿಂದ ಕೆಲಸದ ಹೊರೆಯೂ ಹೆಚ್ಚಾಗುವುದಿಲ್ಲ. ಕಾಲಕಾಲಕ್ಕೆ ಎಲ್ಲಾ ಕೆಲಸವನ್ನು ಏಕಾಗ್ರತೆಯಿಂದ ಮಾಡಲು ಸಹಾಯವಾಗುವುದು.

2. ಒಂದು ಲಿಸ್ಟ್ ಮಾಡಿ

2. ಒಂದು ಲಿಸ್ಟ್ ಮಾಡಿ

ನೀವು ಇಲ್ಲಿ ಒಂದು ದಿನದಲ್ಲಿ ಮಾಡಬೇಕಾದ ಕೆಲಸದ ಪಟ್ಟಿಯನ್ನು ಮಾಡಬೇಕಾಗಿಲ್ಲ, ಬದಲಿಗೆ ಮಾಡಬಾರದ ಕೆಲಸದ ಪಟ್ಟಿಯನ್ನು ಮಾಡಿ. ಕೆಲವರು ತಮ್ಮ ಫೋನನ್ನು ಆಗಾಗ ಪರಿಶೀಲಿಸುವ ಅಭ್ಯಾಸ ಹೊಂದಿರುತ್ತಾರೆ. ಇದು ನಿಮ್ಮ ಗಮನವನ್ನು ಬೇರೆಡೆ ಕೊಂಡೊಯ್ಯುವ ಪ್ರಮುಖ ಅಭ್ಯಾಸಗಳಲ್ಲಿ ಒಂದು. ಆದ್ದರಿಂದ ಇಂತಹ ಅಭ್ಯಾಸಗಳನ್ನು ಪಟ್ಟಿ ಮಾಡಿ. ಅವುಗಳನ್ನು ಆದಷ್ಟು ದೂರವಿಡಲು ಪ್ರಯತ್ನಿಸಿ. ಇದು ನಿಮಗೆ ಏಕಾಗ್ರತೆಯನ್ನ ಒಂದೇ ಕೆಲಸದಲ್ಲಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.

4. ಏಕಾಗ್ರತೆ ಹೆಚ್ಚಿಸುವ ವ್ಯಾಯಾಮ ಮಾಡಿ

4. ಏಕಾಗ್ರತೆ ಹೆಚ್ಚಿಸುವ ವ್ಯಾಯಾಮ ಮಾಡಿ

ಸುಡೋಕು, ಒಗಟುಗಳು ಈ ಹಿಂದೆ ನಮ್ಮ ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತಿದ್ದ ಆಟಗಳಾಗಿವೆ. ಆದ್ರೆ ಈಗಿನ ಇನ್‌ಸ್ಟಾ ರೀಲ್‌ಗಳು ಮತ್ತು ಯೂಟ್ಯೂಬ್ ವೀಡಿಯೊಗಳ ಇವುಗಳ ಮಹತ್ವವನ್ನು ಕಸಿದು ಬಿಟ್ಟಿವೆ ಎಂದರೆ ತಪ್ಪಾಗಲ್ಲ. ಆದರೆ, ನಿಮ್ಮ ಏಕಾಗ್ರತೆ ಹೆಚ್ಚಾಗಲು ಇಂತಹ ವ್ಯಾಯಾಮಗಳನ್ನು ಮಾಡುವುದು ಬಹಳ ಮುಖ್ಯ. ಇದು ನಿಮ್ಮ ಕುಂದುತ್ತಿರುವ ಏಕಾಗ್ರತೆಯ ಮಟ್ಟವನ್ನು ಮತ್ತೆ ಮೇಲೆತ್ತುವುದು. ಉದಾಹರಣೆಗೆ, 100 ರಿಂದ 1 ರವರೆಗೆ ಎಣಿಸಿ, ಪ್ರತಿ ಮೂರನೇ ಸಂಖ್ಯೆಯನ್ನು ಬಿಟ್ಟುಬಿಡಿ. ಇದು ತುಂಬಾ ಕಷ್ಟಕರವಾಗಿದ್ದು, ಹೆಚ್ಚಿನ ಏಕಾಗ್ರತೆಯ ಅಗತ್ಯವಿರುತ್ತದೆ.

ಪುಸ್ತಕವನ್ನು ಓದಿ

ಪುಸ್ತಕವನ್ನು ಓದಿ

ಈ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ, ನಮ್ಮ ಗಮನವನ್ನು ಒಂದು ಕಡೆ ಹೆಚ್ಚು ಕಾಲ ನೀಡುವುದು ಬಹಳ ಕಷ್ಟ. ಏಕೆಂದರೆ, ಎಲ್ಲವೂ ಇನ್ಸಾ ರೀಲ್ಸ್ ರೀತಿ ಬಹಳ ಬೇಗನೇ ಹೋಗಬೇಕು ಎಂಬ ಮನಸ್ಥಿತಿ ಬಂದು ಬಿಟ್ಟಿದೆ. ಇದ್ರಿಂದ ಕೇವಲ ಮೇಲ್ಮೈ ಮಟ್ಟದ ಜ್ಞಾನ ಸಿಗುತ್ತಿದೆ ಎಂಬುದು ಮಾತ್ರ ಯಾರಿಗೂ ಅರ್ಥವಾಗುತ್ತಿಲ್ಲ. ಆದರೆ, ನಿಮ್ಮ ಏಕಾಗ್ರತೆ ಹೆಚ್ಚಿಸಲು ಪುಸ್ತಕವನ್ನ ಓದುವುದು ಒಂದೊಳ್ಳೆ ಆಯ್ಕೆ. ಇದು ನಿಮ್ಮ ಕಾನ್ಸೇಂಟ್ರೇಶನ್ ಹೆಚ್ಚು ಮಾಡುವುದಲ್ಲದೇ, ಆಳವಾದ ಜ್ಞಾನವನ್ನು ನೀಡುವುದು.

5. ಧ್ಯಾನ

5. ಧ್ಯಾನ

ಧ್ಯಾನವು ನಿಮ್ಮಲ್ಲಿರುವ ಎಲ್ಲಾ ಗೊಂದಲಗಳನ್ನು ನಿವಾರಣೆ ಮಾಡಿ, ಮನಸ್ಸನ್ನು ನಿರಾಳ ಮಾಡುವಲ್ಲಿ ಪ್ರಮುಖ ಕಾರ್ಯ ಮಾಡುವುದು. ಅಷ್ಟೇ ಅಲ್ಲ, ಏಕಾಗ್ರತೆ ಹೆಚ್ಚಿಸುವಲ್ಲಿ, ಧ್ಯಾನ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವುದು ಎಂದು ಸಂಶೋಧನೆ ತಿಳಿಸಿದೆ. ಹೀಗಾಗಿ, ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಕೇವಲ 15 ನಿಮಿಷಗಳನ್ನು ಧ್ಯಾನಕ್ಕಾಗಿ ಮೀಸಲಿಡಿ, ಹಾಗೂ ಮನಸ್ಸಿನ ಎಲ್ಲಾ ಕಸಗಳನ್ನು ಹೊರಹಾಕಿ.

6. ಗಮನವಿಟ್ಟು ಕೇಳುವ ವ್ಯಕ್ತಿಗಳಾಗಿ

6. ಗಮನವಿಟ್ಟು ಕೇಳುವ ವ್ಯಕ್ತಿಗಳಾಗಿ

ಹೌದು, ನಿಮ್ಮ ಏಕಾಗ್ರತೆ ಹೆಚ್ಚಿಸಲು ಮೊದಲು ನೀವು ಯಾರಾದರೂ ಮಾತನಾಡುವಾಗ ಅಥವಾ ಯಾವುದೇ ವಿಚಾರಗಳನ್ನು ಗಮನವಿಟ್ಟು ಕೇಳುವ ವ್ಯಕ್ತಿಗಳಾಗಬೇಕು. ಯಾರಾದರೂ ನಿಮ್ಮೊಂದಿಗೆ ಮಾತನಾಡುವಾಗ, ನಿಮ್ಮ ಮನಸ್ಸಿನಲ್ಲಿ ಯಾವುದೇ ಇತರ ಆಲೋಚನೆಗಳನ್ನು ಪ್ರವೇಶಿಸಲು ಬಿಡದೆ ನಿಮ್ಮ ಗಮನವನ್ನು ಅವನ / ಅವಳ ಮೇಲೆ ಕೇಂದ್ರೀಕರಿಸಿ. ಇದರಿಂದ ನಿಮ್ಮ ಏಕಾಗ್ರತೆಯನ್ನು ಹೆಚ್ಚಿಸಬಹುದು.

ಏಕಾಗ್ರತೆಯನ್ನು ಹೆಚ್ಚಿಸಲು ನೀವು ಮಾಡಬಹುದಾದ ಹಲವಾರು ವ್ಯಾಯಾಮಗಳಲ್ಲಿ ಇವು ಮುಖ್ಯವಾಗಿದೆ. ಇವುಗಳನ್ನು ಹೊರತುಪಡಿಸಿ, ನಿಮ್ಮ ದೈನಂದಿನ ದಿನಚರಿಯಲ್ಲಿ ಸಾಕಷ್ಟು ದೈಹಿಕ ಚಟುವಟಿಕೆಯನ್ನು ಸೇರಿಸಿ. ಇದು ನಿಮ್ಮ ದೇಹ ಮತ್ತು ನಿಮ್ಮ ಮನಸ್ಸಿಗೆ ಇದು ಒಳ್ಳೆಯದು.

English summary

Exercises To Improve Concentration in Kannada

Here we talking about Exercises To Improve Concentration in Kannada, read on
Story first published: Tuesday, June 21, 2022, 12:42 [IST]
X
Desktop Bottom Promotion