For Quick Alerts
ALLOW NOTIFICATIONS  
For Daily Alerts

ಪ್ರಾಣಯಾಮ ಮಾಡುವ ಮುನ್ನ ನಾಡಿಶುದ್ಧಿ ಮಾಡಲೇಬೇಕು, ಏಕೆ? ಇದರ ಪ್ರಯೋಜನಗಳೇನು ಗೊತ್ತಾ?

|

ನಾಡಿ ಶೋಧನಾ ಅಥವಾ ನಾಡಿ ಶುದ್ಧಿ ಬಗ್ಗೆ ಕೇಳಿದ್ದೀರಾ? ಯೋಗದಲ್ಲಿ ಇದು ಒಂದು ಪ್ರಮುಖವಾದ ಉಸಿರಾಟದ ವ್ಯಾಯಾಮವಾಗಿದೆ. ನಾಡಿ ಶುದ್ಧಿ ವ್ಯಾಯಾಮದಲ್ಲಿ ದೇಹದ ಎಲ್ಲಾ ಅಂಗಗಳಿಗೆ ಅವಶ್ಯಕವಾದ ಆಮ್ಲಜನಕದ ಪೂರೈಕೆಯಾಗುತ್ತದೆ.

ವ್ಯಾಯಾಮ, ಯೋಗ ಅಭ್ಯಾಸದ ಬಳಿಕ ಶರೀರದ ನರಗಳನ್ನು ಶಾಂತಗೊಳಿಸಲು ನಾಡಿ ಶುದ್ಧಿ ಉಸಿರಾಟದ ವ್ಯಾಯಾಮ ತುಂಬಾನೇ ಪ್ರಯೋಜನಕಾರಿಯಾಗಿದೆ, ಇದಾದ ಬಳಿಕ ಪ್ರಾಣಯಾಮ ಇತರ ಉಸಿರಾಟದ ವ್ಯಾಯಾಮ ಅಭ್ಯಾಸ ಮಾಡಲಾಗುವುದು.

ಈ ನಾಡಿ ಶೋಧನಾ ಅಥವಾ ನಾಡಿ ಶುದ್ಧಿ ಉಸಿರಾಟದ ವ್ಯಾಯಾಮ ಮಾಡುವುದು ಹೇಗೆ? ಇದರ ಅಭ್ಯಾಸದಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:

ನಾಡಿ ಶುದ್ಧಿ ಅಥವಾ ನಾಡಿ ಶೋಧನಾ ಪ್ರಾಣಯಾಮ ಎಂದರೇನು?

ನಾಡಿ ಶುದ್ಧಿ ಅಥವಾ ನಾಡಿ ಶೋಧನಾ ಪ್ರಾಣಯಾಮ ಎಂದರೇನು?

ನಾಡಿ ಶುದ್ಧಿ ಉಸಿರಾಟದ ವ್ಯಾಯಾಮವಾದರೂ ಇದು ಪ್ರಾಣಯಾಮ ಅಲ್ಲ. ಆದರೆ ಪ್ರಾಣಯಾಮ ಮಾಡುವ ನಾಡಿ ಶುದ್ಧಿ ಉಸಿರಾಟದ ವ್ಯಾಯಾಮ ಮಾಡುವುದು ಕಡ್ಡಾಯವಾಗಿದೆ.

ನಾಡಿ ಶುದ್ಧಿ ಮಾಡುವುದು ಹೇಗೆ?

ನಾಡಿ ಶುದ್ಧಿ ಮಾಡುವುದು ಹೇಗೆ?

ಕಾಲುಗಳನ್ನು ಮಡಚಿ ಧ್ಯಾನದ ಭಂಗಿಯಲ್ಲಿ ಬೆನ್ನು ನೇರವಾಗಿರುವಂತೆ ಕುಳಿತುಕೊಳ್ಳಿ. ಕೈಗಳನ್ನು ಮುದ್ರಾವಸ್ಥೆಯಲ್ಲಿ ಹಿಡಿಯಿರಿ. ನಂತರ ಎಡಭಾಗದ ಂಉಗಿನಿಂದ ಉಸಿರನ್ನು ತೆಗೆದು ಬಲಭಾಗದ ಮೂಗಿನಲ್ಲಿ ಬಿಡಿ, ನಂತರ ಬಲ ಭಾಗದ ಮೂಗಿನಿಂದ ಉಸಿರು ತೆಗೆದು ಎಡಭಾಗದ ಮೂಗಿನ ಮೂಲಕ ಬಿಡಿ. ಹೀಗೆ ಒಂದು ಮೂಗಿನಲ್ಲಿ ಉಸಿರನ್ನು ತೆಗೆಯುವಾಗ ಮತ್ತೊಂದು ಮೂಗನ್ನು ಮುಚ್ಚಬೇಕು. ಈ ರೀತಿ 9 ಬಾರಿ ಮಾಡಿ ನಂತರ ಎಡಭಾಗದ ಮೂಗಿನ ಮೂಲಕ ಉಸಿರನ್ನು ಎಳೆದು ಎಡಭಾಗದ ಮೂಗಿನ ಮೂಲಕವೇ ಬಿಡಿ.

ನಾಡಿಶುದ್ಧಿ ಉಸಿರಾಟದ ಪ್ರಯೋಜನಗಳು

ನಾಡಿಶುದ್ಧಿ ಉಸಿರಾಟದ ಪ್ರಯೋಜನಗಳು

* ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯ ಹೆಚ್ಚಿಸುತ್ತೆ.

* ಇದನ್ನು ಆಸನಗಳನ್ನು ಅಭ್ಯಾಸ ಮಾಡಿದ ಬಳಿಕ ಮಾಡಬೇಕು. ಹೀಗೆ ಮಾಡುವುದರಿಂದ ಎಲ್ಲಾ ನರಗಳು ಶಾಂತವಾಗುವುದು.

* ಅಲ್ಲದೆ ಪ್ರಾಣಯಾಮ ಮಾಡಲು, ಧ್ಯಾನ ಮಾಡಲು ಈ ನಾಡಿಶುದ್ಧಿ ಪ್ರಯೋಜನಕಾರಿಯಾಗಿದೆ.

* ಇದನ್ನು ಅಭ್ಯಾಸ ಮಾಡುವುದರಿಂದ ರಕ್ತ ಸಂಚಾರ ಉತ್ತಮವಾಗುವುದು, ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ, ಮೈಕೈ ನೋವು, ಮಾನಸಿಕ ಒತ್ತಡ, ಖಿನ್ನತೆ ಈ ರೀತಿಯ ಸಮಸ್ಯೆಗಳು ದೂರಾಗುವುದು.

English summary

Nadi Shodhan Pranayama: Know Benefits and How to do it in Kannada

Nadi Shodhan Pranayama: Know Benefits and How to do it in Kannada, read on....
Story first published: Friday, June 17, 2022, 15:14 [IST]
X
Desktop Bottom Promotion