Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದೇಹದಲ್ಲಿ ರಕ್ತ ಕಡಿಮೆ ಆಗಿದ್ರೆ ಈ ಎಳ್ಳುಂಡೆ ಮಾಡಿ: ತಿಂಗಳ ಕಾಲ ಇಟ್ಟು ಸವಿಯಬಹುದು!
ಬಹಳಷ್ಟು ಮಂದಿ ಇತ್ತೀಚಿಗೆ ಎದುರಿಸುವ ಸಮಸ್ಯೆಗಳಲ್ಲಿ ಈ ರಕ್ತಹೀನತೆ ಸಹ ಒಂದಾಗಿದೆ. ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆಯಾದರೆ ನಿಮಗೆ ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳು ಕಾಡುವುದು ನೋಡಬಹುದು. ರಕ್ತದಲ್ಲಿನ ಕೆಂಪು ರಕ್ತಕಣಗಳು ಅಥವಾ ಹಿಮೋಗ್ಲೋಬಿನ್ ಪ್ರಮಾಣವು ಸಾಮಾನ್ಯಕ್ಕಿಂತ ಕಡಿಮೆಯಾಗಿ, ಅಂಗಾಂಶಗಳಿಗೆ ಆಮ್ಲಜನಕದ ಪೂರೈಕೆ ಕಡಿಮೆಯಾಗುವ ಸ್ಥಿತಿ ಎನ್ನಬಹುದು.
ಈ ರೀತಿ ಆದರೆ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳನ್ನು ನೋಡಬಹುದು. ಹಾಗೆ ರಕ್ತಹೀನತೆಯಿಂದ ದೇಹದಲ್ಲಿ ಶಕ್ತಿ ಕೊರತೆ ಎದುರಿಸಬಹುದು. ಇನ್ನು ಈ ಸಮಸ್ಯೆಯಿಂದ ಹೊರಬರಲು ಹಲವು ಉಪಾಯಗಳಿವೆ. ರಕ್ತದಲ್ಲಿ ಕೆಂಪು ರಕ್ತ ಕಣ ಹೆಚ್ಚಾಗುವಂತೆ ಮಾಡಲು ನಾವು ಸುಲಭವಾಗಿ ಮನೆಯಲ್ಲೇ ಕೆಲವು ಉಪಾಯಗಳ ಮಾಡಬಹುದು.

ಹಾಗೆ ಮನೆಯಲ್ಲಿ ಈ ರೀತಿಯಾಗಿ ಕಡಲೆ ಬೀಜ ಹಾಗೂ ಎಳ್ಳು ಬಳಸಿ ಮಾಡುವ ಉಂಡೆಯು ನಿಮ್ಮ ದೇಹದ ಬಹಳಷ್ಟು ಸಮಸ್ಯೆಗಳಿಗೆ ಮುಕ್ತಿ ನೀಡಲಿದೆ. ಹಾಗೆ ರಕ್ತಹೀನತೆಯಂತಹ ಗಂಭೀರ ಸಮಸ್ಯೆಗೂ ಇದು ಪರಿಹಾರ ನೀಡಲಿದೆ. ಹಾಗಾದ್ರೆ ಈ ಎಳ್ಳಿನ ಉಂಡೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಬೇಕಾಗುತ್ತದೆ ಎಂಬೆಲ್ಲಾ ಕುರಿತಾಗಿ ಇಲ್ಲಿ ತಿಳಿದುಕೊಳ್ಳೋಣ.
ಕಡ್ಲೆ ಎಳ್ಳು ಉಂಡೆ ಮಾಡಲು ಬೇಕಾಗುವ ವಸ್ತುಗಳು
- ಶೇಂಗಾ ಕಡ್ಲೆ
- ಎಳ್ಳು
- ಗಸೆಗಸೆ
- ಎಣ್ಣೆ
- ತುಪ್ಪ
- ಬೆಲ್ಲ
ಕಡ್ಲೆ ಎಳ್ಳು ಉಂಡೆ ಮಾಡುವ ವಿಧಾನವೇನು?
ಮೊದಲು ಬಾಣಲೆಯಲ್ಲಿ ಕಡಲೆ ಬೀಜ ಹಾಕಿ ಹುರಿದುಕೊಳ್ಳಬೇಕು. ಅದರ ಸಿಪ್ಪೆ ಬಿಡುವಂತೆ ಹುರಿಯಬೇಕು. ನಂತರ ಶೇಂಗಾವನ್ನು ತೆಗೆದು ಬದಿಗಿಟ್ಟುಕೊಳ್ಳಿ. ಈಗ ಅದೇ ಪಾತ್ರೆಗೆ ಬಿಳಿ ಎಳ್ಳನ್ನು ಹಾಕಿಕೊಂಡು ಹುರಿದುಕೊಳ್ಳಬೇಕು. 2 ಕಪ್ ಶೇಂಗಾಕ್ಕೆ 1 ಕಪ್ ಬಿಳಿ ಎಳ್ಳು ಬಳಸಿ. ಎಳ್ಳು ಸ್ವಲ್ಪ ಬ್ರೌನ್ ಬಣ್ಣಕ್ಕೆ ಬರಬೇಕು. ನಂತರ ಇದನ್ನು ಸಹ ತೆಗೆದಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ 2 ಸ್ಪೂನ್ ಗಸೆಗಸೆ ಸಹ ಹಾಕಿ ಹುರಿದು ಬದಿಗಿಟ್ಟುಕೊಳ್ಳಿ. ಈಗ ಹುರಿದ ಕಡಲೆಯನ್ನು ಒಡೆದು ಎರಡು ಭಾಗ ಮಾಡಿ ಸಿಪ್ಪೆಯಿಂದ ಬೇರೆ ಮಾಡಿ. ಈಗ ಒಂದು ಮಿಕ್ಸಿ ಜಾರ್‌ಗೆ ಕಡಲೆ, ಗಸೆಗಸೆ, ಬಿಳಿ ಎಳ್ಳು ಹಾಕಿಕೊಳ್ಳಬೇಕು. ನಂತರ ಮಿಕ್ಸಿಯಲ್ಲಿ ತರಿ ತರಿಯಾಗಿ ರುಬ್ಬಿಕೊಳ್ಳಬೇಕು. ಹುಡಿ ಹುಡಿಯಾಗಿ ಬರಬೇಕು.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ 2 ಕಪ್ ಬೆಲ್ಲ ಸ್ವಲ್ಪ ನೀರು ಹಾಕಿ ಕರಗಲು ಬಿಡಿ. ಬೆಲ್ಲ ನೀರಾದರೆ ಸಾಕಾಗುತ್ತದೆ. ಅನಂತರ ಬೆಲ್ಲದ ನೀರನ್ನು ಜರಡಿ ಹಿಡಿದು ಇಟ್ಟುಕೊಳ್ಳಿ. ಮತ್ತೆ ಬಾಣಲೆಗೆ 2 ಕಪ್ ಒಣ ಕೊಬ್ಬರಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಹಾಗೆ ಇದಕ್ಕೆ ಬೆಲ್ಲದ ನೀರು ಸಹ ಸೇರಿಸಿ ಒಂದು ನಿಮಿಷ ಚೆನ್ನಾಗಿ ಬೇಯಿಸಿಕೊಳ್ಳಿ.
1 ನಿಮಿಷ ಬಿಟ್ಟ ಬಳಿಕ ಇದಕ್ಕೆ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡಿದ್ದ ಮಿಶ್ರಣವನ್ನು ಇದಕ್ಕೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. ಉರಿಯನ್ನು ಸಣ್ಣದಾಗಿ ಇಟ್ಟು ಇದನ್ನು ಮಿಶ್ರಣ ಮಾಡಿ. 2 ನಿಮಿಷ ಮಿಕ್ಸ್ ಮಾಡಿದರೆ ಸಾಕು. ಹೂರ್ಣದಂತೆ ಬಂದಾಗ ಒಲೆ ಆಫ್ ಮಾಡಿಕೊಳ್ಳಿ. ಬೇಕಿದ್ದರೆ 1 ಸ್ಪೂನ್ ತುಪ್ಪ ಹಾಕಿಕೊಳ್ಳಬಹುದು. ಹಾಕದೆ ಇದ್ದರೂ ನಡೆಯಲಿದೆ.
ಈಗ ಸ್ವಲ್ಪ ತಣ್ಣಗಾಗಲು ಬಿಟ್ಟು ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಉಂಡೆ ಕಟ್ಟಿಕೊಳ್ಳಿ. ನಂತರ ಒಂದು ಬಾಕ್ಸ್‌ಗೆ ಹಾಕಿಟ್ಟರೆ ಒಂದು ತಿಂಗಳ ಕಾಲ ಇದನ್ನು ನೀವು ಸವಿಯಬಹುದು. ನೀವು ವಾರದಲ್ಲಿ ಎರಡು ಉಂಡೆ ಸೇವಿಸಿದರೂ ಸಹ ರಕ್ತಹೀನತೆ ದೂರಾಗಲಿದೆ.



Click it and Unblock the Notifications
