Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ಜ್ಯೋತಿಷ್ಯದಲ್ಲಿ ಶನಿಯನ್ನು ನ್ಯಾಯ ಮತ್ತು ಕರ್ಮ ನೀಡುವ ಗ್ರಹವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯೊಬ್ಬನ ಜೀವನದಲ್ಲಿ ಶನಿಯ ಪಥ ಹಾಗೆ ಯಾವ ಮನೆಯಲ್ಲಿ ಇದ್ದಾನೆ ಎಂಬುದರ ಆಧಾರದ ಮೇಲೆ ಆತನ ಕರ್ಮಫಲಗಳು ನಿರ್ಧರಿತವಾಗುತ್ತದೆ. ಹಾಗೆ ಎಲ್ಲಾ ರಾಶಿಗಳಿಗಿಂತ ಶನಿ ಬಹಳ ನಿಧಾನವಾಗಿ ಚಲಿಸುತ್ತಾನೆ. ಇದರ ಫಲವಾಗಿ ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತಾನೆ, ಆದ್ರೆ ಈ ನಡುವೆ ಹಲವು ಬಾರಿ ಆತ ಉದಯ ಸ್ಥಿತಿ ಹಾಗೂ ಅಸ್ತ ಸ್ಥಿತಿಯಲ್ಲಿ ಇರುವುದು ನೋಡಬಹುದು.
ಪ್ರಸ್ತುತ ಶನಿಯು ಮೀನ ರಾಶಿಯಲ್ಲಿ ಚಲಿಸುತ್ತಿದ್ದಾನೆ. ಇಡೀ ವರ್ಷ ಮೀನ ರಾಶಿಯಲ್ಲಿರುವ ಶನಿಯು ಮೀನ ರಾಶಿಯಲ್ಲಿಯೇ ಅಸ್ತಮ ಸ್ಥಿತಿ ತಲುಪಲಿದ್ದಾನೆ. ಇದೇ ಮಾರ್ಚ್ 13ರಂದು ಶನಿ ಮೀನದಲ್ಲಿ ಅಸ್ತಮನಾಗಿತ್ತಾನೆ. ಬಳಿಕ ಏಪ್ರಿಲ್ 22ರ ವರೆಗೂ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ಈ 40 ದಿನಗಳ ಅವಧಿಯಲ್ಲಿ ಶನಿ ಅಸ್ತಮನಾಗಿ ಎಲ್ಲಾ ಗ್ರಹಗಳ ಮೇಲೆಯೂ ಹಾಗೆ ರಾಶಿಗಳ ಮೇಲೆಯೂ ತನ್ನ ಪ್ರಭಾವ ಉಂಟು ಮಾಡುತ್ತಾನೆ.

ಶನಿಯ ಶುಭ ಪ್ರಭಾವದಿಂದಾಗಿ ಹಲವರಿಗೆ ಅನುಕೂಲಕರ ಹಾಗೆ ಮತ್ತೆ ಕೆಲವರಿಗೆ ಅಶುಭವಾಗಬಹುದು. ಹಾಗಾದ್ರೆ ಶನಿ ಅಸ್ತಮದಿಂದ ಯಾವೆಲ್ಲಾ ರಾಶಿಯವರಿಗೆ ಲಾಭದಾಯಕ ದಿನಗಳಿವೆ ಎಂಬುದನ್ನು ತಿಳಿದುಕೊಳ್ಳೋಣ.
ಸಿಂಹ ರಾಶಿ
ಶನಿಯ ಅಸ್ತಮ ಸ್ಥಿತಿಗೆ ತಲುಪುತ್ತದೆ ಇದು ಶನಿ ಪ್ರಭಾವ ಕಡಿಮೆ ಮಾಡಲಿದೆ. ಇಂತಹ ಸ್ಥಿತಿಯಲ್ಲಿ ಸಿಂಹ ರಾಶಿಯ ಜನರಿಗೆ ಅನುಕೂಲವಿದೆ. ಈ ರಾಶಿಯ ಜನರಿಗೆ ಆರ್ಥಿಕ ಲಾಭ ತರಲಿದೆ. ನಿಮ್ಮ ಹೊಸ ವ್ಯಾಪಾರಗಳು, ವ್ಯವಹಾರಗಳು ಧನಾತ್ಮಕ ಸ್ಥಿತಿಯಲ್ಲಿ ನಿಮಗೆ ಲಾಭದಾಯಕ. ಹಾಗೆ ಬಹು ಸಮಯದಿಂದ ನಿಮಗೆ ಬರಬೇಕಿದ್ದ ಹಣ ಈ ಸಮಯದಲ್ಲಿ ಕೈ ಸೇರುವಂತಹ ಸಮಯ. ಆಸ್ತಿ ಅಥವಾ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಹಳೆಯ ವಿವಾದಗಳು ಬಗೆಹರಿಯಬಹುದು. ಈ ಸಮಯದಲ್ಲಿ ನೀವು ಹೊಸ ಕೋರ್ಸ್‌ಗೆ ದಾಖಲಾಗಬಹುದು. ಹಣಕಾಸಿನ ವಿಚಾರದಲ್ಲಿ ನಿಮಗೆ ಇದ್ದ ಹಲವು ಅಡ್ಡಿಗಳು ನಿವಾರಣೆಯಾಗಲಿದೆ.
ಧನು ರಾಶಿ
ಈ ಸಮಯವು ಧನು ರಾಶಿಯವರಿಗೆ ಅದೃಷ್ಟದಿಂದ ತುಂಬಿರುತ್ತದೆ. ಮಾನಸಿಕ ಒತ್ತಡ ಕಡಿಮೆಯಾಗುತ್ತದೆ ಮತ್ತು ನಿಮ್ಮ ಆರೋಗ್ಯವು ಸುಧಾರಿಸುತ್ತದೆ. ಹಠಾತ್ ಆರ್ಥಿಕ ಲಾಭಗಳು ಸಾಧ್ಯ. ನಿಮ್ಮ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯಗಳನ್ನು ಪ್ರಶಂಸಿಸಲಾಗುತ್ತದೆ. ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಸಾಮರಸ್ಯವು ಮೇಲುಗೈ ಸಾಧಿಸುತ್ತದೆ. ಹೂಡಿಕೆಗಳಿಂದ ನೀವು ಬಯಸಿದ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುತ್ತೀರಿ. ನಿಮ್ಮ ವೈವಾಹಿಕ ಜೀವನದಲ್ಲಿ ಸಂತಸದ ಅನುಭವವಿದೆ. ಪ್ರವಾಸಗಳು, ಶುಭ ಕಾರ್ಯಗಳಲ್ಲಿ ಭೇಟಿಯಾಗುವ ಸಾಧ್ಯತೆ ಹೆಚ್ಚಾಗಿರಲಿದೆ.
ಮೀನ ರಾಶಿ
ಈ ಸಮಯವು ಮೀನ ರಾಶಿಯವರಿಗೆ ಶುಭವೆಂದು ಪರಿಗಣಿಸಲಾಗುತ್ತಿದೆ. ಈ ಸಮಯದಲ್ಲಿ ನಿಮಗೆ ಆರೋಗ್ಯದ ವಿಚಾರದಲ್ಲಿ ಶುಭವಿದೆ, ಹಣಕಾಸು ಖರ್ಚುಗಳು ಕಡಿಮೆಯಾಗಲಿದೆ. ವಿಶೇಷ ಪ್ರಯೋಜನಗಳ ತರಬಹುದು. ಹೊಸ ಉದ್ಯೋಗ, ವೃತ್ತಿ, ವಸ್ತು ಖರೀದಿಯಂತಹ ವಿಚಾರದಲ್ಲಿ ಈ ಸಮಯವು ನಿಮಗೆ ಶುಭ ತರಲಿದೆ. ಪ್ರಭಾವ ಮತ್ತು ಗೌರವವನ್ನು ಹೆಚ್ಚಿಸಬಹುದು. ಈ ಸಮಯ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರುತ್ತದೆ. ಸ್ವಂತ ಉದ್ಯೋಗ ಕಟ್ಟಿಕೊಂಡಿರುವ ಮಂದಿಗೆ ಈ ಸಮಯವು ಲಾಭಕರ. ಗೃಹಿಣಿಯರು ಹಳೆಯ ಬಾಕಿಯನ್ನು ಮರಳಿ ಪಡೆಯುವುದು ನಿಮ್ಮ ಆರ್ಥಿಕ ಸದೃಢತೆಗೆ ಕಾರಣವಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ವಿಶ್ವಾಸಾರ್ಹವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











