Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಂಪತಿ ಮಾಡುವ ಈ 8 ಸಾಮಾನ್ಯ ತಪ್ಪುಗಳಿಂದ ಸಂಸಾರ ಮುರಿದು ಹೋಗಬಹುದು ಜಾಗ್ರತೆ!
ದಾಂಪತ್ಯ ಎಂದ ಮೇಲೆ ಸರಸ-ವಿರಸ ಸಾಮಾನ್ಯ. ನಾವು ಜಗಳವೇ ಆಡುವುದಿಲ್ಲ ಎಂದರೆ ಆ ದಂಪತಿ ಸುಳ್ಳು ಹೇಳುತ್ತಿದ್ದಾರೆ ಎಂದರ್ಥ ಅಥವಾ ಅವರ ಸಂಬಂಧ ಅಷ್ಟು ಗಟ್ಟಿಯಾಗಿಲ್ಲ ಎಂದರ್ಥ, ಸಂಸಾರದಲ್ಲಿ ಜಗಳ ಬರುವುದು ಸಹಜ, ಆದರೆ ಅದನ್ನು ಮರೆತು ತಪ್ಪನ್ನು ಸರಿಪಡಿಸಿ ಮುಂದುವರೆಯಬೇಕು.
ಆದರೆ ಸಂಸಾರದಲ್ಲಿ ಕೆಲವೊಂದು ತಪ್ಪುಗಳಿಂದ ಮನೆ ನೆಮ್ಮದಿ ಹಾಳಾಗುವುದು, ಈ ತಪ್ಪುಗಳು ಸಾಮಾನ್ಯವಾಗಿ ಎಲ್ಲಾ ಸಂಸಾರದಲ್ಲಿ ಕಂಡು ಬರುವುದು, ಆ ಸಮಸ್ಯೆಗಳೆಂದರೆ

1. ಹಳೆಯ ವಿಚಾರವನ್ನು ಕೆದುಕುವುದು
ಹಿಂದೆ ಆದ ತಪ್ಪಿನಿಂದ ಮನಸ್ತಾಪವಾಗಿ ಎಲ್ಲವೂ ಸರಿಯಾಗಿರುತ್ತದೆ, ಆದರೆ ಅದೇ ವಿಚಾರವನ್ನು ಪದೇ ಪದೇ ಹೇಳುವುದು, ಅಥವಾ ಏನಾದರೂ ಚಿಕ್ಕ ಸಮಸ್ಯೆ ಬಂದರೆ ಹಳೆಯ ವಿಚಾರ ಹೇಳುವುದು ಹೀಗೆ ಮಾಡುವುದರಿಂದ ಸಮಸ್ಯೆ ಹೆಚ್ಚಾಗುವುದು.
2. ದೈಹಿಕ ಸಂಪರ್ಕ ಇಲ್ಲದಿರುವುದು
ಗಂಡ-ಹೆಂಡತಿ ನಡುವೆ ದೈಹಿಕ ತೃಪ್ತಿ ಇರಬೇಕು, ಆದರೆ ಕೆಲಸದಲ್ಲಿ ಬ್ಯುಸಿ, ಮಾನಸಿಕ ಒತ್ತಡ, ಇನ್ನಿತರ ಕಾರಣಗಳಿಂದ ಇಬ್ಬರ ನಡುವೆ ದೈಹಿಕ ಸಂಪರ್ಕ ಕಡಿಮೆಯಾದರೆ ದಾಂಪತ್ಯದಲ್ಲಿ ಸಮಸ್ಯೆ ಹೆಚ್ಚಾಗುವುದು. ಆದ್ದರಿಂದ ಮಲಗುವಾಗ ಮುನ್ನ ದೈಹಿಕ ಸಂಪರ್ಕ ಇಲ್ಲದಿದ್ದರೂ ಒಂದು ರೊಮ್ಯಾಂಟಿಕ್ ಹಗ್ ಹಾಗೂ ಕಿಸ್ ನೀಡಿ. ಕೆಲಸದ ಕಾರಣದಿಂದ ಇಬ್ಬರು ದೂರವಿದ್ದರೂ ಆಗಾಗ ಭೇಟಿಯಾಗಲು, ಇಬ್ಬರೂ ಜೊತೆಯಾಗಿ ಸಮಯ ಕಳೆಯಲು ಪ್ರಯತ್ನಿಸಬೇಕು.
3. ನಿಮ್ಮ ಸಂಬಂಧದಲ್ಲಿ ಮೂರನೇಯವರ ಹಸ್ತಕ್ಷೇಪಕ್ಕೆ ಬಿಡುವುದು
ಹೀಗೆ ಮಾಡುವುದರಿಂದ ಸಂಸಾರ ಸಂಪೂರ್ಣ ಹಾಳಾಗುವುದು. ನಿಮಮ್ಮ ನಡುವೆ ಏನಾದರೂ ಸಮಸ್ಯೆಯಿದ್ದರೆ ನೀವಿಬ್ಬರು ಪರಿಹರಿಸಬೇಕು, ನಿಮ್ಮ ಪೋಷಕರು ಕೂಡ ತಮ್ಮ ಅಭಿಪ್ರಾಯ ಹೇಳಲು ಬರಬಾರದು, ನಿಮ್ಮಿಬ್ಬರ ನಡುವೆ ಮೂರನೇಯ ವ್ಯಕ್ತಿ ಹಸ್ತಕ್ಷೇಪ ಮಾಡಿದರೆ ನಿಮ್ಮ ಸಮಸ್ಯೆ ದೂರಾಗುವುದು.
4. ನಿಮ್ಮ ಸಂಗಾತಿ ನಿಮ್ಮ ಮನಸ್ಸು ಅರ್ಥ ಮಾಡಿಕೊಳ್ಳಲಿ ಎಂದು ಭಾವಿಸುವುದು
ಇದು ದೊಡ್ಡ ತಪ್ಪು, ನಿಮಗೆ ಏನಾದರೂ ಬೇಕಿದ್ದರೆ ಅವರು ನಿಮ್ಮನ್ನು ಅರ್ಥಮಾಡಿಕೊಂಡು ಕೊಡಿಸಲಿ ಎಂದು ಭಾವಿಸಬೇಡಿ, ನಿಮಗೆ ಏನು ಬೇಕೆಂದು ಅವರ ಬಳಿ ಹೇಳಿ, ನಿಮ್ಮ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಿ, ಹೀಗೆ ಮಾಡುವುದರಿಂದ ಮನಸ್ಸಿಗೆ ಬೇಸರವಾಗುವುದನ್ನು ತಡೆಗಟ್ಟಬಹುದು.
5. ಜಗಳದಲ್ಲಿ ನಾನೇ ಗೆಲ್ಲಬೇಕು ಎಂಬ ಮನಸ್ಥಿತಿ
ಇಬ್ಬರು ಒಂದೇ ರೀತಿ ಬಾಯಿ ಮಾಡಿದರೆ ಜಗಳ ದೊಡ್ಡದಾಗುವುದು, ನಿಮ್ಮ ಸಂಸಾರದ ಒಳಿತಿಗಾಗಿ ಒಬ್ಬರು ಸೋಲುವುದು ತಪ್ಪಲ್ಲ, ಹಾಗಂತ ಒಬ್ಬರೇ ಸೋಲ ಬೇಕೆಂದಿಲ್ಲ, ತಪ್ಪು ಯಾರ ಕಡೆ ಇದೆಯೋ ಅವರು ತಪ್ಪನ್ನು ಒಪ್ಪಿಕೊಳ್ಳಬೇಕು. ಹೀಗೆ ಮಾಡುವುದರಿಂ ಜಗಳ ದೊಡ್ಡದಾಗುವುದನ್ನು ತಪ್ಪಿಸಬಹುದು.
6. ಆರ್ಥಿಕ ಜೀವನದ ಬಗ್ಗೆ ಪಾರದರ್ಶಿಕತೆ ಇಲ್ಲದಿರುವುದು
ಹಣಕಾಸಿನ ವಿಷಯಗಳ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳಬೇಕು, ಹಣ ಸಮಸ್ಯೆ, ಉಳಿತಾಯ ಎಲ್ಲವೂ ಇಬ್ಬರಿಗೂ ಗೊತ್ತಿರಬೇಕು. ಇದರಿಂದ ಏನಾದರೂ ಸಮಸ್ಯೆ ಬಂದಾಗ ಇಬ್ಬರು ಜೊತೆಯಾಗಿ ಆ ಸಮಸ್ಯೆ ಎದುರಿಸಲು ಸಾಧ್ಯವಾಗುವುದು.
7. ತೀರ್ಮಾನಗಳನ್ನು ಒಬ್ಬರೇ ತೆಗೆದುಕೊಳ್ಳುವುದು
ಸಂಸಾರದಲ್ಲಿ ಯಾವುದೇ ತೀರ್ಮಾನವಾಗಿರಲಿ ಇಬ್ಬರು ಜೊತೆಯಾಗಿ ತೆಗದುಕೊಳ್ಳಬೇಕು. ಯಾವುದೇ ವಿಷಯವಾದರೂ ಇಬ್ಬರು ಪರಸ್ಪರ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕು. ಆದರೆ ಒಬ್ಬರೇ ತೀರ್ಮಾನ ತೆಗೆದುಕೊಂಡರೆ ಸಂಗಾತಿಯನ್ನು ಗೌರವಿಸುತ್ತಿಲ್ಲ ಎಂದರ್ಥ, ಆ ಸಂಸಾರದ ಸಮಸ್ಯೆಗಳು ಅಧಿಕವಿರಲಿದೆ.
8. ಬಗೆಹರಿಸಬೇಕಾದ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುವುದು
ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸಬೇಕು, ಅದನ್ನು ಹಾಗೇ ಮುಚ್ಚಿಡುವುದರಿಂದ ಬೂದಿ ಮುಚ್ಚಿದ ಕೆಂಡದಂತೆ, ನಿಮ್ಮ ಸಂಸಾರವನ್ನು ಸುಟ್ಟು ಹಾಕಬಹುದು, ಆದ್ದರಿಂದ ಕೆಲವೊಂದು ಸಮಸ್ಯೆಗಳಿದ್ದರೆ, ಅದು ಬಗೆ ಹರಿಸಬೇಕಾದ ಸಮಸ್ಯೆಯೇ ಆಗಿದ್ದರೆ ಆ ಬಗ್ಗೆ ಗಮನಹರಿಸಬೇಕು.



Click it and Unblock the Notifications