Latest Updates
-
ಮೈದಾ, ಮೊಟ್ಟೆ ಎರಡೂ ಬೇಡ! ಈ ಹೊಸ ರುಚಿಯ ಕೇಕ್ ಮಾಡಿ ನೋಡಿ.. ಶುಗರ್ ಇರುವವರು ತಿನ್ನಬಹುದು -
ಉದ್ದು ಬೇಡ 1 ಕಪ್ ರವೆ ಇದ್ರೆ ಥಟ್ ಅಂತ ವಡೆ ಮಾಡಿಕೊಳ್ಳಿ: ಬ್ರೇಕ್ಫಾಸ್ಟ್ಗೆ ಇದು ಬೆಸ್ಟ್ ರೆಸಿಪಿ! -
ಕೊನೆಗೂ ಕಣ್ಣು ಬಿಟ್ಟ ಶುಕ್ರ-ಶನಿ: ಈ ರಾಶಿಯವರ ಜೀವನದಲ್ಲಿ ಭೌತಿಕ ಸುಖ! ಸಂಪತ್ತು ತುಂಬಿ ತುಳುಕಲಿದೆ -
ಬದನೆಕಾಯಿ ಕಹಿ ತೆಗೆಯೋದು ಹೇಗೆ? ಈ ಸಿಂಪಲ್ ಟ್ರಿಕ್ ಬಳಸಿ.. ಬಲು ರುಚಿ! ಕಹಿ ಅನ್ನೋದೇ ಇರಲ್ಲ -
ಮಧ್ಯಪ್ರಾಚ್ಯ ಸಂಘರ್ಷ: ಭಾರತದಲ್ಲಿ ಏರಿಕೆಯಾಗಲಿದೆ ಈ ವಸ್ತುಗಳ ಬೆಲೆ! -
ಇವ್ರು ಬೇಗ ಲವ್ನಲ್ಲಿ ಬೀಳ್ತಾರೆ.. ಮದುವೆ ಅಂದ್ರೆ ಅನ್ಪ್ರೆಡಿಕ್ಟಬಲ್! ನಿಮ್ಮ ಜನ್ಮದಿನಾಂಕ ಇದೇನಾ? -
ಬೇಸಿಗೆಯ ಉರಿ ಬಿಸಿಲಿನಲ್ಲಿ ಫ್ರಿಡ್ಜ್ನಲ್ಲಿಟ್ಟ ಈ ಹಣ್ಣು ಸೇವಿಸಬೇಡಿ! ಎದುರಾಗುತ್ತೆ ಆಪತ್ತು! -
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್ -
ಬಿಸಿಲಿನ ತಾಪಕ್ಕೆ ಕಣ್ಣು ಉರಿಗೆ ಈ ಪುಡಿ ಬೆಸ್ಟ್! ದಿನ 1 ಚಮಚ ಕಣ್ಣಿನ ಎಲ್ಲಾ ಸಮಸ್ಯೆ ಕಡಿಮೆಯಾಗುತ್ತೆ -
ಭಾಲಚಂದ್ರ ಸಂಕಷ್ಟ ಚತುರ್ಥಿ 2026: ಈ 6 ರಾಶಿಗಳಿಗೆ ಗಜಕೇಸರಿ ಯೋಗ! ಹಣದ ಮಳೆ ಸುರಿಸಲಿದ್ದಾರೆ ಗಣಪ
ಸ್ನಾಯುಗಳ ಆರೋಗ್ಯವರ್ಧನೆಗಾಗಿ ಅತ್ಯುತ್ತಮ ಆಹಾರಗಳು
ನಮಗೆಲ್ಲಾ ಈಗಾಗಲೇ ತಿಳಿದಿರುವ೦ತೆ, ಸಮರ್ಪಕವಾದ, ಆರೋಗ್ಯಕರ, ಹಾಗೂ ಕಟ್ಟುಮಸ್ತಾದ ಸುಂದರ ಮೈಕಟ್ಟಿನ ಶರೀರವನ್ನು ಪಡೆಯಲು ಅಪಾರ ಶ್ರಮವಹಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಖಚಿತವಾಗಿಯೂ ನಮಗೆ ನೆರವಾಗಬಲ್ಲ ಶಿಸ್ತುಬದ್ಧ ವ್ಯಾಯಾಮ ಕ್ರಮದ ಜೊತೆಗೆ, ವಿವೇಚನಾಯುಕ್ತವಾದ ಆಹಾರಕ್ರಮವೂ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಆದರೆ ಆಹಾರದ ವಿಷಯ ಬಂದಾಗ ದೇಹದ ಸ್ನಾಯುಗಳ ಬೆಳವಣಿಗೆಗಿಂತ ಕೊಬ್ಬಿನ ಶೇಖರಣೆಗೆ ಮಹತ್ವ ನೀಡುವ ಆಹಾರಗಳು ಸುಂದರ ಮೈಕಟ್ಟಿನ ಕನಸಿಗೆ ನೀರೆರೆಚುತ್ತವೆ. ಉತ್ತಮ ಆರೋಗ್ಯದಿಂದಿರುವ ಮತ್ತು ಸರಿಯಾದ ಗಾತ್ರದ ಸ್ನಾಯುಗಳನ್ನು ಹೊಂದಲು ಒಂದೇ ತೆರನಾದ ಆಹಾರ ಸಾಕಾಗದು. ವಿವಿಧ ಅಂಶಗಳುಳ್ಳ ಆಹಾರಗಳ ಸರಿಯಾದ ಸಂಯೋಜನೆ ಹಾಗೂ ಸರಿಯಾದ ಕ್ರಮದ ವ್ಯಾಯಾಮ ಸುಂದರ ಮೈಕಟ್ಟು ಹಾಗೂ ಸುದೃಢ ಸ್ನಾಯುಗಳಿಗೆ ಅಗತ್ಯವಾಗಿದೆ. ಪುರುಷರ ಆಕರ್ಷಕ ಮೈಕಟ್ಟಿಗೆ ಸತ್ವಯುತ ಆಹಾರ
ಅಂದ ಹಾಗೇ ನಮ್ಮ ದೇಹಕ್ಕೆ ನಿಗದಿತ ಪ್ರಮಾಣದಲ್ಲಿ ಕೊಬ್ಬೂ ಇರಬೇಕು ಹಾಗೂ ಚಟುವಟಿಕೆಗೆ ತಕ್ಕನಾಗಿ ಸ್ನಾಯುಗಳೂ ಇರಬೇಕು. ಈ ಸಮತೋಲನವನ್ನು ಕಾಪಾಡಲು ಸರಿಯಾದ ಸಂಯೋಜನೆಯ ಆಹಾರಗಳನ್ನು ಸಕಾಲದಲ್ಲಿ ಸೇವಿಸುವುದು ಅಗತ್ಯವಾಗಿದೆ ಬನ್ನಿ ಅಂತಹ ಆಹಾರ ಯಾವುದು ಎಂಬುದನ್ನು ನೋಡೋಣ..

ಹಾಲು
ಮಾ೦ಸಖ೦ಡವನ್ನು ಹೆಚ್ಚಿಸಿಕೊಳ್ಳುವುದರ ವಿಚಾರದ ಕುರಿತು ಹೇಳುವುದಾದರೆ, ಹಾಲು ನಿಮಗೆ ಬಹಳಷ್ಟು ಸಹಕಾರಿಯಾಗಿದೆ. ಮೆಚ್ಚತಕ್ಕ ಪ್ರಮಾಣದಲ್ಲಿ ಪೋಷಕಾ೦ಶಗಳು, ಪ್ರೋಟೀನ್, ಹಾಗೂ ಅಮೈನೋ ಆಮ್ಲಗಳನ್ನು ಹೊ೦ದಿರುವ ಕಾರಣಕ್ಕಾಗಿ ದೃಢಕಾಯವನ್ನು ಪಡೆಯಲು ನೀವು ಸೇವಿಸಲೇಬೇಕಾದ ಅತ್ಯುತ್ತಮ ಆಹಾರವಸ್ತುಗಳ ಪೈಕಿ ಹಾಲೂ ಸಹ ಸ್ಥಾನವನ್ನು ಪಡೆಯುತ್ತದೆ.

ಪಾಲಕ್ ಸೊಪ್ಪು
ಬಸಲೆ ಸೊಪ್ಪು ಮತ್ತು ಪಾಲಕ್ ಸೊಪ್ಪಿನಲ್ಲಿ ಕ್ಯಾಲ್ಸಿಯಂ (3%), ಕಬ್ಬಿಣ (5%), ಮೆಗ್ನೀಶಿಯಂ (6%) ರಷ್ಟು ಹೇರಳವಾಗಿದೆ. ಅಲ್ಲದೇ ಹೆಚ್ಚಿನ ಪ್ರಮಾಣದಲ್ಲಿ (13%) ಮ್ಯಾಂಗನೀಸ್ ಸಹಾ ಇದೆ. ಈ ಧಾತುಗಳು ಸ್ನಾಯುಗಳಿಗೆ ಮತ್ತು ಮೂಳೆಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತವೆ. ವ್ಯಾಯಾಮದಲ್ಲಿ ಕೊಬ್ಬು ಕರಗಲು ಹಾಗೂ ಸ್ನಾಯುಗಳ ಬೆಳವಣಿಗೆಗೆ ಸಹಾಯ ಮಾಡುತ್ತವೆ.

ಕುಚ್ಚಲಕ್ಕಿ
ವ್ಯಾಯಾಮ ಶಾಲೆ ಅಥವಾ ಜಿಮ್ ಗಳಿಗೆ ಹೋಗುವವರ ಪಾಲಿಗೆ ಕುಚ್ಚಲಕ್ಕಿಯು ಒ೦ದು ಅತ್ಯ೦ತ ಜನಪ್ರಿಯ ಆಹಾರವಸ್ತುವಾಗಿದೆ. ಸ೦ಕೀರ್ಣ ಶರ್ಕರಪಿಷ್ಟಗಳ ಸಮೃದ್ಢ ಆಗರವು ಇದಾಗಿದ್ದು, ಸುಂದರ ಮೈಕಟ್ಟಿನ ದೇಹದಾರ್ಢ್ಯವನ್ನು ಹೊ೦ದಬಯಸುವವರ ಹಾಗೂ ಜಿಮ್‌ಗಳಿಗೆ ಹೋಗುವವರ ದೇಹದಲ್ಲಿ ನಿಯ೦ತ್ರಿತ ರೀತಿಯಲ್ಲಿ ಶಕ್ತಿಯ ಬಿಡುಗಡೆಗೆ ಕುಚ್ಚಲಕ್ಕಿಯು ನೆರವಾಗುತ್ತದೆ.

ಮೊಟ್ಟೆಗಳು
ಮೊಟ್ಟೆಗಳು ಮಹತ್ತರವಾದ ವಿಟಮಿನ್ ಡಿ ಯನ್ನೂ ಒಳಗೊ೦ಡ೦ತೆ ಪ್ರೋಟೀನ್ ಹಾಗೂ ಇತರ ವಿಟಮಿನ್ ಅಧಿಕ ಪ್ರಮಾಣದಲ್ಲಿ ಹೊ೦ದಿವೆ. ಇವೆಲ್ಲವೂ ಮಾ೦ಸಖ೦ಡಗಳ ಬೆಳವಣಿಗೆಯಲ್ಲಿ ನೆರವಾಗುತ್ತವೆ. ದೃಢಕಾಯವನ್ನು ಪಡೆಯಬಯಸುವವರು ಪ್ರತಿದಿನವೂ ಮೊಟ್ಟೆಯೊ೦ದನ್ನು ಸೇವಿಸುವುದು ಒ೦ದು ಸಾಮಾನ್ಯವಾದ ರೂಢಿಯಾಗಿದೆ.

ಸರಿಯಾಗಿ ನೀರು ಸೇವಿಸಿ
ದ್ರವ ಮತ್ತು ನೀರನ್ನು ಹೆಚ್ಚು ಸೇವನೆ ಮಾಡುವುದು ದೇಹದಾರ್ಢ್ಯ ಮತ್ತು ಸ್ನಾಯುಗಳ ಬೆಳವಣಿಗಗೆ ಅತಿ ಮುಖ್ಯ. ದಿನವಿಡೀ ತುಂಬಾ ನೀರು ಕುಡಿಯಿರಿ. ಇದರಿಂದ ವ್ಯಾಯಾಮದ ವೇಳೆ ನಿರ್ಜಲೀಕರಣವಾಗುವುದು ತಪ್ಪುತ್ತದೆ. ವ್ಯಾಯಾಮದ ವೇಳೆ ಪ್ರತೀ 10-20 ನಿಮಿಷಕ್ಕೊಮ್ಮೆ ನೀರು ಕುಡಿಯಿರಿ. ನಿರ್ಜಲೀಕರಣವಾದರೆ ಅದು ನಿಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಬಾಳೆಹಣ್ಣು
ಬಾಳೆಹಣ್ಣುಗಳು ಪುರುಷ ಹಾರ್ಮೋನು ಅಥವಾ ಟೆಸ್ಟೋಸ್ಟೆರೋನ್ ನ ಮಟ್ಟವನ್ನು ಗಣನೀಯವಾಗಿ ಹೆಚ್ಚಿಸುವ ಪರಿಣಾಮಕಾರಿಯಾದ ಆಹಾರವಸ್ತುಗಳು ಆಗಿವೆ. ಸ್ನಾಯುಗಳ ಶಕ್ತಿಯುತ ಬೆಳವಣಿಗೆಗೆ ಟೆಸ್ಟೋಸ್ಟೆರೋನ್ ಹಾರ್ಮೋನು ಅತೀ ಅಗತ್ಯ. ಬಾಳೆಹಣ್ಣುಗಳು ದೈಹಿಕ ಕ್ಷಮತೆಯನ್ನು ಹೆಚ್ಚಿಸುವುದರ ಜೊತೆಗೆ, ಮಾ೦ಸಖ೦ಡಗಳನ್ನೂ ಸಹ ವೃದ್ಧಿಸುತ್ತವೆ.



Click it and Unblock the Notifications











