For Quick Alerts
ALLOW NOTIFICATIONS  
For Daily Alerts

ಹಾಲಾಸನ: ಒಂದು ನಿಮಿಷ ಈ ಆಸನ ಮಾಡಿದರೆ ಸಾಕು ಹೊಟ್ಟೆ ಬೊಜ್ಜು ಕರಗಿ ಹೊಟ್ಟೆ ಫ್ಲ್ಯಾಟ್‌ ಆಗುತ್ತೆ

|

ಯಾರು ಪ್ರತಿನಿತ್ಯ ಯೋಗಾಭ್ಯಾಸ ಮಾಡುತ್ತಾರೋ ಅವರಿಗೆ ಮೈ ಬೊಜ್ಜಿನ ಸಮಸ್ಯೆನೇ ಇರಲ್ಲ. ಏಕೆಂದರೆ ಯೋಗಕ್ಕೆ ಅಂಥದ್ದೊಂದು ಶಕ್ತಿ ಇದೆ. ಯೋಗವು ಮೈ ಬೊಜ್ಜು ಕರಗಿಸುವಲ್ಲಿ ತುಂಬಾನೇ ಪರಿಣಾಮಕಾರಿ. ಪ್ರತಿಯೊಂದು ಆಸವೂ ಅನೇಕ ಪ್ರಯೋಜನಗಳನ್ನು ಒಳಗೊಂಡಿರುತ್ತದೆ.

Plow Pose

ಯೋಗದಲ್ಲಿ ದೇಹದ ಪ್ರತಿಯೊಂದು ಅಂಗದ ಕಡೆಗೂ ಗಮನ ಹರಿಸಬಹುದು. ಉದಾಹರಣೆಗೆ ನಿಮಗೆ ತೋಳುಗಳಲ್ಲಿ ಬೊಜ್ಜು ಹೆಚ್ಚಿದ್ದರೆ ಅದಕ್ಕೆ ಪ್ರತ್ಯೇಕ ಯೋಗ ಭಂಗಿಗಳಿವೆ. ಕೆಲವರಿಗೆ ಡಬಲ್‌ ಚಿನ್‌ ಇರುತ್ತೆ, ಅದನ್ನು ಹೋಗಲಾಡಿಸಬಹುದು, ಇನ್ನು ಹಠಮಾರಿ ಹೊಟ್ಟೆ ಬೊಜ್ಜು, ಈ ಸಮಸ್ಯೆ ಬಹುತೇಕರಿಗೆ ಇರುತ್ತದೆ.

ಎಷ್ಟೇ ವಾಕ್ ಮಾಡಿದರೂ ಹುಂ.. ಕರಗುವುದಿಲ್ಲ, ಆದರೆ ಯೋಗದಲ್ಲಿ ಹೊಟ್ಟೆ ಬೊಜ್ಜು ಕರಗಿಸಲೆಂದೇ ಪರಿಣಾಮಕಾರಿಯಾದ ಆಸನವಿದೆ, ಅದುವೇ ಹಾಲಾಸನ, ಇದನ್ನು ಬ್ಲೋ ಬೋಸ್‌ ಎಂದೂ ಕರೆಯಲಾಗುವುದು. ಈ ಆಸನದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

 ಹೊಟ್ಟೆ ಬೊಜ್ಜು ಕರಗಿಸುತ್ತೆ ಹಾಲಾಸನ

ಹೊಟ್ಟೆ ಬೊಜ್ಜು ಕರಗಿಸುತ್ತೆ ಹಾಲಾಸನ

ಹಾಲಾಸನ ಅಭ್ಯಾಸ ಮಾಡಿದರೆ ಹೊಟ್ಟೆ ಬೊಜ್ಜು ಸಮಸ್ಯೆನೇ ಇರಲ್ಲ. ಈಗಾಗಲೇ ತುಂಬಾ ಹೊಟ್ಟೆ ಬೊಜ್ಜು ಇದ್ದರೆ ಈ ಹಾಸನ ಮಾಡುವಾಗ ಕಷ್ಟ ಅನಿಸಿದರೂ ಮಾಡ್ತಾ-ಮಾಡ್ತಾ ಅಭ್ಯಾಸವಾಗುವುದು. ಹಾಲಾಸನ ಬಗ್ಗೆ ಹೆಚ್ಚು ಗೊತ್ತಿಲ್ಲದೆ ಯೂ ಟ್ಯೂಬ್‌ ನೋಡಿ ಮಾಡಲು ಹೋಗಬೇಡಿ, ಏಕೆಂದರೆ ಯೋಗದಲ್ಲಿ ಭಂಗಿಯಷ್ಟೇ ಉಸಿರಾಟದ ಪದ್ಧತಿ ಕೂಡ ಮುಖ್ಯವಾಗಿರುತ್ತೆ, ಪ್ರಾರಂಭದಲ್ಲಿ ಪರಿಣಿತರ ಸಲಹೆ ಪಡೆಯಿರಿ ನಂತರ ನೀವೇ ಮಾಡಬಹುದು.

ಒಂದು ನಿಮಿಷ ಹಾಲಾಸನ ಮಾಡಿದರೆ ಸಾಕು ಹೊಟ್ಟೆ ಬೊಜ್ಜು ಕರಗುತ್ತೆ

ಒಂದು ನಿಮಿಷ ಹಾಲಾಸನ ಮಾಡಿದರೆ ಸಾಕು ಹೊಟ್ಟೆ ಬೊಜ್ಜು ಕರಗುತ್ತೆ

ಯೋಗದಲ್ಲಿ ಯಾವುದೂ ಅತಿಯಾಗಿ ಮಾಡಲ್ಲ. ಹಾಲಾಸನದ ಭಂಗಿ ಕೂಡ ಒಂದೇ ನಿಮಿಷ. ಇದು ಹೆಚ್ಚು ಪರಿಣಾಮಕಾರಿಯಾಗಲು ನೀವು ಅರ್ಧ ಗಂಟೆ ವಾಕ್ ಅಥವಾ ಇತರೆ ವ್ಯಾಯಾಮ ಅಥವಾ ಯೋಗ ಭಂಗಿಗಳನ್ನು ಮಾಡಿ ನಂತರ ಒಂದು ನಿಮಿಷ ಹಾಲಾಸನದ ಭಂಗಿಯಲ್ಲಿ ಇರಿ. ಹೀಗೆ ಮಾಡಿದರೆ ಕೆಲವೇ ದಿನಗಳಲ್ಲಿ ನಿಮ್ಮ ಸೊಂಟದ ಸುತ್ತಳತೆ ಕಡಿಮೆಯಾಗುತ್ತಿರುವುದು ಗಮನಕ್ಕೆ ಬರುವುದು.

ಹಾಲಾಸನ ಮಾಡುವುದರಿಂದ ಹೊಟ್ಟೆಗೆ ದೊರೆಯುವ ಪ್ರಯೋಜನಗಳು

ಹಾಲಾಸನ ಮಾಡುವುದರಿಂದ ಹೊಟ್ಟೆಗೆ ದೊರೆಯುವ ಪ್ರಯೋಜನಗಳು

* ಹೊಟ್ಟೆ ಬೊಜ್ಜು ಕರಗಿಸುವುದು

* ಚಯಪಚಯ ಕ್ರಿಯ ಉತ್ತಮ ಪಡಿಸುತ್ತದೆ

* ಹೊಟ್ಟೆ ಸಮಸ್ಯೆ ಬಗೆ ಹರಿಸುತ್ತೆ

* ಸ್ನಾಯುಗಳನ್ನು ಶಾಂತಗೊಳಿಸುತ್ತೆ, ಮಾನಸಿಕ ಒತ್ತಡ ಕೂಡ ಹೊರ ಹಾಕುತ್ತೆ

* ಇನ್ನು ನಿಮ್ಮ ಥೈರಾಯ್ಡ್‌ ಗ್ರಂಥಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾದರೆ ಅಂದರೆ ಅಧಿಕ ಥೈರಾಯ್ಡ್‌ ಹಾರ್ಮೋನ್‌ ಬಿಡುಗಡೆ ಮಾಡುವುದು ಅಥವಾ ಅತಿ ಕಡಿಮೆ ಥೈರಾಯ್ಡ್ ಹಾರ್ಮೋನ್‌ ಬಿಡುಗಡೆ ಮಾಡುವುದು ಮಾಡುತ್ತಿದ್ದರೆ ಅದನ್ನು ಸರಿಪಡಿಸಲು ಈ ಹಾಲಾಸನ ಸಹಕಾರಿ.

* ಇನ್ನು ಕಾಲು ಹಾಗೂ ಭುಜಕ್ಕೆ ಕೂಡ ತುಂಬಾ ಒಳ್ಳೆಯದು.

ಯಾರು ಮಾಡಬಾರದು?

ಯಾರು ಮಾಡಬಾರದು?

* ನೀವು ಗರ್ಭಿಣಿಯಾಗಿದ್ದರೆ ಈ ಆಸನ ಮಾಡಬೇಡಿ

* ಮುಟ್ಟಿನ ಸಮಯದಲ್ಲಿ ಮಾಡಬೇಡಿ

* ಇದಕ್ಕಿಂತ ಮೊದಲು ಹಾಲಾಸನ ಮಾಡಿರದಿದ್ದರೆ ತಜ್ಞರ ಮಾರ್ಗದರ್ಶನವಿಲ್ಲದೆ ಮಾಡಲು ಯತ್ನಿಸಬಾರದು.

* ಬೇಧಿ ಅಥವಾ ಕುತ್ತಿಗೆ ನೋವು ಇದ್ದರೆ ಮಾಡಬಾರದು.

* ಅಸ್ತಮಾ ಇರುವವರು ಮಾಡಬಾರದು

* ಅತ್ಯಧಿಕ ರಕ್ತದೊತ್ತಡ ಇರುವವರು ಮಡಬಾರದು

* ಆಹಾರ ಸೇವಿಸಿ ಈ ಆಸನ ಮಾಡಬಾರದು, ಇದನ್ನು ಖಾಲಿ ಹೊಟ್ಟೆಯಲ್ಲೇ ಅಭ್ಯಾಸ ಮಾಡಬೇಕು.

ಹಾಲಾಸನ ಮಾಡುವುದು ಹೇಗೆ?
ಈ ಫೋಟೋವನ್ನು ಗಮನಿಸಿ, ಈ ಭಂಗಿಗೆ ಬರುವ ಮುನ್ನ ಮ್ಯಾಟ್‌ ಮೇಲೆ ಮಲಗಿ, ನಿಮ್ಮ ಕೈಗಳು ನಿಮ್ಮ ಪಕ್ಕದಲ್ಲಿರಲಿ, ಕಾಲುಗಳು 90 ಡಿಗ್ರಿ ಆ್ಯಂಗಲ್‌ನಲ್ಲಿ ಇರಬೇಕು. ಈಗ ನಿಧಾನಕ್ಕೆ ಕಾಲುಗಳನ್ನು ಎತ್ತಿ ನಿಮ್ಮ ಹಿಂಬದಿಗೆ ಸಪೋರ್ಟ್‌ಗೆ ಕೈಗಳನ್ನು ಇಡಿ. ಈಗ ಕಾಲುಗಳನ್ನು ನಿಧಾನಕ್ಕೆ 180 ಡಿಗ್ರಿ ಆ್ಯಂಗಲ್‌ಗೆ ಎತ್ತಿ ನಿಧಾನಕ್ಕೆ ನಿಮ್ಮ ಕಿವಿಯ ಹಿಂದೆಕ್ಕೆ ತನ್ನಿ ಈ ಭಂಗಿಯಲ್ಲಿ ಒಂದು ನಿಮಿಷ ಇರಿ.
ಉಸಿರಾಟ: ಈ ಭಂಗಿಗೆ ಬರುವ ಮುನ್ನ ದೀರ್ಘ ಉಸಿರು ತೆಗೆದು ನಿಧಾನವಾಗಿ ಉಸಿರು ಬಿಡುತ್ತಾ ಈ ಭಂಗಿಗೆ ಬರಬೇಕು, ನಂತರ ಸಹಜವಾಗಿ ಉಸಿರಾಡಬೇಕು. ನಂತರ ನಿಧಾನಕ್ಕೆ ಉಸಿರನ್ನು ಬಿಡುತ್ತಾ ಈ ಭಂಗಿಯಿಂದ ವಾಪಾಸ್‌ ಬನ್ನಿ.

English summary

How to Do Halasana (Plow Pose) to Reduce Belly Fat in Kannada

How to Do Halasana (Plow Pose) to Reduce Belly Fat in Kannada, Read on...
X
Desktop Bottom Promotion