Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೂರು ಮಕ್ಕಳು ನನ್ನದ್ದಲ್ಲ ಎಂದು ಆತನಿಗೆ ತಿಳಿದಾಗ.... ಹೆಂಡತಿಯ ಮಹಾಮೋಸ
ಚೀನಾದಲ್ಲಿ ಡಿವೋರ್ಸ್ ಪ್ರಕರಣವೊಂದ ದೇಶ-ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ, ಇದು ಒಂದು ಹೈಪ್ರೊಫೈಲ್ ಡಿವೋರ್ಸ್ ಆಗಿದ್ದು ಈ ಡಿವೋರ್ಸ್ ಇಷ್ಟು ಸದ್ದು ಮಾಡಲು ಕಾರಣ ಪತ್ನಿ ಮಾಡಿದ ಮಹಾ ಮೋಸ.
ಆತನಿಗೆ ಮದುವೆಯಾಗಿ 3 ಮಕ್ಕಳಾಗಿತ್ತು, ತನ್ನ ಮಕ್ಕಳ ಜೊತೆ ತುಂಬಾ ಖುಷಿಯಾಗಿದ್ದ ಹೆಂಡತಿ ನಾಲ್ಕನೇ ಹೆರಿಗೆಗೆ ಹೋದಾಗಾ ಈತನಿಗೆ ಅವಳಿಗೆ ಜನಿಸಿರುವ ಆ ಮಗುವಿನ ತಂದೆ ನಾನಲ್ಲ ಎಂಬ ಸಂಶಯವಾಗುತ್ತೆ, ಆತನಿಗೆ ಆಘಾತ ತಂದ ಸಂಗತಿಯೆಂದರೆ ತನ್ನ ಮಕ್ಕಳೆಂದು ಸಾಕುತ್ತಿದ್ದ ಆ ಮೂರೂ ಮಕ್ಕಳೂ ಆತನದ್ದಲ್ಲ.

ಒಳ್ಳೆ ಹುಡುಗಿ ಅಂತ ಮದುವೆಯಾಗುತ್ತಾನೆ
ಆತನ ಹೆಸರು ಜಿಕ್ಸಿಯಾನ್, ಯು ಹುವಾ ಎಂಬ ಹುಡುಗಿಯನ್ನು 2007ರಲ್ಲಿ ಮದುವೆಯಾಗುತ್ತಾನೆ, ಅವಳು ಆತನನಿಗೆ 8 ವರ್ಷ ಜೂನಿಯರ್. ನೋಡಲು ಆಕರ್ಷಕವಾಗಿದ್ದಳು, ತುಂಬಾ ಸರಳ ಸ್ವಭಾವದ, ಯಾವುದೇ ಅಹಂಯಿಲ್ಲದ ಹುಡುಗಿ ಈ ಕಾರಣಕ್ಕೆ ಜಿಕ್ಸಿಯಾನ್‌ಗೆ ತುಂಬಾನೇ ಇಷ್ಟವಾಗುತ್ತಾಳೆ. ಇನ್ನು ಜಿಕ್ಸಿಯಾನ್‌ನ ಮದುವೆ ಮಾಡಬೇಕೆಂದು ಅವರ ತಂದೆ-ತಾಯಿ ಯೋಚಿಸುತ್ತಿರುವಾಗ ಜಿಕ್ಸಿಯಾನ್‌ಗೆ ಈ ಹುಡುಗಿ ಇಷ್ಟವಾಗಿರುವುದು ಗೊತ್ತಾಗುತ್ತದೆ, ಅವರಿಗೂ ಹುಡುಗಿ ತುಂಬಾ ಇಷ್ಟವಾಗುತ್ತಾಳೆ.
ಹೆಂಡತಿ ಗರ್ಭಿಣಿಯೆಂದಾಗ ತಾನು ತಂದೆಯಾದೆ ಎಂದು ಖುಷಿಪಟ್ಟ
ಇಬ್ಬರು ಮದುವೆಯಾಗುತ್ತಾರೆ. ಜಿಕ್ಸಿಯಾನ್ ಹೊಸ ಜೀವನವನ್ನು ಸಂತೋಷದಿಂದ ಕಳೆಯುತ್ತಿರುತ್ತಾನೆ. ಮದುವೆಯಾಗಿ 1-2 ತಿಂಗಳು ಆಗುವಷ್ಟರಲ್ಲಿ ಆಕೆ ತಾನು ಗರ್ಭಿಣಿ ಎಂದು ತಿಳಿಸುತ್ತಾಳೆ. ಇವನಿಗೆ ತಾನು ತಂದೆಯಾಗುತ್ತಿರುವ ಸುದ್ದಿ ಕೇಳಿ ತುಂಬಾನೇ ಖುಷಿಯಾಗುತ್ತದೆ, ಹೀಗೆ ಮೊದಲ ಹೆರಿಗೆಯಲ್ಲಿ ಹೆಣ್ಣು ಮಗು ಜನಿಸುತ್ತದೆ. ಅವನಿಗೆ ಮಗಳನ್ನು ನೋಡಿ ಖುಷಿಯಾಗುತ್ತದೆ, ಆದರೆ ತಾನು ಈಕೆಯನ್ನು ಮದುವೆಯಾಗುವ ಮುನ್ನವೇ ಗರ್ಭಧರಿಸಿದ್ದಳು ಎಂಬುವುದು ಗೊತ್ತೇ ಇರಲಿಲ್ಲ.
ಮೂರು ಹೆಣ್ಣು ಮಕ್ಕಳು ಜನಿಸಿತು
ಜಿಕ್ಸಿಯಾನ್ ಕೆಲಸದ ಕಾರಣಕ್ಕೆ ಮನೆಯಿಂದ ದೂರವಿರುತ್ತಿದ್ದ, ಸ್ವಲ್ಪ ಸಮಯ ಮಾತ್ರ ಕುಟುಂಬದೊಂದಿಗೆ ಇರುತ್ತಿದ್ದ, ಹೀಗೆ ವರ್ಷಗಳು ಕಳೆದಿತ್ತು, ಆತನ ಪತ್ನಿ ಮತ್ತೊಂದು ಹೆಣ್ಣು ಮಗುವಿಗೂ ಜನ್ಮ ನೀಡುತ್ತಾಳೆ, ಆದರೆ ಆತನಿಗೆ ಸಂಶಯ ಬಂದಿದ್ದು 2019ರಲ್ಲಿ. ಈ ಬಾರಿ ಆಕೆ ತಾನು ಗರ್ಭಿಣಿ ಎಂದಾಗ ಆತನಿಗೆ ಆಕೆ ಗರ್ಭಿಣಿಯಾಗುವ ಸಮಯದಲ್ಲಿ ನಾನು ಇರಲಿಲ್ಲ ಎಂಬ ಸಂಶಯ ಬರುತ್ತದೆ. ಈ ಕಾರಣಕ್ಕೆ ಆತ ಜಗಳ ಮಾಡುತ್ತಾನೆ, ಆದರೆ ಆಕೆ ಇಲ್ಲ ಇದು ನಿನ್ನ ಮಗು ಎಂದು ಆತನನ್ನು ನಂಬಿಸುತ್ತಾಳೆ, ಅದು ಕೂಡ ಹೆಣ್ಣು ಮಗು.
ಮೋಸ ಬಯಲಾಯ್ತು
ಆಕೆ ನಾಲ್ಕನೇ ಬಾರಿಗೆ ಗರ್ಭಿಣಿಯಾದಾಗ ನನ್ನ ಪತ್ನಿ ನನಗೆ ಮೋಸ ಮಾಡುತ್ತಿದ್ದಾಳೆ ಎಂಬುವುದು ದೃಢವಾಗುತ್ತದೆ, ಆವಾಗ ಆತನಿಗೆ ತನ್ನ ಪತ್ನಿಗೆ ಬೇರೊಬ್ಬನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬುವುದು ಗೊತ್ತಾಗುತ್ತದೆ. ನಾಲ್ಕನೇ ಮಗುವನ್ನು ಹೆರಿಗೆಯಾಗಿ ಡಿಸ್ಚಾರ್ಜ್ ಮಾಡುವಾಗ ಆ ಮಗುವಿಗೂ ತಂದೆ ಹೆಸರಿನ ಕಾಲಂನಲ್ಲಿ ಈತನ ಹೆಸರು ನೀಡಿ, ಈತನ ಸಹಿಯನ್ನು ಅವರೇ ಹಾಕಿದ್ದರು.
ಆದರೆ ಆತ ನನ್ನ ಮಗು ಇದಲ್ಲ ಎಂದು ಹೇಳಿ ಕೇಸ್ ಹಾಕಿದಾಗ ಈ ಮಗುವಿನ ತಂದೆ ಯಾರು ಎಂದು ಪರೀಕ್ಷೆ ಮಾಡಿದಾಗ ಆ ಮಗುವಿನ ತಂದೆ ಈತನಲ್ಲ ಎಂದು ತಿಳಿಯುತ್ತದೆ, ಈತನಿಗೆ ಆ ಮೂರೂ ಮಕ್ಕಳು ನನ್ನದೇ ಎಂದು ಪರೀಕ್ಷೆ ಮಾಡಬೇಕೆನಿಸಿದ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಯಾರೂ ಇವನ ಮಕ್ಕಳಲ್ಲ ಎಂಬುವುದು ತಿಳಿದು ಬಂದಾಗ ಈತನಿಗೆ ಫುಲ್ ಶಾಕ್. ಈಗ ಆತ ವಿಚ್ಛೇದನ ಕೇಳಿ ಕೋರ್ಟ್‌ನಲ್ಲಿ ಕೇಸ್ ಹಾಕಿದ್ದು, ಈ ವಿಚ್ಛೇದನ ಕೇಸ್ ತುಂಬಾ ಸದ್ದು ಮಾಡುತ್ತಿದೆ.
ಈ ರೀತಿ ಮೋಸದ ಕತೆ ಚೀನಾದಲ್ಲಿ ಮಾತ್ರವಲ್ಲ ಎಲ್ಲಾ ಕಡೆಯೂ ಇದೆ. ಆದರೆ ಈತನಿಗೆ ಇಷ್ಟು ವರ್ಷಗಳ ಕಾಲ ಹೆಂಡತಿ ಮೋಸ ಮಾಡುತ್ತಿದ್ದರೂ ಗೊತ್ತಾಗಿಲ್ಲ, ಈತನ ಕತ ಕೇಳಿದರೆ ಆತನ ಸ್ಥಿತಿ ಬಗ್ಗೆ ಅಯ್ಯೋ ಪಾಪ ಅನಿಸಿದೆ ಇರಲ್ಲ, ಬೇರೆಯವನ ಮಕ್ಕಳನ್ನು ಇಷ್ಟು ವರ್ಷ ತನ್ನ ಮಕ್ಕಳೆಂದು ಸಾಕಿದ್ದ... ಈತನ ವಿಚ್ಛೇದನ ಈ ಕಾರಣಕ್ಕೆ ತುಂಬಾನೇ ಸದ್ದು ಮಾಡುತ್ತಿದೆ.



Click it and Unblock the Notifications
