Latest Updates
-
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ!
ನಿಮ್ಮ ಸಂಗಾತಿಯ ಮಾಜಿ ಪ್ರೇಮಿಯ ಕುರಿತು ಈ ಪ್ರಶ್ನೆಗಳನ್ನು ಅಪ್ಪಿ ತಪ್ಪಿಯೂ ಕೇಳಲೇಬೇಡಿ
ಮದುವೆಗೆ ಮೊದಲು ಒಬ್ಬರನ್ನು ಪ್ರೀತಿಸಿ, ಅದು ಸರಿಬರದೆ ಇಬ್ಬರು ದೂರಾಗಿ ವೈವಾಹಿಕ ಜೀವನಕ್ಕೆ ಕಾಲಿಡುವವರು ಎಷ್ಟೋ ಜನ ಇರುತ್ತಾರೆ. ಕೆಲವರಿಗೆ ತಮ್ಮ ಸಂಗಾತಿಗೆ ಮಾಜಿ ಇತ್ತು ಎಂಬುವುದು ಗೊತ್ತಿರುತ್ತದೆ, ಇನ್ನು ಕೆಲವರಿಗೆ ತುಂಬಾ ಸಮಯದ ನಂತರ ತಿಳಿದು ಬರಬಹುದು. ಅವರ ಮಾಜಿ ಬಗ್ಗೆ ಯೋಚಿಸುವಾಗ ಎಂಥವರಿಗಾದರೂ ಒಂಥರಾ ಕಳವಳ ಉಂಟಾಗುವುದು ಸಹಜ.
ಇನ್ನು ನಮ್ಮ ಸಂಗಾತಿಯಲ್ಲಿ ಇನ್ನೂ ಅವರ ನೆನಪುಗಳಿವೆ ಎಂದು ಗೊತ್ತಾದರೆ ತುಂಬಾನೇ ಸಂಕಟವಾಗುತ್ತೆ. ಹಾಗಂತ ನಮ್ಮ ಸಂಕಟಕ್ಕೆ ಕೆಲವೊಂದು ಪ್ರಶ್ನೆಗಳನ್ನು ಅವರ ಬಳಿ ಕೇಳಿದರೆ ನಮ್ಮ ನೆಮ್ಮದಿ ನಾವೇ ಹಾಳು ಮಾಡಿ ಕೊಳ್ಳುತ್ತೇವೆ. ಆದ್ದರಿಂದ ಸಂಗಾತಿಯ ಮಾಜಿ ಪ್ರೇಮಿ ಬಗ್ಗೆ ಈ ಪ್ರಶ್ನೆಗಳನ್ನು ಕೇಳಲೇಬೇಡಿ, ಒಂದು ವೇಳೆ ಕೇಳಿದ್ದೇ ಆದ್ರೆ ಆ ಕ್ಷಣದಿಂದ ನಿಮ್ಮ ಮನಸ್ಸಿನ ನೆಮ್ಮದಿ ದೂರಾಗುವುದು ನೋಡಿ...

ನಿಮಗೂ ಈಗಲೂ ಅವರ ಮೇಲೆ ಪ್ರೀತಿ ಇದೆಯೇ?
ಈ ಪ್ರಶ್ನೆಯಿಂದ ನಿಮಗೇನು ಲಾಭ? ಸುಮ್ಮನೆ ಮನಸ್ಸು ಹಾಳಾಗುವುದು. ಆ ವ್ಯಕ್ತಿಗೆ ಈಗಲೂ ಮಾಜಿಯೆಂದರೆ ಇಷ್ಟ ಎಂದಾದರೆ ಅದನ್ನು ಸಹಿಸಲು ಸಾಧ್ಯನಾ? ನಮ್ಮನ್ನು ಅವರ ಜೊತೆ ಹೋಲಿಸಲು ಹೋಗಬಾರದು. ಆದ್ದರಿಂದ ಇಂಥ ಪ್ರಶ್ನೆಯನ್ನು ಅಪ್ಪಿ ತಪ್ಪಿಯೂ ಕೇಳಬಾರದು.
ನಿಮ್ಮಿಬ್ಬರ ಸೆಕ್ಸ್ ಲೈಫ್ ಹೇಗಿತ್ತು?
ನಿಮ್ಮಿಬ್ಬರ ಸೆಕ್ಸ್ ಲೈಫ್ ಹೇಗಿತ್ತು? ಎಂದು ಅನಗ್ಯತ ಪ್ರಶ್ನೆ ಕೇಳುವ ಬದಲಿಗೆ ಅವರಿಗೆ ನೀವು ಹೇಗಿದ್ದರೆ ಇಷ್ಟ ಎಂದು ಕೇಳಿ. ಅವರ ಮಾಜಿ ಬಗ್ಗೆ ಕೇಳುವುದರಿಂದ ನಿಮಗೇನೂ ಪ್ರಯೋಜನವಿಲ್ಲ. ಲೈಂಗಿಕ ವಿಷಯದಲ್ಲಿ ಯಾವುದೇ ಸಂಕೋಚ ಇರಬಾರದು, ಮುಕ್ತವಾಗಿ ಮಾತನಾಡಿ, ನೀವಿಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಅದರ ಬದಲಿಗೆ ಅವರ ಬದುಕಿನಲ್ಲಿ ಬಂದು ಹೋದ ಚಾಪ್ಟರ್ ಬಗ್ಗೆ ಕೆದಕಬೇಡಿ.
ನಿನಗೆ ಈಗಲೂ ಅವರ ಬಗ್ಗೆ ಅಟ್ರಾಕ್ಷನ್ ಇದೆಯೇ?
ಈ ಪ್ರಶ್ನೆಯೂ ಅನವಶ್ಯಕ. ಅವರಿಗೆ ಈಗ ಅಟ್ರಾಕ್ಷನ್ ಇದ್ದರೇನು- ಒಲ್ಲದಿದ್ದರೇನು? ಅವರಿಗೆ ನೀವು ಎಷ್ಟು ಮುಖ್ಯ ಎಂಬುವುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿ, ಅವರ ವರ್ತನೆಯಿಂದ ಅವರಿಗೆ ನಾವೆಂದರೆ ಎಷ್ಟು ಇಷ್ಟ ಎಂಬುವುದು ತಿಳಿಯುತ್ತದೆ, ಅವರು ನಮ್ಮ ಮೇಲೆ ತುಂಬಾನೇ ಪ್ರೀತಿ ತೋರಿಸುತ್ತಿದ್ದಾರೆ ಎಂದಾದರೆ ನೀವು ಅವಳ ಹಳೆಯ ವಿಚಾರ ಕೆದಕುವುದಕ್ಕೆ ಹೋಗಬೇಡಿ.
ನಿಮ್ಮ ಎಕ್ಸ್‌ನಲ್ಲಿ ತುಂಬಾ ಇಷ್ಟವಾದ ಅಂಶವೇನು?
ಅವರಲ್ಲಿ ನಿಮ್ಮ ಸಂಗಾತಿಗೆ ಇಷ್ಟವಾದ ವಿಷಯ ಏನೇ ಇರಲಿ, ಅವರು ಈವಾಗ ಅದನ್ನು ಮರೆತು ನಿಮ್ಮ ಜೊತೆ ಬಾಳ್ವೆ ನಡೆಸುತ್ತಿರುತ್ತಾರೆ. ಹೀಗಿರುವಾಗ ಅವರ ಮಾಜಿಯಲ್ಲಿ ಇವರಿಗೆ ಇಷ್ಟವಾದ ಸಂಗತಿ ತಿಳಿದು ನಮಗೇನು ಆಗಬೇಕು, ಹಾಗಾಗಿ ಈ ವಿಷಯ ಕೇಳಲೇ ಬೇಡಿ. ಇದರ ಬದಲಿಗೆ ನೀವು ಹೇಗಿದ್ದರೆ ಇಷ್ಟ ಎಂದು ಕೇಳಿ ತಿಳಿದುಕೊಳ್ಳಿ. ಅವರ ಇಷ್ಟದಂತೆ ನಡೆದುಕೊಳ್ಳಲು ಪ್ರಯತ್ನಿಸಿ. ಅವರ ಇಷ್ಟದಂತೆ ನಡೆದುಕೊಳ್ಳಲು ಹೋಗಿ ನಿಮ್ಮ ಇಷ್ಟವನ್ನು ಮರೆಯಬಾರದು, ಅದರಂತೆ ನಮ್ಮ ವರ್ತನೆ ಅವರ ಮನಸ್ಸಿಗೆ ಬೇಸರ ಉಂಟು ಮಾಡಬಾರದು, ಈ ಬಗ್ಗೆ ಜಾಗ್ರತೆವಹಿಸಿ.
ಈ ಬಗ್ಗೆ ಗಮನಹರಿಸಿ
ನಿಮ್ಮ ಸಂಗಾತಿಗೆ ಮಾಜಿ ಇದ್ದು ಯಾವುದೋ ಕಾರಣಕ್ಕೆ ಬೇರೆಯಾಗಿ ನಂತರ ನಿಮ್ಮನ್ನು ಮದುವೆಯಾಗಿ ಈಗ ಮತ್ತೆ ಅವರ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದರೆ ಈ ವಿಷಯವನ್ನು ನಿರ್ಲಕ್ಷ್ಯ ಮಾಡಬೇಡಿ. ಈ ಬಗ್ಗೆಯ ಸಂಬಂಧ ನಿಮ್ಮ ಸಂಬಂಧಕ್ಕೆ ಸಮಸ್ಯೆ ತರಬಹುದು, ಈ ಬಗ್ಗೆ ಮಾತ್ರ ನೀವು ಜಾಗ್ರತೆವಹಿಸಬೇಕು. ಅವರ ಹಳೆಯ ಸಂಬಂಧದಿಂದ ಸಂಪೂರ್ಣ ಹೊರಬಂದು ನಿಮ್ಮ ಜೊತೆ ಬಾಳ್ವೆ ನಡೆಸುತ್ತಿದ್ದಾರೆ ಎಂದಾದರೆ ನೀವು ಅವರ ಹಳೆಯ ವಿಷಯದ ಬಗ್ಗೆ ಮಾತನಾಡದೆ ಇರುವುದೇ ಒಳ್ಳೆಯದು.



Click it and Unblock the Notifications