Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್‌ಡೇ ಫಿಶ್: ಮತ್ತೇನು ದುರಂತ ಕಾದಿದೆ?
2026ರಲ್ಲಿ ಹಲವು ರೀತಿಯ ದುರಂತಗಳನ್ನೇ ನೋಡುತ್ತಿದ್ದೇವೆ. ವರ್ಷದ ಆರಂಭದಲ್ಲಿ ಭೂಕಂಪನ ಸೇರಿದಂತೆ ಹಲವು ನೈಸರ್ಗಿಕ ವಿಕೋಪಗಳ ಎದುರಿಸಿರುವುದು ನೋಡಿರಬಹುದು. ಹಾಗೆ ಈಗ ಮಧ್ಯಪ್ರಾಚ್ಯದಲ್ಲಿನ ಯುದ್ಧ ಭೀತಿಯು ಇಡೀ ಭೂಮಂಡಲಕ್ಕೆ ಅಪಾಯ ತಂದೊಡ್ಡುವ ಆತಂಕಕ್ಕೆ ಕಾರಣವಾಗುತ್ತಿದೆ. ಇದೇಲ್ಲದರ ನಡುವೆ ಹೊಸ ಆತಂಕ ಉಂಟಾಗುವ ಘಟನೆಗಳು ಸಂಭವಿಸುತ್ತಿದೆ.
ಈಗ ಅಶುಭ ಕಾರಕ ಎಂದು ಕರೆಯುವ ಡೂಮ್ಸ್‌ಡೇ ಫಿಶ್ ಮತ್ತೆ ಕಾಣಿಸಿಕೊಂಡಿದೆ. ಮೆಕ್ಸಿಕೋದ ಕಡಲತೀರದಲ್ಲಿ ಎರಡು 'ಡೂಮ್ಸ್‌ಡೇ ಫಿಶ್'ಗಳನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯದಲ್ಲಿ ದೊಡ್ಡ ದುರಂತಗಳು ನಡೆಯಲಿದೆ ಎಂಬ ಆತಂಕಕ್ಕೂ ಇದು ಕಾರಣವಾಗಿದೆ. ಕ್ಯಾಬೊ ಸ್ಯಾನ್ ಲ್ಯೂಕಾಸ್‌ನ ಸಮುದ್ರ ತೀರದಲ್ಲಿ ಈ ಎರಡು ಡೂಮ್ಸ್‌ಡೇ ಫಿಶ್ ಕಾಣಿಸಿಕೊಂಡಿವೆ.

ಸಮುದ್ರದ ಅಲೆಗಳ ಪಕ್ಕದಲ್ಲಿ ಮರಳಿನಲ್ಲಿ ಎರಡು ಓರ್‌ಫಿಶ್‌ಗಳು ಕಾಣಿಸಿಕೊಂಡಿವೆ. ಈ ಮೀನುಗಳು ಆಳ ಸಮುದ್ರದಲ್ಲಿ ಮಾತ್ರವೇ ಕಂಡುಬರುತ್ತವೆ. ಹಾಗೆ ಪ್ರಾಚೀನ ಜಪಾನೀಸ್ ಜಾನಪದಕ್ ಸಂಬಂಧಿಸಿದ ಕಾರಣ 'ಡೂಮ್ಸ್‌ಡೇ ಫಿಶ್' ಎಂದು ಕರೆಯಲಾಗಿದೆ. ಜಪಾನ್ ಕಥೆಗಳ ಪ್ರಕಾರ ಈ ಮೀನುಗಳು ಕಾಣಿಸಿಕೊಳ್ಳುವುದರಿಂದ ದೊಡ್ಡ ದುರಂತಗಳು ನಡೆಯಲಿದೆ ಎಂದು ಹೇಳಲಾಗಿದೆ. ಇವು ಭೂಮಿ ಮೇಲೆ ನಡೆಯುವ ದುರಂತಗಳ ಮುನ್ಸೂಚನೆ ಎಂದು ಕೂಡ ಕರೆಯಲಾಗಿದೆ.
ಆದ್ರೆ ಮಧ್ಯಪ್ರಾಚ್ಯದಲ್ಲಿ ದೊಡ್ಡ ಯುದ್ಧ ಭೀತಿ ಆವರಿಸಿದೆ. ಇದು ಮೂರನೆ ಮಹಾಯುದ್ಧಕ್ಕೆ ನಾಂದಿಯಾಗಲಿದೆ ಎಂಬ ಆತಂಕದ ನಡುವೆಯೇ ಈ ದುರಂತಗಳ ಸಾರುವ ಫಿಶ್‌ಗಳು ಕಾಣಿಸಿಕೊಂಡಿರುವುದು ಈ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ. ಡೂಮ್ಸ್‌ಡೇ ಶಿಶ್ ಈ ಅಪರೂಪದ ಜೀವಿ, ದೊಡ್ಡ ವಿಪತ್ತು ಸಂಭವಿಸುವ ಹಂತದಲ್ಲಿದ್ದಾಗ ಮಾತ್ರ ಸಮುದ್ರದ ಆಳದಿಂದ ಮೇಲೇರುತ್ತದೆ ಎಂದು ಹೇಳಲಾಗಿದೆ. ಸಮುದ್ರ ತೀರದಲ್ಲಿ ದೊಡ್ಡ ಫಿಶ್‌ಗಳು ಒದ್ದಾಡುತ್ತಿರುವುದು ಸಹ ವಿಡಿಯೋದಲ್ಲಿ ನಾವು ನೋಡಬಹುದು.
ಈ ಹಿಂದೆ ಆಸ್ಟ್ರೇಲಿಯನ್ ಸಮುದ್ರ ತೀರದಲ್ಲಿ ಹಾಗೆ ತಮಿಳುನಾಡಿನಲ್ಲೂ ಪತ್ತೆಯಾಗಿತ್ತು. ತಮಿಳುನಾಡಿನ ಮೀನುಗಾರರಿಗೆ ಈ ಅಪರೂಪದ ಮೀನು ಸಿಕ್ಕಿತ್ತು. ಅದರಲ್ಲೂ ಸ್ಥಳೀಯ ಮೀನುಗಾರರು ಸುಮಾರು 30 ಅಡಿ (9 ಮೀಟರ್) ಉದ್ದದ ಬೃಹತ್ ಓರ್‌ಫಿಶ್ ಅನ್ನು ಹಿಡಿದಿದ್ದರು. ಆಳ ಸಮುದ್ರ ಜೀವಿಯನ್ನು ಮೇಲೆ ಎತ್ತಲು 7 ಜನರ ಸಹಾಯ ಬೇಕಾಯಿತು, ಬೃಹತ್ ಗಾತ್ರದ ಈ ಮೀನು ನೋಡಿ ಎಲ್ಲರೂ ಅಚ್ಚರಿಗೊಳಗಾಗಿದ್ದರು. ಹಾಗೆ ಆಸ್ಟ್ರೇಲಿಯಾ ಕಡಲ ತೀರದಲ್ಲಿ ಕೂಡ ವರದಿಯಾದ ಈ ಮೀನು ಎಲ್ಲರಲ್ಲೂ ಆತಂಕ ಮೂಡಿಸಿತ್ತು.
2026ನೇ ವರ್ಷ ಆರಂಭವಾಗುತ್ತಿದ್ದಂತೆ ಹಲವು ರೀತಿಯ ದುರಂತಗಳು ನಡೆಯುತ್ತಿದೆ. ಒಂದು ಕಡೆ ಮಾನವ ನಿರ್ಮಿತ ದುರಂತಗಳಾದರೆ ಮತ್ತೊಂದು ಕಡೆ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗುತ್ತಿದೆ. ಯುದ್ಧ, ವಿಮಾನ ದುರಂತ ಸೇರಿ ಹಲವು ದುರಂತಗಳು ನಡೆಯುತ್ತಿವೆ. ಇನ್ನೊಂದು ಕಡೆ ಸುನಾಮಿ, ಭೂಕಂಪ, ಪ್ರವಾಹದಂತಹ ಘಟನೆಗಳು ಜನರ ನಿದ್ದೆ ಕೆಡಿಸುತ್ತಿದೆ. ಈಗ ಈ ಡೂಮ್ಸ್‌ಡೇ ಫಿಶ್ ಕಾಣಿಸಿಕೊಂಡಿರುವುದು ಈ ಘಟನೆಗಳು ಮತ್ತಷ್ಟು ಹೆಚ್ಚಾಗುವ ಆತಂಕಕ್ಕೂ ಕಾರಣವಾಗಿದೆ.
ಸದ್ಯ ಈಗ ಮೆಕ್ಸಿಕೋದಲ್ಲಿ ವರದಿಯಾಗಿದೆ ಎಂಬ ಘಟನೆಯ ವಿಡಿಯೋವನ್ನು 'ದಿ ಆಡಿಟಿ ಕಲೆಕ್ಟರ್' ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈಗಾಗಲೇ ಸಾವಿರಾರು ಮಂದಿ ಈ ವಿಡಿಯೋ ವೀಕ್ಷಿಸಿದ್ದು, ಎಲ್ಲರಿಗೂ ಇದು ಅಚ್ಚರಿಯ ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ಈ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಹಲವರು ಮುಂದೆ ದೊಡ್ಡ ಮಟ್ಟದ ದುರ್ಘಟನೆಗಳು ನಡೆಯಲಿದೆ ಎಂದು ಅಂದಾಜಿಸಿದ್ದಾರೆ.



Click it and Unblock the Notifications
