Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಮುದ್ರದ ಅಂಚಿನ ನಗರಗಳಿಗೆ ಅಪಾಯ..! ಈ ದೇಶದ ಬಹುತೇಕ ನಗರ ಮುಳುಗಡೆ.!
ಈ ಭೂಮಿಗೆ ನೀರು ಎಷ್ಟು ಮುಖ್ಯವೋ ಹಿಮ ಸಹ ಅಷ್ಟೇ ಮುಖ್ಯ. ಹಿಮದಲ್ಲಿ ಅದೆಷ್ಟೋ ಜೀವರಾಶಿಗಳು ಬದುಕಿವೆ. ಅಲ್ಲಿ ಭೂಮಿ ಮೇಲೆ ಬೇರೆಲ್ಲೂ ಸಿಗದಂತಹ ಜೀವ ಸಂಕುಲವಿದೆ. ಆದ್ರೆ ಈ ಮಂಜು ಕರಗಿ ನೀರಾಗುವುದು ಪ್ರಾಣಿ ಸಂಕುಲ ಮಾತ್ರವಲ್ಲ ಇಡೀ ಭೂಮಿಗೆ ಎಚ್ಚರಿಕೆಯ ಗಂಟೆಯಾಗಿದೆ.
ಒಂದು ವೇಳೆ ಅಟ್ಲಾಂಟಿಕ ಖಂಡದಲ್ಲಿರುವ ಹಿಮ ಕರಗಿ ನೀರಾದರೆ ಇಡೀ ಭೂಮಿ ಸಮುದ್ರದಿಂದ ಆವ್ರತವಾಗುತ್ತದೆ. ಆದರೆ ಈಗಲೇ ಸಮುದ್ರದ ತೀರದಲ್ಲಿರುವ ನಗರಗಳು ಈ ಆತಂಕ ಎದುರಿಸುತ್ತಿದ್ದು, ಕೆಲ ನಗರಗಳಲ್ಲಿ ಸಮುದ್ರ ತೀರ ಈಗ ಆತಂಕಕ್ಕೆ ಕಾರಣವಾಗಿದೆ. ಕಡಲ್ಕೊರೆತಗಳು ಹೆಚ್ಚಾಗುತ್ತಿವೆ, ನಗರಗಳತ್ತ ಸಮುದ್ರ ಮುನ್ನುಗ್ಗುತ್ತಿದೆ.

ಆದರೆ ಚೀನಾದ ಅತ್ಯಂತ ದೊಡ್ಡ ನಗರಗಳು ಈಗ ಸಮುದ್ರದ ನೀರಿನಲ್ಲಿ ಮುಳುಗುವ ಆತಂಕದಲ್ಲಿವೆ. ಈ ವರದಿ ಓದಿದರೆ ನಿಮಗೆ ಅಚ್ಚರಿಯಾಗಬಹುದು ಆದರೆ ಚೀನಾದ ಕೆಲ ನಗರಗಳು ಸಮುದ್ರದಲ್ಲಿ ಮುಳುಗುವುದು ಖಚಿತವಾಗಿದೆ. ಸೈನ್ಸ್ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಚೀನಾದ ಅರ್ಧದಷ್ಟು ಪ್ರಮುಖ ನಗರಗಳು ಮುಳುಗುತ್ತಿವೆ, ಲಕ್ಷಾಂತರ ಸ್ಥಳೀಯರು ಪ್ರವಾಹದ ಅಪಾಯಕ್ಕೆ ಸಿಲುಕಿದ್ದಾರೆ.
ಚೀನಾದ ನಗರ ಪ್ರದೇಶದ ಶೇ. 45ರಷ್ಟು ವರ್ಷಕ್ಕೆ 3 ಮಿ.ಮೀಗಿಂತ ವೇಗವಾಗಿ ಮುಳುಗುತ್ತಿದೆ ಎಂದು ಅಧ್ಯಯನವು ಕಂಡುಹಿಡಿದಿದೆ, ಆದರೆ ಶೇ. 16 ರಷ್ಟು ಪ್ರದೇಶವು ವರ್ಷಕ್ಕೆ 10 ಎಂ.ಎಂಗಿಂತ ಹೆಚ್ಚು ಪ್ರಮಾಣದಲ್ಲಿ ಮುಳುಗುತ್ತಿದೆ.
ಅಧ್ಯಯನದ ಲೇಖಕರು 2 ಮಿಲಿಯನ್‌ಗಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ 82 ಚೀನೀ ನಗರಗಳನ್ನು ಆಧ್ಯಯನ ಮಾಡಿದ್ದಾರೆ. ಅಲ್ಲದೆ ಉಪಗ್ರಹಗಳ ರಾಡಾರ್ ಬಳಸಿ ಈ ಅಧ್ಯಯನ ಮಾಡಲಾಗಿದೆ. ಈ ವೇಳೆ ಸಮುದ್ರ ತನ್ನ ಪ್ರದೇಶಗಳ ವಿಸ್ತರಿಸಿಕೊಳ್ಳುತ್ತಿರುವುದು ಖಚಿತವಾಗಿದೆ.
2015 ಮತ್ತು 2022 ರ ನಡುವೆ ನಗರಗಳ ರಚನೆ ಹೇಗೆ ಬದಲಾಗಿವೆ ಎಂಬುದನ್ನು ಕಂಡು ಕೊಳ್ಳಲಾಗಿದೆ. ಚೀನಾದ ಅತಿದೊಡ್ಡ ನಗರವಾದ ಶಾಂಘೈ, ಕಳೆದ 100 ವರ್ಷಗಳಲ್ಲಿ ಈಗಾಗಲೇ ಸುಮಾರು 3 ಮೀ ಮುಳುಗಿದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಈ ಪಟ್ಟಿಯಲ್ಲಿ ಬೀಜಿಂಗ್ ಸಹ ಸೇರಿಕೊಂಡಿದೆ. ಅಚ್ಚರಿ ಎಂದರೆ ಇಲ್ಲಿ ಸಮುದ್ರ ಮಟ್ಟ ನಿಧಾನಗತಿಯಲ್ಲಿ ಏರುತ್ತಿದ್ದರೆ ಭೂ ಕುಸಿತ ಅಧಿಕ ಪ್ರಮಾಣದಲ್ಲಿದೆ. ಭೂ ಕುಸಿತದ ಪರಿಣಾಮದಿಂದಾಗಿ ನಗರಗಳ ಮಟ್ಟ ಸಮುದ್ರಮಟ್ಟಕ್ಕಿಂತ ಇಳಿಕೆಯಾಗುತ್ತಿದೆ.
ಈ ರೀತಿಯಾಗಿ ಬೃಹತ್ ನಗರಗಳು ಸಮುದ್ರ ಪಾಲಾಗುತ್ತಿರುವುದಕ್ಕೆ ಹಲವು ಕಾರಣಗಳಿವೆ. ಆದರೆ ಸಂಶೋಧನೆಯಲ್ಲಿ ಭಾಗಿಯಾಗದ ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದ ಹವಾಮಾನ ರೂಪಾಂತರದ ಪ್ರಾಧ್ಯಾಪಕ ರಾಬರ್ಟ್ ನಿಕೋಲ್ಸ್ ಪ್ರಕಾರ, ನೀರಿಗಾಗಿ ಭೂಮಿ ಒಡಲಾಳ ಬರಿದು ಮಾಡಿದ ಪರಿಣಾಮದಿಂದ ಈ ಘಟನೆಗೆ ಸಾಕ್ಷಿಯಾಗಿತ್ತಿದ್ದೇವೆ ಎಂದಿದ್ದಾರೆ.
"ಚೀನಾದಲ್ಲಿ ಭೌಗೋಳಿಕವಾಗಿ ಹೇಳುವುದಾದರೆ ತಕ್ಕಮಟ್ಟಿಗೆ ಇತ್ತೀಚಿಗೆ ಸಂಕುಚಿತವಾಗಿರುವ ಪ್ರದೇಶಗಳಲ್ಲಿ ಬಹಳಷ್ಟು ಜನರು ವಾಸಿಸುತ್ತಿದ್ದಾರೆ. ಆದ್ದರಿಂದ ನೀವು ಅಂತರ್ಜಲವನ್ನು ತೆಗೆದಾಗ ಅಥವಾ ನೀವು ಮಣ್ಣನ್ನು ಬರಿದಾಗಿಸಿದಾಗ ಕುಸಿತ ಸಂಭವಿಸುತ್ತದೆ ಎಂದಿದ್ದಾರೆ. ಇದೊಂದೇ ಕಾರಣವಾಗಿಲ್ಲ ಬದಲಿಗೆ ತಾಪಮಾನ ಏರಿಕೆ, ನಗರದ ವಿಸ್ತೀರ್ಣ ಹೆಚ್ಚುತ್ತಿರುವುದು ಸಹ ಕಾರಣ ಎಂದಿದ್ದಾರೆ.
ಈ ರೀತಿ ಅಪಾಯಕ್ಕೆ ಒಳಗಾಗಿರುವ ವಿಶ್ವದ ರಾಷ್ಟ್ರಗಳಲ್ಲಿ ಇಂಡೋನೇಷ್ಯ ಅತ್ಯಂತ ಕೆಟ್ಟ ಪರಿಸ್ಥಿತಿ ಎದುರಿಸುತ್ತಿದೆ. ಇಂಡೋನೇಷ್ಯಾದಲ್ಲಿ ಭೂಮಿ ಈಗ ಸಮುದ್ರದತ್ತ ಸೆಳೆಯುತ್ತಿದೆ. ನಗರ ಪ್ರದೇಶದತ್ತ ನೀರು ನುಗ್ಗುತ್ತಿದೆ. ಕಡಲ್ಕೊರೆತ ಹೆಚ್ಚಾಗುತ್ತಿದೆ.
ಮಂಗಳೂರಿಗೂ ಇದೆ ಅಪಾಯ
ಪ್ರಸ್ತುತ ನೀರಿನ ಮಟ್ಟ ಏರಿಕೆಯ ಪ್ರಕಾರ ಮಂಗಳೂರು ಕಡಲತೀರದ ತಾಣ 1.87 ಅಡಿಗಳಷ್ಟು ನೀರಿನಲ್ಲಿ ಮುಳುಗಬಹುದು. ಮಂಗಳೂರು ಭಾರತದ 7ನೇ ಅತಿದೊಡ್ಡ ಕಂಟೈನರ್ ಬಂದರುಗಳಿರುವ ಪ್ರದೇಶವಾಗಿದೆ. ಅಲ್ಲದೆ, ಇಲ್ಲಿ ಪ್ರಮುಖ ಕಾಫಿ ಮತ್ತು ಗೋಡಂಬಿ ರಫ್ತು ನಡೆಯುತ್ತದೆ. ಆದರೆ ಈ ಶತಮಾನದೊಳಗೆ ಈ ನಗರಕ್ಕೆ ಅಪಾಯ ಎದುರಾಗುವ ಎಚ್ಚರಿಕೆ ಇದೆ.
ಯುಎಸ್ಎಯ ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಶತಮಾನದ ಅಂತ್ಯದ ವೇಳೆಗೆ ಭಾರತದ ಹಲವಾರು ಕರಾವಳಿ ನಗರಗಳು 2.7 ಅಡಿಗಳಷ್ಟು ನೀರಿನಲ್ಲಿ ಮುಳುಗಲಿವೆ ಎಂದು ಭವಿಷ್ಯ ನುಡಿದಿದೆ. ಪ್ರಪಂಚದಾದ್ಯಂತದ ಸಮುದ್ರ ಮಟ್ಟದಲ್ಲಿನ ಬದಲಾವಣೆಗಳನ್ನು ವಿಶ್ಲೇಷಿಸಲು NASA ಹವಾಮಾನ ಬದಲಾವಣೆಯ ಇಂಟರ್‌ಗವರ್ನಮೆಂಟಲ್ ಪ್ಯಾನಲ್ (IPCC) ವರದಿಯನ್ನು ಬಳಸಿಕೊಂಡಿದೆ.



Click it and Unblock the Notifications









