For Quick Alerts
ALLOW NOTIFICATIONS  
For Daily Alerts

ವ್ಯಾಯಮದ ಬಳಿಕ, ಸೇವಿಸುವ ಆಹಾರವೂ ಪರ್ಫೆಕ್ಟ್ ಆಗಿರಬೇಕು!

By Hemanth
|

ದೇಹ ಕಟ್ಟುಮಸ್ತಾಗಿ ಕಾಣಿಸಿಕೊಳ್ಳಲು ಹಾಗೂ ಯಾವಾಗಲೂ ಫಿಟ್ ಇರಬೇಕೆಂದು ಜಿಮ್ ಗೆ ಹೋಗಿ ವ್ಯಾಯಾಮ ಮಾಡುತ್ತೇವೆ. ಅಲ್ಲಿ ಇನ್ನಿಲ್ಲದ ಕಸರತ್ತು ಮಾಡಿ ಬೆವರು ಸುರಿಸಿ ದೇಹವನ್ನು ದಂಡಿಸುತ್ತೇವೆ. ಆದರೆ ವ್ಯಾಯಾಮದ ಬಳಿಕ ದೇಹವು ತುಂಬಾ ಬಳಲಿರುತ್ತದೆ. ಮತ್ತು ಅದಕ್ಕೆ ಶಕ್ತಿ ನೀಡಲು ಏನಾದರೂ ತಿನ್ನಲೇ ಬೇಕು. ಸಾಕಷ್ಟು ವ್ಯಾಯಾಮ ಮಾಡಿ ಏನೂ ತಿನ್ನದೆ ಇದ್ದರೆ ಅದರಿಂದ ಯಾವುದೇ ಪ್ರಯೋಜವಿಲ್ಲ. ಪುರುಷರಿಗಾಗಿ 8 ಶಕ್ತಿವರ್ಧಕ ಆಹಾರಗಳು

ವ್ಯಾಯಮ ಮಾಡಿ ಬಂದ ಬಳಿಕ ಏನು ತಿನ್ನುತ್ತೀರಿ ಎನ್ನುವುದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ವ್ಯಾಯಮದ ಬಳಿಕ ಪ್ರೋಟೀನ್ ಅಧಿಕವಾಗಿರುವ ಆಹಾರವನ್ನು ತಿಂದರೆ ತುಂಬಾ ಒಳ್ಳೆಯದು. ಅದರಲ್ಲೂ ಒಂದು ಲೋಟ ಹಾಲು ಕುಡಿದರೆ ಅದು ದೇಹಕ್ಕೆ ಶಕ್ತಿ ಒದಗಿಸುವುದು. ವ್ಯಾಯಮಕ್ಕೂ ಮುನ್ನ ಇಂತಹ ಆಹಾರದಿಂದ ದೂರವಿರಿ

ವ್ಯಾಯಮದ ಬಳಿಕ ತಿನ್ನಬಹುದಾದ ಹಲವಾರು ಆಹಾರಗಳ ಪಟ್ಟಿಯೇ ಇದೆ. ಆದರೆ ವ್ಯಾಯಾಮದ ಬಳಿಕ ಊಟ ಮಾಡುವುದನ್ನು ಮಾತ್ರ ತಪ್ಪಿಸಿಕೊಳ್ಳಬಾರದು. ವ್ಯಾಯಮದ ಬಳಿಕ ಊಟ ಮಾಡಿದಾಗ ಅದರಲ್ಲಿನ ಪ್ರೋಟೀನ್ ಸ್ನಾಯುಗಳನ್ನು ಸೇರಿ ದೇಹದ ವ್ಯವಸ್ಥೆಗೆ ಶಕ್ತಿ ನೀಡುತ್ತದೆ. ವ್ಯಾಯಾಮದ ಬಳಿಕ ಆಹಾರ ತಪ್ಪಿಸಿಕೊಳ್ಳಬಾರದು ಎನ್ನುವುದಕ್ಕೆ ಕೆಲವೊಂದು ಕಾರಣಗಳು ಇಲ್ಲಿವೆ...

ಸ್ನಾಯುಗಳಿಗೆ ಆಹಾರ ಅಗತ್ಯ

ಸ್ನಾಯುಗಳಿಗೆ ಆಹಾರ ಅಗತ್ಯ

ವ್ಯಾಯಮದ ವೇಳೆ ಸ್ನಾಯುಗಳಿಗೆ ಹೆಚ್ಚಿನ ಹಾನಿಯಾಗಿರುತ್ತದೆ. ಇದನ್ನು ಸರಿಪಡಿಸಲು ಅದಕ್ಕೆ ಆಹಾರ ಬೇಕಾಗುತ್ತದೆ. ಸ್ನಾಯುಗಳ ಆರೋಗ್ಯವರ್ಧನೆಗಾಗಿ ಅತ್ಯುತ್ತಮ ಆಹಾರಗಳು

ಬೆಳವಣಿಗೆಗೆ ಪೋಷಕಾಂಶ

ಬೆಳವಣಿಗೆಗೆ ಪೋಷಕಾಂಶ

ನೀವು ತಿನ್ನುವಂತಹ ಆಹಾರದಲ್ಲಿ ಬೆಳವಣಿಗೆಗೆ ಬೇಕಾಗುವ ಅಂಶಗಳು ಇಲ್ಲದೆ ಇದ್ದರೆ ಸ್ನಾಯುಗಳು ಬೆಳೆಯಲ್ಲ. ಪ್ರೋಟೀನ್ ಸ್ನಾಯುಗಳ ಬೆಳವಣಿಗೆಗೆ ಪ್ರಮುಖವಾಗಿ ನೆರವಾಗುವುದು. ಲವಲವಿಕೆಯ ಜೀವನ ಶೈಲಿಗೆ ಪ್ರೋಟೀನ್‌ಯುಕ್ತ ಆಹಾರಗಳು...

ವ್ಯಾಯಾಮ ಮಾಡಲು ಶಕ್ತಿ ಒದಗಿಸುವುದು

ವ್ಯಾಯಾಮ ಮಾಡಲು ಶಕ್ತಿ ಒದಗಿಸುವುದು

ವರ್ಕ್ ಔಟ್ ನಂತರ ಸೇವಿಸಬೇಕಾದ 10 ಆಹಾರಗಳು

ದೇಹವು ಆಹಾರವನ್ನು ಚೆನ್ನಾಗಿ ಬಳಸಿಕೊಳ್ಳುವುದು

ದೇಹವು ಆಹಾರವನ್ನು ಚೆನ್ನಾಗಿ ಬಳಸಿಕೊಳ್ಳುವುದು

ವ್ಯಾಯಮದ ಬಳಿಕ ನೀವು ಸೇವಿಸಿದಂತಹ ಆಹಾರವು ಬೇಗನೆ ಕರಗುವುದು. ದೇಹವು ಆ ಸಮಯದಲ್ಲಿ ಶಕ್ತಿಯನ್ನು ಬಯಸುತ್ತಾ ಇರುವ ಕಾರಣ ಕರುಳಿನ ಹೀರಿಕೆ ಶಕ್ತಿಯು ಹೆಚ್ಚಾಗಿರುತ್ತದೆ.

ವ್ಯಾಯಮದ ಬಳಿಕ ಊಟ ಮಾಡುವುದು ಅಗತ್ಯ

ವ್ಯಾಯಮದ ಬಳಿಕ ಊಟ ಮಾಡುವುದು ಅಗತ್ಯ

ವ್ಯಾಯಮದ ಬಳಿಕ ಮಾಡುವಂತಹ ಊಟವು ತುಂಬಾ ಪ್ರಾಮುಖ್ಯವಾದ ಊಟವಾಗಿರುತ್ತದೆ ಎಂದು ಕೆಲವು ತರಬೇತುದಾರರು ಹೇಳುತ್ತಾರೆ. ಕೊಬ್ಬು ಕರಗಿಸಿ ಕಟ್ಟುಮಸ್ತಾದ ದೇಹ ಪಡೆಯಬೇಕು ಎಂದಾದರೆ ವ್ಯಾಯಾಮದ ಬಳಿಕದ ಊಟವನ್ನು ದಿನದ ಮುಖ್ಯ ಊಟವೆಂದು ಪರಿಗಣಿಸಿ. ವ್ಯಾಯಾಮದ ನಂತರ ತಿನ್ನಬಾರದ ಆಹಾರಗಳಿವು

ಅತಿಯಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ....

ಅತಿಯಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ....

ನೀವು ಅತಿಯಾಗಿ ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ವ್ಯಾಯಾಮದ ಬಳಿಕ ವಿದ್ಯುದ್ವಿಚ್ಛೇದ್ಯಗಳನ್ನು ಪುನಃ ಭರ್ತಿ ಮಾಡಿಕೊಳ್ಳುವುದು ಅನಿವಾರ್ಯ. ಇಲ್ಲವಾದಲ್ಲಿ ನೀವು ತುಂಬಾ ಬಳಲಿಕೆ ಅನುಭವಿಸಲಿದ್ದೀರಿ.

English summary

Reasons To Eat After A Workout

There is no use if you lift heavy and eat nothing soon after your workout. Of course, you eat three meals a day; that is a different story but what you eat soon after you come back from the gym has its own role to play.
Story first published: Friday, August 19, 2016, 19:26 [IST]
X
Desktop Bottom Promotion