For Quick Alerts
ALLOW NOTIFICATIONS  
For Daily Alerts

ಲವಲವಿಕೆಯ ಜೀವನ ಶೈಲಿಗೆ ಪ್ರೋಟೀನ್‌ಯುಕ್ತ ಆಹಾರಗಳು...

By Deepak M
|

ಪ್ರೋಟೀನ್ ನಮ್ಮ ದೇಹವನ್ನು ನಿರ್ಮಾಣ ಮಾಡುವ ಪ್ರಮುಖ ಮೂಲಭೂತ ಅಂಶಗಳಾಗಿವೆ. ಇವು ಪ್ರತಿಯೊಬ್ಬರ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅತ್ಯಾವಶ್ಯಕ. ಅದರಲ್ಲೂ ವಯಸ್ಕ ಮಕ್ಕಳಲ್ಲಿ ಇದರ ಅಗತ್ಯತೆ ಮತ್ತಷ್ಟು ಹೆಚ್ಚಾಗಿರುತ್ತದೆ. ಅವರು ತಿನ್ನುವ ಮತ್ತು ಬೆಳೆಯುವ ಕಾಲದಲ್ಲಿ ಇರುತ್ತಾರೆ, ಆದರೆ ಅವರು ತಿನ್ನುವ ಆಹಾರದಲ್ಲಿ ಪ್ರೋಟೀನ್ ಇರುತ್ತದೆಯೇ ಎಂದು ನಾವು ಗಮನಿಸಬೇಕಾದ ಜವಾಬ್ದಾರಿ ಇರುತ್ತದೆ.

1-3 ವರ್ಷದ ಒಳಗಿನ ಮಕ್ಕಳು ಪ್ರತಿದಿನ 13 ಗ್ರಾಂ, 4-8 ವರ್ಷದ ಒಳಗಿನ ಮಕ್ಕಳು ಪ್ರತಿದಿನ 19 ಗ್ರಾಂ, 9-13 ವರ್ಷದ ಒಳಗಿನ ಮಕ್ಕಳು ಪ್ರತಿದಿನ 34 ಗ್ರಾಂ, ಹೆಣ್ಣು ಮಕ್ಕಳು 14-18 ವರ್ಷದ ಒಳಗಿನವರು ಪ್ರತಿದಿನ 46ಗ್ರಾಂ ಮತ್ತು ಅದೇ ವಯಸ್ಸಿನ ಹುಡುಗರು, 52ಗ್ರಾಂ ಪ್ರೋಟೀನ್ ಸೇವಿಸಬೇಕೆಂದು ತಜ್ಞರು ಶಿಫಾರಸು ಮಾಡುತ್ತಾರೆ.

ಶಾಖಾಹಾರಿ ಆಹಾರಗಳನ್ನು ಮಾತ್ರ ಸೇವಿಸುವವರು ತಮ್ಮ ದೈನಂದಿನ ಪ್ರೋಟೀನ್ ಸೇವನೆಯ ಕುರಿತು ಕಾಳಜಿ ವಹಿಸುವ ಅನಿವಾರ್ಯತೆ ಇರುತ್ತದೆ ಮತ್ತು ಅದನ್ನು ಅವರು ಆಗಾಗ ಖಾತ್ರಿಪಡಿಸಿಕೊಳ್ಳುತ್ತಾ ಇರಬೇಕು. ಬನ್ನಿ ಇಂದು ಶಾಖಾಹಾರಿ ಆಹಾರವನ್ನು ಸೇವಿಸುವವರಿಗಾಗಿ ನಾವು ಪ್ರೋಟೀನ್ ಮೂಲಗಳ ಕುರಿತು ತಿಳಿಸಿಕೊಡುತ್ತೇವೆ. ಇವುಗಳನ್ನು ಸೇವಿಸಿ, ನಿಮ್ಮ ಪ್ರೋಟೀನ್ ಮಟ್ಟವನ್ನು ಕಾಯ್ದುಕೊಳ್ಳಿ...

ಅವರೆಕಾಳು

ಅವರೆಕಾಳು

ನಾರಿನಂಶ ಮತ್ತು ಪ್ರೋಟೀನ್‌ಗಳ ಸಮ್ಮಿಲನವಾದ ಈ ಕಾಳುಗಳು ನಿಮ್ಮ ದೇಹವನ್ನು ಜಠರದ ಕ್ಯಾನ್ಸರ್‌ನಿಂದ ಕಾಪಾಡುತ್ತದೆಯೆಂದು ಖ್ಯಾತಿ ಪಡೆದಿದೆ. ಇದನ್ನು ಬೇಯಿಸಿ ಅಥವಾ ಸಾರು,ಪಲ್ಯ ಮಾಡಿಕೊಂಡು ಸೇವಿಸಿ. ಇದರಿಂದ ನಿಮ್ಮ ದೇಹಕ್ಕೆ ಪ್ರೋಟೀನ್, ಖನಿಜಾಂಶ ಮತ್ತು ವಿಟಮಿನ್‍ಗಳು ಲಭ್ಯವಾಗುತ್ತವೆ. ಒಂದು ಬಟ್ಟಲು ಅವರೆಕಾಳಿನಲ್ಲಿ 16ಗ್ರಾಂ ಪ್ರೋಟೀನ್ ದೊರೆಯುತ್ತದೆ.

ಓಟ್ಸ್

ಓಟ್ಸ್

ಬೇಯಿಸಿದ ಒಂದು ಕಪ್ ಓಟ್ಸ್‌ನಲ್ಲಿ 6 ಗ್ರಾಂ ಪ್ರೋಟೀನ್ ದೊರೆಯುತ್ತದೆ. ಆದ್ದರಿಂದ ಇದು ಉಪಾಹಾರಕ್ಕೆ ಹೇಳಿ ಮಾಡಿಸಿದ ಆಹಾರ ಪದಾರ್ಥವಾಗಿರುತ್ತದೆ. ಇದನ್ನು ನೀವು ಗಂಜಿ ಮಾಡಿಕೊಂಡು ಹಣ್ಣುಗಳ ಜೊತೆಗೆ ಸೇವಿಸಬಹುದು ಅಥವಾ ಕಿಚಡಿ ಅಥವಾ ದೋಸೆಯನ್ನು ಸಹ ಮಾಡಿಕೊಂಡು ಸೇವಿಸಬಹುದು.

ಅನ್ನ ಮತ್ತು ಬೀನ್ಸ್ (7 ಗ್ರಾಂ ಪ್ರತಿ ಕಪ್‌ಗೆ):

ಅನ್ನ ಮತ್ತು ಬೀನ್ಸ್ (7 ಗ್ರಾಂ ಪ್ರತಿ ಕಪ್‌ಗೆ):

ಇದನ್ನು ಅದ್ಭುತವಾದ ಸಂಯೋಜನೆಯಾಗಿದ್ದು, ಭಾರತೀಯರ ಅಚ್ಚುಮೆಚ್ಚಿನ ಆಹಾರ ಕ್ರಮಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಹುರುಳಿಕಾಯಿ ಸಾಂಬಾರ್ ಮತ್ತು ಅನ್ನ ಅಥವಾ ಉತ್ತರ ಭಾರತೀಯರು ಸೇವಿಸುವ ರಾಜ್ಮಾ ಚಾವಲ್ ಈ ಪ್ರೋಟೀನ್ ಆಧಾರದ ಮೇಲೆಯೇ ರೂಪುಗೊಂಡಿರಬೇಕು ಅನಿಸುತ್ತದೆಯಲ್ಲವೇ?

ಬೇಳೆಗಳು (ಹೆಸರು ಬೇಳೆ, ತೊಗರಿ ಬೇಳೆ ಇತ್ಯಾದಿ) ಮತ್ತು ಧಾನ್ಯಗಳು (18 ಗ್ರಾಂ ಪ್ರತಿ ಕಪ್‍ಗೆ ಬೇಯಿಸಿದಾಗ)

ಬೇಳೆಗಳು (ಹೆಸರು ಬೇಳೆ, ತೊಗರಿ ಬೇಳೆ ಇತ್ಯಾದಿ) ಮತ್ತು ಧಾನ್ಯಗಳು (18 ಗ್ರಾಂ ಪ್ರತಿ ಕಪ್‍ಗೆ ಬೇಯಿಸಿದಾಗ)

ಈ ಧಾನ್ಯಗಳು ಮತ್ತು ಬೇಳೆಗಳಲ್ಲಿ ಅಧಿಕ ಪ್ರಮಾಣದ ಪ್ರೋಟೀನ್‍ಗಳು ಇರುತ್ತವೆ. ಅದಕ್ಕೆ ಅಲ್ಲವೇ ನಾವು ತಿನ್ನುವ ಆಹಾರ ಪದಾರ್ಥಗಳಲ್ಲಿ ಇವುಗಳನ್ನು ತಪ್ಪದೆ ಬಳಸುವುದು.

ಒಣ ಹಣ್ಣುಗಳು ಬಾದಾಮಿ, ಗೋಡಂಬಿ, ಪಿಸ್ತಾ

ಒಣ ಹಣ್ಣುಗಳು ಬಾದಾಮಿ, ಗೋಡಂಬಿ, ಪಿಸ್ತಾ

ಒಣ ಹಣ್ಣುಗಳಲ್ಲಿ ಪ್ರೋಟೀನ್ ಪ್ರಮಾಣ ಅಧಿಕವಾಗಿ ಇರುತ್ತವೆ. ರಾತ್ರಿಯೆಲ್ಲಾ ನೀರಿನಲ್ಲಿ ನೆನೆಸಿದ ಒಣ ಹಣ್ಣುಗಳನ್ನು ಬೆಳಗ್ಗೆ ಎದ್ದು ಸೇವಿಸುವುದು ಒಳ್ಳೆಯದು. 10 ಬಾದಾಮಿ ಬೀಜಗಳಲ್ಲಿ, 2.5 ಗ್ರಾಂ ಪ್ರೋಟಿನ್ ಇರುತ್ತದೆ.

ರಾಗಿ

ರಾಗಿ

ರಾಗಿಯು ಒಂದು ಅದ್ಭುತವಾದ ಪ್ರೋಟೀನ್‌ಗಳ ಆಗರ. ಇದೊಂದು ಬಗೆಯ ಸೂಪರ್ ಫುಡ್, ಇದರಲ್ಲಿ ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ವಿಟಮಿನ್‌‍ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಮಕ್ಕಳಿಗೆ ಇದನ್ನು ಸೇವಿಸಲು ಕಷ್ಟವಾಗಬಹುದು, ಆದರೆ ಇದನ್ನು ದೋಸೆ ಮಾಡಿ ಮಕ್ಕಳಿಗೆ ನೀಡಿದರೆ ಅವರು ಅದನ್ನು ತಿನ್ನಲು ಇಷ್ಟಪಡುತ್ತಾರೆ. ರೋಟಿ, ಮಾಲ್ಟ್ ಮತ್ತಿತರ ರೂಪದಲ್ಲಿ ಸಹ ರಾಗಿಯನ್ನು ಸೇವಿಸಲು ನೀಡಬಹುದು.

ಪನ್ನೀರ್ (11 ಗ್ರಾಂ ಪ್ರತಿ 100 ಗ್ರಾಂಗೆ)

ಪನ್ನೀರ್ (11 ಗ್ರಾಂ ಪ್ರತಿ 100 ಗ್ರಾಂಗೆ)

ಪನ್ನೀರ್ ಸಲಾಡ್ ಮತ್ತಿತರ ಆಹಾರ ಪದಾರ್ಥಗಳಲ್ಲಿ ವ್ಯಾಪಕವಾಗಿ ಬಳಸುವ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ. ಇದು ಮೇನ್ ಕೋರ್ಸ್ ಆಹಾರ ಮತ್ತು ಡೆಸರ್ಟ್‍ಗಳಲ್ಲಿ ತಪ್ಪದೆ ಬಳಸುವ ಪದಾರ್ಥವಾಗಿದೆ. ಇದರಲ್ಲಿ ಪ್ರೋಟೀನ್‍ಗಳು ಹೆಚ್ಚಾಗಿರುತ್ತವೆ.

ಕಡಲೆ ಬೀಜ (7.5 ಗ್ರಾಂ ಪ್ರತಿ ಚಮಚಕ್ಕೆ)

ಕಡಲೆ ಬೀಜ (7.5 ಗ್ರಾಂ ಪ್ರತಿ ಚಮಚಕ್ಕೆ)

ಈ ಬಡವರ ಬಾದಾಮಿಯಲ್ಲಿ ಪ್ರೋಟೀನ್‍ಗಳಿಗೇನು ಕೊರತೆಯಿಲ್ಲ. ಆ ಲೆಕ್ಕದಲ್ಲಿ ಈ ಶ್ರೀಮಂತ ಕಾಳಾಗಿದೆ. ಇದನ್ನು ನಿಮ್ಮ ಸ್ಯಾಂಡ್ ವಿಚ್, ಚಟ್ನಿ, ಗಂಜಿ, ಮಾಲ್ಟ್ ಮುಂತಾದ ಪದಾರ್ಥಗಳಲ್ಲಿ ಸೇರಿಸಿಕೊಂಡು ಸೇವಿಸಿ.

ವೋಲ್ ವೀಟ್ ಬ್ರೆಡ್ ( 2 ಸ್ಲೈಸ್‌ಗೆ 5.2 ಗ್ರಾಂ)

ವೋಲ್ ವೀಟ್ ಬ್ರೆಡ್ ( 2 ಸ್ಲೈಸ್‌ಗೆ 5.2 ಗ್ರಾಂ)

ವೋಲ್ ವೀಟ್ ಬ್ರೆಡ್‍ನಲ್ಲಿ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಆದ್ದರಿಂದ ಇದನ್ನು ನೀವು ಸೇವಿಸಿ ಮತ್ತು ನಿಮ್ಮ ಮಕ್ಕಳಿಗೂ ಸಹ ನೀಡಿ.

ಪಾಲಕ್ (1 ಕಪ್-13 ಗ್ರಾಂ)

ಪಾಲಕ್ (1 ಕಪ್-13 ಗ್ರಾಂ)

ಪಾಲಕ್ ಅಥವಾ ಸ್ಪೈನಚ್ ಎಂದು ಕರೆಯುವ ಈ ಸೊಪ್ಪಿನಲ್ಲಿ, ಪ್ರೋಟೀನ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇದನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಮರೆಯಬೇಡಿ. ಇದರಲ್ಲಿ ಪ್ರೋಟೀನ್ ಜೊತೆಗೆ ಖನಿಜಾಂಶ, ವಿಟಮಿನ್ ಮತ್ತು ನಾರಿನಂಶಗಳು ಅಧಿಕವಾಗಿ ಇರುತ್ತವೆ.

English summary

Super Healthy, Vegetarian Protein Sources

Protein is one of the fundamental building blocks in the body which is critical for proper growth and development. This is especially important for young children who are in a growing phase and could be picky eaters.
Story first published: Monday, February 15, 2016, 20:45 [IST]
X
Desktop Bottom Promotion