Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ವ್ಯಾಯಮಕ್ಕೂ ಮುನ್ನ ಇಂತಹ ಆಹಾರದಿಂದ ದೂರವಿರಿ
ನಿತ್ಯವೂ ವ್ಯಾಯಮ ಮಾಡುವವರಿಗೆ ಹೆಚ್ಚಿನ ಪೋಷಕಾಂಶಗಳ ಅವಶ್ಯಕತೆಯಿದೆ. ಇದೇ ಕಾರಣದಿಂದ ಇವರು ಹೆಚ್ಚು ಹೆಚ್ಚಾಗಿ ಮೊಟ್ಟೆ, ಮಾಂಸ, ಹಾಲನ್ನು ಸೇವಿಸುತ್ತಾರೆ. ಸುದೃಢ ಮೈಕಟ್ಟಿಗೆ ಚೆನ್ನಾಗಿ ತಿನ್ನಬೇಕು ಎಂಬ ಅಭಿಪ್ರಾಯ ಜನರಲ್ಲಿದೆ. ಅಂದರೆ ವ್ಯಾಯಮಕ್ಕೂ ಮುನ್ನ ಹೆಚ್ಚು ಹೆಚ್ಚಾಗಿ ಆಹಾರವನ್ನು ಸೇವಿಸಬೇಕು ಹಾಗೂ ಹಾಲು ಮೊಸರು ತುಪ್ಪವನ್ನು ಸೇವಿಸಬೇಕು. ಆದರೆ ವ್ಯಾಯಮಕ್ಕೂ ಮೊದಲು ಯಾವುದೇ ಆಹಾರವನ್ನು ಅರಿವಿಲ್ಲದೇ ಸೇವಿಸುವುದು ಆರೋಗ್ಯಕ್ಕೆ ಮಾರಕ! ವ್ಯಾಯಾಮಕ್ಕಿಂತ ಮೊದಲು ಬಿಸಿಬಿಸಿ ಕಾಫಿಯನ್ನು ಸೇವಿಸಿ ನೋಡಿ!
ಕೆಲವು ಆಹಾರಗಳನ್ನು ಸೇವಿಸಲೂಬಾರದು ಮತ್ತು ಕೆಲವನ್ನು ಮಿತಿಯೊಳಗೇ ಇರಿಸಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಆಹಾರಗಳು ಯಾವುದು ಎಂಬ ಪ್ರಶ್ನೆಗೆ ಉತ್ತರವನ್ನು ಕೆಳಗಿನ ಸ್ಲೈಡ್ ಶೋ ನೀಡುತ್ತದೆ. ಬನ್ನಿ ವ್ಯಾಯಮಕ್ಕಾಗಿ ಆರೋಗ್ಯಕರ ಮತ್ತು ಸೂಕ್ತವಾದ ಆಹಾರಗಳನ್ನು ಆಯ್ದುಕೊಳ್ಳಲು ನಿಮಗೆ ಇಂದು ಬೋಲ್ಡ್ ಸ್ಕೈ ತಂಡ ನೆರವಾಗುತ್ತಿದೆ. ಉತ್ತಮ ಆಹಾರಗಳು ಯಾವುವು ಮತ್ತು ಯಾವ ಆಹಾರಗಳನ್ನು ತ್ಯಜಿಸಬೇಕು ಎಂಬ ವಿವರಗಳನ್ನು ನೀಡಲಾಗಿದೆ...

ಬೆಣ್ಣೆಹಣ್ಣು - ಬೇಡ
ಬೆಣ್ಣೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಕರಗುವ ನಾರು, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬು ಇದೆ. ಆದರೆ ಈ ಕೊಬ್ಬಿಗೆ ನಿದ್ದೆ ಬರಿಸುವ ಗುಣವಿರುವುದರಿಂದ ಪೋಷಕಾಂಶಗಳು ಲಭ್ಯವಾದರೂ ದೇಹಕ್ಕೆ ಲಭಿಸುವಾಗ ಆಗುವ ಮಂಪರು ಅನಾಹುತಕ್ಕೂ ದಾರಿಯಾಗಬಹುದು. ಆದ್ದರಿಂದ ಬೆಣ್ಣೆಹಣ್ಣು ಅಥವಾ ಇದರ ಜ್ಯೂಸ್ ಸೇವನೆಯನ್ನು ವ್ಯಾಯಾಮಕ್ಕೂ ಮೊದಲು ಮಾಡದೇ ಇರುವುದೇ ಜಾಣತನ.

ಸೋಡಾ - ಬೇಡ
ವ್ಯಾಯಾಮಕ್ಕೂ ಮೊದಲು ಸೇವಿಸಬಾರದ ಪೇಯಗಳಲ್ಲಿ ಸೋಡಾ ಸಹಾ ಒಂದು. ಇದರಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಕಾರ್ಬನ್ ಡೈ ಆಕ್ಸೈಡ್ ಇರುವುದರಿಂದ ಇದು ಹೊಟ್ಟೆಯನ್ನು ಕೆಡಿಸಬಹುದು.

ಸೋಡಾ - ಬೇಡ
ಆದ್ದರಿಂದ ವ್ಯಾಯಾಮಕ್ಕೂ ಮೊದಲು ಸಕ್ಕರೆ ಕಡಿಮೆ ಇರುವ ಪೇಯಗಳನ್ನು ಸೇವಿಸುವುದು ಉತ್ತಮ.

ಒಣಫಲಗಳು - ಬೇಡವೇ ಬೇಡ
ಯಾವುದೇ ಒಣಫಲಗಳನ್ನು ಹುರಿಯುವಾಗ ರುಚಿಗಾಗಿ ಕೊಂಚವಾದರೂ ಉಪ್ಪನ್ನು ಬಳಸಲಾಗುತ್ತದೆ. ನಾಲ್ಕಾರು ಫಲಗಳನ್ನು ತಿನ್ನುತ್ತಿದ್ದಂತೆಯೇ ದೇಹಕ್ಕೆ ಅಗತ್ಯವಿರುವ ಉಪ್ಪಿನ ಪ್ರಮಾಣವನ್ನು ಮೀರಿ ಒಣಫಲಗಳ ಮೂಲಕ ಉಪ್ಪು ಅಗಾಧ ಪ್ರಮಾಣದಲ್ಲಿ ಒಳಪ್ರವೇಶಿಸುತ್ತದೆ. ಇದು ದೇಹದ ದ್ರವಾಹಾರಗಳ ಸಂತುಲನೆಯನ್ನು ಏರುಪೇರುಗೊಳಿಸುತ್ತದೆ.

ಒಣಫಲಗಳು - ಬೇಡವೇ ಬೇಡ
ಸಾಮಾನ್ಯವಾಗಿ ದೇಹ ಈ ಹೆಚ್ಚುವರಿ ಉಪ್ಪನ್ನು ಹೊರಕಳಿಸಲು ಶ್ರಮಿಸಬೇಕಾದುದರಿಂದ ವ್ಯಾಯಾಮಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಲು ಅಸಮರ್ಥವಾಗುತ್ತದೆ. ಪರಿಣಾಮವಾಗಿ ಸ್ನಾಯುಗಳು ಸೋಲುತ್ತವೆ ಮತ್ತು ನೋವು ಎದುರಾಗುತ್ತದೆ.

ಮೊಸರು ಬೇಡ
ಮೊಸರು ಸುಲಭವಾಗಿ ಜೀರ್ಣವಾಗುವ ಆಹಾರವಾದ ಕಾರಣ ಹಲವಾರು ಪ್ರಯೋಜನಗಳನ್ನು ಹೊಂದಿದೆ. ಆದರೆ ತಜ್ಞರ ಅಭಿಪ್ರಾಯದ ಪ್ರಕಾರ ವ್ಯಾಯಾಮಕ್ಕೂ ಮೊದಲು ಮೊಸರನ್ನು ಸೇವಿಸುವುದರಿಂದ ಸ್ನಾಯುಗಳಲ್ಲಿ ಸೆಡೆತ, ಹೊಟ್ಟೆಯಲ್ಲಿ ತೊಂದರೆ ಮತ್ತು ಅತಿಸಾರವನ್ನುಂಟುಮಾಡಬಹುದು.

ಈ ಆಹಾರಗಳನ್ನು ಸೇವಿಸಬಹುದು
ತಜ್ಞರ ಪ್ರಕಾರ ವ್ಯಾಯಾಮಕ್ಕೂ ಒಂದು ಘಂಟೆ ಮೊದಲು ಮಿತವಾದ ಆಹಾರವನ್ನು ಸೇವಿಸಿ ಬಳಿಕ ವ್ಯಾಯಾಮ ಪ್ರಾರಂಭಿಸಿ. ವ್ಯಾಯಾಮ ಮುಕ್ತಾಯಗೊಂಡ ಬಳಿಕ ಕೊಂಚ ಕಾಲ ವಿಶ್ರಮಿಸಿ ಬೆವರು ಹೊರಹರಿಯುವಂತೆ ಮಾಡಿ. ಆ ಬಳಿಕ ನೀರು ಅಥವಾ ಲಿಂಬೆರಸದ ಹೊರತಾಗಿ ಬೇರೆ ಘನ ಆಹಾರ ಸೇವಿಸಬೇಡಿ. ವ್ಯಾಯಾಮದ ಒಂದು ಗಂಟೆಯ ಬಳಿಕ ಆಹಾರ ಸೇವಿಸುವುದು ಉತ್ತಮ. ವ್ಯಾಯಾಮಕ್ಕೂ ಒಂದು ಗಂಟೆ ಮೊದಲು ಬಾಳೆಹಣ್ಣು, ಓಟ್ಸ್, ಇಡಿಯ ಗೋಧಿಹಿಟ್ಟಿನ ಬ್ರೆಡ್, ಆಮ್ಲೀಯವಲ್ಲದ ಹಣ್ಣುಗಳು (ಕಲ್ಲಂಗಡಿ, ತರಬೂಜ ಇತ್ಯಾದಿ) ಮೊದಲಾದವನ್ನು ಸೇವಿಸಬಹುದು.



Click it and Unblock the Notifications
