Latest Updates
-
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
IMD ರೆಡ್ ಅಲರ್ಟ್: ಭಾರಿ ಮಳೆಯಿಂದ ಮನೆಯನ್ನು ರಕ್ಷಿಸಲು ಈ 5 ಮುನ್ನೆಚ್ಚರಿಕೆಗಳು ಕಡ್ಡಾಯ! -
ಗುರು ಪೂರ್ಣಿಮಾ ಉಪವಾಸ: ಮಧುಮೇಹಿಗಳು ಆರೋಗ್ಯವಾಗಿರಲು ಈ ಸಾತ್ವಿಕ ಆಹಾರ ಕ್ರಮ ಪಾಲಿಸಿ -
ಪೇಪರ್ ಸೋರಿಕೆ ಮಾಡಿದ್ರೆ 10 ವರ್ಷ ಜೈಲು: ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಿಗಲಿದೆ ಹೊಸ ಭದ್ರತೆ! -
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ
ವೈದಿಕ ಶಾಸ್ತ್ರದ ಪ್ರಕಾರ ಮಾರ್ಚ್ 10 (March 10 Horoscope)ರ ನಿಮ್ಮ ರಾಶಿಫಲ ನೋಡೋಣ:
ಮೇಷ ರಾಶಿ
ಮೇಷ ರಾಶಿ ಜನರಿಗೆ ಈ ದಿನವು ಸಮಸ್ಯೆಗಳಿವೆ. ನೀವು ಅಂದುಕೊಂಡಿದ್ದ ಕೆಲಸವೊಂದು ಅರ್ಧದಲ್ಲೇ ನಿಲ್ಲಲಿದೆ. ನಿಮ್ಮ ಹಣಕಾಸಿನ ವಿಚಾರದಲ್ಲಿ ಮತ್ತೆ ಅಡ್ಡಿಗಳ ಎದುರಿಸುವಿರಿ. ಅನೇಕರಿಗೆ ಈ ದಿನವು ಶ್ರಮದಾಯಕ ಕೆಲಸದಲ್ಲಿ ಭಾಗಿಯಾಗುವ ಸಮಯ ಆಗಿರಲಿದೆ.
ವೃಷಭ ರಾಶಿ
ನೀವಿಂದು ಹಣಕಾಸು ವಿಚಾರದಲ್ಲಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ದೊಡ್ಡ ಮೊತ್ತ ನಿಮ್ಮ ಕೈ ತಪ್ಪಬಹುದು. ಆರೋಗ್ಯದ ವಿಚಾರವಾಗಿ ನಿರ್ಲಕ್ಷ್ಯ ಮಾಡಬೇಡಿ. ಸಾಲ ಮಾಡುವುದು ಮತ್ತು ನೀಡುವುದು ಎರಡೂ ನಿಮಗೆ ಸಮಸ್ಯೆಗಳ ತರಬಹುದು.

ಮಿಥುನ ರಾಶಿ
ಮಿಥುನ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ನಿಮ್ಮ ಹಲವು ವಿಚಾರದಲ್ಲಿ ಧನಾತ್ಮಕ ಸ್ಥಿತಿ ಇದೆ. ಗೃಹಿಣಿಯರು ಮನೆಗಾಗಿ ಖರ್ಚು ಮಾಡುವುದು ಶುಭವಾಗುತ್ತದೆ. ಅನೇಕರಲ್ಲಿ ಈ ದಿನವು ಶುಭ ಪ್ರಯಾಣಕ್ಕೆ ಕಾರಣವಾಗಲಿದೆ.
ಕರ್ಕ ರಾಶಿ
ಕರ್ಕ ರಾಶಿ ಜನರಿಗೆ ಈ ದಿನವು ಅನುಕೂಲಕ್ಕಿಂತ ಅನಾನುಕೂಲವನ್ನು ಹೆಚ್ಚಾಗಿ ತರಲಿದೆ. ನಿಮ್ಮ ಸಮಯವನ್ನು ಸೂಕ್ತವಾಗಿ ನಿರ್ವಹಿಸಿ. ಅಪಾಯಕಾರಿ ಕೆಲಸಗಳ ಮಾಡುವ ಮಂದಿಗೆ ಇಂದು ಎಚ್ಚರಿಕೆಯಿಂದ ಇರಲು ಸಲಹೆ ನೀಡಲಾಗುತ್ತದೆ.
ಸಿಂಹ ರಾಶಿ
ಸಿಂಹ ರಾಶಿ ಜನರಿಗೆ ಈ ದಿನವು ಅನುಕೂಲಕರ. ನೀವು ಮಾಡಬೇಕಿದ್ದ ಕೆಲಸಗಳಲ್ಲಿ ಶ್ರಮ ಹಾಕಿ, ಹಾಗೆ ಪ್ರಾಮಾಣಿಕವಾಗಿ ಮಾಡುವುದು ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿದೆ. ನಿಮ್ಮ ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ಮನೆಯ ವಾತಾವರಣವು ಶಾಂತವಾಗಿರಲಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯ ಜನರಿಗೆ ಈ ದಿನವು ಅನುಕೂಲಕರ. ನೀವು ಬಹುದೊಡ್ಡ ನಿರ್ಧಾರ ತೆಗೆದುಕೊಳ್ಳುವ ಸಮಯವಿದು. ಅದ್ರಲ್ಲೂ ಉದ್ಯೋಗ ಸಂಬಂಧಿತ ವಿಚಾರವಾಗಿ ಶುಭ ಸುದ್ದಿ ಕೇಳುವಿರಿ. ವೇತನ ಸಂಬಂಧಿತ ಸಮಸ್ಯೆಗಳಿದ್ದರೆ ನಿವಾರಣೆಯಾಗಲಿದೆ.
ತುಲಾ ರಾಶಿ
ತುಲಾ ರಾಶಿಯವರಿಗೆ ಸಮಸ್ಯೆಗಳಿವೆ. ನಿಮ್ಮ ವ್ಯಾಪಾರ ಸಂಬಂಧಿತ ನಿರ್ಧಾರಗಳು ಫಲ ನೀಡದೆ ಇರಬಹುದು. ದೂರ ಪ್ರಯಾಣಗಳ ಕುರಿತಾಗಿ ಯೋಜನೆಗಳ ರೂಪಿಸುವಿರಿ. ದಾಂಪತ್ಯ ವಿಚಾರವಾಗಿ ತಾಳ್ಮೆಯಿಂದ ಇರುವುದು ಉತ್ತಮ. ಸವಾಲುಗಳನ್ನು ಎದುರಿಸುವಿರಿ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿ ಜನರಿಗೆ ಈ ದಿನವು ಅಚ್ಚರಿಯ ಫಲಿತಾಂಶ ತರಲಿದೆ. ಯಾರಿಂದಾದರು ಹಣ ಪಡೆಯುವುದು ನಿಮಗೆ ಕಷ್ಟವಾಗುತ್ತದೆ. ಮನೆಗಾಗಿ ನೀವು ಮಾಡುವ ಖರ್ಚುಗಳಿಗೆ ಸಂತಸವಿದೆ. ಪ್ರಯಾಣಗಳ ಮಾಡುವಾಗ ಎಚ್ಚರಿಕೆಯಿಂದಿರಿ.
ಧನು ರಾಶಿ
ಧನು ರಾಶಿ ಜನರಿಗೆ ಈ ದಿನವು ಅನುಕೂಲಕರ. ನೀವು ಮಾಡಬೇಕಿದ್ದ ಕೆಲಸಗಳನ್ನು ಸಮಯದೊಳಗೆ ಮಾಡುವಿರಿ. ಗೃಹಿಣಿಯರು ಅನಗತ್ಯ ಮಾತು, ಕಲಹಳಿಂದ ದೂರವೇ ಇರುವುದು ಉತ್ತಮ. ಉದ್ಯೋಗದ ಸ್ಥಳದಲ್ಲಿ ಎಚ್ಚರದಿಂದ ಇರಿ. ದಿನದ ಅಂತ್ಯದಲ್ಲಿ ನಿಮಗೆ ಹಣ ಖರ್ಚು ಹೆಚ್ಚಾಗಲಿದೆ.
ಮಕರ ರಾಶಿ
ಮಕರ ರಾಶಿಯ ಜನರಿಗೆ ಈ ದಿನವು ಬಹಳ ಅನುಕೂಲವಿದೆ, ನಿಮ್ಮ ಹಣಕಾಸು ವಿಚಾರದಲ್ಲಿ ಹೊಸ ರೀತಿಯ ಫಲಿತಾಂಶವಿದೆ. ವ್ಯಾಪಾರಿಗಳಿಗೆ ಶುಭವಿದೆ. ಅಮೂಲ್ಯ ವಸ್ತುಗಳ ಮೇಲೆ ಗಮನವಿಡಿ. ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ.
ಕುಂಭ ರಾಶಿ
ನಿಮಗಿಂದು ಮಿಶ್ರಫಲವಿದೆ. ಯಾರಿಗಾದರು ಹಣ ನೀಡುವುದು ಅಥವಾ ಪಡೆಯುವುದು ಬಾಕಿ ಇದ್ದರೆ ಇಂದು ಒತ್ತಡವಿದೆ. ಮನೆಯ ವಿಚಾರವೊಂದಕ್ಕೆ ಮನಸ್ತಾಪಗಳಿವೆ. ಪ್ರಯಾಣ ಮಾಡಬೇಕಾಗುತ್ತದೆ. ವಾಹನ ಸಂಬಂಧಿತ ವಿಚಾರದಲ್ಲಿ ಎಚ್ಚರ.
ಮೀನ ರಾಶಿ
ಮೀನ ರಾಶಿಯವರಗೆ ಈ ದಿನ ಮಿಶ್ರಫಲ. ದಿನದ ಆರಂಭದಲ್ಲಿ ಪಂಚೇಂದ್ರಿಯ ಸಂಬಂಧಿತ ವಿಚಾರದಲ್ಲಿ ಅನಾರೋಗ್ಯ ಇರಬಹುದು. ಮನೆಯ ಹಿರಿಯ ಸದಸ್ಯರ ಆರೋಗ್ಯ ಏರುಪೇರು ಸಂಬಂಧ. ನಿಮ್ಮ ಮನೆಯಲ್ಲಿ ಶುಭ ಕಾರ್ಯ ಸಂಬಂಧಿತ ವಿಚಾರದಲ್ಲಿ ಮಾತುಕತೆಗಳಿವೆ.



Click it and Unblock the Notifications