Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವ್ಯಾಯಾಮದ ನಂತರ ತಿನ್ನಬಾರದ ಆಹಾರಗಳಿವು
ವ್ಯಾಯಾಮ ಮಾಡಿದ ಯಾವ ಆಹಾರ ತಿನ್ನುತ್ತೀರ ಅದು ದೇಹದ ಮೇಲೆ ತುಂಬಾ ಪ್ರಭಾವವನ್ನು ಬೀರುತ್ತದೆ. ಪರಿಣಿತರ ಪ್ರಕಾರ ವ್ಯಾಯಾಮ ಮಾಡಿದ ಮೇಲೆ ಕಾರ್ಬೋಹೈಡ್ರೇಟ್, ಪ್ರೊಟೀನ್ ಹಾಗೂ ನೀರಿನಂಶವಿರುವ ಆಹಾರವನ್ನು ತಿನ್ನಬೇಕು.
ವ್ಯಾಯಾಮ ಮಾಡುವಾಗ ನಮ್ಮ ದೇಹವು ಗ್ಲೂಕೋಸ್ ಅನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ. ಆದ್ದರಿಂದ ವ್ಯಾಯಮ ಮಾಡಿದ ನಂತರ ರಕ್ತ ಕಣಗಳಲ್ಲಿ ಸಕ್ಕರೆಯಂಶ ನಿಧಾನಕ್ಕೆ ಹೆಚ್ಚಾಗುವಂತಹ ಆಹಾರಗಳನ್ನು ತೆಗೆದುಕೊಳ್ಳಬೇಕೆ ಹೊರತು ರಕ್ತ ಕಣಗಳ ಸಂಚಾರವನ್ನು ತಡೆಯುವಂತಹ ಆಹಾರವನ್ನು ತೆಗೆದುಕೊಳ್ಳಬಾರದು.
ಈ ಕೆಳಗೆ ನಾವು ವ್ಯಾಯಾಮ ಮಾಡಿದ ನಂತರ ತಿನ್ನಬಾರದ ಆಹಾರಗಳ ಪಟ್ಟಿ ನೀಡಿದ್ದೇವೆ (ಈ ಆಹಾರಗಳನ್ನು ವ್ಯಾಯಾಮ ಮಾಡಿದ 4-5 ಗಂಟೆಗಳ ಬಳಿಕ ತಿನ್ನಬಹುದು.

ಚೀಸ್
ಚೀಸ್ ನಲ್ಲಿ ಸ್ಯಾಚುರೇಟಡ್ ಕೊಬ್ಬಿನಂಶ ಮತ್ತು ಉಪ್ಪಿನಂಶ ಇರುತ್ತದೆ. ಒದು ಮೈಲಿ ಓಡಿ ಬಂದ ನಂತರ ವಿಶ್ರಾಂತಿ ತೆಗೆದುಕೊಳ್ಳುವಾಗ ಚೀಸ್ ಫ್ಲೇವರ್ ಇರುವ ಯಾವುದೇ ತಿಂಡಿಗಳನ್ನು ತಿನ್ನಬಾರದು.

ಕರಿದ ಮಾಂಸ
ವ್ಯಾಯಾಮ ಮಾಡಿದ ನಂತರ ಕರಿದ ಮಾಂಸ ಹಾಕಿ ತಯಾರಿಸುವ ಸ್ನ್ಯಾಕ್ಸ್ ತಿನ್ನಬೇಡಿ. ಬೇಯಿಸಿದ ಮೀನು ಮತ್ತು ಮಾಂಸವನ್ನು ತಿನ್ನಬಹುದು

ಧ್ಯಾನ್ಯಗಳು
ಇವುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೂ ಇವುಗಳನ್ನು ವ್ಯಾಯಾಮ ಮಾಡಿದ ತಕ್ಷಣ ಇವುಗಳನ್ನು ತಿನ್ನಬಾರದು. ಇದರ ಬದಲು ನಟ್ಸ್, ಹಣ್ಣುಗಳನ್ನು ತಿನ್ನಬಹುದು.

ಬ್ರೆಡ್
ಬ್ರೆಡ್, ಸ್ಯಾಂಡ್ ವಿಚ್ ತಿಂದರೆ ಇದು ಬೇಗನೆ ಸಕ್ಕರೆಯಂಶವಾಗಿ ಪರಿವರ್ತನೆಗೊಳಿಸುತ್ತದೆ. ವ್ಯಾಯಾಮ ಮಾಡಿದ ನಂತರ ತಕ್ಷಣ ತಿಂದ ಆಹಾರ ಸಕ್ಕರೆಯಂಶವಾಗಿ ಪರಿವರ್ತನೆಯಾಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಹಣ್ಣಿನ ಜ್ಯೂಸ್
ವ್ಯಾಯಾಮ ಮಾಡಿದ ಕೂದಲೇ ಹಣ್ಣಿನ ಜ್ಯೂಸ್ ಕುಡಿಯಬೇಡಿ. ಏಕೆಂದರೆ ಇದರಲ್ಲಿರುವ ಸಕ್ಕರೆಯಂಶವನ್ನು ದೇಹವು ಬೇಗನೆ ಹೀರಿಕೊಳ್ಳುತ್ತದೆ. ವ್ಯಾಯಾಮ ಮಾಡಿದ ಹರ್ಬಲ್ ಟೀ ಕುಡಿಯಿರಿ.

ಮೊಟ್ಟೆ
ಮೊಟ್ಟೆ ಆರೋಗ್ಯಕ್ಕೆ ಒಳ್ಳೆಯದು. ಆದರೆ ವ್ಯಾಯಾಮದ ನಂತರ ಇದನ್ನು ಫ್ರೈ ಮಾಡಿ ತಿನ್ನಬಾರದು. ಬೇಯಿಸಿ ತಿನ್ನುವುದು ಆರೋಗ್ಯಕರ ಕ್ರಮ.

ಮಿಲ್ಕ್ ಶೇಕ್
ಮಿಲ್ಕ್ ಶೇಕ್ ಕುಡಿಯಲು ರುಚಿಕರವಾಗಿರುತ್ತದೆ, ಅದರೆ ಅದನ್ನು ವ್ಯಾಯಾಮ ಮಾಡಿದ ನಂತರ ಕುಡಿದರೆ ವ್ಯಾಯಾಮ ಮಾಡಿದರ ಪ್ರಯೋಜನ ಇಲ್ಲವಾಗುತ್ತೆ.

ಹಸಿ ತರಕಾರಿ
ಹಸಿ ತರಕಾರಿಗಳಲ್ಲಿ ಪೋಷಕಾಂಶ ಅಧಿಕವಿರುತ್ತದೆ. ಆದರೆ ಇದನ್ನು ವ್ಯಾಯಾಮ ಮಾಡಿದ ಕೂಡಲೇ ತಿನ್ನಬೇಡಿ. ವ್ಯಾಯಮ ಮಾಡಿದ ತಕ್ಷಣ ತಿಂದರೆ ಮಸಲ್ ಪವರ್ ಕಡಿಮೆಯಾಗುವುದು.



Click it and Unblock the Notifications
