For Quick Alerts
ALLOW NOTIFICATIONS  
For Daily Alerts

Yoga Day 2022: ಯೋಗ ಮಾಡುವ ಮೊದಲು ಹಾಗೂ ನಂತರ ಅನುಸರಿಸಬೇಕಾದ ಸಲಹೆಗಳು

|

ಪ್ರತಿ ವರ್ಷ ಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತದೆ. ಯೋಗ ಭಾರತದಲ್ಲಿ 5,000 ವರ್ಷಗಳ ಹಿಂದೆ ಪ್ರಾರಂಭವಾದ ಪುರಾತನ ಅಭ್ಯಾಸವಾಗಿದ್ದರೂ, ಅತಿ ಹೆಚ್ಚು ಪ್ರಚಲಿತಕ್ಕೆ ಇತ್ತೀಚಿನ ವರ್ಷಗಳಲ್ಲೇ ಎನ್ನಬಹುದು. ಯೋಗವು ದೈಹಿಕವಾಗಿ ಮಾತ್ರವಲ್ಲದೆ, ಮಾನಸಿಕವಾಗಿ ಸಹ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪ್ರಯೋಜನಗಳನ್ನು ನೀಡುವುದರಿಂದ ಇಂದು ಯೋಗ ಪ್ರಪಂಚದಾದ್ಯಂತ ಹೆಮ್ಮರವಾಗಿ ಹಬ್ಬಿದೆ. ಯೋಗವು ಮನಸ್ಸು ಮತ್ತು ದೇಹದ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಲು ಸಹ ಸಹಾಯ ಮಾಡುತ್ತದೆ.

ನಿಜವಾಗಿಯೂ ಯೋಗವನ್ನು ಆನಂದಿಸುವವರಿಗೆ ಇತರ ರೀತಿಯ ವ್ಯಾಯಾಮಗಳ ಅಭ್ಯಾಸದ ಅಗತ್ಯವೇ ಇಲ್ಲ. ಆದರೆ ನೆನಪಿರಲಿ ಯೋಗ ಅಭ್ಯಾಸದ ಸಂಪೂರ್ಣ ಪ್ರಯೋಜನಗಳನ್ನು ಪಡೆಯಲು ನೀವು ಯೋಗ ಮಾಡುವ ಮೊದಲು ಹಾಗೂ ನಂತರ ಕೆಲವು ಅಭ್ಯಾಸಗಳನ್ನು ಅನುಸರಿಸಲೇಬೇಕಾಗುತ್ತದೆ. ಇದನ್ನು ಯಾವುದೇ ಕಾರಣಕ್ಕೂ ತಪ್ಪಿಸುವಂತಿಲ್ಲ.
ಯೋಗದ ಮೊದಲು ಮತ್ತು ನಂತರ ನೀವು ಮಾಡಬೇಕಾದ ಕೆಲವು ವಿಷಯಗಳು ಇಲ್ಲಿವೆ ನೋಡಿ:

ಯೋಗದ ಮಾಡುವ ಮೊದಲು

ಯೋಗದ ಮಾಡುವ ಮೊದಲು

ಸಮಯಕ್ಕೆ ಸರಿಯಾಗಿ ತಿನ್ನಿರಿ

ಯೋಗವನ್ನು ಖಾಲಿ ಹೊಟ್ಟೆಯಲ್ಲಿ ಅಥವಾ ಲಘು ಹೊಟ್ಟೆಯಲ್ಲಿ ಅಭ್ಯಾಸ ಮಾಡಬೇಕು. ನಿಮ್ಮ ಯೋಗ ತರಗತಿಗೆ ಹೋಗುವ ಮೊದಲು ನಿಮ್ಮ ಹೊಟ್ಟೆ ಖಾಲಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಯೋಗಾಭ್ಯಾಸದ ಮೂರು ಗಂಟೆಗಳ ಒಳಗೆ ಯಾವುದೇ ಭಾರೀ ಊಟವನ್ನು ಸೇವಿಸಬಾರದು.

ಚೆನ್ನಾಗಿ ಹೈಡ್ರೇಟ್ ಮಾಡಿ

ಚೆನ್ನಾಗಿ ಹೈಡ್ರೇಟ್ ಮಾಡಿ

ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಆದರೆ, ನಿಮ್ಮ ಯೋಗ ಅಭ್ಯಾಸದ ಮೊದಲು ಸಾಕಷ್ಟು ನೀರು ಕುಡಿಯುವುದನ್ನು ತಪ್ಪಿಸಿ. ವ್ಯಾಯಾಮ ಮಾಡುವ ಮೊದಲು ನಿಮ್ಮ ಹೊಟ್ಟೆ ಸಂಪೂರ್ಣ ತುಂಬಿದ್ದರೆ ಕೆಲವು ಯೋಗ ಭಂಗಿಗಳನ್ನು ಮಾಡುವಾಗ ದೇಹಕ್ಕೆ ಅಸ್ವಸ್ಥತೆಯನ್ನು ಉಂಟುಮಾಡಬಹುದು.

ಆರಾಮದಾಯಕ ಬಟ್ಟೆಗಳನ್ನು ಧರಿಸಿ

ಆರಾಮದಾಯಕ ಬಟ್ಟೆಗಳನ್ನು ಧರಿಸಿ

ನಿಮ್ಮ ಬಟ್ಟೆಯನ್ನು ಹಿಗ್ಗಿಸಬಹುದಾದ ಆದರೆ ತುಂಬಾ ಸಡಿಲವಾಗಿ ಅಥವಾ ಹರಿಯದಂತೆ ಇರಬೇಕು. ಯಾವುದೇ ರೀತಿಯ ಕಿರಿಕಿರಿ ಎನಿಸುವಂಥ ಬಟ್ಟೆ ಧರಿಸಬೇಡಿ, ಯಾವುದೇ ಸಡಿಲವಾದ ಆಭರಣಗಳನ್ನು ಸಹ ತೆಗೆದುಹಾಕಿ. ನೀವು ಉದ್ದವಾದ ಕೂದಲನ್ನು ಹೊಂದಿದ್ದರೆ, ಅವುಗಳನ್ನು ಮೇಲಕ್ಕೆ ಅಥವಾ ಗಂಟು ಕಟ್ಟಿಕೊಳ್ಳಿ.

ಯೋಗ ಮಾಡಲು ಸರಿಯಾದ ಸ್ಥಳ ಆಯ್ಕೆ ಮಾಡಿ

ಯೋಗ ಮಾಡಲು ಸರಿಯಾದ ಸ್ಥಳ ಆಯ್ಕೆ ಮಾಡಿ

ಯೋಗ ಮಾಡುವ ಸ್ಥಳ ಆದಷ್ಟು ಪ್ರಶಾಂತವಾಗಿ ಮತ್ತು ಸ್ವಚ್ಛವಾಗಿ ಇರಬೇಕು. ಚೆನ್ನಾಗಿ ಗಾಳಿ ಬೆಳಕು ಆಡುವಂತಿದ್ದರೆ ತುಂಬಾ ಉತ್ತಮ.

ಯೋಗದ ನಂತರ

ಯೋಗದ ನಂತರ

ವಿಶ್ರಾಂತಿ

ನೀವು ಯೋಗಾಭ್ಯಾಸವನ್ನು ಮಾಡಿದ ನಂತರ, ಕನಿಷ್ಠ 10 ನಿಮಿಷಗಳ ಕಾಲ ಶವಾಸನ ಅಥವಾ ಚಿಕ್ಕನಿದ್ರೆಯನ್ನು ಮಾಡುವ ಮೂಲಕ ವಿಶ್ರಾಂತಿ ಪಡೆಯಬೇಕು. ಇದು ಸಂಪೂರ್ಣ ಪ್ರಜ್ಞೆಯ ಭಂಗಿಯಾಗಿದ್ದು, ಸಂಪೂರ್ಣವಾಗಿ ಆರಾಮವಾಗಿರುವಾಗ ಎಚ್ಚರವಾಗಿ ಉಳಿಯುವ ಗುರಿಯನ್ನು ಹೊಂದಿದೆ.

ಸ್ನಾನ ಮಾಡಿ

ಸ್ನಾನ ಮಾಡಿ

ಯೋಗದ ನಂತರ ಸ್ನಾನ ಮಾಡುವ ಮೊದಲು 20-30 ನಿಮಿಷಗಳ ಕಾಲ ದೇಹವನ್ನು ತಂಪಾಗಿಸಿ. ಹೊರಗಿನಿಂದ ಬೆವರು ಒಣಗಲು ಮತ್ತು ದೇಹವು ಸಾಮಾನ್ಯ ತಾಪಮಾನಕ್ಕೆ ಮರಳಲು ಅನುಮತಿಸಿ ಮತ್ತು ನಂತರ ಸ್ನಾನಕ್ಕೆ ಹೋಗಿ.

ದೇಹವನ್ನು ಹೈಡ್ರೇಟ್ ಮಾಡಿ

ದೇಹವನ್ನು ಹೈಡ್ರೇಟ್ ಮಾಡಿ

ಯೋಗವನ್ನು ಅಭ್ಯಾಸ ಮಾಡಿದ ನಂತರ, ಎಲೆಕ್ಟ್ರೋಲೈಟ್‌, ಎಳನೀರು ಅಥವಾ ಹೆಚ್ಚು ನೀರನ್ನು ಸೇವಿಸಿ ದೇಹವನ್ನು ಚೆನ್ನಾಗಿ ಹೈಡ್ರೇಟ್‌ ಮಾಡಿಕೊಳ್ಳಿ. ಯೋಗ ಮಾಡಿದ ಕನಿಷ್ಠ 2-3 ನಿಮಿಷಗಳ ನಂತರ ನೀರನ್ನು ಸೇವಿಸಿ. ಹೃದಯ ಬಡಿತ ಹೆಚ್ಚಾಗಿ ಇದ್ದಾಗ ನೀರನ್ನು ಯಾವುದೇ ಕಾರಣಕ್ಕೂ ಸೇವಿಸಬೇಡಿ.

ತಕ್ಷಣ ಆಹಾರ ಸೇವಿಸಬೇಡಿ

ತಕ್ಷಣ ಆಹಾರ ಸೇವಿಸಬೇಡಿ

ಯೋಗಾಭ್ಯಾಸ ಮಾಡಿದ ತಕ್ಷಣ ಆಹಾರವನ್ನು ಸೇವಿಸಬಾರದು. 15-30 ನಿಮಿಷಗಳ ಯೋಗದ ನಂತರವೇ ಲಘು ಆಹಾರವನ್ನು ಸೇವಿಸಬೇಕು.

English summary

International Yoga Day 2022: Follow These Steps Before and After Yoga Sessions for Health Benefits In Kannada

Here we are discussing about International Yoga Day 2022: Follow These Steps Before and After Yoga Sessions for Health Benefits In Kannada. Read more.
Story first published: Monday, June 20, 2022, 20:33 [IST]
X
Desktop Bottom Promotion