Latest Updates
-
ದೀಪಾವಳಿ ಸಂಭ್ರಮಕ್ಕೆ ಮೆಗಾ ಬ್ಲಾಕ್ ಅಡ್ಡಿ: ಮುಂಬೈ ರೈಲು ಪ್ರಯಾಣಿಕರೇ ಎಚ್ಚರ, ಪ್ಲಾನ್ ಬದಲಾಯಿಸಿ! -
ದೀಪಾವಳಿ ಸಿಹಿ ತಿಂಡಿಗಳಲ್ಲಿ ಕಲಬೆರಕೆ? 30 ಸೆಕೆಂಡ್ಗಳಲ್ಲಿ ಪರೀಕ್ಷಿಸಿ ನಿಮ್ಮ ಕುಟುಂಬದ ಆರೋಗ್ಯ ಕಾಪಾಡಿ! -
ಬಿಗ್ ಬಾಸ್ ಕನ್ನಡ 13: ಈ ವಾರ ಎಲಿಮಿನೇಷನ್ ಇಲ್ಲವೇ? ಭಾವುಕ ಪತ್ರಗಳೇ ಬದಲಾಯಿಸಿದ ಆಟದ ಸಮೀಕರಣ! -
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ!
ಸಕ್ಕರೆ ಬೇಡ, ಪಾಕವೂ ಬೇಡ.. ಅಜ್ಜ-ಅಜ್ಜಿಯರ ಕಾಲದ ಹೆಲ್ದಿ ಲಡ್ಡು! ತಿಂದ್ರೆ ತೂಕ ಇಳಿಯುತ್ತೆ, ಶುಗರ್ಗೂ ಬೆಸ್ಟ್
ಸಕ್ಕರೆ ಬೇಡ, ಪಾಕವೂ ಬೇಡ! ರುಚಿಯ ಬಗ್ಗೆ ಚಿಂತಿಸಬೇಕಾಗಿಲ್ಲ.. ನಮ್ಮ ಅಜ್ಜ-ಅಜ್ಜಿಯರ ಕಾಲದ ಆರೋಗ್ಯಕರ ಜೋಳ ಲಡ್ಡು.. ಇದನ್ನು ಮಾಡೋದು ಹೇಗೆ? ಹೌದು, ಭಾರತೀಯ ಹಬ್ಬಗಳು ಮತ್ತು ಶುಭ ಸಮಾರಂಭಗಳಲ್ಲಿ ಸಿಹಿ ಪದಾರ್ಥಗಳು ಅವಿಭಾಜ್ಯ ಅಂಗ. ಆದರೆ, ಊಟದ ಸವಿಯ ನಂತರ ಸಿಹಿಗೆ ಕೈಹಾಕುವಾಗ, ಆಧುನಿಕ ಜೀವನಶೈಲಿಯ ಕಾಯಿಲೆಗಳಾದ ಮಧುಮೇಹ ಮತ್ತು ಬೊಜ್ಜು ಅನೇಕರನ್ನು ನಿರುತ್ತೇಜಿಸುತ್ತವೆ.
ಸಾಮಾನ್ಯವಾಗಿ ತಯಾರಿಸುವ ಬೂಂದಿ, ಬೇಸನ್ ಅಥವಾ ಮೋತಿಚೂರ್ ಲಡ್ಡುಗಳು ಮೈದಾ, ಸಕ್ಕರೆ ಮತ್ತು ಎಣ್ಣೆಯಿಂದ ಕೂಡಿದ್ದು, ಅತಿಯಾದ ಸೇವನೆ ಆರೋಗ್ಯಕ್ಕೆ ಹಿತವಲ್ಲ. ಇದೇ ಕಾರಣಕ್ಕೆ ಸಿಹಿ ತಿಂಡಿಗಳನ್ನು ಮಿತಿಯಲ್ಲಿ ಸೇವಿಸುವ ಅನಿವಾರ್ಯತೆ ಹೆಚ್ಚು. ಆದರೆ ರುಚಿಗೂ, ಆರೋಗ್ಯಕ್ಕೂ ಸಮತೋಲನ ನೀಡುವ, ಅಜ್ಜಿಯರ ಕಾಲದ ಸಾಂಪ್ರದಾಯಿಕ ಜೋಳದ ಹಿಟ್ಟಿನ ಲಡ್ಡು (Jowar Laddu) ಅತ್ಯುತ್ತಮ ಆಯ್ಕೆಯಾಗಿದೆ. ಪಾಕದ ಚಿಂತೆಯಿಲ್ಲದೆ ತಯಾರಿಸಬಹುದಾದ ಈ ಸಿಹಿ, ಹಿರಿಯರ ಆರೋಗ್ಯಕರ ಪದ್ಧತಿಯನ್ನು ನೆನಪಿಸುತ್ತದೆ.
ಸಿರಿಧಾನ್ಯಗಳಾದ ಜೋಳ (Jowar flour sweets) ನಮ್ಮ ಪೂರ್ವಜರ ಪ್ರಮುಖ ಆಹಾರವಾಗಿತ್ತು ಮತ್ತು ಅವರ ದೃಢಕಾಯಕ್ಕೆ ಕಾರಣವಾಗಿತ್ತು. ಕಬ್ಬಿಣಾಂಶ, ಕ್ಯಾಲ್ಸಿಯಂ ಮತ್ತು ನಾರಿನಂಶ (Fiber) ಸಮೃದ್ಧವಾಗಿರುವ ಈ ಲಡ್ಡುಗಳು, ಬೂಂದಿ ಲಡ್ಡುವಿಗಿಂತಲೂ ಹೆಚ್ಚು ರುಚಿಕರವಾಗಿವೆ. ಯಾವುದೇ ಪಾಕ ಮಾಡುವ ಅಗತ್ಯವಿಲ್ಲದೆ ಇದನ್ನು ಸುಲಭವಾಗಿ ಸಿದ್ಧಪಡಿಸಬಹುದು.
ಜಂಜಾಟವಿಲ್ಲದೆ ತಯಾರಿಸಬಹುದಾದ ಈ ಪೌಷ್ಟಿಕ ಜೋಳದ ಲಡ್ಡು, ಮಧುಮೇಹಿಗಳಿಗೆ ಹಾಗೂ ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಸೂಕ್ತವಾದ ಸಿಹಿ ತಿಂಡಿಯಾಗಿದೆ. ಇದಕ್ಕೆ ಬೇಕಾಗುವ ಸಾಮಗ್ರಿಗಳು ಮತ್ತು ಸರಳವಾದ ತಯಾರಿಕೆಯ ವಿಧಾನ (Jowar Laddu recipe) ಇಲ್ಲಿದೆ.
ಜೋಳದ ಹಿಟ್ಟಿನ ಲಡ್ಡುಗೆ ಬೇಕಾಗುವ ಸಾಮಗ್ರಿಗಳು
• ಜೋಳದ ಹಿಟ್ಟು
• ಬೆಲ್ಲದ ಪುಡಿ
• ಶುದ್ಧ ತುಪ್ಪ
• ಗೋಡಂಬಿ (ಒಂದು ಹಿಡಿ)
• ಬಾದಾಮಿ
• ಶೇಂಗಾ ಬೀಜ
• ಒಣ ಕೊಬ್ಬರಿ ಚೂರುಗಳು
• ಏಲಕ್ಕಿ
ಜೋಳದ ಹಿಟ್ಟಿನ ಲಡ್ಡು ತಯಾರಿಸುವ ವಿಧಾನ
- ಮೊದಲಿಗೆ, ದಪ್ಪ ತಳದ ಬಾಣಲೆಯೊಂದನ್ನು ಬಿಸಿ ಮಾಡಿ, ಅದಕ್ಕೆ ಸ್ವಲ್ಪ ತುಪ್ಪ ಹಾಕಿ. ತುಪ್ಪ ಕಾದ ನಂತರ ಗೋಡಂಬಿ, ಬಾದಾಮಿ, ಶೇಂಗಾ ಮತ್ತು ಒಣ ಕೊಬ್ಬರಿಯನ್ನು ಸೇರಿಸಿ. ಸಣ್ಣ ಉರಿಯಲ್ಲಿ ಅವು ಹೊಂಬಣ್ಣ ಬರುವವರೆಗೆ ಹುರಿದು, ಪ್ರತ್ಯೇಕ ತಟ್ಟೆಗೆ ವರ್ಗಾಯಿಸಿಡಿ.
- ನಂತರ, ಅದೇ ಬಾಣಲೆಗೆ ಉಳಿದ ತುಪ್ಪವನ್ನು ಹಾಕಿ ಜೋಳದ ಹಿಟ್ಟನ್ನು ಸೇರಿಸಿ. ಉರಿಯನ್ನು ಹೆಚ್ಚಿಸದೆ, 8 ರಿಂದ 10 ನಿಮಿಷಗಳ ಕಾಲ ಹಿಟ್ಟು ಲಘುವಾಗಿ ಬಣ್ಣ ಬದಲಾಗಿ ಸುವಾಸನೆ ಬರುವವರೆಗೆ ನಿಧಾನವಾಗಿ ಹುರಿಯಿರಿ. ಹುರಿದ ಹಿಟ್ಟನ್ನು ಒಂದು ತಟ್ಟೆಗೆ ಹಾಕಿ ಸಂಪೂರ್ಣವಾಗಿ ತಣ್ಣಗಾಗಲು ಬಿಡಿ.
- ಹುರಿದ ಒಣ ಹಣ್ಣುಗಳು ತಣ್ಣಗಾದ ಮೇಲೆ, ಅವುಗಳನ್ನು ಮಿಕ್ಸಿ ಜಾರ್ಗೆ ಹಾಕಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇದೇ ಜಾರ್ಗೆ ಸಂಪೂರ್ಣವಾಗಿ ತಣ್ಣಗಾದ ಜೋಳದ ಹಿಟ್ಟು, ಬೆಲ್ಲದ ಪುಡಿ ಮತ್ತು ಏಲಕ್ಕಿಯನ್ನು ಸೇರಿಸಿ, ನಯವಾದ ಪುಡಿಯಾಗುವವರೆಗೆ ಚೆನ್ನಾಗಿ ಗ್ರೈಂಡ್ ಮಾಡಿ.
- ಗ್ರೈಂಡ್ ಮಾಡಿದ ಹಿಟ್ಟಿನ ಮಿಶ್ರಣ ಮತ್ತು ಒಣ ಹಣ್ಣುಗಳ ಪುಡಿಯನ್ನು ದೊಡ್ಡ ತಟ್ಟೆಗೆ ಹಾಕಿ ಚೆನ್ನಾಗಿ ಬೆರೆಸಿ. ಇದಕ್ಕೆ ಹದವಾಗಿ ಬಿಸಿ ಮಾಡಿದ ತುಪ್ಪವನ್ನು ಸ್ವಲ್ಪ ಸ್ವಲ್ಪವೇ ಸೇರಿಸುತ್ತಾ, ನಿಮಗೆ ಬೇಕಾದ ಗಾತ್ರದ ಉಂಡೆಗಳನ್ನು (ಲಡ್ಡು) ಕಟ್ಟಿ. ಬಿಸಿ ತುಪ್ಪ ಲಡ್ಡುಗಳನ್ನು ಆಕಾರದಲ್ಲಿ ಇರಿಸಲು ಸಹಾಯ ಮಾಡುತ್ತದೆ.
- ಈ ರುಚಿಕರ ಮತ್ತು ಪೌಷ್ಟಿಕ ಜೋಳದ ಲಡ್ಡುಗಳನ್ನು ಗಾಳಿಯಾಡದ ಡಬ್ಬದಲ್ಲಿ ಸಂಗ್ರಹಿಸಿದರೆ 15 ರಿಂದ 20 ದಿನಗಳವರೆಗೆ ತಾಜಾ ಆಗಿರುತ್ತವೆ. ಸಕ್ಕರೆಯ ಬದಲಿಗೆ ಬೆಲ್ಲ ಮತ್ತು ಸಿರಿಧಾನ್ಯದ ಬಳಕೆಯಿಂದಾಗಿ, ಇದು ಮಕ್ಕಳು ಹಾಗೂ ದೊಡ್ಡವರಿಗೆ ಅತ್ಯುತ್ತಮ ಪೌಷ್ಟಿಕ ಆಹಾರವಾಗಿದೆ.



Click it and Unblock the Notifications

