For Quick Alerts
ALLOW NOTIFICATIONS  
For Daily Alerts

ಈ ಸಣ್ಣ-ಸಣ್ಣ ವಿಷಯಗಳೇ ದಾಂಪತ್ಯದಲ್ಲಿ ದೊಡ್ಡ ಬದಲಾವಣೆ ತರೋದು

|

ಪ್ರತಿಯೊಂದು ಸಣ್ಣ ಪ್ರಯತ್ನ ಮತ್ತು ಕಾಳಜಿಯು ಯಶಸ್ವಿ ದಾಂಪತ್ಯಕ್ಕೆ ಕಾರಣವಾಗುವುದು. ಪತಿ-ಪತ್ನಿ ನಡುವೆ ಬಿರುಕು ಮೂಡಿದಾಗ ಸಹಾಯ ಬರುವುದೇ ನೀವು ಮಾಡುವ ಈ ಸಣ್ಣ ಸಣ್ಣ ವಿಚಾರಗಳು. ಅದು 'ಸಾರಿ' ಅಥವಾ 'ಥ್ಯಾಂಕ್ಯೂ' ಯಾವುದೇ ಆಗಿರಲಿ ನಿಮ್ಮ ನಡುವೆ ಬಂಧವನ್ನು ಬಿಗಿಯಾಗಿಸುವುದು. ನಾವು ಸಣ್ಣ ವಿಚಾರಗಳೆಂದು ನಿರ್ಲಕ್ಷ್ಯ ಮಾಡಿದರೆ ನಿಮ್ಮ ನಡುವಿನ ಮನಸ್ತಾಪ ಮತ್ತಷ್ಟು ಬಿಗುಡಾಯಿಸಬಹುದು. ಆದ್ದರಿಂದ ಇಲ್ಲಿ ನಾವು ಸುಖಿ ದಾಂಪತ್ಯಕ್ಕೆ ಅಳವಡಿಸಿಕೊಳ್ಳಬೇಕಾದ ಸಣ್ಣ ಸಣ್ಣ ವಿಚಾರಗಳ ಬಗ್ಗೆ ವಿವರಿಸಿದ್ದೇವೆ.

ನಿಮ್ಮ ದಾಂಪತ್ಯದಲ್ಲಿ ದೊಡ್ಡ ಬದಲಾವಣೆಯನ್ನು ಮಾಡುವ ಶಕ್ತಿಯನ್ನು ಹೊಂದಿರುವ ಸಣ್ಣ ವಿಷಯಗಳ ಪಟ್ಟಿ ಇಲ್ಲಿದೆ:

Little Things That Make a Big Difference in marriage in Kannada

1. ಯಾವುದೇ ಸಣ್ಣ ಕೆಲಸಗಳಿಗೆ ಸಹ 'ಪ್ಲೀಸ್' ಮತ್ತು 'ಧನ್ಯವಾದ' ಎಂದು ಹೇಳಲು ಪ್ರಾರಂಭಿಸಿ, ಏಕೆಂದರೆ ಇದು ನಿಮ್ಮ ಸಂಗಾತಿಗೆ ಕೃತಜ್ಞತೆಯನ್ನು ತಿಳಿಸುವ ಮಾರ್ಗ. ಗಂಡ-ಹೆಂಡತಿಯಾದರೂ ಈ ಪದಗಳನ್ನು ಹೇಳುವ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ.

2. ನಿಮ್ಮ ಸಂಗಾತಿಯ ಯಾವುದಾದರೊಂದು ಕೆಲಸಕ್ಕೆ ಸಹಾಯ ಮಾಡಿ. ನಿಮ್ಮ ಈ ಮನೋಭಾವ ಅವರ ದೈನಂದಿನ ಒತ್ತಡವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡುತ್ತದೆ.

3. ನಿಮ್ಮ ಸಂಗಾತಿ ಕೋಪಗೊಂಡಿದ್ದಾಗ ಅವರನ್ನು ತಕ್ಷಣ ಸಮಾಧಾನಪಡಿಸುವ ಮತ್ತು ಶಾಂತಗೊಳಿಸುವ ಶಕ್ತಿ ಅಪ್ಪುಗೆಗಿದೆ. ಆದ್ದರಿಂದ ಅವರು ಕೋಪಗೊಂಡಾಗ, ಕೆಲಸದ ನಿಮಿತ್ತ ಹೊರಹೋಗುವಾಗ ಒಂದು ಸಣ್ಣ ಹಗ್ ನೀಡಿ.

4. ನೀವು ಬೆಳಿಗ್ಗೆ ಎದ್ದಾಗ, ನಿಮ್ಮ ಸಂಗಾತಿಯನ್ನು ಸ್ವಲ್ಪ ಕಾಡಿಸಿ. ಏಕೆಂದರೆ ಬೆಳಿಗ್ಗೆ ಸಾಕಷ್ಟು ಪ್ರೀತಿ ಮತ್ತು ಕಾಳಜಿಯನ್ನು ಅವರಿಗೆ ಪ್ರಸಾರ ಮಾಡುತ್ತದೆ. ಇದು ತಕ್ಷಣ ನಿಮ್ಮನ್ನು ಸಂತೋಷದ ಮತ್ತು ಫ್ರೆಶ್ ಮನಸ್ಥಿತಿಗೆ ತರುವುದು.

5. ಸಾಧ್ಯವಾದರೆ ನಿಮ್ಮ ಸಂಗಾತಿಗೆ ಇಷ್ಟವಾಗುವ ಸಣ್ಣ-ಸಣ್ಣ ಸರ್ಪೈಸ್ ಉಡುಗೊರೆಗಳನ್ನು ನೀಡಿ.

6. ನಿಮ್ಮ ಸಂಗಾತಿಯನ್ನು ಏಕೆ ಪ್ರೀತಿಸುತ್ತೀರಿ ಎಂಬುದರ ಕುರಿತು ವಿವರಣೆಗಳು ಅಗತ್ಯವಿಲ್ಲದಿದ್ದರೂ, ಅವರನ್ನು ಪ್ರೀತಿಸುತ್ತಿರುವ ವಿಚಾರವನ್ನು ಹಲವು ಬಾರಿ ಹೇಳುವುದರಿಂದ ಅವರಿಗೆ ಯಾವುದೇ ನೋವಾಗುವುದಿಲ್ಲ. ಆದ್ದರಿಂದ ಆಗಾಗ ಐ ಲವ್ ಯೂ ಹೇಳಿ. ಇದರಿಂದ ಅವರಿಗೆ ಖುಷಿಯಾಗುವುದು.

7. ನೀವು ಎಷ್ಟೇ ಬ್ಯುಸಿಯಾಗಿದ್ದರೂ ಅಥವಾ ದಣಿದಿದ್ದರೂ ನಿಮ್ಮ ಸಂಗಾತಿಗೆ ದಿನಕ್ಕೆ ಕನಿಷ್ಠ ಒಂದು ಮುತ್ತು ನೀಡಿ. ಇದು ಉತ್ಸಾಹ ಮತ್ತು ಪ್ರೀತಿಯ ಚೈತನ್ಯವನ್ನು ಜೀವಂತವಾಗಿರಿಸುತ್ತದೆ.

8. ನೀವು ಏನೇ ತಿನ್ನುತ್ತಿದ್ದರೂ ಆ ಆಹಾರವನ್ನು ಹಂಚಿಕೊಳ್ಳಿ. ಅಲ್ಲದೆ, ಸಿಹಿತಿಂಡಿ ಹಂಚಿಕೊಳ್ಳುವಲ್ಲಿ ವಿಶೇಷ ರೀತಿಯ ಪ್ರೀತಿಯಿದೆ ಏಕೆಂದರೆ ಸಿಹಿ ರುಚಿ ಅವರ ದಾಂಪತ್ಯಕ್ಕೆ ಪ್ರೀತಿಯ ಮತ್ತು ಹರ್ಷದ ಘಮವನ್ನು ತರುತ್ತದೆ.

9. ನಿಮ್ಮ ಸಂಗಾತಿಯನ್ನು ಬಿಟ್ಟು ನಿಮ್ಮ ಹವ್ಯಾಸದಲ್ಲೂ ನಿಮ್ಮನ್ನು ತೊಡಗಿಸಿಕೊಳ್ಳಿ. ಇದು ನಿಮಗೆ ಪ್ರತ್ಯೇಕ ಸ್ಥಳವನ್ನು ನೀಡುತ್ತದೆ ಜೊತೆಗೆ ನಿಮ್ಮ ಸಂಗಾತಿಯೊಂದಿಗೆ ಮಾತನಾಡಲು ಏನಾದರೂ ವಿಷಯ ನೀಡುವುದು.

10. ಬಾಲ್ಯ ಅಥವಾ ಕಾಲೇಜು ದಿನಗಳ ಹಳೆಯ ನೆನಪುಗಳನ್ನು ಆಗಾಗ ಹಂಚಿಕೊಳ್ಳಿ. ನೆನಪುಗಳು ಅತ್ಯಂತ ಶಕ್ತಿಯುತವಾದ ವಿಷಯಗಳಲ್ಲಿ ಒಂದಾಗಿದೆ, ಅದು ಜನರಿಗೆ ಉತ್ತಮವಾಗಿ ಜೀವನ ನಡೆಸುವ ಭರವಸೆಯನ್ನು ನೀಡುತ್ತದೆ.

11. ಎಲ್ಲರ ಎದುರು ನಿಮ್ಮ ಸಂಗಾತಿಯ ಕೈಯನ್ನು ಹಿಡಿದುಕೊಳ್ಳಿ. ಅವರು ನಿಮ್ಮವರು, ನೀವು ಅವರಿಗೆ ಸೇರಿದವರು ಎಂಬುದನ್ನು ಪ್ರತಿಯೊಬ್ಬರಿಗೂ ತಿಳಿಸಿ.

12. ನಿಮ್ಮ ಸಂಗಾತಿಯ ಬಗ್ಗೆ ನೀವು ಎಷ್ಟು ಯೋಚಿಸುತ್ತೀರಿ ಎಂದು ಹೇಳಿ. ನಿಮ್ಮ ಮನಸ್ಸಿನಲ್ಲಿ ನಿಮ್ಮ ಸಂಗಾತಿಯ ಬಗ್ಗೆ ಏನಿದೆ ಎಂಬುದರ ಬಗ್ಗೆ ಕೇಳಲು ಅವರು ಇಷ್ಟಪಡುತ್ತಾರೆ.

English summary

Little Things That Make a Big Difference in marriage in Kannada

Here we talking about Little Things That Make a Big Difference in marriage in Kannada, read on
Story first published: Thursday, June 3, 2021, 19:59 [IST]
X
Desktop Bottom Promotion