Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!

ಮಾರ್ಚ್ 08ರಿಂದ ಮಾರ್ಚ್ 15ರ ವರೆಗೆ ನಿಮ್ಮ ವಾರ ಭವಿಷ್ಯ (Weekly Horoscope) ಇಲ್ಲಿದೆ...

ಮೇಷ ರಾಶಿ

ಮೇಷ ರಾಶಿಯವರಿಗೆ ಮಾರ್ಚ್ ಎರಡನೇ ವಾರವು ಉತ್ತಮವಾಗಿರಲಿದೆ. ಬಾಕಿ ಉಳಿದ ಕೆಲಸಗಳನ್ನು ಪೂರ್ಣ ಮಾಡುವ ವಾರವಿದು. ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಈ ವಾರ ನಿಮಗೆ ಪ್ರಯೋಜನಕಾರಿಯಾಗಿದ್ದರೂ, ಯಾವುದೇ ಅಜಾಗರೂಕತೆಯನ್ನು ತಪ್ಪಿಸಿ. ಸಮಯಕ್ಕೆ ಸರಿಯಾಗಿ ದಾಖಲೆಗಳ ಕೆಲಸವನ್ನು ಪೂರ್ಣಗೊಳಿಸಿ. ಈ ವಾರ ನೀವು ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು. ವಾರದ ಉತ್ತರಾರ್ಧವು ಉದ್ಯೋಗಿಗಳಿಗೆ ಹೆಚ್ಚು ಶುಭವಾಗಿರುತ್ತದೆ. ಈ ಸಮಯದಲ್ಲಿ ನೀವು ಕೆಲಸದಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತೀರಿ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಕೌಟುಂಬಿಕ ವಿಚಾರವಾಗಿಯೂ ಈ ವಾರ ಬಹಳ ಅನುಕೂಲಕರವಗಿರಲಿದೆ.

Weekly Horoscope From March 08 To March 15
Photo Credit: ಸಂಗ್ರಹ ಚಿತ್ರ

ವೃಷಭ ರಾಶಿ

ಈ ವಾರ ವೃಷಭ ರಾಶಿಯ ಜನರಿಗೆ ಅತ್ಯಂತ ಶುಭಕರವಾಗಿರುತ್ತದೆ, ಅನೇಕ ಕಷ್ಟಕರ ಸಂದರ್ಭಗಳನ್ನು ಪರಿಹರಿಸುತ್ತದೆ. ವಾರದ ಆರಂಭದಲ್ಲಿ ಪ್ರಭಾವಿ ವ್ಯಕ್ತಿಯ ಸಹಾಯದಿಂದ ದೀರ್ಘಕಾಲದಿಂದ ಬಾಕಿ ಇರುವ ಕೆಲಸವನ್ನು ಪೂರ್ಣಗೊಳಿಸಲಾಗುತ್ತದೆ. ವಾರದ ಆರಂಭದಲ್ಲಿ ನಿಮ್ಮ ಹಣಕಾಸು ಸಂಬಂಧಿತ ಅಡ್ಡಿಗಳು ನಿವಾರಣೆಯಾಗುವುದು ನೋಡಬಹುದು. ಆಪ್ತ ಸ್ನೇಹಿತರೊಂದಿಗಿನ ನಿಮ್ಮ ಸಂಬಂಧವು ಹದಗೆಟ್ಟಿದ್ದರೆ, ಈ ವಾರ ನಿವಾರಿಸಿಕೊಳ್ಳುವಿರಿ. ಕುಟುಂಬದಲ್ಲಿನ ತಪ್ಪು ಪರಿಕಲ್ಪನೆಗಳು ಈ ವಾರದಲ್ಲಿ ಬಗೆಹರಿಯಲಿದೆ. ಹಣಕಾಸು ಮತ್ತು ಪಾಲುದಾರಿಕೆ ವ್ಯವಹಾರದಲ್ಲಿ ನೀವು ದುಡುಕಿನ ನಿರ್ಧಾರಗಳ ತೆಗೆದುಕೊಳ್ಳಬೇಡಿ. ಅನೇಕರಲ್ಲಿ ವಾರದ ಅಂತ್ಯವು ಪ್ರಯಾಣ ಮಾಡಬೇಕಾಗುತ್ತದೆ. ಆರೋಗ್ಯದ ಕಡೆ ಗಮನವಿಡಿ.

ಮಿಥುನ ರಾಶಿ

ಈ ವಾರ ಮಿಥುನ ರಾಶಿಯ ಜನರಿಗೆ ಮಿಶ್ರಫಲ ತರಲಿದೆ. ಯೋಜಿತ ಕೆಲಸಗಳು ಸಮಯಕ್ಕೆ ಮತ್ತು ಅಪೇಕ್ಷಿತ ರೀತಿಯಲ್ಲಿ ಪೂರ್ಣಗೊಳ್ಳುತ್ತವೆ. ಈ ವಾರ ನೀವು ಜೀವನದಲ್ಲಿ ಪ್ರಗತಿಗೆ ಉತ್ತಮ ಅವಕಾಶಗಳನ್ನು ಪಡೆಯಬಹುದು. ವಾರದ ಮೊದಲಾರ್ಧದಲ್ಲಿ ಉದ್ಯೋಗದಲ್ಲಿರುವ ಜನರು ಕೆಲಸದಲ್ಲಿ ಗಮನಾರ್ಹ ಜವಾಬ್ದಾರಿಯನ್ನು ಪಡೆಯಬಹುದು. ಪರಿಣಾಮವಾಗಿ ನೀವು ನಿಮ್ಮ ಕೆಲಸದಲ್ಲಿ ತೃಪ್ತಿದಾಯಕ ಪ್ರಗತಿ ಮತ್ತು ಫಲಿತಾಂಶಗಳನ್ನು ಸಾಧಿಸುವಿರಿ. ವಾರದ ಉತ್ತರಾರ್ಧದ ವೇಳೆಗೆ ಆರ್ಥಿಕ ತೊಂದರೆಗಳು ಬಗೆಹರಿಯುತ್ತವೆ. ನೀವು ಇದ್ದಕ್ಕಿದ್ದಂತೆ ದೊಡ್ಡ ಮೊತ್ತವನ್ನು ಪಡೆಯಬಹುದು. ವ್ಯವಹಾರದಲ್ಲಿ ತೊಡಗಿರುವವರಿಗೆ ವಾರದ ಉತ್ತರಾರ್ಧವು ಮೊದಲಾರ್ಧಕ್ಕಿಂತ ಹೆಚ್ಚು ಶುಭ ತರಲಿದೆ. ವಾರದ ಉತ್ತರಾರ್ಧದಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಜರಾಗಲು ಅಥವಾ ತೀರ್ಥಯಾತ್ರೆಗೆ ಭೇಟಿ ನೀಡುವ ಅವಕಾಶವಿರಬಹುದು.

ಕರ್ಕ ರಾಶಿ

ಕರ್ಕ ರಾಶಿಯವರಿಗೆ ಈ ವಾರ ಸಾಕಷ್ಟು ದುಬಾರಿಯಾಗಲಿದೆ. ಈ ವಾರ ನಿಮ್ಮ ಕೆಲಸ ಕಾರ್ಯಗಳಲ್ಲಿ ಸಣ್ಣ ಪುಟ್ಟ ಅಡ್ಡಿಗಳು ಎದುರಿಸಬೇಕಾಗುತ್ತದೆ. ವಾರದ ಆರಂಭದಲ್ಲಿ ಕುಟುಂಬದೊಂದಿಗೆ ದೀರ್ಘ ಅಥವಾ ಕಡಿಮೆ-ದೂರ ಪ್ರವಾಸ ಸಾಧ್ಯತೆ ಇದೆ. ಈ ವಾರ ನಿಮ್ಮ ಆರೋಗ್ಯ ಮತ್ತು ಸಂಬಂಧಗಳೆರಡಕ್ಕೂ ಅನುಕೂಲಕರವಾಗಿರುತ್ತದೆ. ವ್ಯಾಪಾರ ಮತ್ತು ವ್ಯವಹಾರ ಸಂಬಂಧಿತ ವಿಚಾರವಾಗಿ ನೀವು ದೊಡ್ಡ ನಿರ್ಧಾರಗಳ ತೆಗೆದುಕೊಳ್ಳುವಿರಿ. ಮಾರುಕಟ್ಟೆ ಸಂಬಂಧಿತ ಜನರು ಈ ವಾರ ಧನಲಾಭ ನೋಡಲಿದ್ದಾರೆ. ವಾರದ ಅಂತ್ಯದಲ್ಲಿ ಸ್ವಂತ ಉದ್ಯಮ ಹೊಂದಿರುವ ವ್ಯಕ್ತಿಯು ತಮ್ಮ ವ್ಯಾಪಾರ ಪ್ರಗತಿಗೆ ಮುಂದಾಗಲಿದ್ದಾರೆ. ಹಿಂದಿನ ಹೂಡಿಕೆಗಳು ಹೆಚ್ಚಿನ ಲಾಭವನ್ನು ನೀಡುವ ಸಾಧ್ಯತೆಯಿದೆ. ವಾರದ ಕೊನೆಯಲ್ಲಿ ನೀವು ಪ್ರಮುಖ ವ್ಯವಹಾರ ಒಪ್ಪಂದವನ್ನು ಮುಕ್ತಾಯಗೊಳಿಸಬಹುದು.

ಸಿಂಹ ರಾಶಿ

ಈ ವಾರ ಸಿಂಹ ರಾಶಿಯವರಿಗೆ ಅನುಕೂಲಕರವಾಗಿರುತ್ತದೆ. ಉದ್ಯಮಿಗಳು ಈ ವಾರ ಗಮನಾರ್ಹ ಲಾಭವನ್ನು ನೋಡಬಹುದು. ಹಾಗೆ ನಿಮ್ಮ ಹಣಕಾಸು ವಿಚಾರದಲ್ಲಿ ಈ ವಾರ ಹಲವು ರೀತಿಯ ಅಡ್ಡಿಗಳ ನೋಡಬಹುದು. ಆದ್ರೆ ನೀವು ನೀಡುವ ಸಹಾಯವನ್ನು ಹಲವರು ನೆನಪಿಟ್ಟುಕೊಳ್ಳುವರು. ನಿಮ್ಮ ಕೌಟುಂಬಿಕ ವಿಚಾರವಾಗಿ ಎದುರಿಸಿದ್ದ ಹಲವು ಸಮಸ್ಯೆಗಳು ನಿವಾರಣೆಯಾಗಲಿದೆ. ನೀವು ಹೊಸ ಆದಾಯ ಮೂಲವನ್ನು ಹುಡುಕುತ್ತಿದ್ದರೆ ಈ ವಾರದ ಅಂತ್ಯದಲ್ಲಿ ದೊಡ್ಡ ಶುಭ ಸುದ್ದಿ ಕೇಳುವಿರಿ. ಕೆಲಸ ಮಾಡುವ ವೃತ್ತಿಪರರಿಗೂ ಈ ಸಮಯ ಅನುಕೂಲಕರವಾಗಿರುತ್ತದೆ. ಈ ವಾರ ನಿಮ್ಮ ಉತ್ತಮ ಕಾರ್ಯಕ್ಷಮತೆಗಾಗಿ ನಿಮ್ಮ ಮೇಲಧಿಕಾರಿಗಳಿಂದ ಪ್ರಶಂಸೆ ಪಡೆಯುತ್ತೀರಿ. ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮಕ್ಕೆ ಹಾಜರಾಗಬಹುದು. ವಾರದ ಉತ್ತರಾರ್ಧದಲ್ಲಿ ನೀವು ಐಷಾರಾಮಿ ವಸ್ತುಗಳನ್ನು ಸಹ ಖರೀದಿಸಬಹುದು.

ಕನ್ಯಾ ರಾಶಿ

ಈ ವಾರ ಕನ್ಯಾ ರಾಶಿಯವರಿಗೆ ಮಿಶ್ರಫಲವಿದೆ. ನೀವು ಮಾಡಬೇಕಿದ್ದ ಕೆಲಸಗಳನ್ನು ಈ ವಾರ ಮುಂದೂಡುಬೇಕಾಗುತ್ತದೆ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಹೀಗಾಗಿ ನೀವು ಅಂದುಕೊಂಡಿದ್ದ ಕೆಲಸಳನ್ನು ವಾರದಲ್ಲಿ ಮಾಡಿ ಮುಗಿಸಬಹುದು. ಉದ್ಯೋಗದಲ್ಲಿರುವವರಿಗೆ ವಾರದ ಆರಂಭವು ಸ್ವಲ್ಪ ಒತ್ತಡದಿಂದ ಕೂಡಿರುತ್ತದೆ. ನೀವು ಇದ್ದಕ್ಕಿದ್ದಂತೆ ಹೆಚ್ಚುವರಿ ಕೆಲಸದ ಹೊರೆಗಳನ್ನು ಎದುರಿಸಬಹುದು. ಕೆಲಸದಲ್ಲಿ ನಿಮ್ಮ ಹಿರಿಯ ಮತ್ತು ಕಿರಿಯರಿಂದ ಬೆಂಬಲದ ಕೊರತೆಯು ಒತ್ತಡವನ್ನು ಉಂಟುಮಾಡುತ್ತದೆ. ವಾರದ ಉತ್ತರಾರ್ಧದಲ್ಲಿ ಸ್ನೇಹಿತರು ಮತ್ತು ಕುಟುಂಬದ ಬೆಂಬಲದೊಂದಿಗೆ ಪ್ರಮುಖ ಕೆಲಸವನ್ನು ಪೂರ್ಣಗೊಳಿಸಬಹುದು. ಮನೆಯಲ್ಲಿನ ಆರ್ಥಿಕ ಸಮಸ್ಯೆ ದೂರ ಮಾಡುವ ಕಾರ್ಯ ಮಾಡುವಿರಿ. ಸಾಲದ ಪ್ರಮಾಣವೂ ಏರಿಕೆಯಾಗಬಹುದು.

ಇನ್ನುಳಿದ 6 ರಾಶಿಗಳ ವಾರದ ರಾಶಿಫಲ ತಿಳಿಯಲು ಇಲ್ಲಿ ಕ್ಲಿಕ್ ಮಾಡಿಇನ್ನುಳಿದ 6 ರಾಶಿಗಳ ವಾರದ ರಾಶಿಫಲ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

English summary

Weekly Horoscope From March 08 To March 15: Lucky Zodiac Signs In Kannada

Weekly Horoscope From March 08 To March 15: These zodiac get more benefits during this 7 days, read on...
X
Desktop Bottom Promotion