Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗನಲ್ಲಿ ಖಾಸಗಿ' ಆ ವಿಷಯ ' ಕೇಳಿದ ಮಲೈಕಾ ಅರೋರಾ: ತಾಯಿಯಾದವರೂ ಕೇಳುವ ಪ್ರಶ್ನೆಯೇ ಎಂದು ಟೀಕೆಗಳ ಸುರಿಮಳೆ
ಪೋಷಕರು ಮಕ್ಕಳೊಂದಿಗೆ ಕೆಲವೊಂದು ವಿಷಯಗಳನ್ನು ನೇರವಾಗಿ ಮಾತನಾಡುವುದಿಲ್ಲ, ಏಕೆಂದರೆ ಅಂಥ ವಿಷಯಗಳನ್ನು ಕೇಳುವುದರಿಂದ ಇಬ್ಬರಿಗೂ ಮುಜುಗರವಾಗುವುದು, ಅದರಲ್ಲೂ ಮಕ್ಕಳು ಹೆಚ್ಚು ಮುಜುಗರಕ್ಕೊಳಗಾಗುತ್ತಾರೆ.
ಒಂದು ವೇಳೆ ಮಕ್ಕಳ ಆ ವಿಷಯ ತಿಳಯಲೇಬೇಕೆಂದರೆ ಅವರ ಸ್ನೇಹಿತರು ಅಥವಾ ಕಸಿನ್ಸ್ ಮೂಲಕ ತಿಳಯಲು ಇಚ್ಚಿಸುತ್ತಾರೆ. ಉದಾಹರಣೆಗೆ ಮಕ್ಕಳಿಗೆ ಮದುವೆ ಮಾಡಿಕೊಟ್ಟ ಮೇಲೆ ಅವರ ಲೈಂಗಿಕ ಜೀವನ ಹೇಗಿದೆ, ಅದರ ಅನುಭವ ಹೇಗಿತ್ತು ಎಂದು ಪೋಷಕರು ಕೇಳುವುದಿಲ್ಲ...

ಮಲೈಕಾ ಮಾಡಿದ ಎಡವಟ್ಟು
ಆದರೆ ಬಾಲಿವುಡ್‌ನ ಕೆಲವರ ಸಂಸ್ಕೃತಿ ನೋಡುವಾಗ ಇಷ್ಟೊಂದು ಕೀಳು ಮಟ್ಟದಲ್ಲಿ ಯೋಚಿಸುತ್ತಾರೆಯೇ ಎಂದು ಮಲೈಕಾ ಅರೋರಾ ಮಾಡಿದ ಎಡವಟ್ಟು ನೋಡಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಮಲೈಕಾ ಅರೋರಾ ಯಾರಿಗೆ ಗೊತ್ತಿಲ್ಲ ವಯಸ್ಸು ದಾಟಿದರೂ ಯುವತಿಯು ನಾಚುವಂಥ ಮೈ ಮಾಟದ ಮೂಲಕ ಗಮನ ಸೆಳೆಯುವ ನಟಿ.
ಅಲ್ಲದೆ ರಿಲೇಷನ್‌ಶಿಪ್ ವಿಷಯದಲ್ಲಿ ಆಗಾಗ ಸುದ್ದಿಯಲ್ಲಿರುತ್ತಾರೆ. ಸಲ್ಮಾನ್‌ಖಾನ್ ಸಹೋದರನೊಂದಿಗೆ ಮದುವೆಯಾಗಿ ವಿಚ್ಚೇದನವಾಗಿದ್ದಾರೆ, ಈ ಸಂಬಂಧದಲ್ಲಿ ಒಬ್ಬ ಮಗ ಅರ್ಹಾನ್. ಈಗ ತನಗಿಂತ ವಯಸ್ಸಿನಲ್ಲಿ ಕಿರಿದಾಗಿರುವ ಅರ್ಜುನ್ ಕಪೂರ್ ಜೊತೆಗಿನ ರಿಲೇಷನ್‌ಶಿಪ್‌ನಲ್ಲಿದ್ದಾರೆ, ಇವರಿಬ್ಬರ ಬ್ರೇಕಪ್ ಸುದ್ದಿಗಳು ಬರುತ್ತಲೇ ಇರುತ್ತದೆ.
ಮಗನ ಜೊತೆಗಿನ ಸಂದರ್ಶನ ಈಗ ಟೀಕೆಗೆ ಕಾರಣವಾಗಿದೆ
ಅರ್ಹಾನ್ ಖಾನ್ ಈಗ ಯೌವನ ಪ್ರಾಯದವ, ಇನ್ನೂ ಮದುವೆಯಾಗಿಲ್ಲ, ಆದರೆ ತಾಯಿ ವೋಡ್‌ಕಾಸ್ಟ್‌ನಲ್ಲಿ ಮೊದಲ ಬಾರಿಗೆನೀನು ವರ್ಜಿನಿಟಿ ಕಳೆದುಕೊಂಡಿದ್ದು ಯಾವಾಗ ಎಂಬ ಪ್ರಶ್ನೆ ಮಾಡುತ್ತಾರೆ... ಮದುವೆಯಾಗದ ಮಗನ ಬಳಿ ತಾಯಿಯೊಬ್ಬರು ಕೇಳುವ ಪ್ರಶ್ನೆಯೇ ಎಂದು ಜನರು ಅವರನ್ನು ಟೀಕೆ ಮಾಡುತ್ತಿದ್ದಾರೆ.
ಅರ್ಹಾನ್ ಖಾನ್ ಡಂಬ್ ಬಿರಿಯಾನಿ ಎಂಬ ಶೋ ನಡೆಸುತ್ತಿದ್ದಾರೆ, ಆ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಮಲೈಕಾ ಅರೋರಾ ಖಾಸಗಿ ಬದುಕಿನ ಬಗ್ಗೆ ಮಾತನಾಡಿದ್ದಾರೆ, ಅರ್ಬಾಜ್ ಖಾನ್, ಸೊಹಾಲಿ ಖಾನ್ ಈ ಕಾರ್ಯ್ರಕ್ರಮದಲ್ಲಿ ಭಾಗವಹಿಸಿದ್ದರು, ಆದರೆ ಈಗ ಮಲೈಕಾ ಅರೋರಾ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಸ್ವಲ್ಪ ಅತಿಯಾಗಿ ಮಾತನಾಡಿ ಟೀಕೆಗೆ ಒಳಗಾಗಿದ್ದಾರೆ.
ಆ ವೋಡ್‌ಕಾಸ್ಟ್‌ನಲ್ಲಿ"truth or spice" ಎಂಬ ಆಟ ಆಡಿದರು. ಅದರಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುವುದು, ಉತ್ತರ ಹೇಳಲು ಸಾಧ್ಯವಾಗದಿದ್ದರೆ ಮೆಣಸಿನಕಾಯಿ ಜ್ಯೂಸ್ ಕುಡಿಯಬೇಕು.
ಮಲೈಕಾ ಮಗನ ಬಳಿ ' What is your body count'? ಎಂದು ಕೇಳುತ್ತಾಳೆ, ಅಂದರೆ ಎಷ್ಟು ಜನರೊಂದಿಗೆ ದೈಹಿಕ ಸಂಪರ್ಕ ಇಟ್ಟುಕೊಂಡಿದ್ದೆ ಎಂಬ ಅರ್ಥದ ಪ್ರಶ್ನೆ ಇದಾಗಿದೆ, ಆವಾಗ ಮಗ ನಿಮಗೆ ಇದರ ನಿಜವಾದ ಅರ್ಥ ಗೊತ್ತಿದೆಯೇ ಎಂದು ಕೇಳುತ್ತಾನೆ. ಆವಾಗ ಮಲೈಕಾ ನನಗೆ ಉತ್ತರ ಕೊಡಲೇ ಬೇಕು, ಎಷ್ಟು ಜನರೊಂದಿಗೆ ಆಗಿದೆ ಎಂದು ಹೇಳುತ್ತಾಳೆ. ಅರ್ಹಾನ್ ಏನೂ ಹೇಳಲ್ಲ, ಅಲ್ಲಿರುವ ಮೆಣಸಿನ ಕಾಯಿ ಜ್ಯೂಸ್ ಕುಡಿಯುತ್ತಾನೆ.
ಇಲ್ಲಿ ಅರ್ಹಾನ್ ನಡೆದುಕೊಂಡ ರೀತಿಯನ್ನು ಮೆಚ್ಚಬೇಕು, ಇಂಥ ಅಸಂಬದ್ದ ಪ್ರಶ್ನೆಗೆ ಉತ್ತರಿಸಿದೆ ಮೆಚ್ಚೂರಿಟಿ ತೋರಿಸಿದ್ದಾನೆ. ಏನೇ ಆಗಲಿ ಮಲೈಕಾ ತನ್ನ ಮಗನ ಬಳಿಕ ಈ ರೀತಿ ಕೇಳಲೇಬಾರದಿತ್ತು.. ಆತನ ಗರ್ಲ್‌ಫ್ರೆಂಡ್ ಅಥವಾ ಮತ್ತೇನಾದರೂ ಕೇಳುವ ಬದಲಿಗೆ ಆಕೆಯ ಮಗ ಮಾತ್ರವಲ್ಲ ನೋಡುಗರು ಮುಜುಗರ ಪಡುವಂತೆ ಪ್ರಶ್ನೆ ಕೇಳಿದ್ದಾರೆ.
ಮದುವೆಗೆ ಮೊದಲು ವರ್ಜಿನಿಟಿ ಕಳೆದುಕೊಳ್ಳುವುದು ದೊಡ್ಡ ವಿಷಯವೇ ಅಲ್ಲ ಎಂಬಂತೆ ಮಾತನಾಡಿದ್ದಾರೆ... ಇವರ ನಡವಳಿಕೆಗಳು ಭಾರತೀಯ ಸಂಸ್ಕೃತಿಯಂತೆ ಕಾಣುತ್ತಿಲ್ಲ, ವಿದೇಶಿ ಸಂಸ್ಕೃತಿಯಂತೆ ಕಾಣುತ್ತಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
ಮಗ ಅರ್ಹಾನ್ ಈ ಹಿಂದೆ ತಾಯಿಯ ಡ್ರೆಸ್ಸಿಂಗ್ ಬಗ್ಗೆ ಮಾತನಾಡಿದ್ದು ತುಂಬಾನೇ ವೈರಲ್ ಆಗಿತ್ತು.



Click it and Unblock the Notifications
