Latest Updates
-
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ
ಮಾರ್ಚ್‌ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ!
ಜ್ಯೋತಿಷ್ಯದಲ್ಲಿ ಎಲ್ಲಾ ಗ್ರಹಗಳ ಚಲನೆಯನ್ನು ಕೂಡ ಮುಖ್ಯ ವಿದ್ಯಮಾನ ಎಂಬುದಾಗಿ ಪರಿಗಣಿಸಲಾಗುತ್ತದೆ. ಅದ್ರಲ್ಲೂ ಬುಧ ಗ್ರಹದ ಚಲನೆಯು ಎಲ್ಲಾ ರಾಶಿಗಳ ಮೇಲೆಯೂ ಪರಿಣಾಮ ಬೀರಲಿದೆ. ಬುಧನನ್ನು ಗ್ರಹಗಳಿಗೆ ರಾಜ ಎಂದು ಕರೆಯಲಾಗಿದೆ. ಹಾಗೆ ವೇಗವಾಗಿ ಚಲಿಸುವ ಕಾರಣ ಎಲ್ಲಾ ರಾಶಿಗಳನ್ನು ಬಹುಬೇಗ ಸಂಚರಿಸುತ್ತಾನೆ. ಹಾಗೆ ಬಹಳಷ್ಟು ಗ್ರಹಗಳೊಂದಿಗೆ ಒಂದೇ ವರ್ಷದಲ್ಲಿ ಸಂಯೋಗವಾಗುವುದು ನೋಡಬಹುದು.
ಬುಧ ಕನ್ಯಾ ರಾಶಿ ಮತ್ತು ಮಿಥುನ ರಾಶಿಯನ್ನು ಆಳುತ್ತಾನೆ. ಬುಧನನ್ನು ಬುದ್ದಿವಂತಿಕೆ, ವ್ಯವಹಾರ, ಅಧ್ಯಯನ, ಭೌತಿಕ ಸೌಲಭ್ಯಗಳ ನೀಡುವಂತಹ ಗ್ರಹವೆಂದು ಪರಿಗಣಿಸಲಾಗಿದೆ. ಯಾರ ಜಾತಕದಲ್ಲಿ ಬುಧನು ಧನಾತ್ಮಕ ಮನೆಯಲ್ಲಿ ಚಲಿಸುತ್ತಾನೋ ಅವರಲ್ಲಿ ಧನಾತ್ಮಕ ವಿಚಾರಗಳು ಹೆಚ್ಚಾಗುತ್ತದೆ. ಸದ್ಯ ಬುಧನು ಈಗ ಕುಂಭ ರಾಶಿಯಲ್ಲಿದ್ದಾನೆ.

ಬುಧ ಕುಂಭ ರಾಶಿಯಲ್ಲಿ ಚಲಿಸುತ್ತಾನೆ. ಹಾಗೆ ಕುಂಭದಲ್ಲಿ ಬುಧನು ದುರ್ಬಲನಾಗಿರುತ್ತಾನೆ. ಮಾರ್ಚ್ 14 ರಂದು ಬುಧನು ಕುಂಭ ರಾಶಿಯಲ್ಲಿ ಉದಯಿಸುತ್ತಾನೆ. ಈ ರೀತಿ ಬುಧನ ಉದಯದಿಂದ ಎಲ್ಲಾ ರಾಶಿ ಜನರ ಜೀವನದ ಮೇಲೆಯೂ ಪ್ರಭಾವವು ಉಂಟಾಗುತ್ತದೆ. ಬುಧನ ಉದಯದಿಂದಾಗಿ ಒಬ್ಬರ ಚಿಂತನೆ, ವಿಶ್ಲೇಷಣಾತ್ಮಕ ಕೌಶಲ್ಯ ಮತ್ತು ಸಂವಹನ ಕೌಶಲ್ಯಗಳು ಸುಧಾರಿಸುತ್ತವೆ. ಉದ್ಯಮಿಗಳು ಉತ್ತಮ ವ್ಯವಹಾರಗಳ ನಡೆಸುತ್ತಾರೆ. ಹೊಸ ರೀತಿಯ ಉದ್ಯೋಗವಕಾಶಗಳು, ವ್ಯಾಪಾರ ಲಾಭಗಳು, ವಿದ್ಯಾರ್ಥಿಗಳಲ್ಲಿ ವಿದ್ಯಾಭ್ಯಾಸದ ಲಾಭಗಳು ಸೇರಿ ಹಲವು ರೀತಿಯ ಅದೃಷ್ಟಗಳಿವೆ. ಹಾಗಾದ್ರೆ ಯಾವ ರಾಶಿಯವರಿಗೆ ಇದು
ಪಡೆಯುತ್ತಾರೆ. ಬರವಣಿಗೆ, ಐಟಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿರುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ಈಗ ಕುಂಭ ರಾಶಿಯಲ್ಲಿ ಬುಧನ ಉದಯದಿಂದಾಗಿ ಯಾವ ರಾಶಿಗಳು ಅದೃಷ್ಟಶಾಲಿಯಾಗುತ್ತವೆ ಎಂದು ನೋಡೋಣ.
ಕುಂಭ ರಾಶಿ
ಕುಂಭ ರಾಶಿಯ ಮೊದಲ ಮನೆಯಲ್ಲಿ ಬುಧನು ಉದಯಿಸುತ್ತಾನೆ. ಇದರಿಂದಾಗಿ ಈ ಕುಂಭ ರಾಶಿ ಜನರಲ್ಲಿ ಆರ್ಥಿಕ ಯೋಜನೆಗಳು ಕೈಗೂಡಲಿದೆ. ಉದ್ಯಮಿಗಳು ಉತ್ತಮ ಹಣಕಾಸಿನ ಅವಕಾಶಗಳ ಎದುರಿಸುತ್ತೀರಿ. ವ್ಯವಹಾರದಲ್ಲಿ ಅನಿರೀಕ್ಷಿತ ಬೆಳವಣಿಗೆ ನೋಡುವಿರಿ. ಇದು ನಿಮಗೆ ವಿಜಯದ ಸಂಕೇತವಾಗಬಹುದು. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಘನತೆ ಹೆಚ್ಚಾಗಲಿದೆ. ಉದ್ಯೋಗದಲ್ಲಿ ನಿಮಗೆ ವೇತನ ಹೆಚ್ಚಳದಂತಹ ಶುಭಯೋಗವಿದೆ. ನೀವು ದುಬಾರಿ ವಸ್ತುಗಳ ಖರೀದಿಯ ಸಮಯವಿದು.
ವೃಷಭ ರಾಶಿ
ವೃಷಭ ರಾಶಿಯ 10 ನೇ ಮನೆಯಲ್ಲಿ ಬುಧ ಉದಯಿಸುತ್ತಾನೆ. ಇದು ನಿಮಗೆ ಉತ್ತಮ ಆರ್ಥಿಕ ಪ್ರಯೋಜನಗಳನ್ನು ಪಡೆಯುತ್ತವೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಲು ಅವಕಾಶಗಳನ್ನು ಪಡೆಯುತ್ತಾರೆ. ಜಂಟಿ ಉದ್ಯಮಗಳಲ್ಲಿ ಉತ್ತಮ ಲಾಭ ಇರುತ್ತದೆ. ಕೌಟುಂಬಿಕ ವಿಚಾರದಲ್ಲಿ ನಿಮಗೆ ಇದ್ದಂತಹ ಅಡ್ಡಿಗಳು ನಿವಾರಣೆಯಾಗುವುದು ನೋಡಬಹುದು. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಉದ್ಯೋಗಗಳು ಸಿಗುತ್ತವೆ. ಮನೆಗೆ ನೀವು ಹೊಸ ವಸ್ತುಗಳ ಖರೀದಿಸಬಹುದು.
ಮಕರ ರಾಶಿ
ಮಕರ ರಾಶಿಯ 2 ನೇ ಮನೆಯಲ್ಲಿ ಬುಧ ಉದಯಿಸುತ್ತಾನೆ. ಇದು ವ್ಯವಹಾರ ಮತ್ತು ವೃತ್ತಿಯಲ್ಲಿ ಉತ್ತಮ ಲಾಭವನ್ನು ತರುತ್ತದೆ. ವ್ಯವಹಾರವನ್ನು ವಿಸ್ತರಿಸುವ ಅವಕಾಶಗಳು ಲಭ್ಯವಿರುತ್ತವೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಹೂಡಿಕೆಗಳಿಂದ ನಿಮಗೆ ಲಾಭ ಸಿಗುತ್ತದೆ. ಮಾತಿನ ಮೂಲಕ ನೀವು ಅನೇಕ ಕೆಲಸಗಳನ್ನು ಪರಿಣಾಮಕಾರಿಯಾಗಿ ಪೂರ್ಣಗೊಳಿಸುವಿರಿ. ಆರ್ಥಿಕ ಪರಿಸ್ಥಿತಿಯ ಉತ್ತಮವಾಗುವುದು, ನಿಮ್ಮಲ್ಲಿ ನೆಮ್ಮದಿಗೆ ಕಾರಣವಾಗಲಿದೆ. ಉಳಿತಾಯ ಕೂಡ ಹೆಚ್ಚಳವಾಗಲಿದೆ.
ಮಿಥುನ ರಾಶಿ
ಬುಧನು ಮಿಥುನ ರಾಶಿಯ 9 ನೇ ಮನೆಯಲ್ಲಿ ಉದಯಿಸುತ್ತಾನೆ. ಇದು ಈ ರಾಶಿ ಜನರ ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ತರುತ್ತದೆ. ಕೆಲಸ ಮಾಡುವವರಿಗೆ ಹೊಸ ಜವಾಬ್ದಾರಿಗಳು ಸಿಗುವ ಸಮಯವೂ ಹೌದು. ಬಹಳ ಸಮಯದಿಂದ ನೀವು ಬಯಸಿದ್ದಂತಹ ವಸ್ತುಗಳನ್ನು ಈ ಸಮಯದಲ್ಲಿ ಖರೀದಿಸಬಹುದು. ವಿದೇಶ ಪ್ರವಾಸದಂತಹ ದೊಡ್ಡ ವಿಚಾರಗಲ್ಲಿಯೂ ಜಯವಿದೆ. ಮನೆಯ ಶುಭ ಕಾರ್ಯವು ಅಡ್ಡಿಗಳಿಲ್ಲದೆ ನಡೆಯಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











