Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಯೋಗ ಮಾಡುವಾಗ ಮಾಡುವ ಈ ಸಣ್ಣ ತಪ್ಪುಗಳಿಂದ ಆರೋಗ್ಯಕ್ಕೆ ಹಾನಿ, ಹುಷಾರ್!
'ಯೋಗ ಮಾಡುವವನಿಗೆ ರೋಗವಿಲ್ಲ' ಎಂಬ ಗಾದೆ ಮಾತಿದೆ.... ಯಾರು ಪ್ರತಿದಿನ ಅರ್ಧಗಂಟೆ ಯೋಗ ಮಾಡುತ್ತಿದ್ದರೋ ಅವರಿಗೆ ಯೋಗದ ಪ್ರಯೋಜನದ ಬಗ್ಗೆ ಖಂಡಿತ ಗೊತ್ತಿರುತ್ತದೆ. ಏಕೆಂದರೆ ಯೋಗ ಎಂಬುವುದು ಅದು ಜಸ್ಟ್ ಒಂದು ವ್ಯಾಯಾಮವಲ್ಲ, ಸರ್ವ ರೋಗಗಳಿಗೆ ರಾಮಬಾಣ.
ಹೌದು ಯೋಗದಿಂದ ಅನೇಕ ಆರೋಗ್ಯಕರ ಪ್ರಯೋಜನಗಳಿವೆ. ಎಷ್ಟೋ ಆರೊಗ್ಯ ಸಮಸ್ಯೆಗಳನ್ನು ಇದರಿಂದ ಗುಣಪಡಿಸಬಹುದಾಗಿದೆ. ಇದನ್ನು ಮಾಡುವುದರಿಂದ ಮಾನಸಿಕ ಆರೋಗ್ಯ ಹೆಚ್ಚುವುದು, ಮನಸ್ಸಿನಲ್ಲಿರುವ ಎಷ್ಟೋ ಗೊಂದಲುಗಳು ನಿವಾರಣೆಯಾಗುತ್ತೆ, ನಮ್ಮ ಗುರಿಯ ಕಡೆ ಫೋಕಸ್ ಮಾಡಲು ಸಾಧ್ಯವಾಗುವುದು.
ಯೋಗವನ್ನು ಪರಿಣಿತರ ಬಳಿಯಿಂದ ಕಲಿಯುವುದು ಒಳ್ಳೆಯದು. ಕೆಲವರು ಆನ್‌ಲೈನ್ ಮೂಲಕ ಕಲಿಯಲು ಹೋಗುತ್ತಾರೆ, ಆದರೆ ಯೋಗ ಮಾಡುವಾಗ ಮಾಡುವ ಕೆಲ ತಪ್ಪುಗಳಿಂದ ಆರೋಗ್ಯ ಹಾಳಾಗುತ್ತೆ, ಹುಷಾರ್! ಯೋಗ ಮಾಡುವಾಗ ಸಾಮಾನ್ಯವಾಗಿ ಮಾಡುವ ತಪ್ಪುಗಳ ಬಗ್ಗೆ ಇಲ್ಲಿ ಹೇಳಲಾಗಿದೆ ನೋಡಿ:

ಉಸಿರನ್ನು ತುಂಬಾ ಹೊತ್ತು ಬಿಗಿ ಹಿಡಿದುಕೊಳ್ಳುವುದು
ಯೋಗದಲ್ಲಿ ಉಸಿರಾಟದ ನಿಯಮಗಳು ತುಂಬಾನೇ ಮುಖ್ಯವಾಗಿದೆ, ಉಸಿರನ್ನು ಹೇಗೆ ತೆಗೆದುಕೊಳ್ಳಬೇಕು, ಹೇಗೆ ಇಡಬೇಕು, ಯಾವಾಗ ದೀರ್ಘ ಉಸಿರು ತೆಗೆದು-ನಿಧಾನಕ್ಕೆ ಬಿಡಬೇಕು, ಯಾವಾಗ ಸಹಜವಾಗಿ ಉಸಿರಾಡಬೇಕು ಈ ಎಲ್ಲಾ ವಿಷಯಗಳನ್ನು ಮೊದಲು ತಿಳಿದುಕೊಳ್ಳಬೇಕು.
ನೀವು ಸ್ವಂತ ಕಲಿಯಲು ಹೋದರೆ ಇದೆಲ್ಲಾ ಗೊತ್ತಾಗುವುದಿಲ್ಲ, ಉಸಿರನ್ನು ತುಂಬಾ ಬಿಗಿ ಹಿಡಿಯಲು ಪ್ರಯತ್ನಿಸಬೇಡಿ, ಇದರಿಂದ ದೇಹಕ್ಕೆ ಹಾನಿ... ಇಷ್ಟು ಕೌಂಟ್ ಅಂತ ಇರುತ್ತೆ ಅದನ್ನು ನಿಮಗೆ ಯೋಗ ಎಕ್ಸ್‌ಪರ್ಟ್ ಅಷ್ಟೇ ತಿಳಿಸಲ ಸಾಧ್ಯ.

ನೆಲದ ಮೇಲೆ ಕೈಗಳನ್ನು ಸರಿಯಾಗಿ ಇಡದಿರುವುದು
ಹೌದು ಯೋಗ ಮಾಡುವಾಗ ಕೈಗಳನ್ನು ಸರಿಯಾಗಿ ಇಡಬೇಕು, ಉದಾಹರಣೆಗೆ ದಂಡಾಸನ ಇದರಲ್ಲಿ ಕೈಗಳನ್ನು ನೆಲಕ್ಕೆ ಸರಿಯಾಗಿ ಊರಬೇಕು, ಇಲ್ಲದಿದ್ದರೆ ಭುಜದ ಮೇಲೆ ಒತ್ತಡ ಬಿದ್ದು ಭುಜಕ್ಕೆ ಹಾನಿಯಾಗುತ್ತೆ. ಇನ್ನು ಸರಳವಾಗಿ ಹೇಳಬೇಕೆಂದರೆ ಶವಾಸನ, ತುಂಬಾ ಸರಳವಾದ ಆಸನ ಇದು, ಆದರೆ ಇದರ ಪ್ರಯೋಜನಗಳು ಅನೇಕ ಇದೆ, ಇದರಲ್ಲಿ ನಿಮ್ಮ ಅಂಗೈ ಮೇಲ್ಭಾಗ ಇರಬೇಕು. ಹೀಗೆ ಯೋಗಸಾನದಲ್ಲಿ ಕೈಗಳನ್ನು ಇಡುವ ರೀತಿ ಕೂಡ ಮುಖ್ಯವಾಗಿರುತ್ತೆ.

ಪಾದಗಳನ್ನು ಮಂಡಿ ಮೇಲೆ ಅಥವಾ ತೊಡೆ ಮೇಲೆ ಇಡುವಾಗ ತಪ್ಪುಗಳು ಆಗದಿರಲಿ
ಕೆಲವೊಂದು ಯೋಗ ಪೋಸ್‌ಗಳಲ್ಲಿ ಇದು ತುಂಬಾನೇ ಮುಖ್ಯವಾಗಿರುತ್ತೆ. ಉದಾಹರಣೆಗೆ ವೃಕ್ಷಾಸನ. ಅದರಲ್ಲಿ ಋಷಿ ಮುನಿಗಳು ಒಂಟಿ ಕಾಲಿನಲ್ಲಿ ನಿಂತು ತಪಸ್ಸು ಮಾಡುವ ಚಿತ್ರ ನೋಡಿರುತ್ತೀರಾ ಅಲ್ವಾ? ಆ ರೀತಿಯಲ್ಲಿ ನಿಲ್ಲಬೇಕು. ಅಂದರೆ ಒಂದು ಕಾಲಿನಲ್ಲಿ ನಿಂತು ಇನ್ನೊಂದು ಕಾಲನ್ನು ಮಂಡಿಯ ಮೇಲೆ, ತೊಡೆ ಭಾಗದಲ್ಲಿ ಇಡಬೇಕು. ತುಂಬಾ ಜನ ಮಂಡಿ ಮೇಲೆ ಇಡುವುದು ಅಥವಾ ತುಂಬಾ ಹಿಂದೆಕ್ಕೆ ಕಾಲು ತಂದು ಇಡುವುದು ಮಾಡುತ್ತಾರೆ. ಹೀಗೆ ಮಾಡಿದರೆ ಕಾಲಿನ ಮಂಡಿಗೆ, ತೊಡೆಯ ಸ್ನಾಯುಗಳಿಗೆ ಹಾನಿಯುಂಟಾಗುತ್ತದೆ.

ದಂಡಾಸನದಲ್ಲಿ ಹಿಂಬದಿ ಕೆಳಭಾಗಕ್ಕೆ ತರುವುದು
ಚದುರಂಗ ದಂಡಾಸನ ಯೋಗದ ಪ್ರಮುಖ ಆಸನಗಳಲ್ಲಿ ಒಂದಾಗಿದೆ. ಇದರಿಂದ ದೇಹದ ಸ್ಟಮಿನಾ ಹೆಚ್ಚುವುದು, ಪ್ಲೆಕ್ಸಿಬಿಲಿಟಿ ಹೆಚ್ಚುವುದು, ಚಯಪಚಯ ಕ್ರಿಯೆ ಉತ್ತಮವಾಗುತ್ತೆ, ಮಾನಸಿಕ ಆರೋಗ್ಯ ಹೆಚ್ಚುವುದು, ಮೈ ತೂಕ ಕಡಿಮೆಯಾಗುವುದು ಹೀಗೆ ಅನೇಕ ಪ್ರಯೋಜನಗಳಿವೆ. ಆದರೆ ಭಂಗಿಗಳು ಸರಿಯಾದ ರೀತಿಯಲ್ಲಿ ಇರಬೇಕು ಅಷ್ಟೇ, ಚದುರಂಗ ಡಂಡಾಸನದಲ್ಲಿ ಹಿಂಬದಿ ತುಂಬಾ ಮೇಲಕ್ಕೆ ಎತ್ತುವುದು, ತುಂಬಾ ಕೆಳಗಡೆ ತರುವುದು ಮಾಡಬಾರದು.



Click it and Unblock the Notifications