Latest Updates
-
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್!
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ?
ವೈದಿಕ ಕ್ಯಾಲೆಂಡರ್ ಪ್ರಕಾರ ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಕಾಲಾಷ್ಟಮಿ ಉಪವಾಸ ಆಚರಿಸಲಾಗುತ್ತದೆ. ಈ ದಿನವನ್ನು ಕಾಲಭೈರವನಿಗೆ ಅರ್ಪಿಸಲಾಗುತ್ತದೆ. ಮಾರ್ಚ್ 11ರಂದು ಈ ಕಾಲಾಷ್ಟಮಿ ದಿನವನ್ನಾಗಿ ಆಚರಿಸುತ್ತಾರೆ. ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಈ ಉಪವಾಸವನ್ನು ಆಚರಿಸಲಾಗುತ್ತದೆ ಎಂದು ನಂಬಲಾಗಿದೆ. ಈ ಉಪವಾಸವನ್ನು ಮಾಡುವುದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಶತ್ರುಗಳ ಮೇಲೆ ಜಯವೂ ದೊರೆಯುತ್ತದೆ ಎಂದು ಹೇಳಲಾಗಿದೆ.
ಕಾಲಭೈರವನ ಪೂಜೆಯು ನಿಮ್ಮಲ್ಲಿ ಆರ್ಥಿಕ ಸುಖ ತರಲಿದೆ, ಹಾಗೆ ಭಯ, ದುಃಖ ಮತ್ತು ನಕಾರಾತ್ಮಕ ಶಕ್ತಿಗಳಿಂದ ಮುಕ್ತಗುತ್ತಾನೆ. ಪಂಚಾಂಗದ ಪ್ರಕಾರ ಚೈತ್ರ ಮಾಸದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಲ್ಲಿ ಉಪವಾಸ ಮಾಡಲಾಗುತ್ತದೆ. ಕಾಲಾಷ್ಟಮಿಯಂದು ಕಾಲಭೈರವ ದೇವರನ್ನು ರಾತ್ರಿಯಲ್ಲಿ ಪೂಜಿಸಲಾಗುತ್ತದೆ. ಈ ರಾತ್ರಿಯ ಶುಭ ಸಮಯ ರಾತ್ರಿ 11:35 ರಿಂದ 12:23 ರವರೆಗೆ. ಈ ದಿನದಂದು ಅಪರೂಪದ ಶಿವವಾಸ ಯೋಗವೂ ಸಂಭವಿಸುತ್ತಿದೆ.

ಕಾಲಾಷ್ಟಮಿ ಆಚರಿಸುವ ಮಹತ್ವ
ಕಾಲಾಷ್ಟಮಿ ಆಚರಿಸುವುದರಿಂದ ಜೀವನದಲ್ಲಿನ ಹಲವು ರೀತಿಯ ಕಷ್ಟಗಳು ನಿವಾರಣೆಯಾಗಲಿದೆ. ಉಪವಾಸ ಮಾಡುವುದು ಇಡೀ ದಿನ ಕಾಲಭೈರವನನ್ನು ಪೂಜಿಸುವುದರಿಂದ ಅವರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಕಾಲಾಭೈರವ ಶಿವನ ಮತ್ತೊಂದು ರೂಪ, ನಿಮ್ಮ ಗುಪ್ತ ಶತ್ರುಗಳ ನಿವಾರಣೆಗೆ ಕಾಲಭೈರವನ ಪೂಜಿಸಬೇಕು.
ಭಗವಾನ್ ಭೈರವನು ಕಾಲದ ಉಗ್ರ ಪ್ರತಿನಿಧಿ ಕಾಲಾ ಎಂದರೆ ಸಮಯ, ಸಮಯದ ಪ್ರತಿನಿಧಿಯಾದ ಕಾಲಭೈರವನ ಪೂಜಿಸಿದರೆ ನಿಮ್ಮ ಕಾಲೋಚಿತ ಸಮಸ್ಯೆಗಳನ್ನು ದೂರ ಮಾಡಬಹುದು. ಅದ್ರಲ್ಲೂ ಹಣಕಾಸು, ಅನಾರೋಗ್ಯ, ದಾಂಪತ್ಯ, ಆಸ್ತಿ, ಮಕ್ಕಳ ಸಮಸ್ಯೆಗಳಲ್ಲಿ ನಿಮಗೆ ಅಡ್ಡಿಗಳಿದ್ದರೆ ಕಾಲಭೈರವನ ಪೂಜಿಸುವುದು ದೊಡ್ಡ ಪರಿಹಾರಗಳ ತರಲಿದೆ. ಕಾಲಭೈರವನ ಆರಾಧನೆ ಮನೆಯಿಂದ ಮತ್ತು ಮನಸ್ಸಿನಿಂದ ನಕಾರಾತ್ಮಕತೆ, ಅಶುದ್ಧತೆ ಮತ್ತು ಅಪ್ರತೀಕ್ಷಿತ ಭಯಗಳನ್ನು ದೂರಮಾಡುತ್ತದೆ.
ಕಾಲಭೈರವನ ಕಥೆ ಏನು?
ಶಿವ ಪುರಾಣದಲ್ಲಿ ಕಾಲಭೈರವನ ಕುರಿತಾದ ಕಥೆಯನ್ನು ಹೇಳಲಾಗಿದೆ. ಒಮ್ಮೆ ಬ್ರಹ್ಮ, ವಿಷ್ಣು ಹಾಗೆ ಮಹೇಶ್ವರರ ನಡುವೆ ಯಾರು ಶ್ರೇಷ್ಠರು ಎಂಬ ಕುರಿತಾಗಿ ದೊಡ್ಡ ಚರ್ಚೆ ನಡೆಯಿತು. ಈ ಭಿನ್ನಭಿಪ್ರಾಯ ದೊಡ್ಡದಾಯಿತು. ಅವರ ಮಿತಿಗಳು ಹಾಗೆ ಶಕ್ತಿಯ ಕುರಿತಾಗಿ ಮೂವರ ನಡುವೆಯೂ ಚರ್ಚೆಯಾಯಿತು. ಬ್ರಹ್ಮನು ತಾನು ಎಲ್ಲರಿಗಿಂತ ಶ್ರೇಷ್ಠ ಎಂದು ಹೇಳಿಕೊಂಡನು. ಆದ್ರೆ ಬ್ರಹ್ಮ ಮತ್ತು ಶಿವ ಇಬ್ಬರು ನಾವೇ ಶ್ರೇಷ್ಠರು ಎನ್ನುತ್ತಿದ್ದರು. ಬ್ರಹ್ಮನು ಶಿವನ ಕುರಿತಾಗಿ ಕೆಲವೊಂದು ಮಾತುಗಳನ್ನು ಹೇಳುತ್ತಾರೆ. ಸಭೆಯಲ್ಲಿ ಶಿವನ ಬಗ್ಗೆ ಪಂಡಿತರು ಋಷಿಗಳು ಹೇಳಿದ ಮಾತಿಗೆ ಬ್ರಹ್ಮನು ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಮೂವರೂ ದೇವತೆಗಳು ಸಮಾನ ಶಕ್ತಿಯನ್ನು ಹೊಂದಿದ್ದಾರೆ ಎಂಬ ಮಾತಿಗೆ ಬ್ರಹ್ಮನು ಪ್ರತಿರೋಧವನ್ನು ವ್ಯಕ್ತಪಡಿಸುತ್ತಾರೆ.
ಇದರಿಂದ ಶಿವನು ಕೋಪಗೊಳ್ಳುತ್ತಾನೆ. ಬ್ರಹ್ಮನ ಮೀರಿಸುವ ಶಕ್ತಿ ತನಗಿದೆ ಎಂದು ಶಿವನು ಕಾಲಭೈರವನ ಅವತಾರದಲ್ಲಿ ಬ್ರಹ್ಮನ ಶಿರವನ್ನು ಕತ್ತರಿಸುತ್ತಾನೆ. ಶಿವನ ಈ ಭಯಾನಕ ಅವತಾರವನ್ನು ನೋಡಿ ಅಲ್ಲಿ ನೆರೆದ ದೇವತೆಗಳು ಭಯಗೊಳ್ಳುತ್ತಾರೆ. ಶಿವನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡುತ್ತಾರೆ ಮತ್ತು ಬ್ರಹ್ಮನಿಗೆ ಕೂಡ ತಮ್ಮ ತಪ್ಪಿನ ಅರಿವಾಗುತ್ತದೆ. ಆದ್ದರಿಂದಲೇ ಈ ದಿನವನ್ನು ಮಹಾಕಾಳ ಅಷ್ಟಮಿ ಎಂದು ಕರೆಯಲಾಗುತ್ತದೆ.
ಕಾಲಾಷ್ಟಮಿ ಆಚರಿಸುವ ಸರಳ ವಿಧಾನ
- ಬೆಳಗ್ಗೆಯೇ ಸ್ನಾನ
- ಕಾಲಭೈರವನಿಗೆ ಬೆಳೆಹಣ್ಣು, ಬಿಲ್ವಪತ್ರ, ದೀಪಾರಾಧನೆ
- "ಓಂ ಭೈರವಾಯ ನಮಃ" ಜಪ
- ನಾಯಿಗಳಿಗೆ ಆಹಾರ (ಭೈರವನ ಪ್ರೀತಿ-ಪಾತ್ರ ಪ್ರಾಣಿ)
- ಸಂಜೆ ಭೈರವನ ದೇವಸ್ಥಾನ ಭೇಟಿ ಸಾಧ್ಯವಾದರೆ ಅತ್ಯುತ್ತಮ



Click it and Unblock the Notifications