Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಇವುಗಳಿಂದ ತೊಂದರೆಯಿಲ್ಲ ಅಂದ್ಕೊಳ್ಳುತ್ತೇವೆ, ಆದರೆ ಸಂಸಾರ ಹಾಳುಮಾಡುವ 6 ಸಂಗತಿಗಳಿವು
ಈಗೀನ ಜನರೇಷನ್‌ನ ಬಹುತೇಕ ರಿಲೇಷನ್‌ಶಿಪ್ ಬಗ್ಗೆ ಹೇಳುವುದಾದರೆ ಇಂದು ಪ್ರೀತಿ (ಪ್ರೀತಿಗಾಗಿ ಸಾಯುವುದಕ್ಕೂ ಸಿದ್ಧ) ಆದರೆ ಮದುವೆಯಾದ ಕೆಲವು ವರ್ಷಗಳಲ್ಲಿ ಇಬ್ಬರು ಜೊತೆಗಿದ್ದರೆ ಸತ್ತೇ ಹೋಗುತ್ತೇನೆ ಎಂದು ಬೇರೆಯಾಗುತ್ತಾರೆ.
ಹೀಗಾಗಿರುವ ಸಂಬಂಧದಲ್ಲಿ ಅವರ ಸಮಸ್ಯೆಗೆ ಕಾರಣವೇನು ಎಂದು ನೋಡಿದರೆ ಚಿಕ್ಕ ವಿಷಯವೂ ದೊಡ್ಡದಾಗಿ ನಂತರ ಬೇರೆ-ಬೇರೆಯಾಗುವ ತೀರ್ಮಾನದವರೆಗೂ ಬಂದಿರುತ್ತಾರೆ. ಇನ್ನು ಕೆಲ ಸಂಬಂಧದಲ್ಲಿ ಇದೆಲ್ಲಾ ಇರುತ್ತದೆ, ಆದರೆ ಅವರಲ್ಲಿ ಒಬ್ಬರು ಇದನ್ನು ಸಹಿಸಿಕೊಂಡು ಹೋಗುತ್ತಿರುತ್ತಾರೆ, ಆದರೆ ಸಂತೋಷದ ಬದುಕು ನಡೆಸುತ್ತಿರಲ್ಲ.
ಈ ಚಿಕ್ಕ ತಪ್ಪುಗಳೇ ಸಂಗಾತಿ ನಡುವೆ ಅಂತರ ಹೆಚ್ಚಿಸುವುದು, ಆದ್ದರಿಂದ ನಮ್ಮ ದಾಂಪತ್ಯ ಚೆನ್ನಾಗಿರಬೇಕೆಂದರೆ ಅಂಥ ತಪ್ಪುಗಳನ್ನು ಮಾಡದಿರುವುದು ಒಳ್ಳೆಯದು:

ಆಡುವ ಮಾತು
ಎಷ್ಟೋ ದಂಪತಿಗಳಲ್ಲಿ ಸಮಸ್ಯೆಗೆ ಕಾರಣ ಆಡುವ ಮಾತು, ಅವರು ನಮ್ಮವರೇ ಎಂದು ಏನು ಬೇಕಾದರೂ ಹೇಳಬಹುದು ಎಂದಲ್ಲ. ಎಷ್ಟೇ ಕೋಪ ಬರಲಿ ಪದಗಳನ್ನು ನೊಡಿಕೊಂಡು ಬಳಸಬೇಕು, ಇಲ್ಲದಿದ್ದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗುತ್ತೆ. ಇಂಥ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರು ಹೆಚ್ಚಾಗಿ ತಪ್ಪು ಮಾಡುತ್ತಾರೆ. ಎಷ್ಟೋ ಪುರುಷರಿಗೆ ನಾನು ಏನೇ ಹೇಳಿದರು ಅವಳು ಕೇಳಿಸಿಕೊಳ್ಳುತ್ತಾಳೆ ಎಂಬ ಭಾವನೆ ಇರುತ್ತದೆ, ಇನ್ನು ಕೆಲ ಮಹಿಳೆಯರೂ ಪುರುಷನನ್ನು ಗೌರವಿಸುವುದಿಲ್ಲ. ಮೊದ ಮೊದಲು ಅಷ್ಟೇನು ಸಮಸ್ಯೆಯಾಗಲ್ಲ, ಕ್ರಮೇಣ ಬರುತ್ತಾ ಬೇಸತ್ತು ಅವರಿಂದ ದೂರಾಗುತ್ತಾರೆ.
ಅವರ ಮನೆಯವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು
ನಮ್ಮ ಸಂಗಾತಿಯ ಸ್ವಂತದವರು, ಆಪ್ತರನ್ನು ಅವಮಾನಿಸುವುದು ಅವರ ಬಗ್ಗೆ ಕೆಟ್ಟದಾಗಿ ಮಾತನಾಡುವುದು ಮಾಡಿದರೆ ಅದರಿಂದ ನಮ್ಮ ಸಂಗಾತಿ ನಮ್ಮನ್ನು ದ್ವೇಷಿಸಲಾರಂಭಿಸುತ್ತಾರೆ, ಇದೇ ಕಾರಣಕ್ಕೆ ದಂಪತಿ ನಡುವಿನ ಅಂತರ ಹೆಚ್ಚಾಗುವುದು. ಆದ್ದರಿಂದ ಈ ಬಗ್ಗೆ ಜಾಗ್ರತೆವಹಿಸಿ, ಸಂಗಾತಿಯ ಮನಸ್ಸು ನೋಯಿಸುವಂತೆ ನಡೆದುಕೊಳ್ಳಬಾರದು. ಆದ್ದರಿಂದ ಸಂಗಾತಿಯ ಮನೆಯವರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು.
ನಿಮ್ಮ ಸಂಗಾತಿ ಎಚ್ಚರಿಕೆ ನೀಡಿದರೂ ಆ ತಪ್ಪು ಪದೇ ಪದೇ ಮಾಡುವುದು
ಸಂಗಾತಿ ನೀವು ಕುಡಿಯಬೇಡಿ ಎಂದು ಹೇಳಿರುತ್ತಾರೆ ಆದರೆ ಇವರು ಆವಾಗ ಒಪ್ಪಿಕೊಂಡು ನಂತರ ಸಂಜೆ ಕಂಠಮಟ್ಟ ಕುಡಿದು ಬರುವುದು ಮಾಡಿದರೆ ಇದರಿಂದ ಜಗಳ ಹೆಚ್ಚಾಗುವುದು. ನಿಮ್ಮಿಂದ ತಪ್ಪಾಗಿ ಪದೇ ಪದೇ ಆ ತಪ್ಪು ಮಾಡುತ್ತಿದ್ದರೆ ಇದುವೇ ಇಬ್ಬರನ್ನು ಬೇರೆ-ಬೇರೆ ಮಾಡಬಹುದು. ಒಮ್ಮೆಯಾದ ತಪ್ಪು ಮರುಕಳಿಸದಂತೆ ಜಾಗ್ರತೆವಹಿಸಬೇಕು.
ಹಳೆಯ ವಿಷಯವನ್ನು ಕೆದುಕುವುದು
ಇದು ಕೂಡ ಸಂಬಂಧದ ದೃಷ್ಟಿಯಿಂದ ಒಳ್ಳೆಯದಲ್ಲ. ಹಳೆಯ ವಿಷಯವನ್ನು ಕೆದುಕುವುದು ಒಣಗುತ್ತಿರುವ ಗಾಯವನ್ನು ಕೆರೆಯುವುದು ಎರಡೂ ಒಂದೇ ಆದ್ದರಿಂದ ಈ ತಪ್ಪು ಮಾಡಬೇಡಿ, ಹಳೆಯ ವಿಚಾರ ಅಲ್ಲಿಗೆ ಬಿಡಬೇಡಿ, ಎಳೆಯುತ್ತಾ ಹೋಗಬೇಡಿ. ಹಳೆಯ ವಿಷಯವನ್ನು ಕೆದುಕುವುದರಿಂದ ಸಂಬಂಧ ದಿನದಿಂದ ದಿನಕ್ಕೆ ಹದಗೆಡುತ್ತಾ ಹೋಗುವುದು, ಆದ್ದರಿಂದ ಈ ಬಗ್ಗೆ ಜಾಗ್ರತೆ.
ಅವರನ್ನು ಅಗೌರವದಿಂದ ಕಾಣಬೇಡಿ
ಸಂಗಾತಿಯನ್ನು ಗೌರವದಿಂದ ಕಾಣಬೇಕು, ಆದರೆ ಕೆಲವರು ಇದನ್ನು ಮರತೇ ಬಿಟ್ಟಿರುತ್ತಾರೆ, ಏನೋ ನಮ್ಮ ಮನೆಯ ಆಳು ರೀತಿ ನಡೆಸಿಕೊಳ್ಳುವವರೂ ಇದ್ದಾರೆ, ಆದರೆ ಅಂಥ ಸಂಬಂಧ ಕೂಡ ಎಂದೂ ಖುಷಿಯಾಗಿರಲ್ಲ. ಇಬ್ಬರನ್ನೊಬ್ಬರು ಗೌರವಿಸಬೇಕು, ಎಲ್ಲಿ ಗೌರವ ಇರುತ್ತದೆಯೋ ಅಲ್ಲಿ ಮಾತ್ರ ಪ್ರೀತಿ ಇರಲು ಸಾಧ್ಯ.
ಸೋಷಿಯಲ್ ಮೀಡಿಯಾ
ಇಂದೊಂದು ದೊಡ್ಡ ಶತ್ರುವಾಗಿದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಕಾಲ ಕಳೆಯುತ್ತಿದ್ದರೆ ದಂಪತಿ ನಡುವೆ ಮಾತುಕತೆ ಕಡಿಮೆಯಾಗುವುದು, ಇದು ಕೂಡ ಸಂಸಾರದಲ್ಲಿ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ, ಸೋಷಿಯಲ್ ಮೀಡಿಯಾದಲ್ಲಿ ಮುಳುಗುವುದು ಅಥವಾ ಮನೆ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕುವುದು ಇವೆಲ್ಲಾ ಸಂಸಾರ ಹಾಳು ಮಾಡುತ್ತದೆ, ಆದ್ದರಿಂದ ಈ ತಪ್ಪುಗಳನ್ನು ಮಾಡಲೇಬೇಡಿ.



Click it and Unblock the Notifications