For Quick Alerts
ALLOW NOTIFICATIONS  
For Daily Alerts

63 ವರ್ಷದ ನೀತು ಕಪೂರ್ ಯಂಗ್‌ ಲುಕ್‌ನ ಹಿಂದಿದೆ ಈ ಯೋಗ ಸೀಕ್ರೆಟ್

|

ಬಾಲಿವುಡ್‌ ನಟಿ ನೀತೂ ಸಿಂಗ್ ಗೊತ್ತಿದೆಯೇ? ರಣಬೀರ್‌ ಕಪೂರ್‌ ಗೊತ್ತಿರಬೇಕಲ್ವಾ? ಅವರ ತಾಯಿ, ಮೇರು ನಟ ರಿಷಿ ಕಪೂರ್ ಅವರ ಪತ್ನಿ. ಅವರ ವಯಸ್ಸಿಗೂ ಅವರ ಸೌಂದರ್ಯಕ್ಕೂ ಸಂಬಂಧನೇ ಇಲ್ಲ. ನೋಡಿದರ 40 ಆಸುಪಾಸು ಇರಬಹುದು ಅನಿಸುತ್ತೆ, ಆದರೆ ಅವರ ವಯಸ್ಸು 63. ಅವರ ಸೌಂದರ್ಯದ ಗುಟ್ಟೇನು ಎಂದು ನೋಡಿದರೆ ಒಂದು ಕಾರಣ ಯೋಗ.

ಹೌದು ಅವರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೆ. ಯೋಗದ ಕೆಲವೊಂದು ಭಂಗಿಗಳನ್ನು ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳುತ್ತಾರೆ. ಅವರ ಕುಟುಂಬದಲ್ಲಿ ಎಲ್ಲರೂ ಯೋಗ ಅಭ್ಯಾಸಕ್ಕೆ ತುಂಬಾನೇ ಮಹತ್ವ ಕೊಡುತ್ತಾರೆ. ಮಗಳು ರಿಧಿಮಾ ಯೋಗ ಮಾಡುತ್ತಿರುವ ಹಲವಾರು ವೀಡಿಯೋ ಹಾಗೂ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಈ ವಯಸ್ಸಿನಲ್ಲೂ ಅವರು ಅಷ್ಟೊಂದು ಆಕರ್ಷಕವಾಗಿ ಕಾಣಲು ಫಿಟ್ನೆಸ್‌ ಬಗ್ಗೆ ಅವರು ಕಾಂಪ್ರಮೈಸ್ ಆಗದೇ ಇರುವುದು ಆಗಿದೆ. ಅವರು ತಮ್ಮ ಆರೋಗ್ಯ ಹಾಗೂ ದೇಹ ಸೌಂದರ್ಯ ಕಾಪಾಡಲು ಏನೆಲ್ಲಾ ಮಾಡುತ್ತಾರೆ ಎಂದು ನೋಡೋಣ ಬನ್ನಿ:

 20 ಬಾರಿ ಸೂರ್ಯ ನಮಸ್ಕಾರ

20 ಬಾರಿ ಸೂರ್ಯ ನಮಸ್ಕಾರ

ನೀತೂ ಸಿಂಗ್‌ ಪ್ರತಿದಿನ 20 ಸೂರ್ಯ ನಮಸ್ಕಾರ ಮಾಡುತ್ತಾರೆ ಎಂದು ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಕೆಲವೊಮ್ಮೆ ಪ್ರಯಾಣ ಆಡುವಾಗ ಅಥವಾ ಇನ್ಯಾವುದೋ ಕಾರಣಕ್ಕೆ ವ್ಯಾಯಾಮ ಮಾಡಲು ಸಾಧ್ಯವಾಗದಿದ್ದಾಗ 20 ಸೂರ್ಯ ನಮಸ್ಕಾರ, 10,000ದಿಂದ 15, 000 ಸ್ಟೆಪ್‌ ವಾಕ್‌ ಮಾಡ್ತೀನಿ ಅಂದಿದ್ದಾರೆ. ನಮ್ಮ ದೇಹ ಚಲಿಸುತ್ತಲೇ ಇರಬೇಕು, ಒಂದೇ ಕಡೆ ಕೂರಬಾರದು ಎಂದು ಅವರು ಹೇಳುತ್ತಾರೆ.

 ಪ್ರಾಣಯಾಮ ಅಭ್ಯಾಸ ಮಾಡುತ್ತಾರೆ

ಪ್ರಾಣಯಾಮ ಅಭ್ಯಾಸ ಮಾಡುತ್ತಾರೆ

ಕೋವಿಡ್‌ 19 ಸಾಂಕ್ರಾಮಿಕ ಸಮಯದಲ್ಲೂ ಅವರ ಟ್ರೈನರ್ ಅವರಿಗೆ ಆನ್‌ಲೈನ್ ಮೂಲಕ ಯೋಗ ಹೇಳಿಕೊಡುತ್ತಿದ್ದರು. ಪ್ರತಿದಿನ ಪ್ರಾಣಯಾಮ, ಧ್ಯಾನಕ್ಕೆ ಒಂದು ಗಂಟೆ ಮೀಸಲಿಡುತ್ತಿದ್ದರು.

ನೀತೂ ಸಿಂಗ್‌ ಯೌವನ ಲುಕ್‌ಗೆ ಇದೇ ಕಾರಣ

ನೀತೂ ಸಿಂಗ್‌ ಯೌವನ ಲುಕ್‌ಗೆ ಇದೇ ಕಾರಣ

ಅವರು 'ಪ್ರತಿದಿನ ಯೋಗ ಮಾಡುತ್ತೀನಿ, ಪ್ರತಿದಿನ ವಾಕಿಂಗ್ ಮಾಡುತ್ತೀನಿ, ಅಲ್ಲದೆ ಥ್ರೆಡ್‌ಮಿಲ್‌ನಲ್ಲಿಯೂ ವಾಕ್‌ ಮಾಡಿ ಕ್ಯಾಲೋರಿ ಬರ್ನ್‌ ಮಾಡುತ್ತೀನಿ, ಇದರಿಂದ ತುಂಬಾ ಫ್ರೆಷ್‌ ಆಗಿ ಕಾಣಿಸುತ್ತೀನಿ' ಎಂದು ತಮ್ಮ ಫಿಟ್ನೆಸ್ ಸೀಕ್ರೆಟ್‌ ಕುರಿತು ತಿಳಿಸುತ್ತಾರೆ. ತುಂಬಾ ಒತ್ತಡಕ್ಕೆ ಒಳಗಾದಾಗ ಅನುಲೋಮ-ವಿಲೋಮ ಮಾಡುತ್ತಾರಂತೆ. ಕಪಾಲಭಾತಿ ಕೂಡ ಅಭ್ಯಾಸ ಮಾಡುತ್ತಾರೆ. ಇವೆರಡು ಮಾನಸಿಕ ಒತ್ತಡವನ್ನು ಹೊರದೂಡುವಲ್ಲಿ ತುಂಬಾನೇ ಸಹಕಾರಿ.

 ದೇಹದ ಮಾತನ್ನು ಕೇಳಬೇಕು ಎನ್ನುತ್ತಾರೆ ನೀತು

ದೇಹದ ಮಾತನ್ನು ಕೇಳಬೇಕು ಎನ್ನುತ್ತಾರೆ ನೀತು

ಅವರು ಇಬ್ಬರು ಮಕ್ಕಳಿಗೆ ಮದುವೆಯಾಗಿದೆ,ಮೊಮ್ಮಗಳು ಕೂಡ ಇದ್ದಾಳೆ ಆದರೂ ಅವರನ್ನು ನೋಡಿದರೆ 60 ವರ್ಷ ದಾಟಿದರಂತೆ ಕಾಣುವುದಿಲ್ಲ. ನೀತೂ ತುಂಬಾ ತೆಳ್ಳಗಾಗಲು ಇಷ್ಟಪಡಲ್ಲ, ತುಂಬಾ ತೆಳ್ಳಗಾದರೆ ನಾನು ಚೆನ್ನಾಗಿ ಕಾಣಲ್ಲ ಎಂದು ಹೇಳುವ ಅವರ ಆರೋಗ್ಯಕರ ದೇಹದ ಕಡೆ ತುಂಬಾನೇ ಗಮನ ಕೊಡುತ್ತಾರೆ. ದೇಹ ಏನು ಹೇಳುತ್ತೆ, ಅದನ್ನು ಕೇಳಬೇಕು ಎಂಬುವುದು ಅವರ ಅಭಿಪ್ರಾಯವಾಗಿದೆ.

ಆಹಾರಕ್ರಮ ಕೂಡ ಪಾಲಿಸುತ್ತಾರೆ

ವ್ಯಾಯಾಮದ ಜೊತೆಗೆ ನೀತೂ ಸಿಂಗ್‌ ಆಹಾರಕ್ರಮ ಕೂಡ ಪಾಲಿಸುತ್ತಾರೆ. ಬೇಳೆ, ಸಬ್ಜಿ, ಅವಲಕ್ಕಿ ಸೇವಿಸುತ್ತಾರೆ. ಹೋಟೆಲ್‌ಗೂ ಹೋದಾಗಲೂ ಆರೋಗ್ಯಕರ ಆಹಾರ ಸೇವಿಸುತ್ತಾರೆ. ವಯಸ್ಸಿಗೂ, ಲುಕ್‌ಗೂ ಸಂಬಂಧವಿಲ್ಲ ಎಂಬುವುದಕ್ಕೆ ಮತ್ತೊಂದು ಉದಾಹರಣೆ ನೀತೂ ಕಪೂರ್.

English summary

Neetu Kapoor Reveals How Yoga Helps Her Stay Calm and Fit in kannada

Neetu Kapoor reveals how Yoga helps her stay calm and fit in kannada, Read on...
X
Desktop Bottom Promotion